Home Crime ಇವನ ಹತ್ರ ಸಾಲ ಮಾಡಿದವರ ಕಥೆ ಹರೋಹರ..! ಕಣ್ಣು ಕುಕ್ಕಿತ್ತು ಹಣ ಪಡೆದವನ ಪತ್ನಿಯ ಸೌಂದರ್ಯ..!...

ಇವನ ಹತ್ರ ಸಾಲ ಮಾಡಿದವರ ಕಥೆ ಹರೋಹರ..! ಕಣ್ಣು ಕುಕ್ಕಿತ್ತು ಹಣ ಪಡೆದವನ ಪತ್ನಿಯ ಸೌಂದರ್ಯ..! ಮನೆಗೆ ಬಂದು ರೇಪ್ ಮಾಡ್ತೀನಿ ಅಂದಿದ್ದ ಕೀಚಕ..! ಮುಂದೇನಾಯ್ತು ಗೊತ್ತಾ..?

1405
0
SHARE

ಬಡ್ಡಿ ಬಡ್ಡಿ ಬಡ್ಡಿ ಇದು ಬೆಂಗಳೂರಲ್ಲಿ ಇವತ್ತು ಬಹುಕೋಟಿ ವ್ಯವಹಾರ. ಕೆಲವೇ ಕೆಲವು ಮನೆಗಳನ್ನ ಉದ್ಧಾರ ಮಾಡಿದ್ರೆ, ಸಾವಿರಾರು ಜನರ ಮನೆಯನ್ನ ಹಾಳು ಮಾಡಿದ ವ್ಯವಹಾರ. ಬೆಂಗಳೂರಿನ ಕ್ರೈಂ ರೇಟ್  ಸ್ಕೇಲ್ ಅನ್ನ  ಆಗಾಗ ಏರುಪೇರು ಮಾಡೋದು ಇದೇ ಬಡ್ಡಿ ವ್ಯವಹಾರ. ಬಡ್ಡಿ ಕಟ್ಟಿ ಸುಸ್ತಾದವನೊಬ್ಬ  ಬಡ್ಡಿ ಹಣ ಕೊಟ್ಟವನ ಲೋಕದ ವ್ಯವಹಾರವನ್ನೇ ಚುಕ್ತಮಾಡಿದ ಕಥೆಯಿದು. ಇವನ ಹತ್ತಿರ 30 ಪರ್ಸೆಂಟ್ ಬಡ್ಡಿ..!ತನ್ನ ಸ್ನೇಹಿತನಿಗೆ ಕೊಟ್ಟಿದ್ದ 30 ಲಕ್ಷ ಸಾಲ.ಬಡ್ಡಿ ಕಟ್ಟೋದಕ್ಕೆ ಆಗದೆ ಸೋತಿದ್ದ ಇರ್ಫಾನ್.ಬಡ್ಡಿ ಹಣದ ಬದಲಾಗಿ ಕೇಳಿದ್ದ ಆತನ ಪತ್ನಿಯನ್ನ.ಮನೆಗೆ ಬಂದು ರೇಪ್ ಮಾಡೋದಾಗಿ ಹಾಕಿದ್ದ ಅವಾಜ್ …

ಇರ್ಫಾನ್ ಹಣವನ್ನ ಎಷ್ಟು ಚೆನ್ನಾಗಿ ಕೊಡ್ತಿದ್ನೋ ಅಷ್ಟೇ ಜೋರಾಗಿ ಅದನ್ನ ವಸೂಲಿಯನ್ನು ಮಾಡ್ತಿದ್ದ. ಹೀಗೆ ಇರ್ಫಾನ್ ತನ್ನ ಸ್ನೇಹಿತ ಇರ್ಫಾನ್ ಗೆ 10ಲಕ್ಷ ರೂಪಾಯಿ ಹಣವನ್ನ ಬಡ್ಡಿಗೆ ಕೊಟ್ಟಿದ್ದ. ಅದು ಒಂದೆರಡು ರೂಪಾಯಿ ಬಡ್ಡಿಯಲ್ಲ 30 ಪರ್ಸೆಂಟ್ ಬಡ್ಡಿ. ಅದನ್ನ ತೀರಿಸೋದಕ್ಕೆ ಇರ್ಫಾನ್ ಗೆ ಸಾಧ್ಯವೇ ಆಗಿಲ್ಲ. ಇರ್ಫಾನ್ ಮತ್ತು ಇರ್ಫಾನ್ ಇಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್. ಆದ್ರೆ ಹಣದ ವಿಚಾರ ಬಂದಾಗ ಮಾತ್ರ ಮಚ್ಲಿ ಯಾರನ್ನು ಸುಮ್ಮನೆ ಬಿಡ್ತಿರಲಿಲ್ಲ. ಹೀಗೆ ಇರ್ಫಾನ್ ಗೂ ತಾನು ಕೊಟ್ಟಿದ್ದ ಹಣವನ್ನ ವಾಪಸ್ ಕೇಳಿದ್ದಾನೆ. ಆದ್ರೆ ಅಷ್ಟರಲ್ಲಾಗಲೇ 10 ಲಕ್ಷ ಹಣಕ್ಕೆ ಬಡ್ಡಿ ಬೆಟ್ಟದಷ್ಟು ಬೆಳೆದು ನಿಂತಿತ್ತು. ಸರಿಯಾದ ಸಮಯಕ್ಕೆ ಇರ್ಫಾನ್ ಗೆ ಹಣವನ್ನ ವಾಪಸ್ ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಮಚ್ಲಿ ಹೇಗೆ ಅಂದ್ರೆ ಅವನಿಗೆ ಬಡ್ಡಿಯನ್ನ ಸರಿಯಾದ ಸಮಯಕ್ಕೆ ಕೊಡಲಿಲ್ಲ ಅಂದ್ರೆ ಅವನು ಕೇಳಿದಷ್ಟು ಹಣದಷ್ಟು ಶಾಪಿಂಗ್ ಮಾಡಿಸಬೇಕಿತ್ತು. ಹೀಗೆ ಇರ್ಫಾನ್ ಗೂ ಆತ ಹೆದರಿಸಿ ಲಕ್ಷಾಂತರ ರೂಪಾಯಿಯ ಶಾಪಿಂಗ್ ಮಾಡಿಸಿಕೊಂಡಿದ್ದ.

ಇನ್ನೊಂದು ಕಡೆ ಇರ್ಫಾನ್ ಗೆ ಮಚ್ಲಿ 50 ಲಕ್ಷ ರೂಪಾಯಿ ಹಣವನ್ನ ನೀಡಿದ್ದ. ಶಿವಾಜಿನಗರದಲ್ಲಿರೋ ತನ್ನ ಸೈಟ್ ನಲ್ಲಿ ಮನೆ ಕಟ್ಟಿಕೊಡು ಅಂತ ಹೇಳಿದ್ದ. ಅದರಲ್ಲಿ ಇರ್ಫಾನ್ ಆತನಿಗೆ ಮನಯನ್ನ ಕಟ್ಟಿಕೊಡ್ತಿದ್ದ. ಆದ್ರೆ ಆ ಕೆಲಸವು ಸರಿಯಾದ ಸಮಯಕ್ಕೆ ಆಗಿರಲಿಲ್ಲ. ಹೀಗಾಗಿ ಮಚ್ಲಿ ಆತನ ವಿರುದ್ಧ ತಿರುಗಿ ಬಿದ್ದಿದ್ದ. ತನ್ನ ಹಣವನ್ನ ಕೊಡು ಅಂತ ಫೋನ್ ಮಾಡಿ ಟಾರ್ಚರ್ ಮಾಡ್ತಿದ್ದ. ಇದ್ರಿಂದ ಇರ್ಫಾನ್ ಗೆ ಏನು ಮಾಡಬೇಕು ಅಂತ ತೋಚಲೇ ಇಲ್ಲ. ಅಲ್ಲದೆ ಫೋನ್ ಮಾಡಿದಾಗಲೆಲ್ಲಾ ಆತ ಹಣ ಕೊಡಲಿಲ್ಲ ಅಂತ ನಿನ್ನ ಮನೆಗೆ ನುಗ್ಗಿ ನಿನ್ನ ಹೆಂಡತಿ ಮತ್ತು ತಾಯಿಯನ್ನ ರೇಪ್ ಮಾಡ್ತೀನಿ ಅಂತ ಅವಾಜ್ ಹಾಕಿದ್ದ. ಅಲ್ಲದೆ ಇಬ್ಬರು ಚೆನ್ನಾಗಿರುವಾಗ ಮಚ್ಲಿ ಆಗಾಗ ಆತನ ಮನೆಗೆ ಹೋಗ್ತಿದ್ದ. ಇರ್ಫಾನ್ ಹೆಂಡತಿ ಚೆನ್ನಾಗಿದ್ದ ಕಾರಣ ಆಕೆಯ ಮೇಲೆ ಕಣ್ಣು ಹಾಕಿದ್ದ. ಹೀಗಾಗಿ ಪ್ರತಿದಿನ ಫೋನ್ ಮಾಡಿದಾಗ್ಲೂ ಹಣ ಕೊಟ್ಟಿಲ್ಲ ಅಂತ ನಿನ್ನ ಹೆಂಡ್ತಿಯನ್ನ ರೇಪ್ ಮಾಡ್ತೀನಿ ಅಂತ ಬೆದರಿಕೆ ಹಾಕ್ತಿದ್ದ.

ಹೀಗೆ ಒಮ್ಮೆ ಇರ್ಫಾನ್ ಗೆ ಫೋನ್ ಬಂದಾಗ ಆತನ ಜೊತೆ ಆತನ ಸ್ನೇಹಿತ ಬರ್ಕತ್ ಕೂಡಾ ಇದ್ದ. ಆತ ಟೆನ್ ಷನ್ ಆಗಿದ್ದದ್ದನ್ನ ನೋಡಿ ಕ್ಯಾಜಿ ಅಂತ ಕೇಳಿದ್ದಾನೆ. ಆಗ ಇರ್ಫಾನ್ ಇರೋ ವಿಚಾರವನ್ನ ಹೇಳಿದ್ದಾನೆ. ಅದಕ್ಕೆ ಅಷ್ಟೇನಾ ವಿಷಯ ಇರು ಏನಾದ್ರೂ ಅದಕ್ಕೆ ಪರಿಹಾರ ಹುಡುಕೋಣ ಅಂತ ಹೇಳಿದ್ದಾನೆ. ಅವತ್ತು 19ನೇ ತಾರೀಖು ಮತ್ತೆ ಮಚ್ಲಿ ಫೋನ್ ಮಾಡಿದಾಗ ಬರ್ಕತ್ ಗೆ ಇರ್ಫಾನ್ ಫೋನ್ ಮಾಡಿ ಹೇಳಿದ್ದಾನೆ. ಆಗ ಬರ್ಕತ್ ಇವತ್ತು ಅವನಿಗೆ ಬುದ್ಧಿ ಕಲಿಸೋಣ ಸಂಜೆ ಸಿಗೋದಕ್ಕೆ ಹೇಳು ಅಂತ ಹೇಳಿದ್ದಾನೆ. ಅಲ್ಲದೆ ತನ್ನ ಸ್ನೇಹಿತರಾದ ಇರ್ಫಾನ್, ಇಲಿಯಾಸ್, ಶೇಕ್ ಮಹಮ್ಮದ್ ನನ್ನ ಕರ್ಕೊಂಡು ಆತ ಶಿವಾಜಿನಗರಕ್ಕೆ ಬಂದಿದ್ದಾನೆ. ಈ ಬರ್ಕತ್ ಯಾರು ಅಂದ್ರೆ, ಕಾರ್ಪೋರೇಟರ್ ದಿವಾನ್ ಆಲಿ ಮರ್ಡರ್ ಕೇಸ್ ನ ಆರೋಪಿ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಈತ. ಸ್ನೇಹಿತನಿಗೆ ಕಷ್ಟ ಅಂತ ಹೇಳಿದಾಗ ಬರ್ಕತ್ ಆತನ ಸಹಾಯಕ್ಕೆ ಬಂದಿದ್ದ.

ಬಡ್ಡಿ ವ್ಯವಹಾರ ಮಾಡ್ಕೊಂಡಿದ್ದ ಇರ್ಫಾನ್ ನ ಪಾಪವೂ ದಿನೇ ದಿನೇ ಬಡ್ಡಿಯ ಹಾಗೆ ಬೆಳೆದುಕೊಳ್ಳುತ್ತಾ ಹೋಗಿತ್ತು. ಪಾಪದ ಕೊಡ ತುಂಬುತ್ತಾ ಹೋಗ್ತಿದ್ದ ಹಾಗೆ ಆತನನ್ನ ಬರ್ಕತ್ ಅಂಡ್ ಟೀಂ ಕೊಚ್ಚಿ ಹಾಕಿತ್ತು. ಫೈನಾನ್ಸ್ ವ್ಯವಹಾರ ಒಳ್ಳೆಯದೇ ಆದ್ರೆ ಅವನು ಮಾಡ್ತಿದ್ದ ವ್ಯವಹಾರ ಅತಿರೇಕವಾಗಿತ್ತು ಅಷ್ಟೇ ಅದಕ್ಕೆ ಹೀಗೆ ನಡುರಸ್ತೆಯಲ್ಲಿ ಕೊಲೆಯಾಗಿದ್ದ. ನಂತ್ರ ಶಿವಾಜಿನಗರ ಪೊಲೀಸ್ರು ಇರ್ಫಾನ್ ಕೊಲೆ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ನಡೆಸೋದಕ್ಕೆ ಶುರುಮಾಡಿದ್ರು.ಇರ್ಫಾನ್ ಆಸ್ಪತ್ರೆಯಲ್ಲಿ ಕಣ್ಣು ಮುಚ್ಚಿಕೊಳ್ಳುತ್ತಿದ್ದ ಹಾಗೆ ಪೊಲೀಸ್ರು ಆರೋಪಿಗಳನ್ನ ಹುಡುಕಾಡೋದಕ್ಕೆ ಶುರುಮಾಡಿದ್ರು. ಏರಿಯಾದಲ್ಲಿ ಸಿಕ್ಕ ಸಿಸಿಟಿವಿಯಲ್ಲೂ ಪೊಲೀಸ್ರಿಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸ್ರು ಆರೋಪಿಗಳನ್ನ ಹುಡುಕೋದಕ್ಕೆ ಸ್ವಲ್ಪ ಜಾಸ್ತಿಯೇ ಬುದ್ಧಿ ಖರ್ಚು ಮಾಡಬೇಕಾಯ್ತು.

ಇನ್ಸ್ ಪೆಕ್ಟರ್ ತಬ್ರೇಜ್ ಮತ್ತು ಸಬ್ ಇನ್ಸ್ ಪೆಕ್ಟರ್ ಶೀಲಾ ಅವರು ನೇತೃತ್ವದಲ್ಲಿ ಡಿಸಿಪಿಯವರು ಒಂದು ಟೀಂ ರೆಡಿ ಮಾಡಿದ್ರು. ಆ ಟೀಂ ಆರೋಪಿಗಳನ್ನ ಮಟ್ಟಹಾಕೋದಕ್ಕೆ ರೆಡಿಯಾಗಿತ್ತು. ಆದ್ರೆ ಈ ಕೇಸ್ ಹೈ ಪ್ರೊಫೈಲ್ ಆಗಿದ್ರಿಂದ ಖುದ್ದು ಡಿಸಿಪಿ ರಾಹುಲ್ ಕುಮಾರ್ ಅವ್ರೇ ಆರೋಪಿಗಳಿಗಾಗಿ ಖೆಡ್ಡಾ ತೋಡಿ ಕೂತ್ಕೊಂಡ್ರು. ಕೇಸ್ ಎಷ್ಟು ಬೇಗ ಸಾಲ್ವ್ ಆಗುತ್ತೋ ಅಷ್ಟು ಒಳ್ಳೇದು ಅನ್ನೋದು ಪೊಲೀಸ್ರಿಗೆ ಗೊತ್ತಿತ್ತು. ಹೀಗಾಗಿ ಡಿಸಿಪಿಯವ್ರು ಎಷ್ಟೇ ಕೆಲಸದ ಒತ್ತಡ ಇದ್ರು ಈ ಕೇಸ್ ನಲ್ಲಿ ಜಾಸ್ತಿನೇ ಎಫರ್ಟ್ ಹಾಕೋದಕ್ಕೆ ಶುರುಮಾಡಿದ್ರು.ಆಗ ನೋಡಿ ಇನ್ವೆಸ್ಟಿಗೇಶನ್ ಶುರು ಮಾಡ್ತಿದ್ದ ಹಾಗೆ ಪೊಲೀಸ್ರಿಗೆ ಒಂದು ಇನ್ಫರ್ಮೇಷನ್ ಸಿಕ್ಕಿತ್ತು. ಅದೇನಪ್ಪಾ ಅಂದ್ರೆ ಇರ್ಫಾನ್ ಗೆ ಇದ್ದ ಲವ್ ಮ್ಯಾಟರ್. ಆತ ಆಯೇಷಾ ಅನ್ನೋ ಹುಡುಗಿಯೊಬ್ಬಳನ್ನ ಲವ್ ಮಾಡ್ತಿದ್ದ. ತನ್ನ ತಂಗಿಯ ಕ್ಲಾಸ್ ಮೇಟ್ ಆದ ಆಕೆಯನ್ನ ಮದುವೆಯಾಗಬೇಕು ಅಂತ ತೀರ್ಮಾನಿಸಿದ್ದ.

ಆದ್ರೆ ಮೊದಲಿಗೆ ಆಯೇಷನ ಪೋಷಕರು ಮದುವೆಗೆ ಒಪ್ಪಿದ್ರು ಆಮೇಲೆ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ತನಗೆ ಮದುವೆಯಾದ್ರು ಇರ್ಫಾನ್ ಆಕೆಯ ಮನೆಯ ಮುಂದೆ ಓಡಾಡೋದು ಆಕೆಯನ್ನ ನೋಡ್ಕೊಂಡು ಹೋಗೋದನ್ನ ಆಗಾಗ ಮಾಡ್ತಿದ್ದ. ಹೀಗಾಗಿ ಇದೇ ಕಾರಣಕ್ಕೆ ಕೊಲೆಯಾಗಿರಬಹುದು ಅನ್ನೋದ ಪೊಲೀಸ್ರ ಅನುಮಾನವಾಗಿತ್ತು. ಅಲ್ಲದೆ ಅವರ ಮನೆಯ ಹತ್ತಿರವೇ ಕೊಲೆಯಾಗಿದ್ರಿಂದ ಪೊಲೀಸ್ರ ಅನುಮಾನ ಜಾಸ್ತಿಯೇ ಆಗಿತ್ತು. ಆದ್ರೆ ಅವರನ್ನ ಕರೆದು ವಿಚಾರಣೆ ನಡೆಸಿದಾಗ ಆ ರೀತಿಯ ಘಟನೆ ನಡೆದಿಲ್ಲ ಅನ್ನೋದು ಪೊಲೀಸ್ರಿಗೆ ಗೊತ್ತಾಗಿತ್ತು. ಹೀಗಾಗಿ ಆಂಗಲ್ ಇನ್ವೆಸ್ಟಿಗೇಷನ್ ಅನ್ನ ಕೈಬಿಟ್ಟಿದ್ರು.ನಂತ್ರ ಇವನ ಕ್ಲೋಸ್ ಫ್ರೆಂಡ್ಸ್ ಯಾರು ಅವನಿಗೆ ಯಾರ್ಯಾರು ದುಷ್ಮನ್ ಗಳಿದ್ದಾರೆ ಅನ್ನೋದರ ಬಗ್ಗೆ ತನಿಖೆ ಶುರುಮಾಡಿದ್ರು. ಆಗ ಅವನ ಸ್ನೇಹಿತ ಇದೇ ಇರ್ಫಾನ್ ಅನ್ನೋದು ಗೊತ್ತಾಗಿತ್ತು. ಆತನನ್ನ ಪೊಲೀಸ್ರು ಕರೆಸಿ ವಿಚಾರಿಸಿದಾಗ ಆತ ಅದ್ಯಾರಿಗೋ ಫೋನ್ ನಲ್ಲಿ ಆಗಾಗ ಬೈತಿದ್ದ.

ಆದ್ರೆ ಅದ್ಯಾರು ಅನ್ನೋದು ಗೊತ್ತಿಲ್ಲ ಅಂತ ಹೇಳಿದ್ದ. ಹೀಗಾಗಿ ಪೊಲೀಸ್ರು ಅವನನ್ನ ಹಾಗೆ ಕಳುಹಿಸಿದ್ರು. ಆದ್ರೆ ಆತ ಹೇಳಿದ ಹೇಳಿಕೆ ಪೊಲೀಸ್ರಿಗೆ ಅನುಮಾನ ಮೂಡಿಸಿತ್ತು. ಯಾವುದಕ್ಕೂ ಇರಲಿ ಅಂತ ಪೊಲೀಸ್ರು ಅವನ ಕಾಲ್ ಡಿಟೆಲ್ಸ್ ಅನ್ನ ತೆಗೆಸಿದ್ರು ಆಗ ಪೊಲೀಸ್ರಿಗೆ ಈ ಕೇಸ್ ನಲ್ಲಿ ಇವನದ್ದೇ ಏನೋ ಕೈವಾಡವಿದೆ ಅನ್ನೋದು ಗೊತ್ತಾಗಿತ್ತು. ಅಲ್ಲದೆ ಅವನ ಕಾಲ್ ಲೀಸ್ಟ್ ನಲ್ಲಿ ನಂಬರ್ ಗಳು ಮತ್ತು ಕಾಲ್ ಡೀಟೆಲ್ಸ್ ಇವನೇ ಇರ್ಫಾನ್ ನನ್ನ ಕೊಲೆ ಮಾಡಿಸಿರೋದು ಅನ್ನೋದನ್ನ ಸಾರಿ ಹೇಳ್ತಿತ್ತು.ನಂತ್ರ ಪೊಲೀಸ್ರು ಆತನನ್ನ ಕರೆದು ವಿಚಾರಿಸಿದಾಗ ನನಗೂ ಇದಕ್ಕೂ ಸಂಬಂಧವೇ ಇಲ್ಲ ಅಂದಿದ್ದ. ಆದ್ರೆ ಅದ್ಯಾವಾಗ ಪೊಲೀಸ್ರು ತಮ್ಮ ಭಾಷೆಯಲ್ಲಿ ಕೇಳಿದ್ರೋ ಆಗ ಆತ ನಡೆದ ಘಟನೆಯನ್ನೆಲ್ಲಾ ಫಿಲಂ ಕಥೆ ಹೇಳಿದ ಹಾಗೆ ಹೇಳಿದ್ದ. ಅಲ್ಲದೆ ಆತ 30 ಪರ್ಸೆಂಟ್ ಬಡ್ಡಿಗೆ ನನಗೆ ಕಾಟ ಕೊಡ್ತಿದ್ದ.

ಈ ಹಿಂದೆ ಮುಜೀಬ್ ಅನ್ನೋರ ಸಾವಿಗೂ ಕೂಡಾ ಇವನು ಕಾರಣನಾಗಿದ್ದ ಅನ್ನೋ ಅಂಶವನ್ನ ಪೊಲೀಸ್ರಿಗೆ ತಿಳಿಸಿದ್ದ. ಅಲ್ಲಿಗೆ ಪೊಲೀಸ್ರಿಗೆ ಈ ಕೇಸ್ ಸಾಲ್ವ್ ಆಯ್ತು ಅನ್ನೋದು ಗೊತ್ತಾಯ್ತು. ನಂತ್ರ ಸ್ವತಃ ಡಿಸಿಪಿಯವರೇ ತಲೆ ಮರೆಸಿಕೊಂಡಿದ್ದ ಬರ್ಕತ್ ಅಂಡ್ ಟೀಂನ ಅರೆಸ್ಟ್ ಮಾಡೋದಕ್ಕೆ ಮುಂದಾದ್ರು. ತಮ್ಮ ಟೀಂ ಅನ್ನ ಕರ್ಕೊಂಡು ಆರೋಪಿಗಳನ್ನ ಹುಡುಕೋದಕ್ಕೆ ಶುರುಮಾಡಿದ್ರು. ನಂತ್ರ ಆರೋಪಿಗಳು ದೊಡ್ಡಬಳ್ಳಾಪುರದಲ್ಲಿ ಅಡಗಿಕೊಂಡಿರೋದರ ಬಗ್ಗೆ ಪೊಲೀಸ್ರಿಗೆ ಸುಳಿವು ಸಿಕ್ಕಿತ್ತು. ಆಗ ರಾಹುಲ್ ಕುಮಾರ್ ಮತ್ತವರ ತಂಡ ದೊಡ್ಡಬಳ್ಳಾಪುರಕ್ಕೆ ಹೋಗಿ ಅಲ್ಲಿ ಆರೋಪಿಗಳನ್ನ ರೌಂಡಪ್ ಮಾಡಿದ್ರು. ಖತರ್ನಾಕ್ ಗ್ಯಾಂಗ್ ಅಲ್ಲಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿತ್ತು. ಆದ್ರೆ ಪೊಲೀಸ್ರು ಅದಾಗ್ಲೇ ಎಲ್ಲದಕ್ಕೂ ರೆಡಿಯಾಗಿ ಹೋಗಿತ್ತು. ಅವರೆನಾದ್ರೂ ತಪ್ಪಿಸಿಕೊಳ್ಳೋದಕ್ಕೆ ನೋಡಿದ್ರೆ ಖಾಕಿ ದೀಪಾವಳಿ ಹಬ್ಬವನ್ನ ಇನ್ನೊಂದು ಸಾರಿ ಮಾಡೋಣ ಅಂತ ಅಂದುಕೊಂಡಿದ್ರು. ಆದ್ರೆ ಆರೋಪಿಗಳು ಪೊಲೀಸ್ ಸೈನ್ಯವನ್ನ ನೋಡಿ ಕಮಕ್ ಕಿಮಕ್ ಅನ್ನದೆ ಕೈ ಕೋಳ ಹಾಕಿಸಿಕೊಂಡಿದ್ದಾರೆ. ಅಲ್ಲಿಗೆ ಪೊಲೀಸ್ರು ಮೀನು ವ್ಯಾಪಾರಿಯ ಕೊಲೆಯ ಕೇಸ್ ಅನ್ನ ಯಶಸ್ವಿಯಾಗಿ ಬೇಧಿಸಿದ್ರು.

ಬಡ್ಡಿ ವ್ಯವಹಾರ ಮಾಡೋರು ಅದ್ರಲ್ಲೂ ಮೀಟರ್ ಬಡ್ಡಿ, ಚಕ್ರಬಡ್ಡಿ ದಂಧೆ ಮಾಡೋರು ಇಂತಹ ಘಟನೆಳನ್ನ ನೋಡಿ ಬುದ್ಧಿ ಕಲಿಯಬೇಕು. ಹಣ ಸಿಗುತ್ತೆ ಅಂತ ಜನರ ಮೇಲೆ ದಬ್ಬಾಳಿಕೆ ಮಾಡೋದಕ್ಕೆ ಹೋದ್ರೆ ಒಂದಲ್ಲಾ ಒಂದು ದಿನ ಹೀಗೆ ರಸ್ತೆಯಲ್ಲಿ ಹೆಣವಾಗೋದ್ರಲ್ಲಿ ಅನುಮಾವಿಲ್ಲ. ಇವತ್ತು ಇರ್ಫಾನ್ ಕೂಡಾ ಅತಿರೇಕವಾಗಿ ಹಣ ಮಾಡೋದಕ್ಕೆ ಹೋಗಿ ಈಗ ಹೆಣವಾಗಿದ್ದಾನೆ. ಎಲ್ಲವನ್ನು ಲಿಮಿಟ್ ಆಗಿ ಇಟ್ಕೊಂಡಿದ್ರೆ ನಾಲ್ಕು ಜಾಸ್ತಿ ಬದುಕ್ತಿದ್ದ. ತಾನು ಸಂಪಾದನೆ ಮಾಡಿರೋ ಹಣದಲ್ಲಿ ಮಜಾ ಮಾಡ್ಕೊಂಡು ಇರಬಹುದಿತ್ತು. ಆದ್ರೆ ಕಾಸು ಕಾಸು ಅಂತ ಬಾಯಿ ಬಡ್ಕೊಂಡು ಈಗ ಸ್ಮಶಾನ ಸೇರಿದ್ದಾನೆ. ಇದನ್ನೆಲ್ಲಾ ನೋಡ್ತಿದ್ರೆ ಬೆಂಗಳೂರಿನಲ್ಲಿ ಇನ್ನೆಷ್ಟು ಬಡ್ಡಿ ಕ್ರಿಮಿಗಳು ಹೀಗೆ ರಕ್ತ ಕಾರ್ಕೊಂಡು ಸಾಯ್ತವೋ ಅನ್ನೋದು ಗೊತ್ತಿಲ್ಲ.

LEAVE A REPLY

Please enter your comment!
Please enter your name here