Home Crime ಬೇಲಿಯೇ ಎದ್ದು ಹೊಲ ಮೇಯ್ದಂತೆ… ಕಳ್ಳತನ ಮಾಡಲು ಸಾಥ್ ಕೊಟ್ಟ ಪೊಲೀಸರು..!!

ಬೇಲಿಯೇ ಎದ್ದು ಹೊಲ ಮೇಯ್ದಂತೆ… ಕಳ್ಳತನ ಮಾಡಲು ಸಾಥ್ ಕೊಟ್ಟ ಪೊಲೀಸರು..!!

166
0
SHARE

ಮೊನ್ನೆ ಮೊನ್ನೆ ಅಂದ್ರೆ ಏಪ್ರಿಲ್ 6 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಸುತ್ತ ಮುತ್ತ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಬೀಗ ಹೊಡೆದಿದ್ರು. ಹಾಗೆ ಬೀಗ ಹೊಡೆದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆಯ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ರು. ಅದ್ರ, ರೂವಾರಿಗಳ್ಯಾರೆಂದು ಪತ್ತೆಯಾಗಿದೆ. ಅವ್ರು ಯಾರು ಅಂತ ಕೇಳಿದ್ರೆ ನಿಜಕ್ಕು ಶಾಕ್ ಆಗುತ್ತೆ..

ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ರಲ್ಲೂ ಪಶ್ಟಿಮ ವಿಭಾಗದಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗ್ತಲೆ ಇವೆ. ಮೊನ್ನೆ ಅಂದ್ರೆ 3 ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಖತರ್ನಾಕ್ ಗ್ಯಾಂಗ್ ಹತ್ತತ್ತು ನಿಮಿಷ ಅಂತರದಲ್ಲಿ ನಾಗರಬಾವಿ, ಅನ್ನಪೂರ್ಣೇಶ್ವರಿನಗರ, ಬಿಡಿಎ ಲೇಔಟ್‌ನಲ್ಲಿ ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡಿ, ಬರೋಬ್ಬರಿ 32 ಲಕ್ಷ ಬೆಲೆಯ ಚಿನ್ನಾಭರಣಗಳನ್ನ ದೋಚಿ ಎಸ್ಕೇಫ್ ಆಗಿದ್ರು.

ಅದ್ರ ತನಿಖೆ ಕೈಗೊಂಡಿದ್ದ ಪೊಲೀಸ್ರಿಗೆ ಕಳ್ಳ ಸಿಗೋ ಮೂಲಕ ಆತನ ಕೃತ್ಯಗಳಿಗೆ ಸಾಥ್ ನೀಡ್ತಿದ್ದ ಇಬ್ಬರು ಖತರ್ನಾಕ್ ಕಳ್ಳ ಪೊಲೀಸ್ ಪೇದೆಗಳ ಬಣ್ಣವು ಕಳಚಿ ಬಿದ್ದಿದೆ. ಮಾರ್ಚ್ 26ರಂದು ಮೈಕೋ ಲೇಔಟ್ ಪೊಲೀಸ್ ಸ್ಟೇಷನ್‌ನ ಪೇದೆ ಹಾಸಿಮ್ ಸಾಬ್ ಮಂಡಲ್ ಬೀಟ್ ನಲ್ಲಿದ್ರು. ಈ ವೇಳೆ ವಿಜಯ ಬ್ಯಾಂಕ್ ಕಾಲೋನಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬೈಕ್ ಸವಾರನನ್ನ ಹಿಡಿದ ಪೊಲೀಸರಿಗೆ ಆತನ ಬಳಿ ಇದ್ದ ಕಬ್ಬಿಣದ ರಾಡ್‌ಗಳು, ಸ್ಕ್ರೂ ಡ್ರೈವರ್ ಹಾಗೂ ಟಾರ್ಚ್ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆತ ಕುಖ್ಯಾತ ಮನೆಗಳ್ಳ ಕರಿಯಾ ಎಂದು ಗೊತ್ತಾಗಿದೆ.

ಹಾಗೆ ತನಿಖೆಯನ್ನ ಮುಂದುವರೆಸಿದ ಪೊಲೀಸ್ರಿಗೆ ಆತ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದನ್ನ ಕಳವು ಮಾಡಿ ಬಂದಿದ್ದು, ಆತನೊಂದಿಗೆ ಇಬ್ಬರು ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದದ್ದು ಬೆಳಕಿಗೆ ಬಂತು. ಅವ್ರು, ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಪೇದೆಗಳಾದ ಮಧು ಹಾಗೂ ತಿಪ್ಪೇಸ್ವಾಮಿ. ಇವರಿಬ್ಬರು ಆರ್ಮುಗಂ ಕೈಲಿ ಮನೆ ಕಳವು ಮಾಡಿಸ್ತಿದ್ದರು. ಕಳ್ಳತನ ಮಾಡ್ತಿದ್ದ ಆರ್ಮುಗಂ, ಅರ್ಧ ಪಾಲನ್ನ ತನಗಿಟ್ಟುಕೊಂಡು ಉಳಿದ ಅರ್ಧ ಭಾಗವನ್ನ ಆರೋಪಿ ಸ್ಥಾನದಲ್ಲಿರೋ ಪೇದೆಗಳಿಗೆ ನೀಡ್ತಿದ್ದ. ಈ ಪೇದೆಗಳು ತಾವು ಬಳಸ್ತಿದ್ದ ಸಿಮ್ ಚೇಂಜ್ ಮಾಡಿ ಮತ್ತೊಂದು ಸಿಮ್‌ಗಳನ್ನ ಯೂಸ್ ಮಾಡ್ತಿದ್ರು…

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯಾ ವಿಭಾಗ ಡಿಸಿಪಿ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತಲೆಮರೆಸಿಕೊಂಡಿರೋ ಆರೋಪಿಗಳ ಪತ್ತೆಗೆ ಫೀಲ್ಡ್ ಗಿಳಿದಿರೋ ಸ್ಪೆಷಲ್ ಟೀಂ ತೀವ್ರ ಶೋಧ ನಡೆಸ್ತಿದೆ…

 

 

 

 

 

 

LEAVE A REPLY

Please enter your comment!
Please enter your name here