Home Latest ಇವರಿಬ್ಬರು ಶರ್ಟ್ ಬಿಚ್ಚೋದರಲ್ಲೂ ಪೈಪೋಟಿ ….!! ಆಗ ನೆನಪಿಗೆ ಬಂದಿದ್ದು ಉಪೇಂದ್ರರ ಹಾಡು “ಇದು ಒಂಡೇ...

ಇವರಿಬ್ಬರು ಶರ್ಟ್ ಬಿಚ್ಚೋದರಲ್ಲೂ ಪೈಪೋಟಿ ….!! ಆಗ ನೆನಪಿಗೆ ಬಂದಿದ್ದು ಉಪೇಂದ್ರರ ಹಾಡು “ಇದು ಒಂಡೇ ಮ್ಯಾಚು ಕಣೋ”!!!

913
0
SHARE

ಅವತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣ ಬರೋಬ್ಬರಿ ಐವತ್ತು ಸಾವಿರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು .ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿ ಆರು ಏಕದಿನ ಸರಣಿಯನ್ನು ಆಡುವ ಹಂತದಲ್ಲಿ ಈ ಪಂದ್ಯಾವಳಿ ನಡೆದಿತ್ತು .2002 ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತ ಯಶಸ್ವಿ ತಂಡವಾಗಿ ಗೆಲುವಿನ ಓಟದಲ್ಲಿ ಮುನ್ನಡೆದಿತ್ತು .ಒಮ್ಮೊಮ್ಮೆ ಕ್ರಿಕೆಟ್ ಆಟದಲ್ಲಿ ಏನೆಲ್ಲಾ ಘಟನೆಗಳು ಇತಿಹಾಸದ ಪುಟದಲ್ಲಿ ನಿಂತುಕೊಳ್ಳುತ್ತವೆ ಎನ್ನುವುದಕ್ಕೆ ಅವತ್ತು ಫೈನಲ್ ಪಂದ್ಯದ ಕೊನೆಯ ಓವರ್‌ಗಳಲ್ಲಿ ನಡೆದ ಒಂದು ಘಟನೆ ಸಾಕ್ಷಿ .

ಆರು ಏಕದಿನ ಪಂದ್ಯಾವಳಿಯ ಕೊನೆಯ ಪಂದ್ಯ ಅದು ಭಾರತ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಈ ಎರಡೂ ತಂಡಕ್ಕೂ ಆರನೇ ಹಾಗೂ ಕೊನೆಯ ಪಂದ್ಯ ಬಹಳ ಮಹತ್ವದ ಪಂದ್ಯವಾಗಿತ್ತು .ಮುಂಬೈನ ವಾಂಖೆಡೆ ಕ್ರೀಡಾಂಗಣ ಕೊನೆಯ ಹಾಗೂ ಬಹಳ ಮುಖ್ಯವಾದ ಇಂಗ್ಲೆಂಡ್ ಮತ್ತು ಭಾರತದ ನಡುವಿನ ಪಂದ್ಯಕ್ಕೆ ಲವಲವಿಕೆಯಿಂದ ಸಿಂಗಾರಗೊಂಡಿತ್ತು.ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 254ರನ್ಗಳನ್ನು ಕಲೆ ಹಾಕಿ. ಭಾರತ ಗೆಲ್ಲಲು ಐವತ್ತು ಓವರ್ ಗಳಲ್ಲಿ 255 ರನ್ ಗಳ ಸವಾಲನ್ನು ನೀಡಿತ್ತು.

ಅದು ಕೊನೆಯ ಓವರ್ ಆರು ಬಾಲ್ ಗಳಲ್ಲಿ ಭಾರತಕ್ಕೆ ಹನ್ನೊಂದು ರನ್ಗಳ ಅವಶ್ಯಕತೆ .ಕೊನೆಯ ಓವರ್ ಎಸೆಯಲು ಇಂಗ್ಲೆಂಡ್ ತಂಡದ ವೇಗದ ಬೌಲರ್ ಆ್ಯಂಡ್ರೂ ಫ್ಲಿಂಟಾಫ್ ಮೈದಾನಕ್ಕೆ ಇಳಿದರು .ಕ್ರೀಸ್ ನಲ್ಲಿ ಹೇಮಾಂಗ್ ಬದಾನಿ ಹಾಗೂ ಅನಿಲ್ ಕುಂಬ್ಳೆ. ಭರವಸೆ ಮೂಡುವಂತೆ ಹೇಮಾಂಗ್ ಬದಾನಿ ಹಾಗೂ ಕುಂಬ್ಳೆ ಮೊದಲ ಮೂರು ಬಾಲ್ಗಳಲ್ಲಿ ನಾಲ್ಕು ರನ್ನನ್ನು ತೆಗೆದು ಭಾರತದ ಪಾಳಯದಲ್ಲಿ ಗೆಲುವಿನ ಆಸೆಯನ್ನು ಮೂಡಿಸಿದರು. ಆಂಡ್ರೋ ಫ್ಲಿಂಟಾಫ್ ನ ನಾಲ್ಕನೇ ಬಾಲ್ ಎದುರಿಸಿದ ಅನಿಲ್ ಕುಂಬ್ಳೆ ಭರ್ಜರಿ ಹೊಡೆತವನ್ನೇ ಬಾರಿಸಿದರು, ಆದರೆ ಓಡುವುದರಲ್ಲಿ ಸ್ವಲ್ಪ ಆಯ ತಪ್ಪಿದ ಅನಿಲ್ ಕುಂಬ್ಳೆ ರನ್ ಔಟ್ ಆಗುವುದರೊಂದಿಗೆ ಭಾರತದ ತಂಡದಲ್ಲಿ ಮತ್ತೆ ಆತಂಕ.

ಆಗ ಆಡಲು ಬಂದವರು ಜಾವಗಲ್ ಶ್ರೀನಾಥ್, ಆಂಡ್ರೂ ಫ್ಲಿಂಟಾಫ್ ಜಾವಗಲ್ ಶ್ರೀನಾಥ್ ಗೆ ಎಸೆದ ನೇರ ಬಾಲ್ ಅವರ ವಿಕೆಟ್ ಅನ್ನು ಎದುರಿಸಿತ್ತು ಅಲ್ಲಿಗೆ ಭಾರತದ ಗೆಲುವು ಮರೀಚಿಕೆಯಾಯಿತು. ಭಾರತ ತಂಡ ಆಲ್ ಔಟ್ ಆಗಿ ಪಂದ್ಯವನ್ನು ಸೋತಿತ್ತು. ಕೊನೆಯ ಪಂದ್ಯವನ್ನು ಗೆದ್ದ ಖುಷಿಯಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಆ್ಯಂಡ್ರೂ ಫ್ಲಿಂಟಾಫ್ ಮುಂಬೈನ ಕ್ರೀಡಾಂಗಣದಲ್ಲಿ ತಮ್ಮ ಶರ್ಟನ್ನು ಬಿಚ್ಚಿ ಇಡೀ ಕ್ರೀಡಾಂಗಣದಲ್ಲಿ ಹುಚ್ಚನಂತೆ ಓಡತೊಡಗಿದ. ಪೆವಿಲಿಯನ್ ನಲ್ಲಿ ಕುಳಿತಿದ್ದ ನಾಯಕ ಗಂಗೂಲಿಯ ಮುಖದಲ್ಲಿ ಸೋಲಿನ ನಿರಾಸೆ ಭಾವನೆ .ಆ್ಯಂಡ್ರೂ ಫ್ಲಿಂಟಾಫ್ ಶರ್ಟು ಬಿಚ್ಚಿ ಕ್ರೀಡಾಂಗಣದಲ್ಲಿ ಗೆಲುವಿನ ಕೇಕೆ ಹಾಕುತ್ತಿದ್ದನ್ನು ಸಣ್ಣಗೆ ನೋಡಿದ ಗಂಗೂಲಿ ಆ ಘಟನೆಯನ್ನು ನೋಡಲಾಗದೆ ಡ್ರೆಸ್ಸಿಂಗ್ ರೂಮಿನ ಒಳಕ್ಕೆ ನಡೆದು ಹೋದರು .

ತಾನೊಂದು ಬರೆದರೆ ವಿಧಿ ಮತ್ತೊಂದು ಬರೆಯುತ್ತದೆ ಎಂಬಂತೆ ಈಗ ಭಾರತಕ್ಕೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ ಸರದಿ. ನ್ಯಾಟ್ ವೆಸ್ಟ್ ಏಕದಿನ ಸರಣಿಯನ್ನು ಆಡಲು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು ಭಾರತ ತಂಡ, ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡುವ ಸಂದರ್ಭ ಅದು ಆಗಲೇ ನಾಲ್ಕು ಪಂದ್ಯಗಳು ಮುಗಿದು ಎರಡೂ ತಂಡಗಳು ತಲಾ ಎರಡೆರಡು ಪಂದ್ಯಗಳನ್ನು ಗೆದ್ದು ಕೊನೆಯ ಹಾಗೂ ಅತಿ ಮುಖ್ಯವಾದ ಫೈನಲ್ ಪಂದ್ಯಕ್ಕೆ ಸಜ್ಜುಗೊಂಡಿದ್ದೆವು.

ಕ್ರಿಕೆಟ್ ಕಾಶಿ ಎಂದು ಹೆಸರು ಪಡೆದಿರುವ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ನಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯಕ್ಕೆ ರೆಡಿಯಾಗಿತ್ತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಭಾರತದ ಬೌಲರ್ಗಳಿಗೆ ನೀರು ಕುಡಿಸಿ 325ರನ್ ಗಳನ್ನು ಗಳಿಸಿ ಭಾರತ ತಂಡಕ್ಕೆ ದೊಡ್ಡ ಸವಾಲೆಸೆದಿತ್ತು.ಭಾರತ ತಂಡ ಕೂಡ ಸೌರವ್ ಗಂಗೂಲಿ ನಾಯಕತ್ವದ ಅಡಿಯಲ್ಲಿ ಸಮರ್ಥ ಬ್ಯಾಟ್ಸ್ ಮನ್ ಗಳನ್ನು ಹೊಂದಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ,ಜಬರ್ದಸ್ತ್ ಹೊಡೆತಗಾರ ನಾಯಕ ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಮಹಮ್ಮದ್ ಕೈಫ್ ಹೀಗೆ ಸಾಲು ಸಾಲು ದಾಂಡಿಗರು ಭಾರತದ ಪಾಳ್ಯದಲ್ಲಿ ಇದ್ದರು.

ಆದರೂ ಇಂಗ್ಲೆಂಡ್ನ ಬೃಹತ್ ಮೊತ್ತವನ್ನು ಚೇಸ್ ಮಾಡುವುದು ಅಷ್ಟು ಸುಲಭದ ಮಾತಲ್ಲ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಆತಿಥೇಯರಿಗೆ ಎಲ್ಲದರಲ್ಲೂ ಹೇಳಿ ಮಾಡಿಸಿದಂತಿತ್ತು. ಆದರೆ ಭಾರತಕ್ಕಿದ್ದ ವಿಶ್ವಾಸವೆಂದರೆ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದು ಇದು ಕೊನೆಯ ಪಂದ್ಯ. ಭಾರತದ ಬ್ಯಾಟ್ಸ್ಮನ್ಗಳ ಆಕ್ರಮಣಕಾರಿ ಆಟದಿಂದಾಗಿ ಭಾರತ ಗೆಲುವಿನ ಹಂತಕ್ಕೆ ಬಂದು ನಿಂತುಕೊಂಡಿತ್ತು . ಅದು ಪಂದ್ಯದ ಕೊನೆಯ ಓವರ್ ಆಗಲೇ ಪಂದ್ಯ ಭಾರತದ ಕಡೆ ವಾಲಿತ್ತು ,ಭಾರತಕ್ಕೆ ಗೆಲ್ಲಲು ಬೇಕಾಗಿದ್ದದ್ದು ಕೇವಲ ಎರಡು ರನ್ ಮಾತ್ರ ಕ್ರೀಸ್ ನಲ್ಲಿ ಮಹಮ್ಮದ್ ಕೈಫ್ ಹಾಗೂ ಜಾಹೀರ್ ಖಾನ್. ಕೊನೆಯ ಓವರ್ ಮಾಡಲು ಬಂದವರು ಭಾರತದಲ್ಲಿ ಶರ್ಟ್ ಬಿಚ್ಚಿದ ವೀರ ಆ್ಯಂಡ್ರೂ ಫ್ಲಿಂಟಾಫ್.

ಲಾರ್ಡ್ಸ್ ನ ಮೊದಲ ಮಹಡಿಯಲ್ಲಿ ನಾಯಕ ಸೌರವ್ ಗಂಗೂಲಿ ಐತಿಹಾಸಿಕ ಗೆಲುವಿಗಾಗಿ ಕಾತುರದಿಂದ ನಿಂತಿದ್ದಾರೆ ಬಲಗಡೆ ವಿವಿಎಸ್ ಲಕ್ಷ್ಮಣ್ ಎಡಗಡೆ ಹರಭಜನ್ ಸಿಂಗ್ ಹಿಂದಗಡೆ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಬಹಳ ಕುತೂಹಲಕಾರಿಯಾದ ಕೊನೆಯ ಓವರ್. ಆಂಡ್ರೂ ಫ್ಲಿಂಟಾಫ್ ಮೊದಲನೇ ಬಾಲನ್ನು ಎದುರಿಸಿದ ಮಹಮ್ಮದ್ ಕೈಫ್ ಯಾವುದೇ ರನ್ ತೆಗೆದುಕೊಳ್ಳಲಿಲ್ಲ ಎರಡನೇ ಬಾಲ್ ಮಹಮ್ಮದ್ ಕೈಫ್ ಭರ್ಜರಿ ಹೊಡೆತ,ಎರಡು ರನ್ ಭಾರತಕ್ಕೆ ಐತಿಹಾಸಿಕ ಗೆಲುವು .ಲಾರ್ಡ್ಸ್ ಮೈದಾನದ ತುಂಬೆಲ್ಲ ಭಾರತದ ರಣಕೇಕೆ .

ಪೆವಿಲಿಯನ್ ಮೊದಲ ಮಹಡಿಯಲ್ಲಿದ್ದ ಗಂಗೂಲಿ ಗೆಲುವಿನ ರಣಕೇಕೆಯೊಂದಿಗೆ ತಮ್ಮ ಶರ್ಟ್ ಬಿಚ್ಚಿ ಇಡೀ ಕ್ರೀಡಾಂಗಣ ನೋಡುವಂತೆ ಗರಗರನೆ ತಿರುಗಿಸ ತೊಡಗಿದರು ಪಕ್ಕದಲ್ಲಿದ್ದ ವಿವಿಎಸ್ ಲಕ್ಷ್ಮಣ್ ಗಂಗೂಲಿ ಶರ್ಟ್ ಬಿಚ್ಚಲು ಹೋದಾಗ ಬೇಡ ಬೇಡ ಎಂದು ಕೈ ಸನ್ನೆ ಮಾಡಿದರೂ ಕೂಡ ಕೇಳಲಿಲ್ಲ ಗಂಗೂಲಿ .ಆಗ ಅವರ ಕಣ್ಮುಂದೆ ಬಂದಿದ್ದು. ಆರ್ಡ್ರ್ ಫ್ಲಿಂಟಾಫ್ ಭಾರತದ ನೆಲದಲ್ಲಿ ಗೆಲುವಿನ ರಣಕೇಕೆ ಯನ್ನು ಶರ್ಟ್ ಬಿಚ್ಚಿ ಭಾರತದ ಪ್ರೇಕ್ಷಕರ ಮುಂದೆ ಮಾಡಿದ್ದ ಅವಮಾನ .ಗಂಗೂಲಿ ಎಂಬ ಮಹಾರಾಜ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡರು .

LEAVE A REPLY

Please enter your comment!
Please enter your name here