Home Cinema ಇಷ್ಟು ದಿನ ಚಿತ್ರನಟಿಯರಾಯ್ತು, ಈಗ ಡ್ಯಾನ್ಸರ್ ಮೇಲೆ ಎರಗಿದ್ದಾನೆ ಕಾಮುಕ ನಿರ್ಮಾಪಕ.!!? “ಅಯ್ಯೋ. ಗೋವಾ ಪೋರಿ...

ಇಷ್ಟು ದಿನ ಚಿತ್ರನಟಿಯರಾಯ್ತು, ಈಗ ಡ್ಯಾನ್ಸರ್ ಮೇಲೆ ಎರಗಿದ್ದಾನೆ ಕಾಮುಕ ನಿರ್ಮಾಪಕ.!!? “ಅಯ್ಯೋ. ಗೋವಾ ಪೋರಿ ಮೇಲೆ ಎಗರಿದ್ದು ಅದ್ಯಾರು ವಿಕೃತ ನಿರ್ಮಾಪಕ..!”

2410
0
SHARE

ಅಯ್ಯೋ. ಗೋವಾ ಗೋರಿ ಮೇಲೆ ಎಗರಿದ್ದು ಅದ್ಯಾರು ವಿಕೃತ ನಿರ್ಮಾಪಕ..!ಗಾಂಧಿನಗರದ ಗಲ್ಲಿಗಳಲ್ಲಿ, ನಿರ್ಮಾಪಕರೊಬ್ಬರ.. ಇತ್ತೀಚಿನ ಕಾಮಕೇಳಿಯ ಕಥೆಯೊಂದು ಭಾರೀ ಚರ್ಚೆಗೀಡಾಗ್ತಿದೆ. ಹಾಗಂತ, ನಿರ್ಮಾಪಕರ ಕಾಮದ ಹಸಿವಿಗೆ ಇಲ್ಲಿ ಬಲಿಯಾಗಿರೋದು ಯಾರೋ ನಾಯಕಿಯರಲ್ಲ. ಬದ್ಲಿಗೆ ಡ್ಯಾನ್ಸರ್.ಇತ್ತೀಚಿಗೆ ಉತ್ತರ ಕರ್ನಾಟಕದ ಗಡಿಯಲ್ಲಿ ಚಿತ್ರತಂಡವೊಂದು ಬೀಡು ಬಿಟ್ಟಿತ್ತು. ಚಿತ್ರಕ್ಕಾಗಿ ಅಂತನೇ ಅದ್ಧೂರಿ ಸೆಟ್ ಕೂಡಾ ಹಾಕಲಾಗಿತ್ತು.

ಹೇಳಿ ಕೇಳಿ ಹಾಡಿನ ಚಿತ್ರೀಕರಣವಾಗಿದ್ದರಿಂದ ನೃತ್ಯ ನಿರ್ದೇಶಕರು ಗೋವಾದಿಂದ ತಳ್ಳಗೆ ಬೆಳ್ಳಗೆ ಇರುವ ಹುಡುಗಿಯರನ್ನೂ ಡ್ಯಾನ್ಸ್ ಮಾಡಲು ಕರೆಸಿದ್ದರು. ಕಷ್ಟಪಟ್ಟೂ ಹಾಡನ್ನೂ ಸೆರೆ ಹಿಡಿದರು. ನೃತ್ಯ ನಿರ್ದೇಶಕ ಹಾಡನ್ನ ಏನೋ ಸೆರೆ ಹಿಡಿದರು. ಆದ್ರೆ ಇದೇ ವೇಳೆ ನಿರ್ಮಾಪಕರ ಕಣ್ಣು ಅಲ್ಲಿದ್ದ ಡ್ಯಾನ್ಸರ್‌ಗಳನ್ನ ಸೆರೆ ಹಿಡಿತಿದ್ದಿದ್ದು ಅಲ್ಲಿದ್ದವರಿಗ್ಯಾರಿಗೂ ಗೊತ್ತೇ ಆಗಲಿಲ್ಲ. ಇದೇ ಕಾರಣಕ್ಕೆ ಹಾಡಿನ ಚಿತ್ರೀಕರಣ ಮುಗಿದ ಬಳಿಕ, ಏಕಾಏಕಿ ಅರೆಂಜ್ ಮಾಡಲಾದ ಪಾರ್ಟಿಯ ಹಿಂದಿನ ಹಕೀಕತ್ತು ಯಾರಿಗೂ ಗೊತ್ತಾಗಲಿಲ್ಲ.

ಗಾಂಧಿನಗರದ ಗಲ್ಲಿಗಳಲ್ಲಿ ಸದ್ಯ ಕೇಳಿ ಬರ‍್ತಿರುವ ಸುದ್ದಿಗಳ ಪ್ರಕಾರ, ನಿರ್ಮಾಪಕರಿಗೆ ತನ್ನ ಸುತ್ತ ಯಾವತ್ತೂ ಹುಡುಗೀರು ಲಕ ಲಕಾ ಅಂತಿರಬೇಕು ಅನ್ನುವ ಬಯಕೆ. ಥೇಟ್ ಎಣ್ಣೆಯ ದೊರೆ ವಿಜಯ್ ಮಲ್ಯರಂತೇ. ಹುಡುಗಿಯರ ನಡುವೆ ಕೃಷ್ಣಪರಮಾತ್ಮನಂತೆ ನಿಂತು ನಲಿಯುವ ಬಯಕೆಯನ್ನೊಂದಿರುವ ನಿರ್ಮಾಪಕರು, ನೈಟ್ ಪಾರ್ಟಿಯಲ್ಲಿ ಡ್ಯಾನ್ಸರ್‌ಗಳೂ ಇರಬೇಕೆನ್ನುವ ಪಟ್ಟು ಹಿಡಿದಿದ್ದರು.

ಇದೇ ಪಟ್ಟು ಅತಿಯಾದ್ಮೇಲೆ ಡ್ಯಾನ್ಸರ್‌ಗಳೂ ಹೇಗೂ ಬಂದಿದ್ದಾರೆ. ರಾತ್ರಿ ಪಾರ್ಟಿಯ ಪೇಮೆಂಟೂ ಸಿಗುವಂತೆ ವ್ಯವಸ್ಥೆ ಮಾಡಿದರಾಯ್ತು ಅಂದುಕೊಂಡ ಕೋರಿಯೋಗ್ರಾಫರ್ ಗೋವಾ ಹುಡುಗೀರನ್ನು ಕನ್ವಿನ್ಸ್ ಮಾಡಿ ಇರಿಸಿಕೊಂಡರು ಕೂಡಾ. ಗೋವಾ ಹುಡುಗಿಯರು ಒಪ್ಪಿಕೊಂಡ್ಮೇಲೆ ರಾತ್ರಿ ಪಾರ್ಟಿ ಸಾಂಗವಾಗಿ ನೆರವೇರಿತು.

ಸುತ್ತ ಗೋವಾ ಡ್ಯಾನ್ಸರುಗಳಿದ್ದಿದ್ದರಿಂದ ಆ ನಿರ್ಮಾಪಕ ಮಾಮೂಲಿಗಿಂತ ತುಸು ಹೆಚ್ಚೇ ಉತ್ಸಾಹದಲ್ಲಿದಲ್ಲಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಡಾನ್ಸಿನ ಮೂಲಕವೇ ತೂರಾಡೋ ದೇಹವನ್ನು ಕಂಟ್ರೋಲಿಗೆ ತಂದುಕೊಳ್ಳಲು ಪ್ರಯಾಸ ಪಡುವ ರೇಂಜಿಗೆ ಟೈಟಾಗಿದ್ದರು. ಹೀಗೆ ಟೈಟಾದ ಪರಿಣಾಮದಿಂದ ಪಾರ್ಟಿಯ ಢಿಮ್ ಲೈಟ್‌ನಲ್ಲಿ ನಿಧಾನಕ್ಕೆ ಗೋವಾ ಹುಡುಗಿಯರ ಸೊಂಟ ತಬ್ಬುವಂಥಾ ಕೀಟಲೆ ಶುರು ಮಾಡಿದ ನಿರ್ಮಾಪಕ ಮಂದಬೆಳಕಲ್ಲಿ ಏಕಾಏಕಿ ಧಗೆಯೇರಿಸಿಕೊಂಡಿದ್ದಾರೆ.

ಇವರ ಹುಚ್ಚಾಟವನ್ನು ಆ ಚಿತ್ರದ ಸಭ್ಯ ತಂಡ ಗಮನಿಸುತ್ತಲೇ ಇತ್ತು. ಬೇರೆ ಯಾರೋ ಆಗಿದ್ದರೆ ಹೀರೋನೇ ಹಿಡಿದು ನಿಲ್ಲಿಸಿ ಕಪಾಳಕ್ಕೆ ಬಾರಿಸುತ್ತಿದ್ದರೇನೋ. ನಿರ್ಮಾಪಕನೆಂಬ ಮುಲಾಜಿನಿಂದ ಎಲ್ಲರೂ ತೆಪ್ಪಗಿರುವಾಗಲೇ ಗೋವಾ ಹುಡುಗಿಯೊಬ್ಬಳು ಕಿಟಾರನೆ ಕಿರುಚಿಕೊಂಡಿದ್ದಾಳೆ. ಧ್ವನಿ ಬಂದ ದಿಕ್ಕಿನತ್ತ ಎಲ್ಲರೂ ಓಡಿ ಬಂದರೆ ಅಲ್ಲಿ ನಿರ್ಮಾಪಕ ರಸಭಂಗವಾದ ಭಂಗಿಯಲ್ಲಿ ನಿಂತಿದ್ದರು.

ಪಾಪದ ಹುಡುಗಿ ಕೆನ್ನೆಯಲ್ಲಿ ಹಲ್ಲು ಮೂಡಿಸಿಕೊಂಡು ಅಳುತ್ತಾ ನಿಂತಿದ್ದಳು ಅನ್ನುವ ಸುದ್ದಿ ಉತ್ತರ ಕರ್ನಾಟಕದ ಗಡಿ ಪ್ರದೇಶದಿಂದ, ಗಾಂಧಿನಗರದತ್ತ ತೇಲಿ ಬಂದಿದೆ. ಅಂದ ಹಾಗೇ ನಿರ್ಮಾಪಕರ ಆಟಗಳನ್ನ ಕಂಡು ಕೆಂಡಾ ಮಂಡಲವಾದ ಹೀರೋ ನಿರ್ಮಾಪಕನನ್ನು ಸೈಡಿಗೆಳೆದು ‘ಇದು ನನ್ನ ಸಿನಿಮಾ. ಇಲ್ಲಿ ಇಂಥಾ ಮಾನಗೆಟ್ಟ ಕೆಲಸ ಮಾಡಬೇಡ’ ಅಂತ ವಾರ್ನ್ ಮಾಡಿದ್ದರಂತೆ.

ಹಾಗೆ ಮರೆಯಲ್ಲಿ ನಿಂತು ಎಣ್ಣೆ ಏಟೆಲ್ಲ ಇಳಿದು ಹೋಗುವಂತೆ ಮುಕಕ್ಕುಗಿಸಿಕೊಂಡ ನಿರ್ಮಾಪಕರು ಅಲ್ಲಿಂದ ಕಾಲ್ಕಿತ್ತು ಗಾಯಬ್ ಕೂಡಾ ಆಗ್ ಬಿಟ್ಟಿದ್ದರಂತೆ. ಇನ್ನು ಇದೆಲ್ಲದ್ರ ನಡುವೆ ಈ ಮಹಾನುಭಾವ ನಿರ್ಮಾಪಕ ಯಾರೆಂಬ ಕುತೂಹಲ ಮಾತ್ರ ಹಾಗೇ ಉಳಿದುಕೊಂಡಿದೆ.

LEAVE A REPLY

Please enter your comment!
Please enter your name here