Home KARNATAKA ಈಡನ್ ಗಾರ್ಡನ್ ನಲ್ಲಿ ರಾಯಲ್ಸ್ ವಿರುದ್ಧ ‘ರಾಕ್ ’ ಆದ ಕೆಕೆಆರ್..!! ದಿನೇಶ್ ಕಾರ್ತಿಕ್ ಪಡೆಯ...

ಈಡನ್ ಗಾರ್ಡನ್ ನಲ್ಲಿ ರಾಯಲ್ಸ್ ವಿರುದ್ಧ ‘ರಾಕ್ ’ ಆದ ಕೆಕೆಆರ್..!! ದಿನೇಶ್ ಕಾರ್ತಿಕ್ ಪಡೆಯ ನಾಕೌಟ್ ಕನಸು ಇನ್ನೂ ಜೀವಂತ

103
0
SHARE

ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ರಾಜಸ್ತಾನ್ ರಾಯಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸತತ ಗೆಲುವುಗಳಿಂದ ಬೀಗುತ್ತಿದ್ದ ರಹಾನೆಗೆ ಪಡೆಗೆ ಸೋಲಿನ ರುಚಿ ತೋರಿಸಿತು. ಅಲ್ಲದೇ ನಾಕೌಟ್ ಹಾದಿಯನ್ನ ಸುಗಮಗೊಳಿಸಿಕೊಂಡಿತು…

ಕಳೆದ ಮೂರು ಪಂದ್ಯಗಳಲ್ಲಿ ರೋಚಕ ವಿಜಯ ಸಾಧಿಸಿದ್ದ ರಾಜಸ್ತಾನ್ ರಾಯಲ್ಸ್ ಕೊನೆಗೂ ಮಣ್ಣು ಮುಕ್ಕಿತು. ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಹಾನೆ ಪಾಳೆಯ 06 ವಿಕೆಟ್ ಗಳಿಂದ ಸೋಲನ್ನ ಕಂಡಿತು. ಹೀಗಾಗಿ ರಾಯಲ್ಸ್ ತಂಡದ ಪ್ಲೇ ಆಫ್ ತಲುಪುವ ಕನಸು ನುಚ್ಚು ನೂರಾಯ್ತು. ಇನ್ನು ಸೋಲಿನ ದವಡೆಯಲ್ಲಿ ಸಿಲುಕಿದ್ದ ನೈಟ್ ರೈಡರ್ಸ್ ಅದ್ಭುತ ಪ್ರದರ್ಶನ ನೀಡಿ ನಾಕೌಟ್ ಆಸೆಯನ್ನ ಜೀವಂತವಾಗಿಟ್ಟುಕೊಂಡಿದೆ…

ಇದಕ್ಕೂ ಮೊದ್ಲು ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ತಾನ್ ರಾಯಲ್ಸ್ ಗೆ ಜಾಸ್ ಬಟ್ಲರ್ ಹಾಗೂ ರಾಹುಲ್ ತ್ರಿಪಾಠಿ ಬಿರುಸಿನ ಆರಂಭವೊದಗಿಸಿದ್ರು. ಆರಂಭದಿಂದಲೇ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಈ ಜೋಡಿ 63 ರನ್ ಗಳಿಸಿತು. ಆದ್ರೆ ತ್ರಿಪಾಠಿ 27 ರನ್ ಗಳಿಸಿ ಔಟಾದ್ರು…

ಇನ್ನು ಸ್ಫೋಟಕ ಬ್ಯಾಟಿಂಗ್ ನಡೆಸಿದ ಬಟ್ಲರ್ 39 ಗಳಿಸಿ ಔಟಾಗುತ್ತಿದಂತೆ ರಾಯಲ್ಸ್ ಕುಲ್ದೀಪ್ ಯಾದವ್ ಸ್ಪಿನ್ ಕೈಚಳಕಕ್ಕೆ ತತ್ತರಿಸಿತು. ಅಜಿಂಕ್ಯಾ ರಹಾನೆ 11, ಬೆನ್ ಸ್ಟೋಕ್ಸ್ 11, ಹಾಗೂ ಸಂಜು ಸಾಮ್ಸನ್ 12, ಸ್ಟುವರ್ಟ್ ಬಿನ್ನಿ 01 ರನ್ ಗಳಿಸಿ ಘನಘೋರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯ್ತು. ಕೆಳಕ್ರಮಾಂಕದಲ್ಲಿ ಜಯದೇವ್ ಉನದ್ಕತ್ ವೇಗವಾಗಿ ಬ್ಯಾಟ್ ಬೀಸಿ 26 ರನ್ ಸಿಡಿಸಿದ್ರೆ, ಉಳಿದ ಆಟಗಾರರು ಎರಡಂಕಿ ರನ್ ಗೆ ಪೆವಿಲಿಯನ್ ಸೇರಿಕೊಂಡ್ರು…

ಕೆಕೆಆರ್ ತಂಡದ ವ್ಯವಸ್ಥಿತ ದಾಳಿಗೆ ಬೆದರಿದ ರಾಜಸ್ತಾನ್ ರಾಯಲ್ಸ್ 19 ಓವರ್ ಗಳಲ್ಲಿ ಕೇವಲ 142 ರನ್ ಗಳಿಗೆ ಸರ್ವಪತನವಾಯ್ತು. ಕೋಲ್ಕತ್ತಾ ಪರ ಕುಲ್ದೀಪ್ ಯಾದವ್ 04 ವಿಕೆಟ್ ಪಡೆದು ಯಶಸ್ವಿ ಬೌಲರ್ ಅನಿಸಿಕೊಂಡ್ರೆ, ಆಂಡ್ರ್ಯೂ ರಸೇಲ್ ಹಾಗೂ ಕನ್ನಡಿಗ ಪ್ರಸಿದ್ದ್ ಕೃಷ್ಣ ತಲಾ 1 ವಿಕೆಟ್ ಪಡೆದು ಮಿಂಚಿದ್ರು…

143 ರನ್ ಗಳ ಸಾಧಾರಣ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಪರ ಸುನೀಲ್ ನರೈನ್ ಆಕ್ರಮಣಕಾರಿ ಆಟದ ಮೂಲಕ ಅಬ್ಬರಿಸುವ ಮುನ್ಸೂಚನೆ ನೀಡಿದ್ರು. ಆದ್ರೆ ನರೈನ್ 21 ರನ್ ಗಳಿಸಿದ್ದಾಗ ಬೆನ್ ಸ್ಟೋಕ್ಸ್ ಗೆ ವಿಕೆಟ್ ಒಪ್ಪಿಸಿದ್ರು. ಬಳಿಕ ಬಂದ ರಾಬಿನ್ ಉತ್ತಪ್ಪ 04 ರನ್ ಗಳಿಸಿದ್ರೆ, ನಿತಿಶ್ ರಾಣಾ 21 ರನ್ ಸಿಡಿಸಿ ಔಟಾದ್ರು…

ಇನ್ನು ಆರಂಭದಿಂದಲೇ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕ್ರಿಸ್ ಲಿನ್ ಕೆಲಕಾಲ ರಾಜಸ್ತಾನ್ ಬೌಲರ್ ಗಳ ಬೇವರಿಳಿಸಿದ್ರು. ಅಲ್ಲದೇ ಕಾರ್ತಿಕ್ ಜೊತೆಗೂಡಿ ತಂಡದ ಗೆಲುವಿಗಾಗಿ ಹೋರಾಟ ನಡೆಸಿದ್ರು. ಆದ್ರೆ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿಂದ 47 ರನ್ ಗಳಿಸಿ ಲಿನ್ ಔಟಾದ್ರು.
ನಂತ್ರ ಒಂದಾದ ದಿನೇಶ್ ಕಾರ್ತಿಕ್ 41 ಹಾಗೂ ಆಂಡ್ರ್ಯೂ ರಸೇಲ್ 11 ರನ್ ಗಳಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಕೆಕೆಆರ್ 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ, 6 ವಿಕೆಟ್ ಗಳಿಂದ ಜಯಭೇರಿ ಬಾರಿಸಿತು…

LEAVE A REPLY

Please enter your comment!
Please enter your name here