Home Elections 2019 ಈ ನಾಯಿ ಬೆಲೆ ಬರೋಬ್ಬರಿ ಕೋಟಿ ರುಪಾಯಿ..! ಗರ್ಭದಾರಣೆ ಮಾಡಲು 45 ಲಕ್ಷ ವೆಚ್ಚ..!

ಈ ನಾಯಿ ಬೆಲೆ ಬರೋಬ್ಬರಿ ಕೋಟಿ ರುಪಾಯಿ..! ಗರ್ಭದಾರಣೆ ಮಾಡಲು 45 ಲಕ್ಷ ವೆಚ್ಚ..!

2855
0
SHARE

ಅಪ್ಪ ಅಮ್ಮನ್ನ ಸಾಕ್ತಾರೋ ಇಲ್ವೋ ಗೊತ್ತಿಲ್ಲ.. ಆದ್ರೆ ಶೋಕಿಗೆ ಅಂತಾ ನಾಯಿ ಸಾಕೋ ಕಾಲ ಇದು.. ಲಕ್ಷ ಲಕ್ಷ ಕೋಟ್ಟು ನಾಯಿ ಸಾಕ್ತಿದ್ರು.. ಆದ್ರೀಗ ಕೋಟಿಗಟ್ಟಲೆ ಹಣ ಕೊಟ್ಟು ನಾಯಿ ಸಾಕೋ ಕಾಲ ಬಂದಿದೆ.. ಮನುಷ್ಯನಿಗು ಇಷ್ಟು ಬೆಲೆ ಕಟ್ತಾರಾ ಇಲ್ವೊ ಗೊತ್ತಿಲ್ಲ.. ಆದ್ರೆ ಈ ನಾಯಿ ಮಾತ್ರ ಬಾರಿ ದುಭಾರಿ…ಹೀಗೆ ಪಿಳಿ ಪಿಳಿ ಕಣ್ಣು ಬಿಟ್ಟು, ತಾಯಿಯ ಬಳಿ ಆಟವಾಡ್ತಿರೋ ಈ ನಾಯಿ ಮರಿಗಳನ್ನೊಮ್ಮೆ ನೋಡಿ.. ಅರೆ ಎಷ್ಟು ಮದ್ದಾಗಿದೆ ಅಲ್ವಾ ಅನಿಸಬಹುದು.. ಆದ್ರೆ, ಇದರ ರೇಟ್ ಕೇಳಿದ್ರೆ ಸುಸ್ತಾಗೋಗ್ತಿರಾ.. ಯಾಕಂದ್ರೆ ಪ್ರತೀ ನಾಯಿ ಮರಿಯ ಬೆಲೆ 50ಲಕ್ಷ…ಹೌದು.. ಮನುಷ್ಯರಿಗೆ ಇಷ್ಟು ಬೆಲೆ ಕಟ್ತಾರೊ ಇಲ್ವೊ ಗೊತ್ತಿಲ್ಲ.. ಆದ್ರೆ ಈ ನಾಯಿ ಬೆಲೆ ಮಾತ್ರ ಬರೊಬರಿ 1 ಕೋಟಿ ರುಪಾಯಿ.. ಭಾರತ ದೇಶದಲ್ಲೆ ಇಂತಹ ಬ್ರೀಡ್ ನಾಯಿ ಒಂದೆ ಇರೋದು.. ಸೊ ಈ ನಾಯಿಗೆ ಕ್ರಾಸಿಂಗ್ ಮಾಡಿಸಲು ಗಂಡು ನಾಯಿ ಇಲ್ಲದ ಕಾರಣ, 45ಲಕ್ಷ ಕೊಟ್ಟು ಚೀನಾದಿಂದ ಸ್ಪರ್ಮ್ಸ್ ತರಿಸಿ ಗರ್ಭದಾರಣೆ ಮಾಡಿಸಿದ್ದಾರೆ…ಕೋಕಿ ಅನ್ನೋ ಈ ಹೆಣ್ಣು ನಾಯಿ, ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು.. ಎರಡು ಮರಿಗಳು ಮಾತ್ರ ಉಳಿದುಕೊಂಡಿವೆ.. ಇನ್ನೆರಡು ಮರಿಗಳು ಸತ್ತ ಹಿನ್ನಲೆ ಇವರಿಗೆ 1 ಕೋಟಿ ನಷ್ಟವಾಗಿದೆ.. ಹಾಗಾಗಿ ಈಗ ಇರೊ ಎರಡು ಮರಿಗಳಿಗೆ ಬಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ…ರಾಜರಾಜೇಶ್ವರಿ ನಗರದಲ್ಲಿರೊ ಈ ಕೊರಿಯನ್ ಮಸ್ಢಿಫ್ ಅನ್ನು ಸಾಕಿರುವ ಸತೀಶ ಅವ್ರು ಬಾರಿ ಸಂತಸ ವ್ಯಕ್ತಪಡಿಸಿದ್ದು, ಈ ಮರಿಗಳನ್ನ ಸದ್ಯಕ್ಕೆ ಮಾರುವುದಿಲ್ಲ.. ಯಾಕಂದ್ರೆ ಎರಡು ಮರಿಗಳು ಗಂಡು ಆಗಿರೋದ್ರಿಂದ ಹಾಗೆ ಉಳಿಸಿಕೊಳ್ಳುತ್ತೇನೆ.. ಮುಂದಿನ ಬಾರಿ ಮರಿ ಹಾಕಿದಾಗ ಮಾರುತ್ತೇನೆ ಎಂದಿದ್ದಾರೆ…ಚುನಾವಣೆ ನಡೆದ ಬಳಿಕ ಕಿಚಿಡಿ ಸರ್ಕಾರದಲ್ಲಿ ಎಮ್,ಎಲ್,ಎ ಗಳನ್ನೆ ಕೊಂಡ್ಡಿಕೊಳ್ಳಬಹುದು.. ಆದ್ರೆ ಈ ನಾಯಿಯನ್ನ ಕೊಂಡುಕೊಳ್ಳುವುದಕ್ಕೆ ಆಗ್ತಿಲ್ಲ.. ಯಾಕಂದ್ರೆ ಈ ನಾಯಿ ಬೆಲೆ ಕೇಳಿದ್ರೇನೆ ಶಾಕ್ ಆಗುತ್ತೆ… ಜೊತೆಗೆ ಇದನ್ನ ಸಾಕಲು ದಿನಕ್ಕೆ ಏನಿಲ್ಲ ಅಂದ್ರು 10 ರಿಂದ 20 ಸಾವಿರ ಖರ್ಚು ಬೇರೆ ಬರುತ್ತೆ…

 

LEAVE A REPLY

Please enter your comment!
Please enter your name here