Home District ಈ ಬಾರಿ ಗಣೇಶ ಹಬ್ಬದಲ್ಲಿ ಮಿಂಚಲಿವೆ ಜೋಡೆತ್ತು‌ ಗಣಪ..! ಮಂಡ್ಯದ ಕಲಾವಿದನಿಂದ ನಿರ್ಮಾಣವಾಗ್ತಿದೆ ಜೋಡೆತ್ತಿನ ಗಣೇಶ...

ಈ ಬಾರಿ ಗಣೇಶ ಹಬ್ಬದಲ್ಲಿ ಮಿಂಚಲಿವೆ ಜೋಡೆತ್ತು‌ ಗಣಪ..! ಮಂಡ್ಯದ ಕಲಾವಿದನಿಂದ ನಿರ್ಮಾಣವಾಗ್ತಿದೆ ಜೋಡೆತ್ತಿನ ಗಣೇಶ ಮೂರ್ತಿ

590
0
SHARE

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಖತ್ ಸದ್ದು ಮಾಡಿದ ಪದ ಜೋಡೆತ್ತು. ಸುಮಲತಾ ಪರವಾಗಿ ಪ್ರಚಾರಕ್ಕಿಳಿದ ದರ್ಶನ್ ಹಾಗು ಯಶ್ ನಾವು ಜೋಡೆತ್ತಿನ ರೀತಿ ಕೆಲ್ಸ ಮಾಡ್ತಿನಿ ಅಂದಿದ್ರು. ಈ ಜೋಡೆತ್ತಿನ ಹೇಳಿಕೆ ಬಗ್ಗೆ ಸಿಡಿಮಿಡಿಕೊಂಡ ಸಿಎಂ. ಅವು ನಿಜವಾದ ಜೋಡೆತ್ತಲ್ಲ,ಅವು ಕಳ್ಳೆತ್ತು . ನಾನು ಮತ್ತು‌ ಡಿಕೆಶಿ ನಿಜವಾದ ಜೋಡೆತ್ತು ಅಂತಾ ಟಾಂಗ್ ನೀಡಿದ್ರು. ಈ ಜೋಡೆತ್ತು ಪದ ರಾಜ್ಯ ರಾಜಕೀಯದಲ್ಲಿ ಸಖತ್ ಸದ್ದು ಮಾಡಿತ್ತು.

ಚುನಾವಣೆ ಮುಗಿದ ಬಳಿಕವು ಈ ಪದ ಸಾಕಷ್ಟು ಸದ್ದು ಮಾಡ್ತಿದ್ದು, ಒಂದು ಕಡೆ ಈ ಇದೇ ಹೆಸರಲ್ಲಿ ಚಿತ್ರ ನಿರ್ಮಾಣಕ್ಕೆ ಈ ಜೋಡೆತ್ತಿನ ಹೆಸ್ರು ನೊಂದಣಿಯಾಗಿದ್ರೆ .ಮತ್ತೊಂದು ಕಡೆ ಕಲಾವಿದನೋರ್ವ ಜೋಡತ್ತಿನ ಗಣಪನನ್ನು ನಿರ್ಮಾಣ ಮಾಡಿ ಈ ಬಾರಿ ಗಣೇಶ ಹಬ್ಬದಲ್ಲಿ ಜೋಡೆತ್ತಿನ ಗಣಪನ ಟ್ರೆಂಡ್ ಸೃಷ್ಟಿ ಮಾಡ್ತಿದ್ದಾನೆ.ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಎಲ್ಲರ ಕೇಂದ್ರ ಬಿಂದುವಾಗಿದ್ದ ಮಂಡ್ಯ ಕ್ಷೇತ್ರ. ಚುನಾವಣೆ ಪ್ರಕ್ರಿಯೆ ಆರಂಭಗೊಂಡಾಗಿನಿಂದ ಮುಗಿವ ವರೆಗೂ ಸಾಕಷ್ಟು ವಿಚಾರಗಳು ಚರ್ಚೆಗೆ ಬಂದವು. ನಟ ದರ್ಶನ್ ಅವರು ಹೇಳಿದ್ದ ಒಂದು ಮಾತು ಈ ಬಾರಿಗ ಗೌರಿ ಗಣೇಶ ಹಬ್ಬದ ಮೇಲೂ ಪರಿಣಾಮ ಬೀರಿದೆ. ಚುನಾವಣೆಯಲ್ಲಿ ದರ್ಶನ್, ಯಶ್ ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡುವುದಾಗಿ ಹೇಳಿದ್ದರು. ನಿಖಿಲ್ ನಾಮಪತ್ರ ಸಲ್ಲಿಸುವ ದಿನದಂದು ಮಾತನಾಡಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವು ಕತ್ತಲಲ್ಲಿ ಕದ್ದು ಮೇಯಲು ಬರುವ ಜೋಡೆತ್ತುಗಳು. ಸಚಿವ ಡಿ ಕೆ ಶಿವಕುಮಾರ್ ಹಾಗೂ ನಾನು ನಿಜವಾದ ಜನರ ಕೆಲಸ ಮಾಡುತ್ತಿರುವ ಜೋಡೆತ್ತುಗಳು ಎಂದು ಕೌಂಟರ್ ನೀಡಿದ್ದರು.

ಅದೇ ಜೋಡೆತ್ತಿನ ವಿಚಾರ ಮುಂದಿಟ್ಟುಕೊಂಡು. ಈ ವರ್ಷ ಗೌರಿ ಗಣೇಶ ಹಬ್ಬದಂದು ತಾವ್ಯಾಕೆ ಜೋಡೆತ್ತಿನ ಗಣಪನ ನಿರ್ಮಾಣ ಮಾಡಬಾರದೆಂದು ಕೊಂಡ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚಿಕ್ಕಮುಲಗೂಡಿನ ಕಲಾವಿದನೊಬ್ಬ. ಈಗ ಜೋಡೆತ್ತಿನ ಗಣಪನ ನಿರ್ಮಾಣದಲ್ಲಿ ತೊಡಗಿದ್ದಾನೆ. ಜೋಡೆತ್ತಿನ ಗಣಪನಿಗೆ ಸಾಕಷ್ಟು ಬೇಡಿಕೆ ಇದ್ದು ಇನ್ನೂ ಹೆಚ್ಚಿನ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾನೆ.ಇನ್ನ ಜೋಡೆತ್ತು ಅನ್ನೋದು ಹಣ್ಣಿಗಾಡಿನ ಪ್ರದೇಶದಲ್ಲಿ ಆರಂಭದಿಂದಲೂ ಚಾಲ್ತಿಯಲ್ಲಿತ್ತಾದರೂ ಅದು ಲೋಕಸಭೆ ಚುನಾವಣೆಯಲ್ಲಿ ಅದರಲ್ಲೂ ಮಂಡ್ಯದಲ್ಲಿ ಸಾಕಷ್ಟು ಪ್ರಭಾವ ಪಡೆದುಕೊಂಡಿತ್ತು.ಹೀಗಾಗಿ ಹೆಚ್ಚು ಪ್ರಚಲಿತಕ್ಕೆ ಬಂದ ಜೋಡೆತ್ತಿನ ವಿಚಾರವನ್ನೇತನ್ನ ಬಂಡವಾಳವನ್ನಾಗಿ ಮಾಡಿಕೊಂಡ ಕಲಾವಿದ ಸಂಜುಕುಮಾರ್ ಮಣ್ಣಿನಲ್ಲಿ ಸ್ವತಹ ತಾವೇ ಜೋಡೆತ್ತಿನ ಗಣಪನನ್ನ ನಿರ್ಮಿಸಲಾರಂಭಿಸಿದ್ದಾರೆ. ಇವರು ನಿರ್ಮಿಸಿರುವ ಜೋಡೆತ್ತಿನ ಗಣಪ ಕಚ್ಚೆಯನ್ನುಟ್ಟು, ಶೂಟ್ ಹಾಕಿರುವ ಗಣಪ ತಲೆಯಲ್ಲಿ ಪೇಟ ಕಟ್ಟಿಕೊಂಡು ತನ್ನ ಎರಡೂ ಕೈಗಳಲ್ಲಿ ಜೋಡೆತ್ತುಗಳನ್ನ ಹಿಡಿದುಕೊಂಡು ನಿಂತಿರುವ ರೈತ ಗಣಪನಾಗಿದ್ದಾನೆ.

ಒಟ್ಟಾರೆ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದ್ದ ಜೋಡೆತ್ತಿನ ವಿಚಾರವನ್ನೇ ಬಳಕೆ ಮಾಡಿಕೊಂಡಿರುವ ಈ ಕಲಾವಿದ ಈ ಬಾರಿಯ ಗೌರಿ ಗಣೇಶ ಹಬ್ಬದಂದು ಹೊಸ ಮಾರುಕಟ್ಟೆಯನ್ನೇ ನಿರ್ಮಿಸಲು ಹೊರಟಿದ್ದಾನೆ. ಆ ಮೂಲಕ ಅಂದು ಬಾರಿ ಸುದ್ದಿಯಾಗಿದ್ದ ಜೋಡೆತ್ತು ವಿಚಾರ ಹಬ್ಬದಲ್ಲೂ ಬಾರಿ ಕಮಾಲು ಮಾಡಲಿದೆ.

LEAVE A REPLY

Please enter your comment!
Please enter your name here