Home District ಈ ಬಾರಿ ಚುನಾವಣೆಯಿಂದ ಮದ್ಯ ಮಾರಾಟಕ್ಕೆ ಬಾರೀ ನಷ್ಟ..!? ಅಕ್ರಮ ಮದ್ಯ ಮಾರಾಟಕ್ಕೆ ಬಲಿಯಾದ್ವು 870...

ಈ ಬಾರಿ ಚುನಾವಣೆಯಿಂದ ಮದ್ಯ ಮಾರಾಟಕ್ಕೆ ಬಾರೀ ನಷ್ಟ..!? ಅಕ್ರಮ ಮದ್ಯ ಮಾರಾಟಕ್ಕೆ ಬಲಿಯಾದ್ವು 870 ಬಾರ್ ಲೈಸೆನ್ಸ್..!

2156
0
SHARE

ಈ ಬಾರಿ ಚುನಾವಣೆಯಿಂದಾಗಿ ಅಬಾಕಾರಿ ಇಲಾಖೆಗೆ ಬಿತ್ತು ಪೆಟ್ಟು..! ಟೈಟ್ ಸೆಕ್ಯುರಿಟಿಯಿಂದಾಗಿ ಸೇಲ್ ಆಗಲೇ ಇಲ್ಲ ಸ್ಟಾಕು..!ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮದ್ಯದ ನಶೆ ತುಂಬಾನೇ ಡಲ್ ಆಗಿತ್ತು.. ಚೆಕ್ ಪೋಸ್ಟ್ ಗಳಲ್ಲಿ ಕಂತೆ ಕಂತೆ ನೋಟ್ ಸಿಕ್ಕಿದ್ದು ಬಿಟ್ರೆ, ಎಣ್ಣೆ ಸಿಗಲೇ ಇಲ್ಲ… ಚೆಕ್ ಪೋಸ್ಟ್ ಅಲ್ಲಿ ಸಿಗದೇ ಹೋದ್ರೆ ಏನಂತೆ ಬಾರ್ ಪಕ್ಕದಲ್ಲಿ ನೈಂಟಿ ಸಿಗುತ್ತಾ ಅಂತಾ ಹೋದ್ರೆ, ಎಣ್ಣೆ ಪೌಚೋ ಸಿಗ್ತಿರಲಿಲ್ಲ.. ಹೀಗಾಗಿ ಈ ಬಾರಿ ಅಬಕಾರಿ ಇಲಾಖೆ ಕೋಟಿ ಕೋಟಿ ನಷ್ಟವನ್ನು ಅನುಭವಿಸ್ತಿದೆ…
ಚುನಾವಣೆಗಳು ಬಂದ್ರೆ ಯಾರ ಹೊಟ್ಟೆ ತುಂಬುತ್ತು ಬಿಡುತ್ತೂ ಗೊತ್ತಿಲ್ಲ.. ಎಲೆಕ್ಷನ್ ಅಂದ್ರೆ ಮದ್ಯ ಪ್ರಿಯರು ಬಾರ್ ಮಾಲೀಕರಿಗಂತೂ ಹಬ್ಬವೂ ಹಬ್ಬ.. ಜೊತೆಗೆ ಅಬಕಾರಿ‌ ಇಲಾಖೆಯೂ , ತನ್ನ ಖಜಾನೆ ತುಂಬಿಸಿಕೊಳ್ಳುವುದಕ್ಕೂ ಮುಂದಾಗಿರುತ್ತೆ.. ಆದ್ರೆ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗ್ರಾಹಕರು ನೈಂಟಿ ಸಿಗದೇ ಪರದಾಡಿದ್ದಂತು ಸುಳ್ಳಲ್ಲ.. ಇದರ ಜೊತೆಗೆ ಈ ಬಾರಿಯ ಎಲೆಕ್ಷನ್ ಅಬಕಾರಿ ಇಲಾಖೆಗೆ ಭಾರೀ ನಷ್ಟವನ್ನುಂಟುಮಾಡಿದೆ…
ಹೌದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಶೆ ರಂಗೇರಲೇ ಇಲ್ಲ.. ಹೀಗಾಗಿ ಅಬಕಾರಿ ಇಲಾಖೆ 499 ಕೋಟಿ ನಷ್ಟವನ್ನ ಅನುಭವಿಸಿದೆ.. ಇದಕ್ಕೆ ಕಾರಣ ಅಕ್ರಮ ಮದ್ಯ ಮಾರಾಟ ತಡೆಗೆ ಚುನಾವಣಾ ಆಯೋಗ ಭಾರಿ ಬಿಗಿ ಕ್ರಮ ಕೈಗೊಂಡಿದ್ದು.. 2013 ರ ಚುನಾವಣೆ ಸಂದರ್ಭದಲ್ಲಿ ಮಧ್ಯ ವಹಿವಾಟು ಭರ್ಜರಿಯಾಗಿತ್ತು..ಈ ವೇಳೆ ಅಬಕಾರಿ ಇಲಾಖೆ ಬರೋಬ್ಬರಿ 888.2 ಕೋಟಿ ರೂಪಾಯಿ ವಹಿವಾಟು ನಡೆಸಿತ್ತು.. ಆದರೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 389.92 ಕೋಟಿ ರೂಪಾಯಿ ವಹಿವಾಟು ನಡೆಸಿದೆ.. ಹೀಗಾಗಿ ಸುಮಾರು 499 ಕೋಟಿ ರೂಪಾಯಿ ಆದಾಯ ಕೈ ತಪ್ಪಿದೆ..
ಅಕ್ರಮ ಮದ್ಯ ಮಾರಟಕ್ಕೆ ಬಲಿಯಾದ್ವು 870 ಬಾರ್ ಲೈಸೆನ್ಸ್..!
ಇನ್ನು ಮದ್ಯ ವ್ಯಾಪಾರ ಜೋರ್ ಆಗದೇ ಇರೋದಕ್ಕೆ ಆಯೋಗ ಕಟ್ಟುನಿಟ್ಟಾಗಿ ಕ್ರಮಕೈಗೊಂಡಿದ್ದೇ ಕಾರಣ..ಆದರಲ್ಲೂ ಅಬಕಾರಿ ಇಲಾಖೆ ಎಲ್ಲ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.. ಕಳೆದ ವರ್ಷ ಮಾರ್ಚ್, ಏಪ್ರಿಲ್,ಮೇ ತಿಂಗಳಲ್ಲಿಯಾದ ವೈಹಿವಾಟಿಗಿಂತ 10 ಪರ್ಸೆಂಟ್ ಹೆಚ್ಚಾಗದಂತೆ ಖಡಕ್ ಸೂಚನೆ ನೀಡಿತ್ತು…

ಇದಕ್ಕಾಗಿ ಆಯೋಗ ಅಕ್ರಮ ಎಣ್ಣೆ ಸಾಗಾಟ ತಡೆಗೆ 400 ಚೆಕ್‌ಪೋಸ್ಟ್‌ ನಿರ್ಮಾಣ ಮಾಡಿತ್ತು.. ಜೊತೆಗೆ ಅಭ್ಯರ್ಥಿಗಳು ಹೊರ ರಾಜ್ಯಗಳಿಂದ ಅಕ್ರಮ ಮಧ್ಯ ತರಿಸಿ ಸಂಗ್ರಹಿಸಿಕೊಂಡಿದ್ರು.. ಅಲ್ಲದೇ ಲೈಸೆನ್ಸ್ ದುರುಪಯೋಗ ಪಡಿಸಿಕೊಂಡ 870 ಬಾರ್ ಗಳ ಪರವಾನಿಗೆಯನ್ನು ಅಮಾನತ್ತು ಪಡಿಸಿತ್ತು…
ಒಟ್ಟಾರೆ, ಚುನಾವಣಾ ಆಯೋಗದ ಸ್ಟ್ರಿಕ್ಟ್ ಆರ್ಡರ್ ಮತ್ತು ಕೆಲ ಬಾರ್ ಗಳ ಮೇಲೆ ಕೈಗೊಂಡ ಕ್ರಮಕ್ಕೆ, ಮದ್ಯ ಮಾರಾಟಗಾರರು ಬೆಚ್ಚಿಬಿದ್ದಿದ್ರು.. ಅದರಲ್ಲೂ ಈ ಬಾರಿ ಕದ್ದು ಮುಚ್ಚಿ ಮದ್ಯ ಮಾರಾಟ ನಡೆಯಲಿಲ್ಲ.. ಹೀಗಾಗಿ ಇವತ್ತು ಅಬಕಾರಿ ಇಲಾಖೆ ಕೋಟಿ ಕೋಟಿ ನಷ್ಟವನ್ನು ಅನುಭವಿಸಿದೆ.. ಜೊತೆಗೆ ನಷ್ಟವನ್ನು ತುಂಬಿಕೊಳ್ಳೋಕೆ ಪರದಾಡುತ್ತಿದೆ…

 

LEAVE A REPLY

Please enter your comment!
Please enter your name here