Home District ಈ ಬಾರಿ ಮೋದಿಯನ್ನ ಸೋಲಿಸದಿದ್ದರೇ ಇನ್ನೆಂದಿಗೂ ಸಾಧ್ಯವೇ ಇಲ್ಲ.! ಮೋದಿಯಾಗಲಿದ್ದಾರ ಶಾಶ್ವತ ಪ್ರಧಾನಿ.!? “ನಾನ್ ಇರೋವರ್ಗೂ ನಂದೇ...

ಈ ಬಾರಿ ಮೋದಿಯನ್ನ ಸೋಲಿಸದಿದ್ದರೇ ಇನ್ನೆಂದಿಗೂ ಸಾಧ್ಯವೇ ಇಲ್ಲ.! ಮೋದಿಯಾಗಲಿದ್ದಾರ ಶಾಶ್ವತ ಪ್ರಧಾನಿ.!? “ನಾನ್ ಇರೋವರ್ಗೂ ನಂದೇ ಹವಾ”…

3259
0
SHARE

ನರೇಂದ್ರ ಮೋದಿ….. ಕೇಸರಿ ಪಕ್ಷಕ್ಕೆ ದಂಡ ನಾಯಕ.. ಸಾವಿರಾರು ಅಭಿಮಾನಿಗಳ ಅರಾಧ್ಯ ದೈವ.. ಮೋದಿಗೆ ಕಟ್ಟರ್ ವಿರೋಧಿಗಳು ಎಷ್ಟು ಜನ ಇದ್ದಾರೋ ಅದಕ್ಕಿಂತಲೂ ದುಪ್ಪಟ್ಟು ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ. 2014ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಅಂದು ಇಡೀ ದೇಶಕ್ಕೆ ದೇಶವೇ  ಮೋದಿ ಮೋದಿ ಅಂತಾ ಉದ್ಘಾರ ಮಾಡಿತ್ತು.

ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಎಲ್ಲಿ ಹೋದ್ರು ಸಹ ಮೋದಿಗೆ ಹೂವನ್ನು ಚೆಲ್ಲಿ ಸ್ವಾಗತಿಸಿದ್ರು. ಅದ್ರ ಪರಿಣಾಮವೇ ಮೋದಿ ಚುನಾವಣೆಯಲ್ಲಿ ಅಭೂತ ಪೂರ್ವ ಯಶಸ್ಸನ್ನ ಗಳಿಸಿದ್ದು. ಅಲ್ಲಿವರೆಗೂ ಭಾರತದಲ್ಲಿ  ಬಹುಮತ ಬರೋದೆ  ಇಲ್ಲ ಅನ್ನುತ್ತಿದ್ದ ಚುನಾವಣ ವೀಕ್ಷಕರು , ರಾಜಕೀಯ ಪಂಡಿತರು ಮೋದಿ ಸುನಾಮಿಯನ್ನು ನೋಡಿ ದಂಗಾಗಿ ಹೋಗಿದ್ರು. ಇಡೀ ರಾಷ್ಟ್ರವನ್ನು  ಸುದೀರ್ಘ ಆಳಿದ ಶತಮಾನದ ಪಕ್ಷ ಮೋದಿ  ಸುನಾಮಿಯಲ್ಲಿ ಕೊಚ್ಚಿ ಹೊಗಿತ್ತು.  ದೇಶವಾಸಿಗಳು ದೆಹಲಿ ಸಿಂಹಾಸನದಲ್ಲಿ ಮೋದಿಯನ್ನು ಕೂರಿಸಿ ಪಟ್ಟಾಬಿಷೇಕ ಮಾಡಿದ್ರು…

ಈಗ ಮತ್ತೊಮ್ಮೆ ದೇಶಕ್ಕೆ ಸಾರ್ವತ್ರಿಕ ಚುನಾವಣೆವಣೆ ಎದುರಾಗಿದೆ. 5 ವರ್ಷಕ್ಕೊಮ್ಮೆ ಬರೋ ಈ ಪ್ರಜಾತಂತ್ರದ ಹಬ್ಬದಲ್ಲಿ ಪಾಲ್ಗೊಳ್ಳಲು ದೇಶವಾಸಿ ಸಿದ್ಧವಾಗಿ ನಿಂತಿದ್ದಾನೆ. ಅಖಾಡಕ್ಕೆ ಇಳಿದಿರೋ ರಾಜಕೀಯ ನಾಯಕರು ತಮ್ಮ ಮುಂದಿನ 5 ವರ್ಷದ ಭವಿಷ್ಯವನ್ನ ನಿರ್ಧರಿಸಲು ಕಾತುರರಾಗಿದ್ದಾರೆ.ಅಂದ ಹಾಗೆ ಈ ಚುನಾವಣೆಯಲ್ಲಿ ಎಲ್ಲಾ ನಾಯಕರ ಏಕೈಕ ಟಾರ್ಗೆಟ್ ಅಂದ್ರೆ ಅದು ನರೇಂದ್ರ ಮೋದಿ. ಎಲ್ಲಾ ಪ್ರದೇಶಿಕ ನಾಯಕರು ಬೆಂಗಳೂರಿಗೆ ಬಂದು ಜಂಟಿಯಾಗಿ ನಿಂತು ಕೈ ಎತ್ತಿ, ಒಂಟಿಯಾಗಿರೋ ನರೇಂದ್ರ ಮೋದಿಯನ್ನ ಸೋಲಿಸಬೇಕು ಅನ್ನೋ ಶಪತವನ್ನ 8 ತಿಂಗಳ ಹಿಂದೆಯೇ ಮಾಡಿದ್ರು,

ಅಂದಿನಿಂದ ಇಂದಿನವರೆಗೂ ಮೋದಿಯನ್ನ ಸೋಲಿಸೋದಕ್ಕೆ ಯಾವೆಲ್ಲಾ ತಂತ್ರಗಳನ್ನ ರೂಪಿಸಬೇಕೋ ಆ ಎಲ್ಲಾ ತಂತ್ರಗಳನ್ನ ರೂಪಿಸುತ್ತಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಇರೋ ಎಲ್ಲಾ ಪ್ರದೇಶಿಕ ಪಕ್ಷಗಳು ಮೋದಿ ವಿರುದ್ಧ ಕೈ ಜೋಡಿಸುತ್ತಿವೆ. ಈ ಹಿಂದೆ ನಖಶಿಕಾಂತ ದ್ವೇಷ ಕಾರಿಕೊಂಡಿದ್ದು ಬಂದಿದ್ದ ವ್ಯಕ್ತಿಗಳೆಲ್ಲಾ ಹಳೆ ದ್ವೇಷಗಳನ್ನ ಮರೆತು ಮೋದಿ ಮಂತ್ರ ಜಪಿಸುತ್ತಿವೆ, ಅಲ್ಲಿಗೆ ಅರ್ಥ ಇಷ್ಟೆ, ನಾವೆಲ್ಲಾ ಒಟ್ಟಾಗದಿದ್ದರೆ ಮೋದಿಯನ್ನ ಸೋಲಿಸಲು ಸಾಧ್ಯವೇ ಇಲ್ಲ. ಯಾಕೆಂದ್ರೆ  ಅದೇ ಮೋದಿಯ ತಾಕತ್ತು.. ಇದು ಪ್ರಾದೇಶಿಕ ನಾಯಕರಿಗೂ ಅರಿವಾಗಿರೋ ಸತ್ಯಾಂಶ. ಆ ನಿಟ್ಟಿನಲ್ಲೇ ಎಲ್ಲಾ ನಾಯಕರು ಮೋದಿ ವಿರುದ್ಧ ತೊಡೆ ತಟ್ಟಿ ನಿಂತಿರೋದು.

 ಇಲ್ಲೊಂದು ಅಂಶವನ್ನ ನೀವು ಗಮನಿಸಲೇ ಬೇಕು, ಮೋದಿಯನ್ನ ಸೋಲಿಸೋದಕ್ಕೆ ನಿಂತಿರೋದು ಬರೀ ಪ್ರಾದೇಶಿಕ ನಾಯಕರು.  ಇವರ್ಯಾರಿಗೂ ಮೋದಿ ಸರಿ ಸಮಾನವಾಗಿ ನಿಲ್ಲಬಲ್ಲ ರಾಷ್ಟ್ರೀಯ ವರ್ಚಸ್ಸೇ ಇಲ್ಲ. ಅಷ್ಟೆ ಅಲ್ಲ ರಾಷ್ಟ್ರ ಮಟ್ಟದಲ್ಲಿ ಮೋದಿಗೆ ಪೈಪೋಟಿ ಕೊಡುವಂತ ರಾಷ್ಟ್ರೀಯ ಪಕ್ಷವೂ ಇಲ್ಲ, ಬಿಜೆಪಿ ವಿರೋಧಿಯಂದ್ರೆ ಅದು ಕಾಂಗ್ರೆಸ್,, ಆದ್ರೆ ಕಾಂಗ್ರೆಸ್ ಗೆ  ಆ ಶಕ್ತಿಯಂತು ಇಲ್ಲ, ಒಂದರ್ಥದಲ್ಲಿ ಹೇಳಬೇಕು ಅಂದ್ರೆ ಬಿಜೆಪಿಯ ಸ್ಟಾರ್ ಕ್ಯಾಂಪೆನರ್ ಅಂದ್ರೆ ಅದು ರಾಹುಲ್ ಗಾಂಧಿ,,, ಸೋ ಈ ರಾಹುಲ್ ಗಾಂಧಿ ವೀಕ್ನೆಸ್ ಮೋದಿ ಪಾಲಿಗೆ ಪ್ಲಸ್.. ಇದೇ ಫಾರ್ಮುಲ ಹಿಡಿದು ಬಿಜೆಪಿ ಈ ಚುನಾವಣೆಯಲ್ಲಿ ಸ್ಪರ್ಧೆಗೆ ನಿಂತಿದೆ.

ಈ ಮಧ್ಯದಲ್ಲೇ ಮೋದಿ ವಿರೋಧಿಗಳಿಗೆ ಒಂದು ಭಯ ಶುರುವಾಗಿದೆ, ಆ ಭಯ ಏನ್ ಗೊತ್ತಾ ಆ ಬಾರಿ ಮೋದಿಯನ್ನ ಸೋಲಿಸಲು ಸಾಧ್ಯವಾಗದಿದ್ದರೆ ಇನ್ನೆಂದು ಸಾಧ್ಯವೇ ಇಲ್ಲ. ಈ ಒಂದು ಬಾರಿ ಮೋದಿ ಪ್ರಧಾನಿಯಾದ್ರೆ ಇನ್ನು ಲೈಫ್ ಲಾಂಗ್ ಮೋದಿ ಅದೇ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಏಕೆಂದ್ರೆ ಮೋದಿ ಸೃಷ್ಟಿ ಮಾಡುತ್ತಿರೋ ಪರಿಸ್ಥಿತಿ ಆ ರೀತಿ ಇದೆ, ಮೋದಿ ಹೆಣೆದಿರೋ ವ್ಯೂಹದಲ್ಲಿ ಇಡೀ ದೇಶವೇ ಬೀಳಲಿದೆ, ಅಲ್ಲಿಗೆ ಮೋದಿ ಬಾಯಿಂದ ಬರೋದು ಒಂದೇ ಸಿಂಗಲ್ ವರ್ಡ್ ಅದು ನಾನ್ ಇರೋವರ್ಗೂ ನಂದೇ ಹವಾ…

ನರೇಂದ್ರ ಮೋದಿ ದೇಶದಲ್ಲಿ ಶಾಶ್ವತ ಪ್ರಧಾನಿ ಆಗಲು ಹೊರಟಿದ್ದಾರ? ಹೀಗೊಂದು ಪ್ರಶ್ನೆ ಸ್ವತಃ ಮೋದಿ ವಿರೋಧಿಗಳೇ ಕೇಳುತ್ತಿದ್ದಾರೆ, ಈ ಬಾರಿ ಮೋದಿಯನ್ನ ಸೋಲಿಸದೇ ಇದ್ದಲ್ಲಿ ಇನ್ನೆಂದು ಸಾಧ್ಯವೇ ಇಲ್ಲ ಅನ್ನೋದು ವಿರೋದಿಗಳ ಒಟ್ಟಾರೆ ಅಭಿಪ್ರಾಯ. ಆ ಕಾರಣಕ್ಕೆ ಹಿಂದೆಂದು ಕಾಣದ ರೀತಿಯಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಎಲ್ಲಾ ರಾಜಕೀಯ ನಾಯಕರು ಒಂದಾಗಿದ್ದಾರೆ. ಸಧ್ಯದ ಮೋದಿ ಪರಿಸ್ಥಿತಿ ನೋಡಿದ್ರೆ ರಷ್ಯಾದ ಪುಟಿನ್,, ಚೀನಾದ ಕ್ಸಿ ಜಿನ್ ಪಿಂಗ್ ರಂತೆ ಇದೆ ಇದೇ. ಏಕೆಂದ್ರೆ ಆ ದೇಶಕ್ಕೆ ಅವರು ಶಾಶ್ವತ ಪ್ರಧಾನಿಗಳಾಗಿದ್ದಾರೆ, ಅವರ ಮುಂದೆ ಅವರ ಶತ್ರುಗಳು ಬೆಳೆಯಲು ಬಿಟ್ಟಿಲ್ಲ.2014ರ ನಂತರ ದೇಶದಲ್ಲಿ ಮೋದಿ ಗಾಳಿ ಬೀಸಿತ್ತು, ಅಂದು ಮೋದಿಯ ವಿರುದ್ಧ ನಿಲ್ಲೋ ತಾಕತ್ತು ಯಾರಲ್ಲೂ ಇರಲಿಲ್ಲ.

ಮೋದಿಯ ಶಕ್ತಿಯನ್ನ ನೋಡಿದ್ದ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಒಂದು ಮಾತು ಹೇಳಿದ್ರು, ಅದೇನು ಗೊತ್ತೆ.ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇವಲ ಟೀಕಿಸುವುದರಿಂದ ನಾವು ಎನನ್ನೂ ಸಾಧಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಸಕಾರಾತ್ಮಕ ದೂರದೃಷ್ಟಿ ಹೊಂದಿರುವ ನಾಯಕತ್ವದ ಬಗ್ಗೆ ಮತದಾರರಿಗೆ ಅರಿವು ಮೂಡಿಸಬೇಕಿದೆ.. ಈಗ ಸಮಸ್ತ ಭಾರತ ಒಪ್ಪುವ, 2019 ರಲ್ಲಿ ಬಿಜೆಪಿ, ನರೇಂದ್ರ ಮೋದಿ ಅವರನ್ನು ಎದುರಿಸುವ ಸಾಮರ್ಥ್ಯ ಇರುವ ನಾಯಕನೇ ಇಲ್ಲದಂತಾಗಿದೆ. ಆದ್ದರಿಂದ 2019 ನ್ನೂ ಮರೆತು 2024 ಕ್ಕೆ ತಯಾರಿ ನಡೆಸಬೇಕಿದೆ..ಅಂತಾ ಹೇಳಿದ್ರು, ಅಂದ್ರೆ ಈ ಮಾತಿನ ಅರ್ಥ ಸಧ್ಯ  ಮೋದಿಯ ಸಾಮರ್ಥ್ಯದಿಂದ ಅವರನ್ನು ಎದಿರಸಲು ಸಾಧ್ಯವಿಲ್ಲ ಈ 2019ನ್ನು ಅವರಿಗೆ ಬಿಟ್ಟು ಕೊಟ್ಟು 2024ಕ್ಕೆ ಪ್ರಯತ್ನ ಪಡಬೇಕು ಅನ್ನೋದು..

ಎಸ್ ನರೇಂದ್ರ ಮೋದಿಯನ್ನ ಸೋಲಿಸದೇ ಇದ್ದಲ್ಲಿ ಅವರು ಶಾಶ್ವತ ಪ್ರಧಾನಿಯಾಗಲಿದ್ದಾರೆ ಅಂತಾ ಇನ್ನೊಬ್ಬರು ಹೇಳಿದ್ದಾರೆ.. ಅಂದ ಹಾಗೆ ಅವರು ಬೇರೆ ಯಾರು ಅಲ್ಲ ಮೋದಿಯ ಕಟ್ಟರ್ ವಿರೋಧಿ ಅರವಿಂದ್ ಕೇಜ್ರಿವಾಲ್,ಮೋದಿಯ ಜನಪ್ರಿಯತೆ ಬಗ್ಗೆ ಓಮರ್ ಅಬ್ದುಲ್ಲಾ ಹೇಳಿದ್ರೆ, ಮೋದಿಯ ರಾಜನೀತಿಯ ಬಗ್ಗೆ ಕೇಜ್ರಿವಾಲ್ ಟೀಕೆ ಮಾಡಿದ್ದಾರೆ. ಆದ್ರೆ ಒಂದಂತು ಸತ್ಯ ಮೋದಿ ಮಾಡುತ್ತಿರೋ ರಾಜಕಾರಣಕ್ಕೆ ಬೇರೆ ಯಾರು ಅಡ್ಡಿ ಬರಲು ಸಾಧ್ಯವೇ ಇಲ್ಲ. ಯಾಕೆಂದ್ರೆ ದಾರಿಯಾವುದಾದರೇನು ಶಿಖರ ಹತ್ತಬೇಕು ಅನ್ನೋ ಪಾಲಿಸಿ ನರೇಂದ್ರ ಮೋದಿಯವರದ್ದು.. ಅದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಯಾರು ಏನೇ ಅಂದ್ರು, ಯಾರು ಹೇಗೆ ಬಾಯಿ ಬಡ್ಕಂಡ್ರು ಮೋದಿ ಅದಕ್ಕೆ ಕೇರ್ ಮಾಡೋದ್ ಇಲ್ಲ. ಅವರ ಉದ್ದೇಶ ಒಂದೇ ಯಾವುದೇ ಕಾರಣಕ್ಕೂ ಶತ್ರುಗಳು ಬೆಳೆಯ ಬಾರದು..

ಅವರನ್ನ ವಿರೋಧಿಸೋ ಶತ್ರುಗಳಿದ್ರು ಅವರ ಮಟ್ಟಕ್ಕೆ ನಿಲ್ಲಬಾರದು. ಇಂತಹ ನೀತಿಯನ್ನೇ ಮೋದಿ ಪಾಲಿ ಸುತ್ತಿದ್ದಾರೆ. ಈ ಪಾಲಿಸಿಯಿಂದಲೇ ಮೋದಿ ಶಾಶ್ವತವಾಗಿ ಪ್ರಧಾನಿಯಾದ್ರು ಆಗಬಹುದು. ಯಾಕೆಂದ್ರೆ ವಿರೋಧಿಗಳೇ ಇಲ್ಲ ಅಂದ ಮೇಲೆ ಇನ್ಯಾವ ಸ್ಪರ್ದೆ. ಸ್ಪರ್ಧೆಯೇ ಇಲ್ಲದ ಮೇಲೆ ಮೋದಿಯೇ ಮತ್ತೊಮ್ಮೆ…. ಬರೀ ಮತ್ತೊಮ್ಮೆ ಮಗದೊಮ್ಮೆ..  ಮಗದೊಮ್ಮೆ ಮಾತ್ರವಲ್ಲ ಮೋದಿ ಬದುಕಿರೋವರ್ಗೂ ಅವ್ರೇ ದೇಶಕ್ಕೆ ಬಾದ್ ಷಾ.

LEAVE A REPLY

Please enter your comment!
Please enter your name here