Home Crime ಈ ಸರ್ಕಾರಿ ಕಚೇರಿಯಲ್ಲಿ ಹಣ ಇಲ್ಲಾ ಅಂದ್ರೆ ಕೆಲಸಾನೆ ಆಗಲ್ಲ..!!

ಈ ಸರ್ಕಾರಿ ಕಚೇರಿಯಲ್ಲಿ ಹಣ ಇಲ್ಲಾ ಅಂದ್ರೆ ಕೆಲಸಾನೆ ಆಗಲ್ಲ..!!

180
0
SHARE

ಸರ್ಕಾರಿ ಕಚೇರಿ ಅಂದ್ರೇ ಸಾಕು ಜನ ಅಲ್ಲಿಗೆ ಕಾಲು ಇಡೋದಕ್ಕೆ ಸಾವಿರ ಸಾಲ ಯೋಚಿಸ್ತಾರೆ.. ಯಾಕಾಂದ್ರೆ ಅಲ್ಲಿ ಸೆಕ್ಯೂರಿಟಿ ಗಾರ್ಡ್ ನಿಂದ ಹಿಡಿದು ಅಧಿಕಾರಿಗೆ ಪೈಲ್ ಎತ್ಕೊಂಡು ಹೋಗೋನಿಗೂ ಲಂಚ ಕೂಡಬೇಕು.. ಇದೀಗ ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಸಬ್ ರಿಜೀಸ್ಟರ್ ಕಚೇರಿಯಲ್ಲಿರೋ ಉಪ ನೋಂದಣಾಧಿಕಾರಿ ಮಾತ್ರ, ಸ್ವಲ್ಪ ಡಿಫ್ರೆಂಟ್ ಅನ್ನಬಹುದು..

ನಾವೂ ತೋರ್ಸ್ತಿರೋ ಸಬ್ ರಿಜೀಸ್ಟರ್ ಹೇಗೆ ಅಂದ್ರೆ ಬಾಯ್ಬಿಟ್ಟು ಹಣ ಕೇಳೋಲ್ಲ.. ಆದ್ರೆ ಲಂಚ ಕೊಡದೇ ಇದ್ರೆ ಕೆಲಸ ಆಗಲ್ಲ.. ನೀವು ಎಲ್ಲಾ ದಾಖಲೆಗಳನ್ನು ತಕೊಂಡೋದ್ರು, ಸಬ್ ರಿಜೀಸ್ಟರ್ ಕುಮಾರಿ ರೂಪ ಮೇಡಮ್ ಕೆಲಸ ಮಾಡೋದು ತಡ ಮಾಡ್ತಾರೆ… ಆದೇ ಹಣ ಕೊಟ್ರೆ ಅಂದ್ರೆ ದಾಖಲೆಗಳು ಇಲ್ದೆ ಇದ್ರು ಪಟ್ ಅಂತಾ ಕ್ಷಣಾರ್ದದಲ್ಲಿ ನಿಮ್ಮ  ಸೈಟ್ ಖಾತೆ ರಿಜೀಸ್ಟರ್ ಆಗುತ್ತೆ.. ಕಳೆದ ವಾರ ಹೀಗೆ ಗ್ರಾಮ ಪಂಚಾಯ್ತಿ ಖಾತಾ ಮಾಡಿಸಲು ಹೋದವರು, ಇ-ಖಾತೆ ಇಲ್ದೆ ರಿಜೀಸ್ಟರ್ ಬಳಿ ಹೋಗಿದ್ದಾರೆ.. ಇ-ಖಾತೆ ಇಲ್ಲದೇ ರಿಜೀಸ್ಟರ್ ಮಾಡಲು 12 ಸಾವಿರ ಹಣ ತೆಗೆದುಕೊಳ್ತಾರೆ.. ಮೇಡಮ್ ಎಂಟು ಸಾವಿರ ಕೊಡ್ತೀವಿ ಮಾಡಿಕೊಡಿ ಅಂದ್ರೆ, ರೂಪ್ ಮೇಡಮ್ ರೂಲ್ಸ್ ಅದು ಇದು ಅಂತಾ ಭಯ ಪಡಸ್ತಾರೆ.. ಅಷ್ಟಕ್ಕೂ ಈ ಒಂದೊಂದು ಸೈಟ್ ನ ಖಾತೆಗೂ ಒಂದೊಂದು ರೀತಿಯ ಹಣ ಫಿಕ್ಸ್ ಮಾಡಲಾಗುತ್ತೆ.. ಇದನ್ನ ಫಿಕ್ಸ್ ಮಾಡೋದು ಬೇರೆ ಯಾರೂ ಅಲ್ಲ ಇದೇ ಕೇಚರಿಯಲ್ಲಿ ಕಾರ್ಯ ನಿರ್ವಹಿಸೋ ಎಫ್ ಡಿಎ ನಾಗರಾಜ್.. ನಾಗರಾಜ್ ಹಣ ಫಿಕ್ಸ್ ಮಾಡಿದ ಬಳಿಕ ರೂಪ ಮೇಡಮ್ ಸೈನ್ ಮಾಡಿ ಖಾತೆ ಮಾಡಿಕೊಡುತ್ತಿದ್ದಾರೆ.. ಈ ಸಬ್ ರಿಜೀಸ್ಟರ್ ಕಚೇರಿಯಲ್ಲಿ ಇಷ್ಟೊಂದು ರಾಜಾರೋಷವಾಗಿ ಲಂಚಕೋರರು ಹಣ ಬೇಡುತ್ತಿದ್ರು, ಸಚಿವ ಕಾಗೋಡು ತಿಮ್ಮಪ್ಪ ಮಾತ್ರ ಇದುವರೆಗೂ ಇತ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರೋದು ನಿಜಕ್ಕು ಭ್ರಷ್ಟಾಚಾರಕ್ಕೆ ಮತ್ತೊಷ್ಟು ಸಾಥ್ ಕೊಟ್ಟಂತಾಗಿದೆ…

LEAVE A REPLY

Please enter your comment!
Please enter your name here