Home District “ಈ ಸರ್ಕಾರ ಇರುತ್ತೆ ಅಂತಾ ಜನರಿಗೆ ಅಧಿಕಾರಿಗಳಿಗೆ ಗ್ಯಾರಂಟಿ ಇಲ್ಲ CM ಗಂತೂ ಡಬ್ಬಲ್ ಗ್ಯಾರಂಟಿ...

“ಈ ಸರ್ಕಾರ ಇರುತ್ತೆ ಅಂತಾ ಜನರಿಗೆ ಅಧಿಕಾರಿಗಳಿಗೆ ಗ್ಯಾರಂಟಿ ಇಲ್ಲ CM ಗಂತೂ ಡಬ್ಬಲ್ ಗ್ಯಾರಂಟಿ ಇಲ್ಲ”… ಆರ್.ಅಶೋಕ್ ವ್ಯಂಗ್ಯ

2188
0
SHARE

ಇನ್ನು ಆರ್.ಅಶೋಕ್ ಸಹ ಈ ಸರ್ಕಾರ ಇರುತ್ತೆ ಅಂತಾ ಜನರಿಗೆ ಹಾಗೂ ಅಧಿಕಾರಿಗಳಿಗೆ ಗ್ಯಾರಂಟಿ ಇಲ್ಲ.ಮುಖ್ಯಮಂತ್ರಿ ಗಂತೂ ಡಬ್ಬಲ್ ಗ್ಯಾರಂಟಿ ಇಲ್ಲ.ಮುಖ್ಯಂಮತ್ರಿಯಾಗಿ ಎರಡು ತಿಂಗಳಾಯ್ತು.ಇದುವರಗೆ ರಾಜ್ಯ ಪ್ರವಾಸ ಮಾಡಿಲ್ಲ.ಮಗನ ಸಿನೆಮಾ ಟೀಸರ್ ಬಿಡುಗಡೆಗೆ ರಾಮನಗರಕ್ಕೆ ಹೋಗಿರೋದು ಬಿಟ್ರೆ ಅವರು ಬೆಂಗಳೂರಿಂದ ಹೊರಗೆ ಹೋಗೇ ಇಲ್ಲ.

ಎರಡು ತಿಂಗಳಾದ ಮೇಲೆ ಗೊಂದಲದಲ್ಲೇ ಜಿಲ್ಲಾ ಮಂತ್ರಿಗಳ ನೇಮಕ ಮಾಡಿದ್ದಾರೆ.ಅವರು ಕೆಲಸ ಶುರುಮಾಡೋದಕ್ಕೆ ಇನ್ನೆಷ್ಟು ಸಮಯ ಬೇಕೋ.. ಅಂತಾ ವ್ಯಂಗ್ಯವಾಡಿದ್ರು. ಆರ್.ಅಶೋಕ್… ಬೆಂಗಳೂರಿಗೆ ಎಲಿವೇಟೆಡ್ ಕಾರಿಡಾರ್ ಘೋಷಣೆ ಮಾಡಿದ್ರು.16,000 ಕೋಟಿಯ ಈ ಪ್ರಾಜೆಕ್ಟ್ ಗೆ ಬಜೆಟ್ ನಲ್ಲಿ ಕೇವಲ 1000 ಕೋಟಿ ಇಟ್ಟಿದ್ದಾರೆ‌.

ಅದೂ ಕೂಡ ಯಾರೋ ವಿರೋಧ ಮಾಡ್ತಾರೆ ಅಂತಾ ಯೋಜನೆಯನ್ನು ಕೈ ಬಿಡಲು ಹೊರಟಿದ್ದಾರೆ.ಕಸದ ಮಾಫಿಯಾ ಮಿತಿ ಮೀರಿದೆ.ಡ್ರಗ್ ಮಾಫಿಯಾ ಮಿತಿ ಮೀರಿದೆ.ಶಾಲಾ ಕಾಲೇಜುಗಳಲ್ಲಿ ಹಾಗೂ ಬೀದಿ ಬೀದಿಗಳಲ್ಲಿ ತರಕಾರಿ ಸಿಗುವಂತೆ ಡ್ರಗ್ ಮಾರಾಟವಾಗುತ್ತಿದೆ.ಈ ಸಂಬಂಧ ನಾವು ಸೋಮವಾರ ಪೊಲೀಸ್ ಕಮೀಷನರ್ ರನ್ನು ಭೇಟಿ ಮಾಡಿ ಡ್ರಗ್ ಮಾಫಿಯಾ ವಿರುದ್ದ ಕ್ರಮಕ್ಕೆ ಆಗ್ರಹಿಸುತ್ತೇವೆ.

LEAVE A REPLY

Please enter your comment!
Please enter your name here