Home KARNATAKA “ಈ ಸಲ ಕಪ್ ನಮ್ದೆ” ಅಂತಿದ್ದಾರೆ ಎಬಿಡಿ-ಕೊಹ್ಲಿ…ಡು ಆರ್ ಡೈ ಮ್ಯಾಚ್‌ನಲ್ಲಿ ರಾಜಸ್ಥಾನ ಎದುರಾಳಿ…

“ಈ ಸಲ ಕಪ್ ನಮ್ದೆ” ಅಂತಿದ್ದಾರೆ ಎಬಿಡಿ-ಕೊಹ್ಲಿ…ಡು ಆರ್ ಡೈ ಮ್ಯಾಚ್‌ನಲ್ಲಿ ರಾಜಸ್ಥಾನ ಎದುರಾಳಿ…

150
0
SHARE

ರಾಯಲ್ ಚಾಲೆಂಜರ್ಸ್ ಗೆ ಸವಾಲ್ ಎಸೆದಿದೆ ರಾಯಲ್ಸ್.ರಾಜಸ್ತಾನ್ ವಿರುದ್ಧ ಅಬ್ಬರಿಸುತ್ತಾ ರಾಯಲ್ ಚಾಲೆಂಜರ್ಸ್. ಐಪಿಎಲ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ಸೆಣಸಾಟವನ್ನ ನಡೆಸಲಿದೆ…. ಸವಾಯ್ ಮಾನ್ ಸಿಂಗ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ಹೋರಾಟವನ್ನ ನಡೆಸಲಿದ್ದಾರೆ…ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಪ್ಲೇ ಆಫ್ ಹಂತಕ್ಕೇರಲು ಪ್ಲಾನ್ ಮಾಡ್ತಿರೋ ರಾಯಲ್ ಚಾಲೆಂಜರ್ಸ್ ಈ ಪಂದ್ಯವನ್ನ ಗೆಲ್ಲಲೇಬೇಕಿದೆ.ಚಿನ್ನಸ್ವಾಮಿ ಮೈದಾನದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡವನ್ನ ಸೋಲಿಸಿ ಆತ್ಮವಿಶ್ವಾಸವನ್ನ ಹೆಚ್ಚಿಸಿಕೊಂಡಿರೋ ಕೊಹ್ಲಿ ಬಳಗ ಇದೀಗ ರಾಜಸ್ತಾನ ರಾಯಲ್ಸ್ ತಂಡವನ್ನ ಎದುರಿಸಲಿದೆ…ತವರು ಮೈದಾನದಲ್ಲಿ ಗೆಲುವಿನ ಓಟವನ್ನ ಮುಂದುವರಿಸೋ ಲೆಕ್ಕಾಚಾರದಲ್ಲಿರೋ ರಾಜಸ್ತಾನ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಇನ್ನು ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸೋತಿರುವ ರಾಜಸ್ತಾನ ಮತ್ತೆ ಪುಟಿದೆದ್ದು ಬರಬೇಕಿದೆ. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಹಾನೆ ತಂಡಕ್ಕೆ ಶಾಕ್ ನೀಡಬೇಕೆಂಬ ಉತ್ಸಾಹದಲ್ಲಿದೆ…
ಈ ಸಲ ಕಪ್ ನಮ್ದೇ’ ಎಂಬ ಜೋಶ್ನೊಂದಿಗೆ ಅಭಿಯಾನ ಆರಂಭಿಸಿದ್ದ ಆರ್ಸಿಬಿ ಟೂರ್ನಿಯ ಅಂತಿಮ ಲೀಗ್ ಪಂದ್ಯದವರೆಗೆ ಆಸೆ ಜೀವಂತ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಭಾನುವಾರ ರಾಜಸ್ಥಾನ ವಿರುದ್ಧ ಜೈಪುರದಲ್ಲಿ ಅಂತಿಮ ಲೀಗ್ ಪಂದ್ಯ ಆಡಲಿರುವ ಆರ್ಸಿಬಿ ಗೆಲ್ಲುವ ಜತೆಗೆ ಇತರ ಫಲಿತಾಂಶಗಳೂ ಪೂರಕವಾಗಿ ಬಂದರೆ ಪ್ಲೇಆಫ್ಗೇರಲಿದೆ…ಮುಂಬೈ ಮತ್ತು ಕೆಕೆಆರ್ ತಂಡಗಳ ಪೈಕಿ ಒಂದು ತಂಡ ಅಂತಿಮ ಲೀಗ್ ಪಂದ್ಯದಲ್ಲಿ ಸೋತರೂ ಆರ್ಸಿಬಿ ಉತ್ತಮ ರನ್ರೇಟ್ ಆಧಾರದಲ್ಲಿ ಮೇಲೇರುವ ಅವಕಾಶ ಹೊಂದಿದೆ.ಬ್ಯಾಟಿಂಗ್ ವಿಭಾಗದಲ್ಲಿ ವಿರಾಟ್ ಕೊಹ್ಲಿ, ಡಿ ವಿಲಿಯರ್ಸ , ಪಾರ್ಥಿವ್ ಪಟೇಲ್, ರ ಮೇಲೆ ತಂಡ ಅವಲಂಬಿತವಾಗಿದೆ. ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್ , , ಚಹಲ್, ಸಿರಾಜ್ ಹಾಗೂ ಮೋಯಿನ್ ಅಲಿ ತಮ್ಮ ಬೊಂಬಾಟ್ ಬೌಲಿಂಗ್ ಸ್ಪೆಲ್ ನಡೆಸಬೇಕಿದೆ. ಇನ್ನು ಫೀಲ್ಡಿಂಗ್ ನಲ್ಲಿ ಕೊಹ್ಲಿಯ ಚಿಂತೆಗೆ ಕಾರಣವಾಗಿದೆ….
ಸ್ಥಿರ ಪ್ರದರ್ಶನವನ್ನ ನೀಡಲು ವಿಫಲವಾಗಿರೋ ರಾಜಸ್ತಾನ ರಾಯಲ್ಸ್ ಸಹ ಪ್ಲೇ ಆಫ್ ಹಂತಕ್ಕೇರುವ ಕನಸಿನಲ್ಲಿದೆ. ಆದ್ರೆ ಇದು ಅಂದುಕೊಂಡಷ್ಟು ಸುಲಭವಾಗಿಲ್ಲ. ಹೀಗಿದ್ದೂ ರಾಜಸ್ತಾನ ರಾಯಲ್ಸ್ ಕೊಹ್ಲಿ ಪಡೆಗೆ ಶಾಕ್ ನೀಡುವ ಲೆಕ್ಕಾಚಾರದಲ್ಲಿದೆ. ಆದ್ರೆ ರಾಜಸ್ತಾನ್ ತಂಡದ ಇನ್ ಫಾರ್ಮ್ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ , ಆಲ್ರೌಂಡರ್ ಬೆನ್ ಸ್ಟೋಕ್ಸ್ ಅನುಪಸ್ಥಿತಿ ತಂಡಕ್ಕೆ ಹೆಚ್ಚಾಗಿ ಕಾಡಲಿದೆ. ಬಟ್ಲರ್ ಸ್ಥಾನದಲ್ಲಿ ಕ್ಲೆಸನ್ ವಿಕೆಟ್ ಕೀಪರ್ ಸ್ಥಾನವನ್ನ ತುಂಬಲಿದ್ದಾರೆ..
ಅಜಿಂಕ್ಯಾ ರಹಾನೆ , , ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ ತಮ್ಮ ತಾಕತ್ತನ್ನ ತೋರಿಸಬೇಕಿದೆ. ಬೌಲಿಂಗ್ ನಲ್ಲಿ ಕನ್ನಡಿಗ ಕೆ. ಗೌತಮ್, ಧವಳ್ ಕುಲಕರ್ಣಿ, ಜೈದೇವ್ ಉನದ್ಕತ್ ವಿಕೆಟ್ ಬೇಟೆಯಾಡಬೇಕಿದೆ. ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರನ್ನ ಹೊಂದಿರದೇ ಇರೋದು ರಾಯಲ್ಸ್ ತಂಡ ಹಿನ್ನಡೆಯನ್ನ ಪಡೆಯಲು ಕಾರಣವಾಗ್ತಿದೆ…ಒಟ್ಟಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವನ್ನ ಸಾಧಿಸಿ ಪ್ಲೇ ಆಫ್ ಹಂತಕ್ಕೇರುವ ಪ್ಲಾನ್ ರೂಪಿಸುತ್ತಿದೆ. ಇನ್ನು ರಾಜಸ್ತಾನ್ ರಾಯಲ್ಸ್ ತಂಡ ಸಹ ಗೆಲುವಿನ ನಿರೀಕ್ಷೆಯನ್ನ ಇಟ್ಟುಕೊಂಡಿದ್ದು , ಯಾವ ತಂಡ ಗೆಲುವನ್ನ ಸಾಧಿಸುತ್ತೆ .. ಪಂದ್ಯದ ಕ್ಲೈ ಮ್ಯಾಕ್ಸ್ ಹೇಗಿರುತ್ತೆ ಅನ್ನೋದನ್ನ ನೋಡಬೇಕಿದೆ…

LEAVE A REPLY

Please enter your comment!
Please enter your name here