Home Crime ಉಗ್ರಪ್ಪ ಮನೆ ಜಪ್ತಿಗೆ ಕೋರ್ಟ್ ಆದೇಶ..! ಅಪಘಾತ ಕೇಸ್‌ನಲ್ಲಿ ಕೋರ್ಟ್‌ಗೆ ಗೈರು, ದಂಡ ಕಟ್ಟದ ಉಗ್ರಪ್ಪ…

ಉಗ್ರಪ್ಪ ಮನೆ ಜಪ್ತಿಗೆ ಕೋರ್ಟ್ ಆದೇಶ..! ಅಪಘಾತ ಕೇಸ್‌ನಲ್ಲಿ ಕೋರ್ಟ್‌ಗೆ ಗೈರು, ದಂಡ ಕಟ್ಟದ ಉಗ್ರಪ್ಪ…

2331
0
SHARE

ಮುಂದೆ ಚಲಿಸುತ್ತಿದ್ದ ದ್ವೀಚಕ್ರ ವಾಹನಕ್ಕೆ ಹಿಂದಿನಿಂದ ಕಾಂಗ್ರೇಸ್ ನಾಯಕ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಕಾರು ಡಿಕ್ಕಿ ಹೊಡೆದಿದ್ದ ಕೇಸ್ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ದಂಡವನ್ನು ಕಟ್ಟದ ಪರಿಣಾಮ ಉಗ್ರಪ್ಪ ಮನೆಯಲ್ಲಿನ ವಸ್ತುಗಳನ್ನ ಜಪ್ತಿ ಮಾಡುವಂತೆ ಜಿಲ್ಲಾ ಕೋರ್ಟ್ ಆದೇಶ ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದಲ್ಲಿ ಕಳೆದ 2010 ರಲ್ಲಿ ವಿ.ಎಸ್.ಉಗ್ರಪ್ಪ ಅವರಿಗೆ ಸೇರಿದ ಕ್ವಾಲಿಸ್ ಕಾರು ಬಾಲಾಜಿ ಎಂಬುವರ ದ್ವೀಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಬಾಲಾಜಿ ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಕಾರಿಗೆ ಇನ್ಸೂರೆನ್ಸ್ ಇಲ್ಲದ ಪರಿಣಾಮ 2012 ರಲ್ಲಿ ಪರಿಹಾರಕ್ಕಾಗಿ ದೊಡ್ಡಬಳ್ಳಾಪುರ ನ್ಯಾಯಾಲಯದ ಮೊರೆ ಹೋಗಿದ್ರು.

ಹೀಗಾಗಿ ಅಂದು ಕ್ವಾಲೀಸ್ ಕಾರಿನ ನಂಬರ್ ಆದಾರದ ಮೇಲೆ ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಹಲವು ಭಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಸಹ ನೀಡಿದ್ದಾರೆ. ಆದ್ರೆ ಎಷ್ಟೇ ಬಾರಿ ನೋಟಿಸ್ ನೀಡಿದ್ರು ವಿ.ಎಸ್.ಉಗ್ರಪ್ಪ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಬಾಲಾಜಿ ಅವರಿಗೆ 62 ಸಾವಿರ ಪರಿಹಾರ ನೀಡುವಂತೆ ಕಳೆದ ವರ್ಷ ನ್ಯಾಯಲಯ ಆದೇಶಿಸಿದೆ.

ಆದ್ರೆ ಅದನ್ನು ನಿರ್ಲಕ್ಷಿಸಿದ ವಿ.ಎಸ್.ಉಗ್ರಪ್ಪ ಪರಿಹಾರ ನೀಡದ ಹಿನ್ನೆಲೆಯಲ್ಲಿ ಅಜಿರ್ದಾರರು ಮತ್ತೇ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ವಿಚಾರಣೆ ನಡೆಸಿದ 4 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ನ ನ್ಯಾಯಮೂರ್ತಿ ಶುಕ್ಲಾಕ್ಷ ಪಾಲನ್ ಅವರು ಈ ಹಿಂದೆ ವಿಧೀಸಿದ್ದ 62305 ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿತ್ತು.

ಆದ್ರೆ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದ್ದ ಹಣವನ್ನ ಕಟ್ಟದೆ ನ್ಯಾಯಾಲಯದ ಆದೇಶವನ್ನ ಪಾಲಿಸದ ಕಾರಣ ವಿ.ಎಸ್.ಉಗ್ರಪ್ಪ ಕ್ರಮದ ವಿರುದ್ದ ಅಸಮಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ಪರಿಹಾರದ ಹಣದ ಬಡ್ಡಿ ಸೇರಿ 94925 ಪರಿಹಾರ ನೀಡುವಂತೆ ಕಳೆದ 31 ರಂದು ನ್ಯಾಯಲಯ ಆದೇಶ ನೀಡಿದ್ದು, ಪರಿಹಾರದ ಹಣಕ್ಕೆ ಬದಲಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿರೂ ವಿ.ಎಸ್.ಉಗ್ರಪ್ಪ ಅವರ ಮನೆಯಲ್ಲಿರೂ ವಸ್ತುಗಳನ್ನ ಜಪ್ತಿ ಮಾಡುವಂತೆ ನ್ಯಾಯಧೀಶರು ಮಹತ್ವದ ಆದೇಶ ನೀಡಿದ್ದಾರೆ.

LEAVE A REPLY

Please enter your comment!
Please enter your name here