Home District ಉಗ್ರರು ಎಂಬ ಹೆಸರು ಇತಿಹಾಸವಾಗಿ ಉಳಿದುಕೊಳ್ಳಬೇಕು,ಉಗ್ರರು ಇದ್ದಾರೆ ಎನ್ನುವ ಪದಾನೇ ಇರಬಾರದು –

ಉಗ್ರರು ಎಂಬ ಹೆಸರು ಇತಿಹಾಸವಾಗಿ ಉಳಿದುಕೊಳ್ಳಬೇಕು,ಉಗ್ರರು ಇದ್ದಾರೆ ಎನ್ನುವ ಪದಾನೇ ಇರಬಾರದು –

506
0
SHARE

ನನ್ನ ಗಂಡನ ಸಾವಿಗೆ ಕಾರಣನಾದ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ ಮಾಡಿದ್ದು ನನಗೆ ಖುಷಿ ತಂದಿದೆ ಎಂದು ಹುತಾತ್ಮ ಯೋಧ ಗುರು ಪತ್ನಿ ಭಾರತೀಯ ಸೇನೆಗೆ ಧನ್ಯವಾದ ತಿಳಿಸಿದ್ದಾರೆ.

ಮಂಡ್ಯದ, ಗುಡಿಗೆರೆ ಕಾಲೋನಿಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು. ಉಗ್ರರು ಇದ್ದರು ಎಂಬುದಷ್ಟೇ ಮಾತನಾಡಬೇಕು.‌ ಉಗ್ರರು ಇನ್ನೂ ಇದ್ದಾರೆ ಎಂಬ ಪದ ಇರಬಾರದು. ದೇಶದ ಜನ ಕೇಳುತ್ತಿದ್ದಾರೆ ಎಂದು ಈಗಷ್ಟೇ ಉಗ್ರರ ವಿರುದ್ಧ ದಾಳಿ ಮಾಡಿ ಸುಮ್ಮನಾಗಬಾರದು. ಉಗ್ರರ ಮೇಲಿನ ದಾಳಿ ಅವರು ನಾಶವಾಗುವ ವರೆಗೂ ನಿರಂತರವಾಗಿರಬೇಕು.

ಉಗ್ರರ ವಿರುದ್ಧ ಹೋರಾಡುತ್ತಿರುವ ಯೋಧರು ಸುರಕ್ಷಿತವಾಗಿರಲಿ. ನನ್ನ ಪರಿಸ್ಥಿತಿ ಅವರ ಮನೆಯವರಿಗೆ ಬಾರದಿರಲಿ. ಸರ್ಕಾರ ನಮ್ಮ‌ ಸೈನಿಕರಿಗೆ ಹೆಚ್ಚಿನ ರಕ್ಷಣೆ ನೀಡಲಿ ಎಂದರು. ಇನ್ನು ಪುಲ್ವಾಮಾದಲ್ಲಿ ಭೀಕರ ದಾಳಿ ನಡೆಸಿ ನಮ್ಮ 44 ಯೋಧರ ನೆತ್ತರು ಹರಿಸಿದ್ದಕ್ಕೆ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ದಾಳಿಯ ಮಾಸ್ಟರ್ ಮೈಂಡ್ ಕಮ್ರಾನ್ ಅಲಿಯಾಸ್ ರಶೀದ್ ಘಾಜಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಇನ್ನು ಮಧ್ಯರಾತ್ರಿ ಯಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ಸೇನೆ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಇನ್ನು ಯೋಧರು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ನಮ್ಮ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

LEAVE A REPLY

Please enter your comment!
Please enter your name here