Home District ಉತ್ತರ ಕನ್ನಡ ಲೋಕ ಸಂಗ್ರಾಮ:ವಿವಾದಗಳಿಂದಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅನಂತ್ ಗೆಲುವಿಗೆ ಬೀಳುತ್ತಾ ಬ್ರೇಕ್?

ಉತ್ತರ ಕನ್ನಡ ಲೋಕ ಸಂಗ್ರಾಮ:ವಿವಾದಗಳಿಂದಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಅನಂತ್ ಗೆಲುವಿಗೆ ಬೀಳುತ್ತಾ ಬ್ರೇಕ್?

1846
0
SHARE

ಕ್ಷೇತ್ರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರ.ಯಾರ್ ಯಾರ ನಡುವೆ ಪೈಪೋಟಿ : ಬಿಜೆಪಿ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ..ಕಾಂಗ್ರೆಸ್ –ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿ :  ಬಿಜೆಪಿ : ಅನಂತ ಕುಮಾರ್ ಹೆಗಡೆ (ಹಾಲಿ ಸಂಸದ)ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಗಳು;- ಸತೀಶ್ ಸೈಲ್ (ಮಾಜಿ ಶಾಸಕ)ಭೀಮಣ್ಣ ನಾಯ್ಕ ( ಉತ್ತರಕನ್ನಡ ಕಾಂಗ್ರೆಸ್ ಜಿಲ್ಲಾಧ್ಯಕ್ಷ)ಬಿ ಕೆ ಹರಿಪ್ರಸಾದ್ ( ಕಾಂಗ್ರೆಸ್ ನ ಹಿರಿಯ ನಾಯಕ )ಅಂಜಲಿ ನಿಂಬಾಳ್ಕರ್ – ಕಾಂಗ್ರೆಸ್ ಖಾನಾಪುರ ಶಾಸಕಿ.ಜೆ.ಡಿ.ಎಸ್ಆನಂದ ಅಸ್ನೋಟಿಕರ್ (ಮಾಜಿ ಸಚಿವ)

ಒಂದೆಡೆ ವಿಶಾಲವಾದ ಕರಾವಳಿ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯ ಮಲೆನಾಡು ಪ್ರದೇಶ, ಮತ್ತೊಂದೆಡೆ ಬಯಲುಸೀಮೆಯಂತ ಭೌಗೋಳಿಕತೆಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರಕನ್ನಡ. ಭೌಗೋಳಿಕವಾಗಿ ವಿಶೇಷತೆಯನ್ನ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜಕೀಯವೂ ಸಹ ಸಾಕಷ್ಟು ಭಿನ್ನವಾಗಿಯೇ ಇದೆ. ಆರು ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ವಶದಲ್ಲಿದ್ದ ಮೂರು ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಿಸಿ ತನ್ನ ವಶಮಾಡಿಕೊಂಡಿದೆ. ಉಳಿದ ಎರಡೇ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಯಾಸದ ಗೆಲುವನ್ನ ಪಡೆದುಕೊಂಡು ತೃಪ್ತಿ ಪಟ್ಟುಕೊಳ್ಳುವಂತಾಗಿದೆ.

ಇನ್ನು ಜೆಡಿಎಸ್ ಮಾತ್ರ ಯಾವುದೇ ಕ್ಷೇತ್ರದಲ್ಲೂ ಪ್ರಬಲ ಪೈಪೋಟಿಯನ್ನೂ ನೀಡಲಾಗದೇ ನೆಲಕಚ್ಚಿದ್ದು ಜಿಲ್ಲೆಯಲ್ಲಿ ಭದ್ರ ಬುನಾದಿಯೇ ಇಲ್ಲದೇ ಜೆಡಿಎಸ್ ಸೋಲನ್ನನುಭವಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಎದ್ದಿದ್ದ ಹಿಂದುತ್ವದ ಅಲೆ ಬಿಜೆಪಿ ಪರವಾಗಿ ಸಾಕಷ್ಟು ಕೆಲಸ ಮಾಡಿದ್ದು ಕೈವಶದಲ್ಲಿದ್ದ ಮೂರು ಕ್ಷೇತ್ರಗಳು ಕಮಲದ ಪಾಲಾಗಿರುವುದು ಇದಕ್ಕೆ ಸಾಕ್ಷಿ ಎಂಬಂತಿದೆ.ಅನಂತಕುಮಾರ ಎರಡು ದಶಕಗಳಿಂದ ಸಂಸದರಾಗಿ ಜಿಲ್ಲೆಗೆ ನೀಡಿರುವ ಕೊಡುಗೆ ಅಲ್ಪ ಮಾತ್ರ. ಕೇಂದ್ರ ಸಚಿವರಾದ ಬಳಿಕವೂ ಸಹ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿಯನ್ನೂ ಜಿಲ್ಲೆಗೆ ತರದಿರುವುದು ಅನಂತಕುಮಾರಗೆ ಮೈನಸ್ ಆಗಲಿದೆ.

ಅಲ್ಲದೇ ಅವರ ವಿವಾದಾತ್ಮಕ ಹೇಳಿಕೆಗಳೇ ಅವರ ರಾಜಕೀಯ ಜೀವನಕ್ಕೆ ಸಾಕಷ್ಟು ಹಾನಿಯನ್ನೂ ಮಾಡಿವೆ. ಎಲ್ಲಿಯವರೆಗೆ ಇಸ್ಲಾಂ ಇರುತ್ತೋ ಅಲ್ಲಿಯವರೆಗೆ ಭಯೋತ್ಪಾದನೆ ಇರತ್ತೆ ಎನ್ನುವ ಹೇಳಿಕೆ ಅಲ್ಪಸಂಖ್ಯಾತರ ವಿರೋಧಕ್ಕೆ ಕಾರಣವಾಗಿತ್ತು. ತಾನು ಮುಖ್ಯಮಂತ್ರಿಯಾದ್ರೆ ಸಂವಿಧಾನವನ್ನ ಬದಲಿಸ್ತೀನಿ ಎಂದಿದ್ದ ಹೇಳಿಕೆಗೆ ರಾಜ್ಯವಷ್ಟೇ ಅಲ್ಲದೇ ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದು ಸ್ವಪಕ್ಷೀಯರಲ್ಲೇ ಅನಂತಕುಮಾರ ಹೆಗಡೆಗೆ ವಿರೋಧ ಹುಟ್ಟಿಕೊಳ್ಳಲು ಕಾರಣವಾಗಿದ್ದಂತೂ ಸತ್ಯ. ಹೀಗಾಗಿ ಈ ಬಾರಿ ಅನಂತಕುಮಾರ ಹೆಗಡೆಗೆ ಲೋಕಸಭೆ ಚುನಾವಣೆ ಹೇಳಿಕೊಳ್ಳುವಷ್ಟು ಸುಲಭವಿಲ್ಲದಿದ್ರೂ ಎದುರಾಳಿ ಯಾರಾಗ್ತಾರೆ ಅನ್ನೋದರ ಮೇಲೆ ಸೋಲು, ಗೆಲುವಿನ ಲೆಕ್ಕಾಚಾರ ನಿರ್ಧಾರವಾಗಲಿದೆ ಅನ್ನೋದಂತೂ ನಿಶ್ಚಿತ..ಒಟ್ಟಿನಲ್ಲಿ ಈ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಹಲವಾರು ಆಯಾಮಗಳಿಂದ ಕುತೂಹಲಕ್ಕೆ ಕಾರಣವಾಗಿದೆ..

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಹಾಗೂ ಹಾಲಿ ಸಂಸದರ ಪ್ರಭಾವ ಹೀಗಿದ್ದರೇ, ಇತ್ತ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಅನ್ನೋದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.. ಆದ್ರೆ ಅಲೆದು ತೂಗಿ ಸೂಕ್ತ ಅಬ್ಯರ್ಥಿಯನ್ನು ಕಣಕ್ಕಿಳಿಸಿ ಅನಂತ್ ಕುಮಾರ್ ಹೆಗಡೆಯನ್ನ ಕಟ್ಟಿಹಾಕಲು ಮೈತ್ರಿ ಪಡೆ ರಣತಂತ್ರ ರೂಪಿಸುತ್ತಿವೆ.. ಇಲ್ಲಿ ಜೆಡಿಎಸ್ ಗೆ ಪ್ರಾಭಲ್ಯ ಇಲ್ಲದೇ ಹೋದರೂ ಇದರಿಂದ ಬಿಜೆಪಿಗೆ ಕಳೆದ ಬಾರಿಗಿಂತ ಈ ಚುನಾವಣೆ ಕೊಂಚ ಕಷ್ಟವಾದರೂ ಅಚ್ಚರಿ ಪಡಬೇಕಿಲ್ಲ.

ಇನ್ನು ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನ ನೋಡೋದಾದ್ರೆ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅನ್ನೋದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ವಿಚಾರಕ್ಕೆ ಬರೋದಾದ್ರೆ ಕಾರವಾರ ಅಂಕೋಲಾ ಕ್ಷೇತ್ರದ ಮಾಜಿ ಶಾಸಕ ಸತೀಶ್ ಸೈಲ್ ಲೋಕಾ ಅಖಾಡಕ್ಕೆ ಇಳಿಯೋದಕ್ಕೆ ಮನಸ್ಸು ಮಾಡಿದ್ದು ಪಕ್ಷ ಅವಕಾಶ ನೀಡಿದ್ರೆ ಸ್ಪರ್ಧಿಸುವ ಇಂಗಿತವನ್ನ ವ್ಯಕ್ತಪಡಿಸಿದ್ರು. ಜೊತೆಗೆ ಹಳಿಯಾಳ ಕ್ಷೇತ್ರದ ಹಾಲಿ ಶಾಸಕ, ಸಚಿವ ಆರ್.ವಿ.ದೇಶಪಾಂಡೆಯವರನ್ನೇ ಲೋಕಸಭೆಗೆ ನಿಲ್ಲಿಸಲು ಪಕ್ಷದಲ್ಲಿ ಕೂಗು ಕೇಳಿಬರುತ್ತಿದೆಯಾದ್ರೂ ದೇಶಪಾಂಡೆ ಕಡೆಯಿಂದ ನಿರಾಕರಣೆ ವ್ಯಕ್ತವಾಗಿದೆ.

ಅಲ್ಲದೇ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್, ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಹೆಸರುಗಳೂ ಸಹ ಕಾಂಗ್ರೆಸ್ ನಿಂದ ಕೇಳಿಬಂದಿದ್ದು ಯಾರೊಬ್ಬರೂ ಸಹ ಸ್ಪರ್ಧಿಸುವ ವಿಚಾರವನ್ನ ಹೇಳಿಕೊಂಡಿಲ್ಲ. ಇನ್ನು ಈ ಹಿಂದೆ ಅನಂತಕುಮಾರ ವಿರುದ್ಧ ಸ್ಪರ್ಧಿಸಿದ್ದ ಪ್ರಶಾಂತ್ ದೇಶಪಾಂಡೆ ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ ಅಂತಾ ಸಚಿವ ದೇಶಪಾಂಡೆಯವರೇ ತಿಳಿಸಿದ್ದಾರೆ. ಈ ಹಿಂದೆ ಆಕಾಂಕ್ಷಿಯಾಗಿದ್ದ ಮಾರ್ಗರೇಟ್ ಆಳ್ವ ಪುತ್ರ ನಿವೇದಿತ್ ಆಳ್ವ ಸಹ ಈ ಬಾರಿ ಕ್ಷೇತ್ರದತ್ತ ಮುಖಮಾಡಿಲ್ಲವಾಗಿದ್ದು ವಿಧಾನಸಭೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹೆಸರು ಘಟ್ಟದ ಮೇಲಿನ ಕ್ಷೇತ್ರಗಳಲ್ಲಿ ಮಾತ್ರ ಕೇಳಿಬರುತ್ತಿದೆ.

ಇನ್ನು ಜೆಡಿಎಸ್ ನಲ್ಲಿ ಅಭ್ಯರ್ಥಿಗಳೇ ಇಲ್ಲವಾಗಿದ್ದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಪಕ್ಷ ತೀರ್ಮಾನಿಸಿದ್ರೆ ಚುನಾವಣೆ ಎದುರಿಸೋದಾಗಿ ಆರಂಭದಲ್ಲಿ ಹೇಳಿಕೊಂಡಿದ್ದರಾದರೂ ಸದ್ಯ ಸ್ಪರ್ಧೆಸುವ ವಿಚಾರವನ್ನ ಎಲ್ಲಿಯೂ ತಿಳಿಸಿಲ್ಲ. ಉಳಿದಂತೆ ಜೆಡಿಎಸ್ ನಲ್ಲಿರುವ ಏಕೈಕ ಅಭ್ಯರ್ಥಿ ಶಶಿಭೂಷಣ ಹೆಗಡೆಯಾಗಿದ್ದು ಪಕ್ಷ ಸಹ ಅವರನ್ನ ಕಣಕ್ಕಿಳಿಸುವತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ. ಶಶಿಭೂಷಣ್ ವಿಧಾನಸಭಾ ಚುನಾವಣೆಯಲ್ಲೂ ಶಿರಸಿ ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಬಲ ಪೈಪೋಟಿ ನೀಡಿದ್ರು.

ಹೀಗಾಗಿ ಉತ್ತರಕನ್ನಡದಿಂದ ಈ ಬಾರಿ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಶಶಿಭೂಷಣ್ ಹೆಗಡೆ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಎನ್ನುವ ಸುದ್ಧಿ ಸದ್ಯ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಇನ್ನು ಒಂದಿಲ್ಲೊಂದು ಹೇಳಿಕೆಗಳನ್ನ ನೀಡುತ್ತಲೇ ಸದಾ ಸುದ್ಧಿಯಲ್ಲಿರುವ ಅನಂತಕುಮಾರ ಹೆಗಡೆ ಮಾತುಗಳು ಕೆಲವೊಮ್ಮೆ ಅವರ ಪ್ರಾಭಲ್ಯವನ್ನ ಹೆಚ್ಚಿಸಿದ್ದರೂ ಸಹ ಸಾಕಷ್ಟು ಬಾರಿ ಅವರ ರಾಜಕೀಯ ವ್ಯಕ್ತಿತ್ವಕ್ಕೆ ಅವರ ಹೇಳಿಕೆಗಳೇ ಡ್ಯಾಮೇಜ್ ಉಂಟುಮಾಡಿವೆ. ಹೀಗಾಗಿ ಅನಂತಕುಮಾರ ಹೆಗಡೆ ವಿರೋಧಿ ಅಲೆ ಸಹ ಜಿಲ್ಲೆಯಲ್ಲಿದ್ದು ಅದನ್ನ ಸಮರ್ಪಕವಾಗಿ ಬಳಸಿಕೊಂಡರೇ ಮೈತ್ರಿ ಪಕ್ಷ ಈ ಬಾರಿ ಜಿಲ್ಲೆಯಲ್ಲಿ ಗೆಲುವಿನ ನಗೆ ಬೀರುವುದು ಸಾಧ್ಯವಾಗಲಿದೆ..

ಹೌದು, ಕಳೆದ ವಿಧಾನಸಭೆ ಫಲಿತಾಂಶ ಗಮನಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಕುಂದಿದೆ ಎನ್ನುವುದು ಸ್ಪಷ್ಟವಾದಂತಿದೆ. ಕಾರಣ, 2013ರ ವಿಧಾನಸಭೆ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳ ಪೈಕಿ 5 ಜನ ಬಿಜೆಪಿ ಶಾಸಕರು ಆಯ್ಕೆಯಾಗಿದ್ದು, ಮೂರು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.. ಇನ್ನು ಮೈತ್ರಿ ಪಾಲುದಾರರಾದ ಜೆಡಿಎಸ್ ಇಲ್ಲಿ ತನ್ನ ಖಾತೆಯನ್ನೇ ತೆರೆದಿಲ್ಲ.. ಹಾಗಾಗಿ ಈ ಬಾರಿಯೂ ಇಲ್ಲಿ ಬಿಜೆಪಿಗೆ ಪ್ಲಸ್ ಇದೆ.ಒಟ್ಟಾರೆಯಾಗಿ ಹೇಳುವುದಾದರೆ, ಹಿಂದುತ್ವ, ರಾಷ್ಟ್ರೀಯತೆ,ಯ ವಿಚಾರವೊಂದೇ ಹೈಲೆಟ್ ಆಗಿರೋ ಈ ಕ್ಷೇತ್ರದಲ್ಲಿ ಕೈ ಪಕ್ಷ ಶತಾಯಗತಾಯ ಗೆಲುವಿನ ಖಾತೆಯನ್ನ ತೆರೆಯಲೇಬೇಕು ಅಂತ ತವಕಿಸುತ್ತಿದೆ.

1957 ಮತ್ತು 1962 ರಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಜೆಪಿ ಆಳ್ವಾ ಅವರು ಸಂಸದರಾಗಿ ಆಯ್ಕೆಯಾಗಿದ್ದರು.. ನಂತರ 1967 ರಲ್ಲಿ ಸಂವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಡಿ. ದತ್ತಾತ್ರೇಯ ಅವರು ಆಯ್ಕೆಯಾದರು. ನಂತರ 1971 ರಲ್ಲಿ ಬಾಲಕೃಷ್ಣ ವೆಂಕಣ್ಣ ನಾಯ್ಕ್. 1977 ರಲ್ಲಿ ಬಾಲ್ಸು ಪುರ್ಸು ಕದಮ್, 1980 ರಿಂದ 1991 ರವರೆಗೆ ಜಿ.ದೇವರಾಯ ನಾಯಕ್ ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಉತ್ತರ ಕನ್ನಡವನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಳ್ಳುವಂತೆ ಮಾಡಿದರು. ಆದರೆ 1996 ಮತ್ತು 1998 ರಲ್ಲಿ ಬಿಜೆಪಿಯ ಅನಂತ ಕುಮಾರ್ ಹೆಗಡೆ ಅವರು ಜಯಶಾಲಿಯಾಗಿ ಉತ್ತರ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಖಾತೆ ತೆರೆಯುವಂತೆ ಮಾಡಿತು. 1999 ರಲ್ಲಿ ಮಾರ್ಗರೇಟ್ ಆಳ್ವಾ ಗೆಲುವು ಸಾಧಿಸಿದರು…

ಇನ್ನು 2014 ರಲ್ಲಿ ಗೆಲುವು ಸಾಧಿಸಿದ ಅನಂತ್ ಕುಮಾರ್ ಹೆಗಡೆ ಅವರು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾದವರು.. ನರೇಂದ್ರ ಮೋದಿ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಸ್ತಾನ ಸಿಕ್ಕ ಮೇಲೆ ಹೆಗಡೆ ಅವರ ವರ್ಚಸ್ಸು ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಿದೆ. ಆದರೆ ಸತತ ಮೂರು ಬಾರಿ ಗೆಲುವು ಸಾಧಿಸಿದರೂ ಹೆಗಡೆ ಅವರು ಅಭಿವೃದ್ಧಿಗಾಗಿ ಹೆಚ್ಚು ಸ್ರಮಿಸಿಲ್ಲ ಅನ್ನೋ ಆರೋಪವಿದೆ.. ಹಾಗಾಗಿ ಈ ಬಾರಿ ಕ್ಷೇತ್ರದ ರಾಜಕೀಯ ಬವಿ,ಯ ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ.ಇಂತಹ ಉತ್ತರ ಕನ್ನಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು, 8 ವಿಧಾನ ಸಭೆ ಕ್ಷೇತ್ರಗಳಿವೆ, ಇರುವ 8 ವಿಧಾನ ಸಭೆ ಕ್ಷೇತ್ರಗಳಲ್ಲಿ ಯಾವ ಪಕ್ಷದ ಶಾಸಕರಿದ್ದಾರೆ, ಲೋಕ ಸಭಾ ಚುನಾವಣೆಯನ್ನ ಗೆಲ್ಲೋಕೆ ಆ ಕ್ಷೇತ್ರಗಳ ಕೊಡುಗೆ ಏನು ತ ನೋಡ್ಕೊಂಡ್ ಬರೋಣ ಬನ್ನಿ…

ಅನಂತಕುಮಾರ ಹೆಗಡೆ 2014ರಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ ದೇಶಪಾಂಡೆ ಅವರನ್ನೂ ಸೋಲಿಸಿ ಇದೀಗ ಕೇಂದ್ರ ಸಚಿವರಾಗಿದ್ದಾರೆ. ಪ್ರತಿ ಬಾರಿಯೂ ಅನಂತಕುಮಾರ ಹೆಗಡೆ ಅವರಿಗೆ ಗೆಲುವು ತಂದುಕೊಟ್ಟಿದ್ದು ಹಿಂದುತ್ವದ ಅಲೆ. ಹಿಂದುತ್ವವೇ ಅನಂತಕುಮಾರ ಹೆಗಡೆ ರಾಜಕೀಯ ಅಸ್ತ್ರವಾಗಿದೆ. ಈ ಮೂಲಕವೇ ಕ್ಷೇತ್ರದಲ್ಲಿ ಗೆಲುವಿನ ನಗು ಬಿರುತ್ತಾ ಬಂದಿರುವ ಅನಂತಕುಮಾರ ಈ ಬಾರಿ ಸಹ ಹಿಂದುತ್ವ ಹಾಗೂ ಮೋದಿ ಅಲೆಯಲ್ಲಿ ಚುನಾವಣೆ ಎದುರಿಸಲಿದ್ದಾರೆ.ಉತ್ತರಕನ್ನಡ ಲೋಕಸಭಾ ಕ್ಷೇತ್ರವು ಉತ್ತರಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿಯ 2 ವಿಧಾನಸಭಾ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿದೆ. ಈ ಕ್ಷೇತ್ರಗಳಲ್ಲಿರುವ ಶಾಸಕರು ಮತ್ತು ಅವರ ಪಕ್ಷಗಳ ಬಗ್ಗೆ ನೋಟ ಬೀರುವುದಾದ್ರೆ,….

ಹಳಿಯಾಳ ಕ್ಷೇತ್ರ : ಗೆಲುವು ಕಾಂಗ್ರೆಸ್ : ಶಾಸಕರು -ಆರ್ ವಿ ದೇಶಪಾಂಡೆ ಪಡೆದ ಮತಗಳು: 61324ಕಾರವಾರ ಕ್ಷೇತ್ರ : ಗೆಲುವು – ಬಿಜೆಪಿ- ರೂಪಾಲಿ ನಾಯ್ಕ ಪಡೆದ ಮತಗಳು : 59776ಭಟ್ಕಳ ಕ್ಷೇತ್ರ- ಗೆಲುವು- ಬಿಜೆಪಿ- ಶಾಸಕ ಸುನೀಲ್ ನಾಯ್ಕ್ – ಪಡೆದ ಮತಗಳು- 83172ಯಲ್ಲಾಪುರ ಕ್ಷೇತ್ರ ಗೆಲುವು- ಕಾಂಗ್ರೆಸ್ – ಶಾಸಕ-ಶಿವರಾಂ ಹೆಬ್ಬಾರ್, ಪಡೆದ ಮತಗಳು- 66,290ಕುಮಟಾ ಕ್ಷೇತ್ರ – ಗೆಲುವು – ಬಿಜೆಪಿ – ಶಾಸಕ – ದಿನಕರ ಶೆಟ್ಟಿ – ಪಡೆದ ಮತಗಳು -58756ಶಿರಸಿ ಕ್ಷೇತ್ರ – ಗೆಲುವು – ಬಿಜೆಪಿ-  ಶಾಸಕ – ವಿಶ್ವೇಶ್ವರ ಹೆಗಡೆ ಕಾಗೇರಿ –ಪಡೆದ ಮತಗಳು- 70595 ಬೆಳಗಾಂವಿ ಜಿಲ್ಲೆಯ ಕಿತ್ತೂರು ಕ್ಷೇತ್ರ – ಗೆಲುವು – ಬಿಜೆಪಿ ಶಾಸಕ ಮಹಾಂತೇಶ್ ದೊಡ್ಡಗೌಡರ್ –ಖಾನಾಪುರ ಕ್ಷೇತ್ರ – ಗೆಲುವು – ಕಾಂಗ್ರೆಸ್ – ಶಾಸಕಿ- ಅಂಜಲಿ ನಿಂಬಾಳ್ಕರ್

ಹಾಗಾದ್ರೆ ಈ ಕ್ಷೇತ್ರದಲ್ಲಿನ ಜಾತಿವಾರು ಮತದಾರರ ಸಂಖ್ಯಾವಾರು ನೋಡೋದಾದ್ರೆ, 2018 ರ ಮಾಹಿತಿಯಂತೆ.ನಾಮಧಾರಿ – 3.50ಲಕ್ಷ.ಮರಾಠಾ – 3ಲಕ್ಷ.ಅಲ್ಪ ಸಂಖ್ಯಾತ – 2ಲಕ್ಷ.ಬ್ರಾಹ್ಮಣ  – 1.50ಲಕ್ಷ.ಹಾಲಕ್ಕಿ ಒಕ್ಕಲಿಗರು  – 1.50ಲಕ್ಷ.ಮೀನುಗಾರರು  – 1.20ಲಕ್ಷ.ಲಿಂಗಾಯತ  – 1ಲಕ್ಷ.ಎಸ್ .ಸಿ , ಎಸ್.ಟಿ – 1.30ಲಕ್ಷ.ವೀರಶೈವ  – 18ಸಾವಿರ. ಪ್ರಾಭಲ್ಯ:ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಾಮಧಾರಿ, ಮರಾಠಾ ಹಾಗೂ ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ. ಇದು ಈ ಕ್ಷೇತ್ರದಲ್ಲಿರೋ ಜಾತಿಯಾಧಾರಿತ ಮತಗಳಾದ್ರೆ, ಉತ್ತರ ಕನ್ನಡ ಕ್ಷೇತ್ರದಲ್ಲಿರೋ ಒಟ್ಟು ಮತದಾರರು, ಅದರಲ್ಲಿ ಪುರು ಮತ್ತು ಮಹಿಳೆಯರ ಸಂಖ್ಯೆ ನೋಡೋದಾದ್ರೆ, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ –  15.96ಲಕ್ಷ.ಪುರುಷ ಮತದಾರರು  – 8.20 ಲಕ್ಷ.ಮಹಿಳಾ ಮತದಾರರು – 7.75 ಲಕ್ಷ

ಇದು 2018 ರ ಮತದಾರರ ಜನಗಣತಿಯ ಮಾಹಿತಿ.. ಹತ್ತಿರ ಹತ್ತಿರ 16 ಲಕ್ಷ ಮತದಾರರನ್ನ ಹೊಂದಿರೋ ಕ್ಷೇತ್ರ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವಾಗಿದ್ದು, ಇಂತಹ ಐತಿಹಾಸಿಕ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಬಿಜೆಪಿ ಅನಂತ್ ಕುಮಾರ್ ಹೆಗಡೆಯವರನ್ನ ಸೋಲಿಸಲೇ ಬೇಕು ಅಂತ ಮೈತ್ರಿ ಪಡೆ ಕಸರತ್ತು ನಡೆಸಿದೆ… ಇತ್ತ ಮೈತ್ರಿ ಪಡೆಯ ಕನಸನ್ನ ನುಚ್ಚು ನೂರು ಮಾಡಿ ಮತ್ತೊಮ್ಮೆ ಗೆಲುವಿನ ಕನಸು ಕಾಣುತ್ತ ಇನ್ನಿಲ್ಲದ ತಂತ್ರಗಳನ್ನ ಹೆಣೆಯುತ್ತಿದೆ ಬಿಜೆಪಿ ವಲಯ… ಯಾರೆಲ್ಲ ಏನೇ ಕಸರತ್ತು ಮಾಡಿದ್ರೂ ಅಂತಿಮವಾಗಿ ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅನ್ನೋದನ್ನ ಚುನಾವಣೆವರೆಗೂ ನಾವು ನೀವೆಲ್ಲ ಕಾಯಲೇಬೇಕಿದೆ…

LEAVE A REPLY

Please enter your comment!
Please enter your name here