Home Crime ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಮುಜುಗರ.! ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷವೂ‌...

ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಮುಜುಗರ.! ಕಳೆದ ವರ್ಷದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷವೂ‌ ನೀಡಿ ಅದ್ವಾನ..!

2101
0
SHARE

ಒಂದಲ್ಲ ಒಂದು ಅವಾಂತರಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಈಗ ಇನ್ನೊಂದು ಅವಾಂತರ ಮಾಡಿ ಮುಜುಗರಕ್ಕೀಡಾಗಿದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆಗೆ ಇಸವಿ ಚೇಂಜ್‌ ಮಾಡಿ ಕೊಟ್ಟು ಬೇಜವಾಬ್ದಾರಿ ಮೆರೆದಿರುವುದು ಬಯಲಾಗಿದೆ.ಒಂದು ಕಾಲದಲ್ಲಿ ದೇಶದಲ್ಲಿ ಅತ್ಯಂತ ಪ್ರತಿಷ್ಠಿತ ಹಾಗೂ ಹೆಸರುವಾಸಿಯಾಗಿದ್ದ ಮೈಸೂರು ವಿಶ್ವವಿದ್ಯಾನಿಲಯ ಈಗ ನಾನಾ ಕಾರಣಕ್ಕೆ ಹೆಸರು ಹಾಳು ಮಾಡಿಕೊಳ್ಳುತ್ತಿದೆ.

ಕಳೆದ ವರ್ಷದ ಪ್ರಶ್ನೆ ಪತ್ರಿಕೆಗೆ ಈ ವರ್ಷದ ಇಸವಿ ಹಾಕಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಿರುವುದು ಬಯಲಾಗಿದೆ. ವಿವಿಯ ಮಾನವ ಗಂಗೋತ್ರಿ ಕ್ಯಾಂಪಸ್ ನಲ್ಲಿ ನಡೆಯುತ್ತಿದ್ದ ಎಂಎಡ್ ಮೊದಲ ಸೆಮಿಸ್ಟರ್ ಪರೀಕ್ಷೆ ವೇಳೆ ಈ ಅವಾಂತರ ನಡೆದಿದೆ. ಎಂ.ಎಡ್ ಮೊದಲ‌ ಸೆಮಿಸ್ಟರ್ ಪರೀಕ್ಷೆ ಗಾಗಿ‌ ನೀಡಿದ್ದ ಪ್ರಶ್ನೆ ಪತ್ರಿಕೆಯನ್ನೇ ಈ ವರ್ಷದ ಪ್ರಶ್ನೆ ಪತ್ರಿಕೆಯಾಗಿ ನೀಡಿರುವುದರಿಂದ ಮೈಸೂರು ವಿಶ್ವವಿದ್ಯಾನಿಲಯದ ಬೇಜವಾಬ್ದಾರಿ ತನಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ನೀಡಿದ್ದ ಪ್ರಶ್ನೆ‌ ಪತ್ರಿಕೆಯನ್ನೇ ಈ ವರ್ಷವೂ ನೀಡಿ ಗೊಂದಲ ಉಂಟು ಮಾಡಿದ್ದು, ಹಳೇ ವರ್ಷದ ಪ್ರಶ್ನೆ ಪತ್ರಿಕೆ ನೀಡಿದ್ದಕ್ಕೆ ಗೊಂದಲಕ್ಕೊಳಗಾದ ವಿದ್ಯಾರ್ಥಿಗಳು ವಿವಿ ಆಡಳಿತ ಮಂಡಳಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.ಮೈಸೂರು ವಿವಿ ಕುಲಪತಿಗಳಾಗಿ ಪ್ರೋ.ಹೇಮಂತ್ ಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿವಿ ಆಡಳಿತದಲ್ಲಿ ಭಾರೀ ಬದಲಾವಣೆ ತರೋದಾಗಿ ಹೇಳಿದ್ರು.

ಆದರೆ, ಪರೀಕ್ಷಾಂಗ ವಿಭಾಗದ ಈ ಅವಾಂತರದಿಂದ ಸ್ವತಃ ಕುಲಪತಿಗಳು ಮುಜುಗರ ಕ್ಕೀಡಾಗಿದ್ದಾರೆ. ಇನ್ನೂ ಮೈಸೂರಿನವರೇ ಉನ್ನತ ಶಿಕ್ಷಣ ಸಚಿವರಾಗಿದ್ದು, ತವರು ಜಿಲ್ಲೆಯಲ್ಲೇ ನಡೆಯುತ್ತಿರುವ ವಿವಿಯ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಸಾಗುತ್ತಿದೆ ಎಂಬುದು ಸಚಿವರ ಮುಜುಗರಕ್ಕೂ ಎಡೆ ಮಾಡಿಕೊಟ್ಟಿದೆ.

ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರದ ಕೂಗಿನ ಮಧ್ಯೆ, ವಿವಿಯ ಇಂತಹ ಅದ್ವಾನಗಳನ್ನು ನೋಡಿದ್ರೆ, ವಿವಿ ಆಡಳಿತ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುದು ಗೊತ್ತಾಗುತ್ತದೆ. ಆಡಳಿತವೇ ಸರಿ ಇಲ್ಲದ ವಿವಿಯಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ನಿರೀಕ್ಷಿಸೋದು ಎಷ್ಟು ಸಾಧ್ಯ ಎಂಬುದು ಪ್ರಶ್ನೆ.

LEAVE A REPLY

Please enter your comment!
Please enter your name here