Home District ಉಪಚುನಾವಣೆ ಕಣದಲ್ಲಿ BJPಗೆ ಮಾಸ್ಟರ್ ಸ್ಟ್ರೋಕ್..!? ಚುನಾವಣಾ ಕಣದಿಂದಲೇ ಹಿಂದೆ ಸರಿದ BJP ಅಭ್ಯರ್ಥಿ..!

ಉಪಚುನಾವಣೆ ಕಣದಲ್ಲಿ BJPಗೆ ಮಾಸ್ಟರ್ ಸ್ಟ್ರೋಕ್..!? ಚುನಾವಣಾ ಕಣದಿಂದಲೇ ಹಿಂದೆ ಸರಿದ BJP ಅಭ್ಯರ್ಥಿ..!

1535
0
SHARE

ರಾಜಕೀಯದಲ್ಲಿ ಏನೂ ಬೇಕಾದರೂ ಆಗಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ರಾಮನಗರ ಉಪಚುನಾವಣಾ ಕಣದಲ್ಲಿ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದು ಶಾಕ್‌ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್‌ ಚಂದ್ರಶೇಖರ್‌ ಅವರಿಗೆ ಬಿಜೆಪಿ ಬಿ ಫಾರಂ ನೀಡಿತ್ತು.

ಈ ವಿದ್ಯಮಾನ ಬಿಜೆಪಿಗೆ ಭಾರೀ ಆಘಾತ ನೀಡಿದ್ದು, ನಾಯಕರು ತಲೆಕೆಡಿಸಿಕೊಳ್ಳುವಂತಾಗಿದೆ. ಫ‌ಲಿತಾಂಶಕ್ಕೂ ಮುನ್ನ ಭಾರೀ ಮುಖಭಂಗ ಅನುಭವಿಸಬೇಕಾಗಿದೆ. ತಳಮಟ್ಟದ ಕಾರ್ಯಕರ್ತರ ವಿರೋಧವನ್ನು ಎದುರಿಸುವ ಪರಿಸ್ಥಿತಿ ಒದಗಿ ಬಂದಿದೆ.ಬೆಳಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಜೆಡಿಎಸ್‌ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. ಆವತ್ತು ನನ್ನ ಕೈಗೆ ಬಾವುಟ ಕೊಟ್ಟು ಹೋದವರು ಏನಾಯಿತು ಎಂದು ನೋಡಲು ಬರಲಿಲ್ಲ, ಇನ್ನು ನಾನು ಗೆಲ್ಲುವುದು ಹೇಗೆ ಎಂದು ಚಂದ್ರಶೇಖರ್‌ ಹೇಳಿದ್ದಾರೆ.ಕೇಂದ್ರ ಸಚಿವ ಸದಾನಂದ ಗೌಡ ಅವರನ್ನು ಕಂಡರೆ ಯೋಗೇಶ್ವರ್‌ ಅವರಿಗೆ ಆಗುವುದಿಲ್ಲ.

ಸದಾನಂದ ಗೌಡರು ಬಂದರು, ಸ್ವಲ್ಪ ನಕ್ಕರು, ಹೋದರು ಎಂದಿದ್ದಾರೆ. ಮಂಡ್ಯಕ್ಕೆ ಬಿಜೆಪಿ ಪ್ರಮುಖ ನಾಯಕರೆಲ್ಲರೂ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಯಾರೂ ಇಲ್ಲಿ ಕಾರು ನಿಲ್ಲಿಸಿ ಸ್ವಲ್ಪ ಪ್ರಚಾರವೂ ನಡೆಸಿಲ್ಲ ಎಂದಿದ್ದಾರೆ. ನಾನು ಮೂಲತಃ ಕಾಂಗ್ರೆಸಿಗ ಮತ್ತೆ ಮಾತೃ ಪಕ್ಷವನ್ನು ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ.

ಈ ನಡುವೆ, ಚಂದ್ರಶೇಖರ್ ಬಿಜೆಪಿ ಸೇರುವಾಗ ಚುನಾವಣಾ ವೆಚ್ಚವನ್ನ ಪಕ್ಷವೇ ಭರಿಸುತ್ತದೆ ಎಂಬ ಭರವಸೆ ನೀಡಿದ್ದರೆನ್ನಲಾಗಿದೆ.. ಚುನಾವಣೆಯಲ್ಲಿ ಹಣಕಾಸು ಸಹಾಯ ಮಾಡುವುದಾಗಿ ಬಿಜೆಪಿ ನಾಯಕರು ಒಪ್ಪಿಕೊಂಡು 20 ಕೋಟಿ ನೀಡುವುದಾಗಿ ಹೇಳಿದ್ದರಂತೆ…

ಆದ್ರೆ ಬಿಜೆಪಿ ನಾಯಕರು ಕೊನೆ ಘಳಿಗೆಯವರೆಗೂ ಒಂದು ಪೈಸೆ ಹಣ ನೀಡಲಿಲ್ಲ ಎನ್ನುವುದು ಒಂದು ಕಾರಣ ಕಣದಿಂದ ಚಂದ್ರಶೇಖರ್ ಹಿಂದೆ ಸರಿಯಲು ಎಂಬ ಮಾತು ಕೇಳಿಬರುತ್ತಿದೆ… ಚುನಾವಣಾ ಕಣದಲ್ಲಿದ್ದು ಠೇವಣಿ ಕಳೆದುಕೊಂಡ್ರೆ ಮರ್ಯಾದೆ ಹೋಗುತ್ತದೆ ಎಂಬುದನ್ನ ಮನಗಂಡ ಚಂದ್ರಶೇಖರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ..

LEAVE A REPLY

Please enter your comment!
Please enter your name here