Home Crime ಉಪ್ಪಿಟ್ಟು ಸೇವಿಸಿ ಸಚಿವ ಶಿವಳ್ಳಿ ಅಸ್ವಸ್ಥ..! ಸಮಾರಂಭದಲ್ಲಿ ಉಪ್ಪಿಟ್ಟಿಗೆ ವಿಷ ಬೆರಸಿದ್ರಾ..!? ಹೋಟೆಲ್ ಮಾಲೀಕನ ಬಂಧಿಸಿ...

ಉಪ್ಪಿಟ್ಟು ಸೇವಿಸಿ ಸಚಿವ ಶಿವಳ್ಳಿ ಅಸ್ವಸ್ಥ..! ಸಮಾರಂಭದಲ್ಲಿ ಉಪ್ಪಿಟ್ಟಿಗೆ ವಿಷ ಬೆರಸಿದ್ರಾ..!? ಹೋಟೆಲ್ ಮಾಲೀಕನ ಬಂಧಿಸಿ ವಿಚಾರಣೆ..!

2344
0
SHARE

ಸನ್ಮಾನ ಸಮಾರಂಭದಲ್ಲಿ ಸೇವಿಸಿದ ಉಪ್ಪಿಟ್ಟಿನಿಂದಾಗ ಸಚಿವರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಚಿವರ ಜೊತೆ ಆಪ್ತರು ಸಹ ಉಪ್ಪಿಟ್ಟು ಸೇವಿಸಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ವಾಣಿಜ್ಯನಗರಿಯಲ್ಲಿ ಸಚಿವರ ಸೇವಿಸಿದ ಉಪ್ಪಿಟ್ಟಿಗೆ ವಿಷ ಬೆರಸಿದ್ರಾ ಅನ್ನೋ ಅನುಮಾನಗಳು ಕಾಡಿವೆ.

ಸದ್ಯ ಸಚಿವರಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.ಸಚಿವ ಸಿ.ಎಸ್. ಶಿವಳ್ಳಿ ಅಭಿನಂದನಾ ಸಮಾರಂಭದಲ್ಲಿ ಉಪ್ಪಿಟ್ಟು ಸೇವನೆ ಮಾಡಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಕುಂದಗೋಳದ ಕರಡಿಕೊಪ್ಪದಲ್ಲಿ ಸಚಿವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಸಚಿವರು ಉಪ್ಪಿಟ್ಟು ಸೇವಿಸಿದ್ದಾರೆ. ಉಪ್ಪಿಟ್ಟು ಸೇವಿಸಿದ ಕ್ಷಣಾರ್ಧದಲ್ಲೇ ಸಚಿವರಿಗೆ ಒಂದು ರೀತಿಯ ಸಂಕಟವಾಗಿದೆ.

ಕೂಡಲೇ ಸಚಿವರು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಆದ್ರೆ ಮಾರ್ಗ ಮಧ್ಯ ವಾಂತಿ ಮಾಡಿಕೊಂಡ ಸಚಿವರು ಸಂಪೂರ್ಣ ನಿತ್ರಾಣವಾಗಿದ್ರು. ಕೂಡಲೇ ಕಿಮ್ಸ್ ಗೆ ಸಚಿವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸಚಿವ ಶಿವಳ್ಳಿ ಜೊತೆ ಉಪ್ಪಿಟ್ಟು ಸೇವಿಸಿದ್ದ ಅಂಗ ರಕ್ಷಕ, ಕಾರ್ ಡ್ರೈವರ್, ಹಾಗೂ ಆಪ್ತ ಸಹಾಯಕನಿಗೂ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಇವರೆಲ್ಲರನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಇತ್ತ ಕಿಮ್ಸ್ ವೈದ್ಯರ ತಂಡ ಸಚಿವರ ಆರೋಗ್ಯದ ಮೇಲೆ ನಿಗಾ ಇರಿಸಿದೆ. ಈ ನಡುವೆ ನಾನು ಆರೋಗ್ಯವಾಗಿದ್ದೇನೆ.

ಘಟನೆ ಬಗ್ಗೆ ಯಾರ ಮೇಲೂ ಅನುಮಾನವಿಲ್ಲ, ವೈದ್ಯರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಸಚಿವರು ಹೇಳಿದ್ದಾರೆ.ಇತ್ತ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಆಹಾರ ಪೂರೈಸಿದ್ದ ಹೋಟೆಲ್ ಮಾಲೀಕ ಬಸಪ್ಪ ಹಾಗೂ ಗ್ರಾಮ ಪಂಚಾಯ್ತಿ ನೌಕರ ಪರಶುರಾಮ್ ಎಂಬಾತನನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಕರಡಿ ಕೊಪ್ಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ನಡುವೆ ಕಿಮ್ಸ್ ವೈದ್ಯರು ವಿಷ ಆಹಾರ ಸೇವನೆಯ ಕೆಲವು ಮಾದರಿಗಳನ್ನು ಪಡೆದು ಪರೀಕ್ಷೆಗಾಗಿ ಕಳಿಸಿದ್ದಾರೆ.ಇನ್ನೂ ಸಚಿವರು ಸೇವಿಸಿದ ಉಪ್ಪಿಟ್ಟಿನಲ್ಲಿ ವಿಷ ಬೆರಸಿದ್ರಾ ಅನ್ನೋ ಅನುಮಾನಗಳು ಕ್ಷೇತ್ರದಲ್ಲಿ ಕಾಡಿದೆ. ಏಕೆಂದ್ರೆ ಈ ಹಿಂದೆ ಸಚಿವರ ಮೇಲೆ ಹಲ್ಲೆ ನಡೆದಿತ್ತು. ಜೀವ ಬೆದರಿಕೆಯೂ ಹಾಕಲಾಗಿತ್ತು. ಈ ಎಲ್ಲವೂಗಳ ನಡುವೆ ಶಾಸಕರಾಗಿದ್ದ ವೇಳೆ ಅಡುಗೆ ಸಹಾಯಕ ವಿಷಹಾಕಿ ಕೊಟ್ಟಿದ್ದ. ಹೀಗಾಗಿ ಹಲವು ಅನುಮಾನಗಳು ಅಭಿಮಾನಿಗಳಲ್ಲಿ ಮೂಡಿವೆ. ಆದ್ರೆ ತನಿಖೆಯಿಂದ ಸತ್ಯಾಂಶ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here