Home Cinema ಉಪ್ಪಿಯ ಪ್ರಜಾಕಾರಣವನ್ನ ಫಾಲೋ ಮಾಡ್ತಿದ್ದಾರಂತೆ ಪಾಕಿಸ್ತಾನದಲ್ಲಿ..!! ಉಪ್ಪಿಯ ಉತ್ತಮ ಪ್ರಜಾ ಪಾರ್ಟಿ ಸೋಶಿಯಲ್ ಮಿಡಿಯಾಗಷ್ಟೇ ಸಿಮೀತನಾ.?!...

ಉಪ್ಪಿಯ ಪ್ರಜಾಕಾರಣವನ್ನ ಫಾಲೋ ಮಾಡ್ತಿದ್ದಾರಂತೆ ಪಾಕಿಸ್ತಾನದಲ್ಲಿ..!! ಉಪ್ಪಿಯ ಉತ್ತಮ ಪ್ರಜಾ ಪಾರ್ಟಿ ಸೋಶಿಯಲ್ ಮಿಡಿಯಾಗಷ್ಟೇ ಸಿಮೀತನಾ.?! ಅಭಿಮಾನಿಗಳೇ ಪಾಠ ಹೇಳ್ತಿದ್ದಾರೆ ನೋಡಿ ಉಪ್ಪಿಯ ಹುಚ್ಚಾಟ.!

555
0
SHARE

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರ ಮಾತುಗಳನ್ನ ಕೇಳಿ, ಅವ್ರು ನಮ್ಮ ಪ್ರಜಾಕೀಯನೇ ಫಾಲೋ ಮಾಡ್ತಿದಾರೆ ನೋಡಿ ಅಂತ ಬರೆದುಕೊಂಡಿದಾರೆ. ಆದ್ರೆ ಇದನ್ನ ನೋಡಿ ಖುದ್ದು ಉಪೇಂದ್ರ ಅಭಿಮಾನಿಗಳೇ ಕೆಂಡಾಮಂಡಳರಾಗಿದಾರೆ. ಉಪ್ಪಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದಾರೆ.ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದಿರುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ಮುಖ್ಯಸ್ಥರ, ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಲಾಗಿದೆ.

ಮಾತ್ರವಲ್ಲದೆ ಪಾಕ್‌ ಉನ್ನತಾಧಿಕಾರಿಗಳು ಕಾರ್ಯ ವೇಳಾ ಪಟ್ಟಿಯನ್ನು ಕೂಡ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.ಪಾಕ್ ನಲ್ಲಿ ಇನ್ನು ಮುಂದೆ ಪಾಕ್‌ ಪ್ರಧಾನಿ, ವರಿಷ್ಠ ನ್ಯಾಯಮೂರ್ತಿ, ಸೆನೆಟ್‌ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಮತ್ತು ಮುಖ್ಯ ಮಂತ್ರಿಗಳು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ. ಮತ್ತು ಅವರು ಇನ್ನು ಮುಂದೆ ಬ್ಯುಸಿನೆಸ್‌ ಅಥವಾ ಕ್ಲಬ್‌ ಕ್ಲಾಸ್‌ ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕಾಗುತ್ತದೆ.

ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ನೂತನ ಪಾಕ್‌ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿರುವ ಮುಖ್ಯ ಸಂಗತಿ ಎಂದರೆ ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ. ಇಮ್ರಾನ್‌ ಅವರು ಸ್ವತಃ ತಾನು ಇನ್ನು ಮುಂದೆ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ವಿಶೇಷ ವಿಮಾನವನ್ನು ಬಳಸದೆ, ನಿತ್ಯ ಹಾರಾಟಕ್ಕೆ ಲಭ್ಯವಿರುವ ವಿಮಾನಗಳಲ್ಲಿನ ಬ್ಯುಸಿನೆಸ್‌ ಕ್ಲಾಸ್‌ ಅಥವಾ ಕ್ಲಬ್‌ ಕ್ಲಾಸ್‌ ನಲ್ಲಿ ಮಾತ್ರವೇ ಪ್ರಯಾಣಿಸುವುದಾಗಿ ಹೇಳಿದ್ದಾರೆ.ಇಮ್ರಾನ್ ಸರಳತೆಗೆ ಒತ್ತು ಕೊಟ್ಟು ಉಳಿಸಿದ ಹಣವನ್ನ ಜನರ ಒಳಿತಿಗೆ ಬಳಸೋಣ ಅಂತಿದಾರೆ.

ಹಿಂದೆ ಹಲವು ಭಾರತೀಯ ರಾಜಕಾರಣಿಗಳು ಈ ತರಹದ ಕ್ರಮಗಳನ್ನ ಕೈಗೊಂಡಿದಾರೆ. ಆದ್ರೆ ಉಪ್ಪಿ ಹೇಳೊ ಪ್ರಕಾರ ಈ ಐಡಿಯಾ ಅವರದಂತೆ. ಇಮ್ರಾನ್ ಖಾನ್ ಇವರ ಪ್ರಜಾಕೀಯದ ಕಾನ್ಸೆಪ್ಟ್ ಕಾಪಿ ಮಾಡಿದಾರಂತೆ.ತಮ್ಮ ಸಿನಿಮಾಗಳ ಮೂಲಕ ರಾಜಕೀಯ ಓರೆ ಕೋರೆ ತೋರಿಸ್ತಿದ್ದ ಉಪ್ಪಿ ಅವುಗಳ ಮೂಲಕವೇ ತಾವು ಮುಂದೆ ರಾಜಕೀಯಕ್ಕೆ ಬರ್ತಿನಿ ಅನ್ನೋ ಸೂಚನೆ ನೀಡಿದ್ರು. ಹಲವು ಸಂದರ್ಶನಗಳಲ್ಲೂ ತಾವು ರಾಜಕೀಯಕ್ಕೆ ಬರ್ತಿನಿ ಅನ್ನೋದನ್ನ ಹೇಳ್ತಾನೇ ಬಂದಿದ್ರು ಉಪ್ಪಿ. ಸೋ ಅಭಿಮಾನಿಗಳ ನಡುವೆ ಉಪೇಂದ್ರ ಬೇಗ ರಾಜಕೀಯಕ್ಕೆ ಬರಲಿ ಅನ್ನೋ ಆಶಯ ಇತ್ತು. ಫೈನಲಿ ಕಳೆದ ವರ್ಷ ಉಪೇಂದ್ರ ಅಧಿಕೃತವಾಗಿ ರಾಜಕೀಯಕ್ಕೆ ಬರುವ ಘೋಷಣೆ ಮಾಡಿದಾಗ ಅಭಿಮಾನಿಗಳು ಖುಷಿ ಪಟ್ಟಿದ್ರು.

ಬೆಳ್ಳಿತೆರೆ ಮೇಲೆ ತನ್ನ ಬುದ್ದಿವಂತಿಕೆಯಿಂದ ಜಾದೂ ಮಾಡಿರೋ ಈ ನಟ- ತಂತ್ರಜ್ಞ ರಾಜಕೀಯದಲ್ಲೂ ಏನಾದ್ರೂ ಹೊಸತು ಮಾಡ್ತಾರೆ ಅನ್ನೋ ನೀರೀಕ್ಷೆ ಇದ್ವು.  ರಾಜಕೀಯಕ್ಕೆ ಬರುತ್ತಲೇ ತಾನು ರಾಜಕೀಯ ಮಾಡಲ್ಲ.. ಪ್ರಜಾಕೀಯ ಮಾಡ್ತಿನಿ ಅಂದಿದ್ದ ಉಪ್ಪಿ ಮಾತು ಜನರಿಗೆ ಇಷ್ಟವಾಗಿತ್ತು. ಖಾಕಿ ತೊಟ್ಟು ಜನರ ಪರ ಕೆಲಸ ಮಾಡುವ ಕಾರ್ಮಿಕನಾಗ್ತಿನಿ ಅಂದಿದ್ದು ಖುಷಿ ಕೊಟ್ಟಿತ್ತು.ಉಪೇಂದ್ರ , ಪಾಲಿಟಿಕ್ಸ್ ಗೆ ಬರ್ತಿನಿ ಅಂದಾಗ ಜನ ನಿಜಕ್ಕೂ ಇವರ ಮೇಲೆ ಭರವಸೆ ಇಟ್ಟಿದ್ರು. ಉಪ್ಪಿ ಹೇಳುವ ಪ್ರಜಾಕೀಯ-ಪ್ರಜಾಕಾರಣ ಕಾನ್ಸೆಪ್ಟ್ ನಿಜಕ್ಕೂ ಚೆಂದವಾಗಿವೆಯಲ್ಲ ಅಂತ ಖುಷಿ ಪಟ್ಟಿದ್ರು. ಉಪ್ಪಿ ಖಾಕಿ ತೊಟ್ಟು ಕರ್ನಾಟಕ ಪ್ರಜ್ಞಾವಂತರ ಪಕ್ಷ ಕಟ್ಟಿದಾಗ ನಿಜಕ್ಕೂ ಜೈ ಅಂದಿದ್ರು. ಆದ್ರೆ ಮುಂದೆ ನಡೆದಿದ್ದೇನು.. ಜಸ್ಟ್ ಗಿಮಿಕ್ – ಕಿರಿಕ್.

ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ ಅಂತ ಪಕ್ಷದ ಹೆಸರನ್ನ ಅನೌನ್ಸ್ ಮಾಡಿ ಆಟೋವನ್ನ ಪಕ್ಷ ಚಿನ್ಹೆಯನ್ನಾಗಿ ಘೋಷಿಸಿದ್ರು ಉಪೇಂದ್ರ. ಪಕ್ಷದ ಪ್ರಣಾಳಿಕೆಗಳನ್ನೂ ಬಿಡುಗಡೆ ಮಾಡಿ ಹೊಸ ಚಿಂತನೆಗಳನ್ನ ಹಂಚಿಕೊಂಡಿದ್ರು. ನಿಜ ಹೇಳಬೇಕಂದ್ರೆ ಉಪೇಂದ್ರ ಬಿಡುಗಡೆ ಮಾಡಿದ್ದ ಪ್ರಣಾಳಿಕೆಗಳಲ್ಲಿ ಒಂದಿಷ್ಟು ಕ್ರಾಂತಿಕಾರಕ ವಿಚಾರಗಳಿದ್ವು. ಇದೆಲ್ಲಾ ನೋಡಿ ಒಂದು ಮಟ್ಟಕ್ಕೆ ಉಪ್ಪಿ ಮೇಲೆ ಭರವಸೆ ಮೂಡಿತ್ತು. ಆದ್ರೆ ಆ ಕನಸು ನನಸಾಗಲಿಲ್ಲ.ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ ಅನ್ನೋ ಪಕ್ಷ ಸೇರಿ ಅದರ ಅಧ್ಯಕ್ಷನಾಗಿದ್ದ ಉಪೇಂದ್ರ, ಆ ಪಕ್ಷದ ಮೂಲ ಕಾರ್ಯಕರ್ತರ ಜೊತೆಗೆ ಬಂದ ಮನಸ್ತಾಪದಿಂದ ಹೊರಬಂದ್ರು. ರಾಜಕಾರಣ ಅನುಭವವಿಲ್ಲದ ಉಪ್ಪಿಗೆ ಕೆ.ಪಿ.ಜೆ.ಪಿ ಮೂಲ ಸ್ಥಾಪಕರು ಸರಿಯಾದ ಏಟನ್ನೇ ಕೊಟ್ಟಿದ್ರು. ಈ ಏಟಿನಿಂದ ಚೇತರಿಸಿಕೊಳ್ಳೋದಕ್ಕೆ ಉಪೇಂದ್ರಗೆ ಇನ್ನೂ ಸಾಧ್ಯವಾಗಿಲ್ಲ.

ಕೆ.ಪಿ.ಜೆ.ಪಿ ಪಕ್ಷದ ಪದಾಧಿಕಾರಿಗಳ ಜೊತೆಗೆ ಕಿತ್ತಾಡಿಕೊಂಡು ಪಕ್ಷದಿಂದಲೇ ಹೊರಬಂದ ಉಪೇಂದ್ರ ಬಳಿಕ ಇನ್ನೊಂದು ಪಕ್ಷ ಕಟ್ಟುವ ಚಿಂತನೆ ಮಾಡಿದ್ರು. ಪ್ರಜಾಕೀಯ ಹೆಸರಲ್ಲೇ ಹೊಸ ಪಕ್ಷ ಮಾಡ್ತಿನಿ ಅಂದಿದ್ರು. ಆದ್ರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕೆಲವೇ ದಿನ ಉಳಿದಿರುವಾಗ ಹೊಸ ಪಕ್ಷ ಕಟ್ಟಿ ಚುನಾವಣೆ ಎದುರಿಸೋದು ಸುಲಭ ಇರಲಿಲ್ಲ.ಹೊಸ ಪಕ್ಷ ಕಟ್ಟಿ ಚುನಾವಣೆ ಎದುರಿಸೋದು ಕಷ್ಟವಾದ್ರೂ ಕೊನೆ ಪಕ್ಷ ಉಪೇಂದ್ರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ದಿಸ್ತಾರೆ ಅನ್ನೋ ನಿರೀಕ್ಷೆ ಇತ್ತು. ಸ್ವತಂತ್ರವಾಗಿ ಸ್ಪರ್ದಿಸಿ ಗೆದ್ದು ರಾಜಕೀಯದ ಪಾಠಗಳನ್ನ ಕಲಿತುಕೊಂಡು,, ಮುಂದಿನ ಚುನಾವಣೆ ಹೊತ್ತಿಗೆ ಪಕ್ಷ ಕಟ್ಟುವ ಆಯ್ಕೆ ಉಪ್ಪಿಗಿತ್ತು. ಆದ್ರೆ ಅದನ್ನ ಉಪ್ಪಿ ಆಯ್ಕೆ ಮಾಡಿಕೊಳ್ಳಲಿಲ್ಲ.

ಎಲೆಕ್ಷನ್ ಗೆ ನಿಲ್ಲಲಿಲ್ಲ.ಸದ್ಯಕ್ಕೆ ಉತ್ತಮ್ ಪ್ರಜಾ ಪಾರ್ಟಿ ಅಂತ ಪಕ್ಷವನ್ನ ರೆಜಿಸ್ಟರ್ ಮಾಡಿಸಿದ್ದಾರೆ.  ಇದಕ್ಕೆ ಸಂಸ್ಥಾಪಕರು-ಅಧ್ಯಕ್ಷರು-ಉಪಾಧ್ಯಕ್ಷರು ಎಲ್ಲವೂ ಉಪೇಂದ್ರನೇ… ಪಾರ್ಟಿ ಹೆಸರು ಅನೌನ್ಸ್ ಮಾಡಿದ್ದನ್ನ ಬಿಟ್ರೆ ಇನ್ನೇನು ಹೊಸತು ಮಾಡಿಲ್ಲ ಉಪೇಂದ್ರ.ರಾಜ್ಯ ವಿಧಾನಸಭೆ ಚುನಾವಣೆ ಮುಗಿದು, ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದೆ. ಆದ್ರೆ ಉಪೇಂದ್ರ ಮಾತ್ರ ಸೋಶಿಯಲ್ ಮಿಡಿಯಾದಲ್ಲಿ ಪ್ರಜಾಕೀಯ ಪೋಸ್ಟರ್ ಶೇರ್ ಮಾಡೋದನ್ನ ಬಿಟ್ಟು ಇನ್ನೇನೂ ಮಾಡ್ತಿಲ್ಲ.ಉಪೇಂದ್ರರ ಇತ್ತೀಚಿನ ನಡೆಗಳನ್ನ ನೋಡಿ, ಜನ  ರೀತಿ ಪ್ರಶ್ನೆ ಕೇಳ್ತಿದ್ದಾರೆ.

ರಾಜಕೀಯಕ್ಕೆ ಬಂದ ಹೊಸತರಲ್ಲಿ ಇನ್ನುಮುಂದೆ ಸಿನಿಮಾ ಮಾಡೋದಿಲ್ಲ ಅಂತ ಘೋಷಿಸಿದ್ರು ಉಪೇಂದ್ರ. ಆದ್ರೆ ಮಾಡ್ತಿರೋದೇನು.ಸಾಲು ಸಾಲು ಸಿನಿಮಾ ಒಪ್ಪಿಕೊಂಡಿದಾರೆ. ಕೋಟಿ ಕೋಟಿ ಹಣ ಸಂಭಾವನೆ ಪಡೆದುಕೊಂಡು ಆರಾಮಾಗಿದಾರೆ,.ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿಯಿಂದ ಹೊರಬಂದ ಮೇಲೆ ಉಪ್ಪಿ ಮಾಡಿದ ಮೊದಲ ಕೆಲಸ ಅಂದ್ರೆ ಹೊಸ ಸಿನಿಮಾ ಒಪ್ಪಿಕೊಂಡಿದ್ದು. ಆರ್. ಚಂದ್ರು ನಿರ್ದೇಶನದಲ್ಲಿ ಐ.ಲವ್.ಯೂ ಅನ್ನೋ ಹೊಸ ಲವ್ ಸ್ಟೋರಿ ಸಿನಿಮಾ ಮಾಡ್ತಿದಾರೆ.

ರಾಜಕೀಯ ಮಾಡ್ತಿನಿ ಅಂದವರು ಐ.ಲವ್.ಯೂ, ಐ.ಡ್ಯಾಶ್ ಯೂ ಅನ್ಕೊಂಡು ಮತ್ತದೆ ಹಳೆ ಸವಕಲು ಸಿನಿಮಾ ಮಾಡ್ತಾ ಬ್ಯುಸಿಯಾಗಿರೋದನ್ನ ನೋಡಿ ಜನ ಉಗೀತಾ ಇದ್ದಾರೆ.ಅವರದ್ದೇ ಉಪೇಂದ್ರ ಸಿನಿಮಾದ ಕ್ಲೈಮ್ಯಾಕ್ಸ್ ನ ಉಪೇಂದ್ರ ಮತ್ತೊಮ್ಮೆ ನೋಡಬೇಕಿದೆ. ನಾನು ನಾನು ಅನ್ನೋದನ್ನ ಬಿಟ್ಟು… ಜನರಲ್ಲಿ ನಂಬಿಕೆ ಇಟ್ಟು ಪಕ್ಷ ಸಂಘಟಿಸಿ ರಾಜಕೀಯದಲ್ಲಿ ಮುಂದುವರೆಯಬೇಕಿದೆ. ಇಲ್ಲದೇ ಹೋದ್ರೆ ಬುದ್ದಿವಂತನ ಪಟ್ಟ ಕಳಚಿ ಜನರ ಮುಂದೆ ಹಾಸ್ಯದ ಸರಕಾಗಬೇಕಾಗುತ್ತೆ// ಹೀಗಂತ ಖುದ್ದು ಉಪೇಂದ್ರರ ಅಭಿಮಾನಿಗಳೇ ಮಾತನಾಡಿಕೊಳ್ತಿರೋದು ಸುಳ್ಳಲ್ಲ.

 

LEAVE A REPLY

Please enter your comment!
Please enter your name here