Home Cinema ಉಪ್ಪಿ ‘ಪ್ರಜಾಕೀಯ’ಕ್ಕೆ ಜೈ ಅನ್ನುತ್ತಾರಾ ಕರುನಾಡ ಜನ..? ರಿಯಲ್ ಸ್ಟಾರ್ ಪ್ರಜಾಕೀಯಕ್ಕಾಗಿ ತಮ್ಮ ಬ್ರೈನ್‌ಗೆ ಸ್ಪೆಷಲ್...

ಉಪ್ಪಿ ‘ಪ್ರಜಾಕೀಯ’ಕ್ಕೆ ಜೈ ಅನ್ನುತ್ತಾರಾ ಕರುನಾಡ ಜನ..? ರಿಯಲ್ ಸ್ಟಾರ್ ಪ್ರಜಾಕೀಯಕ್ಕಾಗಿ ತಮ್ಮ ಬ್ರೈನ್‌ಗೆ ಸ್ಪೆಷಲ್ ವರ್ಕ್

827
0
SHARE

ಲೋಕಸಭಾ ಚುನಾವಣೆಗೆ ಈಗಾಗಲ್ಲೇ ೨೮ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಫೈನಲ್ ಮಾಡಿರುವ ಈ ಬುದ್ದಿವಂತ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಪ್ರಜಾಕೀಯದ ಮೂಲಕ ಪ್ರಚಾರಕ್ಕೆ ಜೈಕಾರ ಹಾಕಿದ್ದಾರೆ.

ಅದೇ ರೀತಿ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕೀಯಕ್ಕಾಗಿ ತಮ್ಮ ಬ್ರೈನ್‌ಗೆ ಸ್ಪೆಷಲ್ ವರ್ಕ್ ಕೊಟ್ಟಿದಾರೆ.ಪ್ರಜಾಕೀಯ ಪಕ್ಷದ ಬೆಳವಣೆಗೆಯ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗು ಉಪೇಂದ್ರ ತೀರ್ಮಾನಿಸಿದ್ದು. ಹಾಗೂ ಮಂಡ್ಯದಿಂದ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ಕೊಡ್ತಿರಾ ಎಂಬ ಪ್ರಶ್ನೆಗೆ ಬುದ್ದಿವಂತ ಬುದ್ದಿವಂತೆಕೆಯಿಂದ್ಲೇ ಮಾತನಾಡಿದ್ದಾರೆ.

ನಾನು ರಾಜಕೀಯ ಮಾಡಲು ಬಂದಿಲ್ಲ. ನಾನು ಪ್ರಜಾಕೀಯ ಮಾಡ್ತಿದ್ದೀನಿ. ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರಬೇಕು. ಯಾರೋ ಜನಪ್ರಿಯರನ್ನು ನೋಡಿ ಜನರು ಹೆಚ್ಚು ಮತ ಯಾಕ್ತಾರೆಂದು ನಮ್ಮ ಪಕ್ಷದ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೂ ಉಪೇಂದ್ರ ಈಗಾಗಲ್ಲೇ ೨೮ ಕ್ಷೇತ್ರಗಳಿಗೂ ಅಭ್ಯರ್ಥಿಗಳಿಗೆ ಬರವಣಿಗೆ ಮತ್ತು ಡಾಕ್ಯೂಮೆಂಟ್‌ಗಳನ್ನು ಪರಿಶೀಲಿಸಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು. ಸದ್ಯದಲ್ಲೇ ಅಭ್ಯರ್ಥಿಗಳ ಹೆಸರನ್ನು ಅನೌನ್ಸ್ ಮಾಡುವುದಾಗಿ ಹೇಳಿಕೊಂಡಿದಾರೆ. ಅಲ್ಲದೆ ರಾಜ್ಯದ ೨೮ ಕ್ಷೇತ್ರಗಳಲ್ಲೂ ಪ್ರಜಾಕೀಯದ ಅಭ್ಯರ್ಥಿಗಳ ಪರವಾಗಿ ಪ್ರಚಾರಮಾಡುವುದಾಗಿ ರಿಯಲ್ ಸ್ಟಾರ್ ಹೇಳಕೊಂಡಿದ್ದಾರೆ.

ಒಟ್ಟಾರೆ ಬುದ್ದಿವಂತನ ಬುದ್ದಿವಂತಿಕೆಗೆ ಜನ ಮರುಳಾಗಿ ಅದು ಮತವಾಗಿ ಬದಲಾಗುತಾ ಅಥವಾ ಕೇವಲ ಸಿನಿಮಾಕ್ಕೆ ಮಾತ್ರ ಅಭಿಮಾನಿಗಳು ಸೀಮಿತ ಮಾಡಿಬಿಡ್ತಾರಾ ಅನ್ನುವುದನ್ನು ಕಾದು ನೋಡುವಂತೆ ವಂತೆ ಮಾಡಿದೆ. ಅಲ್ಲದೆ, ಸುಮಲತಾ ಬೆಂಬಲಕ್ಕೆ ದರ್ಶನ್ ನಿಂತಿರೋದು ಮಂಡ್ಯಾ ಚುನಾವಣ ಕಣ ಇನ್ನಷ್ಟು ರಂಗೇರಿಸಿದ್ದು, ಸುಮಲತಾ ಬೆಂಬಲಿಗರಿಗೆ ಆನೆ ಬಲ ಬಂದಾಗಿರೋದು ಸುಳಲ್ಲ..

LEAVE A REPLY

Please enter your comment!
Please enter your name here