Home District ಉಮೇಶ್ ಜಾಧವ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ..! ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ ಕೈ ನಾಯಕರು..!

ಉಮೇಶ್ ಜಾಧವ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ..! ಜಾಧವ್ ವಿರುದ್ಧ ವಾಗ್ದಾಳಿ ನಡೆಸಿದ ಕೈ ನಾಯಕರು..!

455
0
SHARE

ಕೈ ಪಕ್ಷಕ್ಕೆ ಸವಾಲಾಗಿರುವ ಕಲಬುರಗಿ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.. ಜಾಧವ್ ವರ್ಸಸ್ ಖರ್ಗೆ ಎಂದೇ ಬ್ರಾಂಡ್ ಆಗಿರುವ ಈ ಕಣದಲ್ಲಿ ಖುದ್ದು ಉಸ್ತುವಾರಿ ಸಚಿವರೇ ಶಕ್ತಿ ಪ್ರದರ್ಶನ ಮಾಡಿದ್ರು.

ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಲು ಪಣ ತೋಟಿರುವ ಜಾಧವ್‌ಗೆ ಕಾಂಗ್ರೆಸ್ ಶಕ್ತಿ ಎನೆಂಬುದನ್ನು ತೋರಿಸಲು ಶಕ್ತಿ ಪ್ರದರ್ಶನ ಮಾಡಲಾಗಿತ್ತು.ಬೆಂಗಳೂರಲ್ಲಿ ಉಮೇಶ್ ಜಾಧವ್ ಬಿಎಸ್ ವೈ ಮನೆಯಲ್ಲಿ ಗೆಲುವಿನ ತಂತ್ರ ಹೆಣೆಯುತ್ತಿದ್ರೆ. ಕಲಬುರಗಿಯಲ್ಲಿ ಕೈ ಪಡೆ ಪ್ರತಿ ತಂತ್ರ ರೂಪಿಸುತ್ತಿದೆ. ಜಾಧವ್ ತವರೂರು ಚಿಂಚೋಳಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ ನಡೆಸಿದೆ.

ಸಮಾವೇಶದಲ್ಲಿ ಮಾತನಾಡಿದ ಬಸವಕಲ್ಯಾಣ ಶಾಸಕ ನಾರಾಯಣರಾವ್ ಜಾಧವ್ ವಿರುದ್ಧ ಕಿಡಿಕಾರಿದ್ರು. ಎರಡೇ ತಿಂಗಳ ನಂತ್ರ ಜಾಧವ್ ಮನೆಗೆ ಹೋಗ್ತಾನೆ ಮತ್ತೆ ವಾಪಾಸ್ ಬಂದ್ರೆ ಪಕ್ಷಕ್ಕೆ ಕರ್ಕೋಬೇಡಿ ಅಂದ್ರು.ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಮಾತಾಡಿ ಜಾಧವ್ ವಿರುದ್ಧ ಹರಿಹಾಯ್ದರು.

ಪಕ್ಷ ಬಿಟ್ಟು ಹೋಗುವಾಗ ಯಾರನ್ನಾದ್ರೂ ಜಾಧವ್ ಕೇಳಿದ್ರಾ. ಕಾರ್ಯಕರ್ತರ ಸಲಹೆ ಪಡೆದ್ರಾ ಇಲ್ಲ. ಕೇವಲ ಅಮಿತ್ ಶಾ ಮಾತುಕೇಳಿ ಜಾಧವ್ ಕಾಂಗ್ರೆಸ್ ಬಿಟ್ಟು ಹೋದ್ರು.ಇಂತಹವರಿಗೆ ಲೋಕಸಭೆ ಮತ್ತು ಮುಂಬರುವಂಥ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಅಂತ ಹೇಳಿದ್ರು.ಇನ್ನು ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ.

ಆಪರೇಷನ್ ಕಮಲ ನಾವ್ ಮಾಡ್ತಿಲ್ಲ ಅಂತ ಹೇಳಿ ಉಮೇಶ್ ಜಾಧವ್ ಏನು ಮಾಡಿದ್ರು ಎಂದು ವಾಗ್ದಾಳಿ ನಡೆಸಿದ್ರು. ಬಿಜೆಪಿಯವರು ಯಾವಾಗ್ಲೂ ನಮೋ ನಮೋ ಅಂತಾರೆ ಅಂದ್ರೆ ನರೇಂದ್ರ ಮೋದಿ ಅಲ್ಲ.

ಅದು ನಮಗೆ ಮಾಡ್ತೀರೋ ಮೋಸ ಅಂತ ತಿಳ್ಕೊಳಿ ಎಂದರು..ಇನ್ನು ಮೋದಿ, ಅಮಿತ್ ಷಾ ಇಬ್ರೂ ಚೋರ್, ಗುರು ಚಂಡಾಲ ಶಿಷ್ಯ ಅಂತ ಹರಿಹಾಯ್ದರು.ಒಟ್ಟಾರೆ ಮತ ಸೆಳೆಯಲು ಹೈರಾಣಾಗುತ್ತಿರುವ ಕೈ ಪಡೆ ಇದೀಗ ದೋಸ್ತಿ ಸರ್ಕಾರದ ಅಭಿವೃದ್ದಿ ಮಂತ್ರಕ್ಕಿಂತ ಮೋದಿ ಸರ್ಕಾರಕ್ಕೆ ಟೀಕಿಸಲು ವೇದಿಕೆ ಮೀಸಲಿಟ್ಟ ಹಾಗಿತ್ತು..

LEAVE A REPLY

Please enter your comment!
Please enter your name here