Home KARNATAKA ಎಣ್ಣೆ ಹೊಡೆಯಂಗಿಲ್ಲ, ಚಿನ್ನ ಮುಟ್ಟಂಗಿಲ್ಲಾ, ಪೆಟ್ರೋಲ್ ಗಾಡಿ ನೋಡಂಗಿಲ್ಲ, ಅಮ್ಮಮ್ಮ ದುಬಾರಿ ದುನಿಯಾ.- ಇದು ನಿರ್ಮಲಕ್ಕ...

ಎಣ್ಣೆ ಹೊಡೆಯಂಗಿಲ್ಲ, ಚಿನ್ನ ಮುಟ್ಟಂಗಿಲ್ಲಾ, ಪೆಟ್ರೋಲ್ ಗಾಡಿ ನೋಡಂಗಿಲ್ಲ, ಅಮ್ಮಮ್ಮ ದುಬಾರಿ ದುನಿಯಾ.- ಇದು ನಿರ್ಮಲಕ್ಕ ನ ದುಬಾರಿ ಬಜೆಟ್

1662
0
SHARE

ಕರೋನಾ ಹೊಡೆತದ ನಡುವೆ ಈ ಬಾರಿಯ ಕೇಂದ್ರ ಬಜೆಟ್ ಇಡೀ ರಾಷ್ಟ್ರದ ಜನ ಆಸೆಗಣ್ಣಿನಿಂದ ನೋಡುತ್ತಾ ನಿಂತವರಿಗೆ ಚಿನ್ನ ಮುಟ್ಟಂಗಿಲ್ಲಾ ಪೆಟ್ರೋಲ್ ಗಾಡಿ ನೋಡಂಗಿಲ್ಲ ಎಣ್ಣೆ ಹೊಡೆಯೋದಿಲ್ಲ ದುಬಾರಿ ನಿರ್ಮಲ ಎಂಬ ಪರಿಸ್ಥಿತಿ ಇವತ್ತು ದೇಶದಲ್ಲಿ ಕಾಣಸಿಗುತ್ತದೆ. ಇಂದು ನಿರ್ಮಲ ಸೀತಾರಾಮನ್ ಮಂಡಿಸಿದ ಮೂರನೇ ಕೇಂದ್ರ ಬಜೆಟ್ ಕೃಷಿ ಕ್ಷೇತ್ರದ ಅಭಿವೃದ್ಧಿಯ ಹೆಸರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಸರಿನಲ್ಲಿ ಕೇಂದ್ರ ಸರ್ಕಾರ ಬೇಳೆ, ಚೆನ್ನಾ ಬೇಳೆ, ಪೆಟ್ರೋಲ್, ಚಿನ್ನ, ಸೇಬಿನ ಮೇಲೆ, ಕಲ್ಲಿದ್ದಲು, ಸನ್ ಫ್ಲವರ್ ಆಯಿಲ್ ಹೀಗೆ ಬಡ ಹಾಗೂ ಮಧ್ಯಮ ವರ್ಗದ ಜನರು ಉಪಯೋಗಿಸುವ ಅಗತ್ಯ ವಸ್ತುಗಳ ಮೇಲೆ ಕೃಷಿ tax ವಿಧಿಸಿದೆ ಕೇಂದ್ರ ಸರ್ಕಾರ.

ಇಂಧನ ಮೇಲಿನ ಕೃಷಿ tax ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 2.4 ರೂ ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರಿಗೆ ನಾಲ್ಕು ರೂಪಾಯಿ ಕೃಷಿ ಟ್ಯಾಕ್ಸ್ ವಿಧಿಸಿರುವುದರಿಂದ ಇಂಧನ ಬೆಲೆ ದುಬಾರಿಯಾಗಲು ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ ಎಂದು ರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಇದೇ ರೀತಿಯಾಗಿ ಚಿನ್ನದ ಮೇಲು ಕೃಷಿ tax ಹೆಚ್ಚಿಗೆ ಮಾಡಿರುವುದರಿಂದ ಚಿನ್ನಾಭರಣಗಳನ್ನು ಕೊಳ್ಳುವುದು ಇನ್ನು ಮುಂದೆ ದುಬಾರಿಯಾಗಲಿದೆ ಮಹಿಳೆಯರಂತೂ ಚಿನ್ನ ದುಬಾರಿಯಾಗಿರುವುದರಿಂದ ಇನ್ನಷ್ಟು ಬೆಲೆ ಏರಿಕೆಯಿಂದಾಗಿ ಮಹಿಳೆಯರು ಚಿನ್ನ ಕೊಳ್ಳುವುದು ಕಷ್ಟವಾಗಲಿದೆ.

ಮಧ್ಯದ ಮೇಲೆ 100 ಪರ್ಸೆಂಟ್ ಕೃಷಿ ಟ್ಯಾಕ್ಸ್ ವಿಧಿಸಿರುವುದರಿಂದ ಎಣ್ಣೆ ಪ್ರಿಯರಿಗೆ ಇದೊಂದು ಬಿಗ್ shock ಎಂದರೆ ತಪ್ಪಾಗಲಾರದು. ಈಗಾಗಲೇ ರಾಜ್ಯಗಳು ಇಲ್ಲದೆ ಇರುವ ಹಲವು ಟ್ಯಾಕ್ಸ್ ಗಳನ್ನು ವಿಧಿಸಿ ಎಣ್ಣೆ ಪ್ರಿಯರಿಗೆ ನೀಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೃಷಿ ಪ್ರಸನ್ನ ಮಧ್ಯದ ಮೇಲೆ 100 ಪರ್ಸೆಂಟ್ ವಿಧಿಸಿರುವುದು ಮದ್ಯಪ್ರಿಯರಿಗೆ ಇದು ತಡೆಯಲಾಗದ ಬಾರ.

ಆಪಲ್ ತಿನ್ನಂಗಿಲ್ಲ ಚೆನ್ನ ಮುಟ್ಟಂಗಿಲ್ಲಾ : ತಿನ್ನುವ ಸೇಬಿನ ಮೇಲೂ ಕೂಡ ಕೃಷಿ ಟ್ಯಾಕ್ಸ್ ವಿಧಿಸಿರುವುದು ಹಣಕಾಸು ಸಚಿವರು ಸೇಬನ್ನು ತಿನ್ನುವುದು ಕೇವಲ ಶ್ರೀಮಂತರು ಎಂಬಂತೆ ಭಾವಿಸಿದಂತಿದೆ. ಚನ್ನ ಬಟಾಣಿ ಮೇಲೂ ಕೂಡ ಕೃಷಿ ಟ್ಯಾಕ್ಸ್ ವಿಧಿಸಿರುವುದು ಪಾನಿಪುರಿ ಪ್ರಿಯರಿಗೆ ಇದು ನುಂಗಲಾರದ ತುತ್ತು.

LEAVE A REPLY

Please enter your comment!
Please enter your name here