ಎರಡನೇ ಏಕದಿನ ಪಂದ್ಯಕ್ಕೂ ಇರಲ್ಲ ಕೆಎಲ್​ ರಾಹುಲ್​; ಯಾಕೆ ಗೊತ್ತಾ?

ಕ್ರೀಡೆ ಜಿಲ್ಲೆ ಫೋಟೋ ಗ್ಯಾಲರಿ ಬೆಂಗಳೂರು ರಾಜಕೀಯ ರಾಷ್ಟ್ರೀಯ

ವೆಸ್ಟ್​ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ ಈಗ ಎರಡನೇ ಪಂದ್ಯಕ್ಕೆ ಸಿದ್ದವಾಗಿದೆ. ಸಹೋದರಿಯ ವಿವಾಹದ ನಿಮಿತ್ತ ಮೊದಲ ಪಂದ್ಯದಲ್ಲಿ ರಾಹುಲ್ ಪಂದ್ಯದಿಂದ ಹೊರಗುಳಿದಿದ್ದರು. ಆದರೀಗ ರಾಹುಲ್ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಕೆಎಲ್ ರಾಹುಲ್ ಇದೀಗ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಳ್ಳಬೇಕಿದ್ದರೆ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಶ್ರೇಯಸ್ ಅಯ್ಯರ್ ಸೇರಿದಂತೆ ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಿದೆ. ಅದರಂತೆ ರಾಹುಲ್ ಇದೀಗ ತಂಡಕ್ಕೆ ಮರಳಬೇಕಾದರೆ ಕ್ವಾರಂಟೈನ್​ ಮುಗಿಸಬೇಕು. ಇದಾದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಬಹುದು.

Leave a Reply

Your email address will not be published.