Home Crime ಎರಡನೇ ಹೆಂಡತಿ ಜೊತೆ ಮಲಗಿದ್ದಾಗ ಮೊದಲನೇ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿ!...

ಎರಡನೇ ಹೆಂಡತಿ ಜೊತೆ ಮಲಗಿದ್ದಾಗ ಮೊದಲನೇ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ಪತಿ! video ವೈರಲ್

4945
0
SHARE

ಮೊದಲನೇ ಪತ್ನಿ ಇರುವಾಗಲೇ ಎರಡನೇ ಮದುವೆಯಾಗಿ ಕದ್ದು ಮುಚ್ಚಿ ಸಂಸಾರ ಮಾಡ್ತಿದ್ದ ಪತಿ ರೆಡ್ ಹ್ಯಾಂಡ್ ಆಗಿ ಮೊದಲ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ವಿದ್ಯಾರಣ್ಯಪುರದ ಸಿಂಗಾಪೂರಾ ಲೇಔಟ್‌ನಲ್ಲಿ ನಡೆದ ಘಟನೆ ಇದಾಗಿದೆ.

ರೆಡ್ ಹ್ಯಾಂಡ್ ಗೆ ಸಿಕ್ಕಿ ಬಿದ್ದ ಗಂಡ ರಘುನಂದನ್‌ಗೆ ಮೊದಲ ಹೆಂಡತಿ ಭವ್ಯಾಶ್ರೀ ಹಾಗೂ ಸಂಬಂಧಿಕರು ಮನೆಯಿಂದ ಆಚೆ ಎಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎರಡನೇ ಹೆಂಡತಿ ಅಶ್ವಿನಿ ಜೊತೆ ಇದ್ದಾಗ ರೆಡ್ ಹ್ಯಾಂಡ್ ಆಗಿ ಗಂಡ ರಘುನಂದನ್ ಸಿಕ್ಕಿಬಿದ್ದಿದ್ದಾನೆ.ಕೆಲ ವರ್ಷಗಳ ಹಿಂದೆ ಭವ್ಯಶ್ರೀ ಹಾಗೂ ರಾಘುನಂದನ್ ಪ್ರೀತಿಸುತ್ತಿದ್ದರು. ಆದರೆ, ಇಬ್ಬರದ್ದು ಜಾತಿ ಬೇರೆ ಎನ್ನುವ ಕಾರಣಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು.

ಈ ವೇಳೆ ರಘುನಂದನ್ ಮದುವೆಯಾಗದೆ ಸತಾಯಿಸಿದ್ದ. ಮದುವೆಗೆ ಮುನ್ನ ದೈಹಿಕ ಸಂಪರ್ಕ ಬೆಳೆಸಿ, ನಂತರ ರಘು ನಂದನ್​ ಓಡಿ ಹೋಗಿದ್ದ. ಹೀಗಾಗಿ ಭವ್ಯಶ್ರೀ ಆತ್ಯಾಚಾರ ಕೇಸ್ ದಾಖಲಿಸಿದ್ದಳು. ಕೋರ್ಟ್ ಆದೇಶದ ನಂತರ ಭವಶ್ರೀಯನ್ನು ರಘುನಂದನ್​ ವರಿಸಿದ್ದ.ಗೌಡ ಜನಾಂಗಕ್ಕೆ ಸೇರಿದ್ದ ಭವ್ಯ ಮರಾಠಿ ಜನಾಂಗಕ್ಕೆ ಸೇರಿದ್ದ ರಘುನಂದನ್ ಮದುವೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು.. ಮದುವೆಗೆ ಮುನ್ನ ಭವ್ಯ ಜೊತೆ ರಘುನಂದನ್ ದೈಹಿಕ ಸಂಪರ್ಕ ಬೆಳಸಿ, ಮದುವೆಯಾಗದೇ ಸಂತಾಯಿಸಿದ್ದ. ನಂತರ ಮದುವೆಯಾಗದೇ ಓಡಿ ಹೋಗಿದ್ದ,ಬಳಿಕ ಭವ್ಯಶ್ರೀ ಆತ್ಯಾಚಾರ ಕೇಸ್ ದಾಖಲಿಸಿದ್ರು .ಕೋರ್ಟ್‌ನ ಆದೇಶದಂತೆ ಮದುವೆಯಾಗಿದ್ದ ದಂಪತಿ ನಡುವೆ ಮತ್ತೆ ಜಗಳವಾಗಿತ್ತು. ಈ ಮಧ್ಯೆ ಸಂಬಂಧಿ ಅಶ್ವಿನಿ ಜೊತೆ ರಘುನಂದನ್ ಮದುವೆಯಾಗಿದ್ದನು.

ಕೆಲ ವರ್ಷಗಳ ಕಾಲ ಭವ್ಯಶ್ರೀ ಜೊತೆ ಸಂಸಾರ ನಡೆಸಿದ್ದ ರಘುನಂದನ್​, ಗುಟ್ಟಾಗಿ ಅಶ್ವಿನಿ ಹೆಸರಿನ ಯುವತಿಯನ್ನು ಮದುವೆಯಾಗಿದ್ದ. ಕದ್ದುಮುಚ್ಚಿ ಸಂಸಾರವನ್ನೂ ನಡೆಸುತ್ತಿದ್ದ. ಈ ಬಗ್ಗೆ ಭವ್ಯಶ್ರೀಗೆ ಗುಮಾನಿ ಆರಂಭವಾಗಿತ್ತು. ಅಂತೇಯೇ ಗಂಡನನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಳು.ಈ ವೇಳೆ ಎರಡನೇ ಪತ್ನಿ ಜೊತೆ ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದು ಗೂಸಾ ತಿಂದಿದ್ದಾನೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here