Home Elections 2018 ಎಲೆಕ್ಷನ್‌ಗೆ ಹಾಕಿದ ಟಾರ್ ಫಲಿತಾಂಶದ ಮೊದಲೇ ಡ್ಯಾಮೇಜ್..!!? ಮಳೆಗಾಲದ ಮೊದಲೇ ಕಿತ್ತುಹೋದ ರಸ್ತೆ, ಚರಂಡಿಗಳು…

ಎಲೆಕ್ಷನ್‌ಗೆ ಹಾಕಿದ ಟಾರ್ ಫಲಿತಾಂಶದ ಮೊದಲೇ ಡ್ಯಾಮೇಜ್..!!? ಮಳೆಗಾಲದ ಮೊದಲೇ ಕಿತ್ತುಹೋದ ರಸ್ತೆ, ಚರಂಡಿಗಳು…

91
0
SHARE

ಚುನಾವಣೆ ಹತ್ತಿರ ಬರ್ತಿದ್ದಂತೆ, ನಾವು ಅಭಿವೃದ್ಧಿ ಮಾಡಿದ್ದೇವೆ ಅಂತ ತೋರಿಸೋಕೆ ರಸ್ತೆಗೆ ಟಾರು, ನೀರು ಎಲ್ಲಾ ಜೋರಾಗೆ ಹಾಕಿದ್ದಾರೆ.. ಆದ್ರೆ, ಫಲಿತಾಂಶ ಬರೋ ಮೊದಲೇ ಕಳೆದ ಮೂರು ದಿನಗಳಿಂದ ಬಂದಿರೋ ಮಳೆಗೆ, ಇರೋ ಬರೋ ಟಾರೆಲ್ಲಾ ಕಿತ್ತು ಗುಂಡಿಗಳಾಗಿವೆ. ಎಲೆಕ್ಷನ್ ಬಂತಪ್ಪ, ಜನರ ಮನಸ್ಸು ಗೆಲ್ಲಬೇಕು ವೋಟ್ ಗಿಟ್ಟಿಸ್ಕೊಬೇಕು ಅಂತ ರಾಜಕಾರಣಿಗಳು ರಸ್ತೆಗಳಿಗೆ ಟಾರ್ ಹಾಕಿಸಿದ್ರು..

ಎಲೆಕ್ಷನ್ ಮುಗಿಯೋವರೆಗೂ ಮಾತ್ರ ಅವುಗಳ ಎಕ್ಸ್ ಪೆರಿ ಡೇಟ್ ಎಂಬಂತೆ ಸರಿಯಾಗಿ ಲೆಕ್ಕ ಹಾಕಿ ರಸ್ತೆಗಳನ್ನು ಮಾಡಿಸಿದ್ದಾರೆ. ಯಾಕಂದ್ರೆ, ಚುನಾವಣೆ ಇನ್ನು ನಿನ್ನ ತಾನೆ ಮುಗಿದಿದೆ ಆಗ್ಲೇ ರಸ್ತೆಗಳೆಲ್ಲಾ ಕಿತ್ತು ಕಿತ್ತೋಗಿರೋ ಹಳೆ ಕೆರದ ಹಾಗೆ ಆಗಿವೆ.ಇಲ್ನೋಡಿ ಒಂದ್ ಸರಿ ಇದನ್ನ ಯಾರಾದ್ರು ಹೊಸ ರಸ್ತೆ ಅಂತಾರಾ…

ಈ ರಸ್ತೆಗಳಿಗೆ ಡಾಂಬರ್ ಹಾಕಿ ಇನ ಒಂದ್ ತಿಂಗ್ಳೂ ಆಗಿಲ್ಲಾ ಆಗ್ಲೇ ಕಿತ್ತೋಗಿದೆ. ಬಿಡಪಾ ಮಳೆಗಾಲ ಸಿಕ್ಕಾಪಟ್ಟೆ ಮಳೆ ಬರ್ತಿದೆ ಅದ್ಕೆ ಕಿತ್ತೋಗಿದೆ ಅಂತ ಹೇಳೋಕೆ ಹೋದ್ರು ಆಗಲ್ಲ. ಯಾಕಂದ್ರೆ ಇನ್ನೂ ಮಳೆಗಾಲ ಸ್ಟಾರ್ಟ್ ಆಗಿಲ್ಲ, ಆಗಾಗ, ಅಲ್ಪಸ್ವಲ್ಪ ಮಳೆ ಬರುತ್ತೆ ಅಷ್ಟೇ. ಅದ್ಕೆ ರಸ್ತೆಗಳು ಹೀಗಾದ್ರೆ ಹೇಗೆ ಎಂದು ವಾಹನ ಸವಾರರು ಆಕ್ರೋಶಗೊಂಡಿದ್ದಾರೆ…

ಚುನಾವಣೆ ಬಂತಲ್ಲಾ ಎಂದು ಗಾಂಧಿನಗರ, ಸದಾಶಿವನಗರ ಸುತ್ತ-ಮುತ್ತ ಒಂದು ತಿಂಗಳ ಹಿಂದೆ ರಸ್ತೆಗಳಿಗೆ ಟಾರ್ ಗಳನ್ನ ಹಾಕಿದ್ರು.. ಆದ್ರೆ 1 ವಾರದಿಂದ ಬಿಟ್ಟು-ಬಿಟ್ಟು ಬರುತ್ತಿರುವ ಮಳೆಗೇ ಈ ರಸ್ತೆ ಕಿತ್ತು ಗುಂಡಿಗಳಾಗಿವೆ.. ಎಲೆಕ್ಷನ್ ಹತ್ತಿರ ಬಂದ ಕೂಡಲೇ ರಸ್ತೆಗಳಿಗೆ ಟಾರ್ ಹಾಕಲು ಟೆಂಡರ್ ಸ್ಯಾಂಕ್ಷನ್ ಮಾಡಿದ್ರು…

ಅದೆನೋ ಹೇಳ್ತಾರೆಲ್ಲಾ, ದೇವರು ಕೊಟ್ರು ಪೂಜಾರಿ ಕೊಡಲ್ಲ ಅನ್ನೊ ಹಾಗೆ ಸರ್ಕಾರದಿಂದ ಟೆಂಡರ್ ಸ್ಯಾಂಕ್ಷನ್ ಆದ್ರು, ಮದ್ಯವರ್ತಿಗಳು ಮಾತ್ರ ಹಣ ನುಂಗಿ ನೀರು ಕುಡಿದಿದ್ದಾರೆ.ಎಲೆಕ್ಷನ್ ಬಂತೆಂದು ರಸ್ತೆಗಳಿಗೆ ಹಾಕಿದ ಟಾರ್ ಇನ್ನ ರಿಸಲ್ಟ್ ಬರೊ ಮೊದಲೇ ಕಿತ್ತು ಹೋಗಿವೆ.. ಸೊ ಈ ಚುನಾವಣೆಯಲ್ಲಿ ಜನರು ಹೊಸ ಸರ್ಕಾರ ತರ್ತಾರಾ.. ಅಥವಾ ಹಳೆ ಸರ್ಕಾರವನ್ನೇ ಉಳಿಸಿಕೊಳ್ತಾರಾ ಎಂಬುದು ಕಾದು ನೋಡ್ಬೇಕಿದೆ…

LEAVE A REPLY

Please enter your comment!
Please enter your name here