Home District ಎಲೆಕ್ಷನ್ ಟೈಮಲ್ಲಿ ಪ್ರಯಾಣ ಮಾಡೋರಿಗೆ ಶಾಕಿಂಗ್ ನ್ಯೂಸ್..!!! ಆಗಲೇ ಶುರುವಾಗಿದೆ ಮುಂಗಡ ಟಿಕೆಟ್ ಬುಕ್ಕಿಂಗ್…

ಎಲೆಕ್ಷನ್ ಟೈಮಲ್ಲಿ ಪ್ರಯಾಣ ಮಾಡೋರಿಗೆ ಶಾಕಿಂಗ್ ನ್ಯೂಸ್..!!! ಆಗಲೇ ಶುರುವಾಗಿದೆ ಮುಂಗಡ ಟಿಕೆಟ್ ಬುಕ್ಕಿಂಗ್…

691
0
SHARE

ಎಲೆಕ್ಷನ್ ದಿನ ಊರಿನತ್ತ ಪ್ರಯಾಣ ಬೆಳೆಸೋ ಪ್ರಯಾಣಿಕರೇ ಹುಷಾರ್…ಯಾಕಂದ್ರೆ ಈಗಾಗಲೇ ಬಸ್ ಟಿಕೆಟ್ ಮುಂಗಡ ಬುಕ್ಕಿಂಗ್ ನಡೆಯುತ್ತಿದೆ.. ಅಷ್ಟೆಅಲ್ಲ ಬಸ್ ಪ್ರಯಾಣ ದರ ಕೂಡ ಶೇಕಡಾ ಇಪ್ಪತ್ತರಷ್ಟು ಏರಿಕೆಯಾಗಿದೆ.. ಜೊತೆಗೆ ಎಲೆಕ್ಷನ್ ದಿನ ಪ್ರೈವೇಟ್, ಕೆಎಸ್ ಆರ್ಟಿಸಿ ಬಸ್ ಗಳು ಸಿಗೋದೆ ಡೌಟಾಗಿದೆ…
ಎಸ್ KSRTC ಮತ್ತು ಪ್ರೈವೇಟ್ ಬಸ್ ಗಳಲ್ಲಿ ಒಂದು ತಿಂಗಳು ಮುಂಗಡ ಟಿಕೆಟ್ ಪಡೆಯಲು ಅವಕಾಶವಿದ್ದು, ಅಂತರ್ಜಾಲದಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳಲು ಮುಂದಾಗಿರುವವರಿಗೆ ಕಳೆದೆರಡು ದಿನಗಳಿಂದ ಶಾಕ್ ಎದುರಾಗಿದೆ…

ಆಗಲೇ ಮತದಾನದ ಮುಂಚಿನ ಒಂದೆರಡು ದಿನ ಬೆಂಗಳೂರಿನಿಂದ ತೆರಳುವ ಮತ್ತು ನಂತರ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ವಾಪಸ್ಸಾಗುವ ಟಿಕೆಟ್ ಗಳು ಅದಾಗಲೇ ಬಹುತೇಕ ಖಾಲಿಯಾಗಿದೆ… ಜೊತೆಗೆ ಚುನಾವಣೆ ದಿನ ವೀಕೆಂಡ್ ಬೇರೆ ಅಲ್ಲದೆ ಶಾಲಾ, ಕಾಲೇಜು ಮಕ್ಕಳಿಗೆ ರಜೆಯಿರೋದ್ರಿಂದಾಗಿ ಬಹುತೇಕ ಬಸ್ ಗಳು ಬುಕ್ಕಾಗಿದೆ…

ಆದ್ದರಿಂದ ಎಕ್ಸಟ್ರಾ ಬಸ್ ಗಳನ್ನು ಹಾಕುವ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತಿದ್ದು, ಈಗಾಗಲೇ ಶೇಕಡಾ ಇಪ್ಪತ್ತರಷ್ಟು ದರ ಏರಿಕೆಯಾಗಿದೆ…

ಇನ್ನು ಬೇರೆ ಊರಿನ ಅಭ್ಯರ್ಥಿಗಳು ಬೆಂಗಳೂರಿನಲ್ಲಿರುವ ತಮ್ಮ ಮತದಾರರನ್ನು ಕರೆಯಿಸಿಕೊಳ್ಳಲು ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಕೂಡ ಮಾಡಿಸುತ್ತಿದ್ದಾರೆ.. ಅಲ್ಲದೆ ಉದ್ಯೋಗ ಹರಸಿ ರಾಜ್ಯದ ಹಾಗೂ ದೇಶದ ನಾನಾ ಭಾಗದಿಂದ ಸಾವಿರಾರು ಯುವಕ ಯುವತಿಯರು ಬೆಂಗಳೂರಿಗೆ ಬರ್ತಾರೆ… ಹೀಗಾಗಿ ಮೊದಲ ಬಾರಿ ಮತದಾನದ ಅವಕಾಶ ಹೊಂದಿದವರು ತಮ್ಮ ಸ್ವಂತ ಊರಿಗೆ ಹೋಗಿ ಮತದಾನ ಮಾಡಿ ಬರ್ತಾರೆ.. ಈ ನಿಟ್ಟಿನಲ್ಲಿ ಖಾಸಗಿ ಬಸ್ ಗಳಿಗೆ ಬಹಳಷ್ಟು ಬೇಡಿಕೆಯಿದ್ದು ಈಗಾಗಲೇ ಬಸ್ ಟಿಕೆಟ್ ಬುಕ್ಕಿಂಗ್ ಗೆ ಹೋಗುತ್ತಿರೋರು ಬರೀ ಕೈಯಲ್ಲಿ ವಾಪಸ್ಸಾಗುತ್ತಿದ್ದಾರೆ…

ಒಟ್ಟಿನಲ್ಲಿ ಒಂದೆಡೆ ರಜೆಯ ಮಜಾ, ಮತ್ತೊಂದೆಡೆ ವೀಕೆಂಡ್, ಎಲೆಕ್ಷನ್ ಹೀಗಾಗಿ ಜನರಂತೂ ತಮ್ಮ ಸ್ವಂತ ಊರಿಗೆ ಹೋಗೋ ಖುಷಿಯಲ್ಲಿ ಎಲೆಕ್ಷನ್ ಗೆ ಮುಂಚಿನ ದಿನ ಟಿಕೆಟ್ ಖರೀದಿಗೆ ಹೋದ್ರೆ ನಿರಾಸೆಯಿಂದ ವಾಪಸ್ಸಾಗಬೇಕಾಗುತ್ತೆ…

ಆದ್ರೆ ಟ್ರಾವೆಲ್ಸ್ ಮತ್ತು ಸರ್ಕಾರಕ್ಕೆ ಮಾತ್ರ ಭರ್ಜರಿ ಕಲೆಕ್ಷನ್ ಆಗುತ್ತೆ..ಜೊತೆಗೆ ಎಕ್ಸಟ್ರಾ ಬಸ್ ಹಾಕೋ ಪ್ಲ್ಯಾನ್ ಕೂಡ ಮಾಡಿಕೊಂಡಿದೆ ಸಾರಿಗೆ ಇಲಾಖೆ…ಸೋ ಎಲೆಕ್ಷನ್ ದಿನಕ್ಕಾಗಿ ಕಾಯಬೇಡಿ..ಈಗ್ಲೆ ಟಿಕೆಟ್ ಬುಕ್ ಮಾಡಿ ಊರಿಗ್ ಹೋಗಿ…

LEAVE A REPLY

Please enter your comment!
Please enter your name here