Home District ಎಲೆಕ್ಷನ್ ಮುಗೀತು… ಟೆನ್ಷನ್ ಕಡಿಮೆಯಾಯ್ತು..! ರಿಲ್ಯಾಕ್ಸ್ ಮೂಡಿಗೆ ಜಾರಿದ ನಮ್ಮ ರಾಜಕಾರಣಿಗಳು ಏನ್ ಮಾಡ್ತಿದ್ದಾರೆ ಗೊತ್ತಾ..!??

ಎಲೆಕ್ಷನ್ ಮುಗೀತು… ಟೆನ್ಷನ್ ಕಡಿಮೆಯಾಯ್ತು..! ರಿಲ್ಯಾಕ್ಸ್ ಮೂಡಿಗೆ ಜಾರಿದ ನಮ್ಮ ರಾಜಕಾರಣಿಗಳು ಏನ್ ಮಾಡ್ತಿದ್ದಾರೆ ಗೊತ್ತಾ..!??

2243
0
SHARE

ಅಬ್ಬಾ ಎಲೆಕ್ಷನ್ ಮುಗೀತು, ಈಗೇನಿದ್ರೂ ರಿಲ್ಯಾಕ್ಸೇಷನ್ ಅಷ್ಟೇ… ನಿನ್ನೆ ತನಕ ಚುನಾವಣೆ ಅಂತ ತಲೆಕೆಡಿಸಿಕೊಂಡಿದ್ದವರೆಲ್ಲ ಇಂದು, ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿ-ಕಿರಿಯ ರಾಜಕಾರಣಿಗಳು ವಿಶ್ರಾಂತಿ ಮೊರೆ ಹೋಗಿದ್ದಾರೆ. ಹಾಗಿದ್ರೆ ಯಾರು, ಹೇಗೆಲ್ಲಾ ವಿಶ್ರಾಂತಿ ಪಡೀತಿದ್ದಾರೆ ಅನ್ನೋದನ್ನು ನೀವು ಒಮ್ಮೆ ನೋಡ್ಕೊಂಡು ಕಣ್ಣು ತಂಪ್ ಮಾಡ್ಕೊಳ್ಳಿ…

ಎಲೆಕ್ಷನ್… ಎಲೆಕ್ಷನ್… ಎಲೆಕ್ಷನ್… ಇಷ್ಟುದಿನ ಕರ್ನಾಟಕದ ಜನರ, ಅದರಲ್ಲೂ ನಮ್ಮ ರಾಜಕಾರಣಿಗಳ ನಿದ್ದೆ ಕಸಿದಿದ್ದ ಎಲೆಕ್ಷನ್ ನಿನ್ನೆ ಮುಗಿದು ಹೋಗಿದೆ. ಇಷ್ಟು ದಿನ ಚುನಾವಣೆ ಬೇಗೆಯಲ್ಲಿ ಬೆಂದೆದ್ದ ರಾಜಕಾರಣಿಗಳು, ಈಗ ಎಲ್ಲ ಮರೆತು ಕೂಲ್ ಕೂಲ್ ಆಗಿದ್ದಾರೆ. ನಾಡಿದ್ದು ಹೇಗಿದ್ರು ಟೆನ್ಷನ್ ಇದ್ದದ್ದೇ. ಅದಕ್ಕೆ ಇಂದಾದ್ರು ರಿಲ್ಯಾಕ್ಸ್ ಆಗೋಣ ಅಂತ ನಮ್ಗೂ, ರಾಜಕೀಯಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಇದ್ದಾರೆ…

ಸಿಎಂ ಸಿದ್ದರಾಮಯ್ಯ ಇಂದು ಫುಲ್ ನಿದ್ದೆ ಮಾಡ್ತಾರಂತೆ. ನಾನು ಸಿನಿಮಾ-ಗಿನಿಮಾ ನೋಡೊಲ್ಲಪ್ಪ, ಇಂದು ಮನೆಗೆ ಹೋಗಿ ಫುಲ್ ನಿದ್ದೆ ಮಾಡ್ತೀನಿ ಅಂತಾರೆ ನಾಡದೊರೆ.ಬದಾಮಿಯಲ್ಲಿ ಸಿದ್ದರಾಮಯ್ಯರ ಪ್ರತಿಸ್ಪರ್ಧಿಯಾದ ಶ್ರೀರಾಮುಲು ಬಳ್ಳಾರಿಯ ನಿವಾಸದಲ್ಲಿ ಎಂದಿನಂತೆ ಇಂದೂ ಸಹ ಪೂಜೆಯಲ್ಲಿ ತೊಡಗಿದ್ರು. ಅಲ್ಲದೇ ಮನೆಯ ಆಳುಗಳ ಮಕ್ಕಳಿಗೆ ತಾವೇ ಕೈಯಾರೆ ಉಪಹಾರ ಬಡಿಸಿ, ತಾವು ತಿಂದು ಖುಷಿಪಟ್ರು…

ಸದಾ ಬ್ಯುಸಿಯಾಗಿರೋ ನಮ್ಮ ಹೋಂ ಮಿನಿಸ್ಟರ್ ರಾಮಲಿಂಗಾರೆಡ್ಡಿ ಸಾಹೇಬ್ರು, ಇಂದು ಫುಲ್ ಫ್ರೀ ಮಾಡ್ಕೊಂಡು ತಮ್ಮ ಕ್ಷೇತ್ರದಲ್ಲಿ ಇರೋ-ಬರೋರ ಮದ್ವೆಗೆಲ್ಲ ಹೋಗಿ ಬಂದ್ರು. ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ತಮ್ಮ ವಿವಾಹದ 50ನೇ ವಾರ್ಷಿಕೋತ್ಸವದಲ್ಲಿ ಬ್ಯುಸಿಯಾದ್ರು.
ಸಚಿವೆ ಗೀತಾಮಹದೇವಪ್ರಸಾದ್ ಬಂಡೀಪುರದ ರೆಸಾರ್ಟ್‌ಗೆ ತೆರಳಿ ವಿಶ್ರಾಂತಿ ಪಡೆದು, ನಂತರ ಊಟಿಯತ್ತ ತೆರಳಿದ್ರು. ಸಚಿವ ಎಂ.ಬಿ. ಪಾಟೀಲರಂತೂ ಇಂದು ಎಲ್ಲೂ ಹೋಗ್ಬಾರ್ದು ಅಂತ ತೀರ್ಮಾನ ಮಾಡಿ ಮನೆಯಲ್ಲೇ ಠಿಕಾಣಿ ಹೂಡಿದ್ರು…

ಅತ್ತ ಚಾಮುಂಡೇಶ್ವರಿಯಲ್ಲಿ ಸಿಎಂ ವಿರುದ್ಧ ಭರ್ಜರಿ ಪ್ರಚಾರ ನಡೆಸಿದ ಜಿ.ಟಿ.ದೇವೇಗೌಡ ತಮ್ಮ ಮಗನ ಜೊತೆ ಮನೆ ಮುಂದಿನ ಗಾರ್ಡನ್‌ನಲ್ಲಿ ಕುಳಿತು ಪೇಪರ್ ಓದಿದ್ರೆ, ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ತಮ್ಮ ನಿವಾಸದಲ್ಲೇ ಇದ್ದು ಜಗದೀಶ್ ಶೆಟ್ಟರ್ ಮನೆಯವ್ರೊಂದಿಗೆ ಕಾಲ ಕಳೆದ್ರು. ಅತ್ತ ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಹೆಂಡ್ತಿಯೊಂದಿಗೆ, ಕಾರ್ಯಕರ್ತರೊಂದಿಗೆ ಮಾತನಾಡ್ತಾ ಟೈಮ್ ಪಾಸ್ ಮಾಡಿದ್ರೆ…

ಇನ್ನು ಬಹುತೇಕರು ಇಂದು ವಿಶ್ರಾಂತಿ ಪಡೆಯುತ್ತಾ ಆರಾಂ ಆಗಿದ್ರೆ, ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಮಾತ್ರ ಇಂದೂ ಸಹ ಬ್ಯುಸಿಯಾಗಿದ್ರು. ಹೊಳಲ್ಕೆರೆ ಕ್ಷೇತ್ರದೆಲ್ಲೆಡೆ ಸುತ್ತಾಡುತ್ತ ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ತೊಡಗಿದ್ರು. ಇಂದೆನೋ ಎಲ್ಲರೂ ಕೂಲ್ ಆಗಿ, ಆರಾಂ ಆಗಿ ಇದ್ದಾರೆ. ಆದ್ರೆ ನಿಜವಾದ ಟೆನ್ಷನ್ ಇರೋದು ಮಂಗಳವಾರ. ಯಾರಿಗೆಲ್ಲ ಈ ಮಂಗಳವಾರ ಶುಭವಾಗಿರುತ್ತೆ, ಇನ್ಯಾರಿಗೆ ಅಶುಭವಾಗಿರತ್ತೆ ಅನ್ನೋದು ಸಧ್ಯದ ಕುತೂಹಲ…

LEAVE A REPLY

Please enter your comment!
Please enter your name here