Home District “ಎಲ್ಲರ ಬಳಿಯು ಕೋಟಿ ಕೋಟಿ ಹಣ ಇರುತ್ತೆ, ಆದ್ರೆ ಕೋಡೋಕ್ಕೆ ಮನಸ್ಸು ಇರಬೇಕು”-ಜಮೀರ್ ಅಹ್ಮದ್..”CM ಪರಿಹಾರ...

“ಎಲ್ಲರ ಬಳಿಯು ಕೋಟಿ ಕೋಟಿ ಹಣ ಇರುತ್ತೆ, ಆದ್ರೆ ಕೋಡೋಕ್ಕೆ ಮನಸ್ಸು ಇರಬೇಕು”-ಜಮೀರ್ ಅಹ್ಮದ್..”CM ಪರಿಹಾರ ನಿಧಿಗೆ BJP ಶಾಸಕರ 1 ತಿಂಗಳ ವೇತನ”-B.S.ಯಡಿಯೂರಪ್ಪ…

753
0
SHARE

ಕೊಡಗಿನ ವಿಚಾರದಲ್ಲಿ ನಿರ್ಲಕ್ಷ್ಯಧೋರಣೆ ತಳೆದಿದ್ದ ಜನಪ್ರತಿನಿಧಿಗಳು ಪ್ರಜಾ ಟಿವಿ ವರದಿ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ‘ದೊಡ್ಡವರ ಸಣ್ಣತನ’ ಎಂಬ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮಕ್ಕೆ ಕರೆ ಮಾಡಿದ ಜನಸಾಮಾನ್ಯರು, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಎಚ್ಚೆತ್ತ ಸಚಿವ ಜಮೀರ್ ಅಹ್ಮದ್ ಕೊಡಗಿಗೆ ತೆರಳೋದಾಗಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎರಡು ದಿನದ ಬಳಿಕ ನಾನು ಮಡಿಕೇರಿಗೆ ನಾನು ಹೋಗುತ್ತೇನೆ. ಜನಜೀವನ ಸಹಜ ಸ್ಥಿತಿಗೆ ಬರುವವರೆಗೂ ಉಚಿತವಾಗಿ ಅಕ್ಕಿ, ಬೆಳೆ, ಎಣ್ಣೆ ಸಕ್ಕರೆ , ಕೊಡುತ್ತೇವೆ ಎಂದಿದ್ದಾರೆ.ಕೊಡಗು ಸಂತ್ರಸ್ತರಿಗೆ ಧನಸಹಾಯ ಮಾಡುವ ಕುರಿತು ಪ್ರತಿಕ್ರಿಯೆ ನೀಡಿರುವ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಎಲ್ಲರೂ ಅವರವರ ವೈಯಕ್ತಿಕವಾಗಿ ಎಷ್ಟು ಸಹಾಯ ಮಾಡಬೇಕೋ ಅದನ್ನ ಮಾಡಬೇಕು.

ಜೆಡಿಎಸ್ ಶಾಸಕರು ಎಷ್ಚು ಹಣ ನೀಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.ನಾಳೆ ದೆಹಲಿಯಲ್ಲಿ ಕೊಡಗಿನ ಅನಾಹುತಗಳ ಬಗ್ಗೆ ವರದಿಯನ್ನು ಪ್ರಧಾನಿಯವರಿಗೆ ಸಲ್ಲಿಸುತ್ತೇನೆ ಎಂದು bjp ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಈಗಾಗಲೇ ಪ್ರದಾನಿಯವರು ಮುಖ್ಯಮಂತ್ರಿ ಯವರ ಜತೆ ಮಾತನಾಡಿದ್ದಾರೆ.

ನಮ್ಮ ಬಿಜೆಪಿಯ ಎಲ್ಲ ಶಾಸಕರು ಒಂದು ತಿಂಗಳ ವೇತನವನ್ನು‌ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಲ್ಲಿಸುತ್ತಾರೆ ಎಂದಿದ್ದಾರೆ. ಕೊಡಗಿಗೆ ಶಾಶ್ವತ ಪರಿಹಾರ ಪುನರ್ವಸತಿ ಕಲ್ಪಿಸಲು ಕನಿಷ್ಟ ಒಂದು ವರ್ಷವಾದರೂ ಹಿಡಿಯುತ್ತದೆ.ಹಾಗಾಗಿ ಜನ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣಕಾಸು ನೆರವು ಕೊಡುವುದು ಸೂಕ್ತ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here