Home Cinema ಎಷ್ಟೇ ಕಷ್ಟಗಳು ಎದುರಾದ್ರೂ, ಅವಮಾನ ಆದ್ರೂ, ನೋವಾದ್ರೂ ನಾನು ಸಹಿಸಿಕೊಳ್ಳುವೆ. ಇದೆಕ್ಕೆಲ್ಲ ಎದೆಗುಂದಿದ್ರೆ ನಾನು ಅಂಬರೀಷ್...

ಎಷ್ಟೇ ಕಷ್ಟಗಳು ಎದುರಾದ್ರೂ, ಅವಮಾನ ಆದ್ರೂ, ನೋವಾದ್ರೂ ನಾನು ಸಹಿಸಿಕೊಳ್ಳುವೆ. ಇದೆಕ್ಕೆಲ್ಲ ಎದೆಗುಂದಿದ್ರೆ ನಾನು ಅಂಬರೀಷ್ ಪತ್ನಿ ಎಂದು ಎನಿಸಿಕೊಳ್ಳಲ್ಲ..!

2205
0
SHARE

ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಸುಮಲತಾ ಅಂಬರೀಷ್ ಶಕ್ತಿಪ್ರದರ್ಶನ ನಡೆಸಿದ್ದಾರೆ. ಸಿಲ್ವರ್ ಜ್ಯುಬಿಲಿ ಪಾರ್ಕ್‌ನಲ್ಲಿ ನಡೆದ ಸಮಾವೇಶದಲ್ಲಿ ಮಾತು ಆರಂಭಿಸುತ್ತಿದ್ದಂತೆ ಭಾವುಕರಾದ ಸುಮಲತಾ ನಾನು ಈ ಮಣ್ಣಿನ ಮಗಳು, ಮಂಡ್ಯದ ಸೊಸೆ, ಹೀಗಾಗಿ ಮಂಡ್ಯದ ಜನರು ನನ್ನ ಕೈಬಿಡಲ್ಲ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.

ಅಲ್ಲದೆ ಅಂಬರೀಷ್ ಕಾಂಗ್ರೆಸ್‌ಗಾಗಿ ಹರವಾರು ವರ್ಷಗಳ ಕಾಲ ದುಡಿದಿದ್ದಾರೆ. ಹೀಗಾಗಿ ನಾನು ಸ್ಪರ್ಧಿಸಲು ಕಾಂಗ್ರೆಸ್ ಕದ ತಟ್ಟಿದೆ. ಆದ್ರೆ ಅವರು ನನಗೆ ಸರಿಯಾಗಿ ಸ್ಪಂಧಿಸಿಲ್ಲ. ನಾನು ಅವರ ಬಳಿ ಕೇಳಿದೆ ಮಂಡ್ಯ ನಿಮಗೆ ಬೇಡ್ವಾ ಎಂದು ಕೇಳಿದೆ ಅದಕ್ಕೆ ಅವರ ಉತ್ತರ ಏನೆಂಬುದು ನಿಮಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರಿಗೂ ಟಾಂಗ್ ಕೊಟ್ಟಿದ್ದಾರೆ.

ಇನ್ನು ಜೆಡಿಎಸ್ ನಾಯಕರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಸುಮಲತಾ ದರ್ಶನ್, ಯಶ್ ನನ್ನ ಪರ ಪ್ರಚಾರಕ್ಕೆ ಬಂದಿದ್ದಕ್ಕೆ ಹಲವಾರು ಮಾತುಗಳು ಕೇಳಿ ಬಂದ್ವು. ಆದ್ರೆ ಅವರು ನಮ್ಮ ಮನೆ ಮಕ್ಕಳಾಗಿ ಬಂದಿದ್ದಾರೆ. ತಾಯಿಯ ಪರ ಮಕ್ಕಳು ನಿಲ್ಲುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ನನಗೆ ಅಧಿಕಾರದ ದಾಹ ಇಲ್ಲ. ಅಧಿಕಾರದ ದಾಹ ಇದ್ದಿದ್ರೆ ನನಗೆ ಆಮಿಷಗಳು ಬಂದ್ವು., ಬೆಂಗಳೂರಿನಲ್ಲಿ ಸ್ಪರ್ಧಿಸಿ ಎಂದ್ರು.

ಎಂಎಲ್‌ಸಿ ಮಾಡಿ ಸಚಿವ ಸ್ಥಾನ ನೀಡುತ್ತೇವೆ ಎಂದ್ರು ನಾನು ಅದನ್ನೆಲ್ಲ ತಿರಸ್ಕರಿಸಿ ಮಂಡ್ಯಜನರ ಪರವಾಗಿ ನಾನು ಇಲ್ಲಿಂದ ಸ್ಪರ್ಧಿಸಿರುವೆ. ನನಗೆ ಅಧಿಕಾರದ ದಾಹ ಇಲ್ಲ ಎಂದು ಹೇಳಿದ್ರು. ಇನ್ನು ಮಂಡ್ಯ ಜನರು ಮುಗ್ಧರು ಆದ್ರೆ ಮುಟ್ಟಾಳರಲ್ಲ ಎಂದು ಸುಮಲತಾ ಹೇಳಿದ್ದಾರೆ. ಅಂಬರೀಷ್ ಮಂಡ್ಯ ಜನರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರ ಸಾಧನೆಗಳನ್ನು ಅವರು ಎಲ್ಲೂ ಹೇಳಿಕೊಂಡು ಬಂದಿಲ್ಲ.

ಅಂಬರೀಷ್ ಇನ್ನು ಹಲವು ವರ್ಷ ಬದುಕಿರಬೇಕಿತ್ತು. ಅವರು ಇನ್ನಷ್ಟು ಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಬೇಕಿತ್ತು. ಆದ್ರೆ ಅವರು ಅದಕ್ಕೆ ಅವರಿಗೆ ಅವಕಾಶ ಕೊಡಲಿಲ್ಲ. ಹೀಗಾಗಿ ಅವರು ಉಳಿಸಿಹೋಗಿರುವ ಕೆಲಸಗಳನ್ನು ನಾನು ಪೂರ್ಣಗೊಳಿಸಬೇಕಿದೆ. ಹಾಗಾಗಿ ಎಷ್ಟೇ ಕಷ್ಟಗಳು ಎದುರಾದ್ರೂ, ಅವಮಾನ ಆದ್ರೂ, ನೋವಾದ್ರೂ ನಾನು ಸಹಿಸಿಕೊಳ್ಳುವೆ. ಇದೆಕ್ಕೆಲ್ಲ ಎದೆಗುಂದಿದ್ರೆ ನಾನು ಅವರ ಪತ್ನಿ ಎಂದು ಎನಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here