Home Cinema ಏನಂದ್ರಿ..! ಸುದೀಪ ಧ್ವನಿ ಕೇಳಿ ದರ್ಶನ್ ಹೊಡೆದ್ರಾ ಚಪ್ಪಾಳೆ..! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ -ಚಾಲೆಂಜಿಂಗ್...

ಏನಂದ್ರಿ..! ಸುದೀಪ ಧ್ವನಿ ಕೇಳಿ ದರ್ಶನ್ ಹೊಡೆದ್ರಾ ಚಪ್ಪಾಳೆ..! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ -ಚಾಲೆಂಜಿಂಗ್ ಸ್ಟಾರ್ ಸಂಗಮಕ್ಕೆ ಕಾರಣವಾಯ್ತ ಈ ಚಿತ್ರ..?

907
0
SHARE

ಉದ್ಭರ್ಷ.. ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನವಾದ ಟೈಟಲ್ ಮೂಲಕ ಬೇಜಾನ್ ಸದ್ದು ಮಾಡ್ತಿರುವ ಚಿತ್ರದ ಫಸ್ಟ್ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ -ಚಾಲೆಂಜಿಂಗ್ ಸ್ಟಾರ್ ಸಂಗಮಕ್ಕೆ ಕಾರಣವಾಗಿರುವ ಚಿತ್ರ ಇದಾಗಿದ್ದು.

ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಮೃತ ಹಸ್ತದಿಂದ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ರು..ಯಸ್.. ಸ್ಯಾಂಡಲ್‌ವುಡ್‌ನ ಸಸ್ಪೆನ್ಸ್ ಚಿತ್ರಗಳ ಮಾಸ್ಟರ್ ಅಂತಾನೇ ಖ್ಯಾತಿ ಪಡೆದಿರುವ ಸುನೀಲ್ ಕುಮಾರ್ ದೇಸಾಯಿ ಆಕ್ಷನ್ ಕಟ್‌ನ ಚಿತ್ರ ಉದ್ಘರ್ಷ. ಸಸ್ಪೆನ್ಸ್ ಮೂಲಕವೇ ಸಕ್ಸಸ್ ರೇಟಿಂಗ್ ಹೆಚ್ಚಿಸಿಕೊಂಡಿರುವ ಸುನೀಲ್ ಕುಮಾರ್ ದೇಸಾಹಿಯವರ ನಿರ್ದೇಶನಕ್ಕೆ ದಾಸಾ ಕೂಡ ಭಲೆ ಭಲೆ ಅಂದಿದ್ದಾರೆ. ಟ್ರೆಲರ್ ನೋಡಿ ಚಪ್ಪಾಳೆ ಕೊಟ್ಟಿದ್ದಾರೆ. ಚಿತ್ರದ ನಾಯಕ ಠಾಕೂರ್ ಅನೂಪ್ ಸಿಂಗ್ ಡೆಡಿಕೇಶನನ್ನು ಹಾಡಿ ಹೋಗಳಿದ್ದು.

ಹೊಸತದಿಂದ ಕೂಡಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ನಟಿ ಪ್ರೇಮ, ಸುಮನ್ ನಗರ್‌ಕರ್, ಲಹರಿ ವೇಲು, ರಾಜೇಂದ್ರ ಸಿಂಗ್ ಬಾಬು, ಯೋಗರಾಜ್ ಭಟ್, ಕರಿಸುಬ್ಬು ಕಬೀರ್ ಖಾನ್, ತಾನ್ಯ, ಧನ್ವಿತಾ ಸೇರಿದಂತೆ ಸಾಕಷ್ಟು ಸ್ಟಾರ್‌ಗಳು ಟ್ರೇಲರ್ ಕಾರ್ಯಕ್ರಮದಲ್ಲಿ ಹಾಜರಿದ್ರು. ಸಂತಸದ ಕ್ಷಣದಲ್ಲಿ ಭಾಗಿಯಾದ್ರು.ಟ್ರೇಲರ್‌ಗೆ ಸುದೀಪ್ ಇಂಗ್ಲೀಷ್‌ನಲ್ಲಿ ಹಿನ್ನೆಲೆ ಧ್ವನಿ ನೀಡಿದ್ದು.

ಅಟ್ರ್ಯಾಕ್ಟೀವಾಗಿ ಮೂಡಿಬಂದಿದೆ. ಕೇವಲ ಖಳನಟ ಕಬೀರ್ ಸಿಂಗ್ ಅವರ ಒಂದು ಡೈಲಾಗ್ ಹೊರತು ಪಡಿಸಿ ಮತ್ಯಾವ ಡೈಲಾಗ್‌ಗಳು ಟ್ರೇಲರ್‌ನಲ್ಲಿ ನಿಮಗೆ ಕಾಣಿಸುವುದಿಲ್ಲ. ಪೂರ್ತಿ ಬ್ಯಾಕ್ ಗ್ರ್ಯಾಂಡ್ ಮ್ಯೂಸಿಕ್ ಹಾಗೂ ಸುದೀಪ್ ಅವರ ವಿಭಿನ್ನವಾದ ನರೇಷನ್‌ನ ಪ್ರತಿ ಫ್ರೇಮ್ ಹಾಲಿವುಡ್ ಸ್ಟೈಲ್ ಆಫ್ ಮೇಕಿಂಗ್ ನೆನಪಿಸುವಂತೆ ಮಾಡ್ತಿದೆ. ಟ್ರೇಲರ್ ಮೂಲಕವೇ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗುವಂತೆ ಮಾಡ್ತಿದೆ.ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ದಿವಂಗತ ವಿಷ್ಣುವರ್ಧನ್ ಹಾಗೂ ಛಾಯಾಗ್ರಹಕ ಪಿ.ರಾಜನ್ ಛಾಯಾಗ್ರಹಣ ಚಿತ್ರಕ್ಕಿದ್ದು.

ಬಾಲಿವುಡ್ ಖ್ಯಾತಿಯ ಸಂಜೋಯ್ ಚೌಧುರಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಸುನೀಲ್ ಕುಮಾರ್ ದೇಸಾಯಿ ಚಿತ್ರದ ನಿರ್ದೇಶಕ. ಒಂದು ಕಾಲದಲ್ಲಿ ಥ್ರಿಲ್ಲರ್ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರಿಗೆ ಮಸ್ತ್ ಮನೋರಂಜನೆಯನ್ನು ನೀಡಿದ್ದ ಸುನೀಲ್ ಕುಮಾರ್ ದೇಸಾಯಿ ಮತ್ತೆ ಉದ್ಘರ್ಷ ಮೂಲಕ ಮತ್ತೊಂದು ರೋಚಕ ಸ್ಟೋರಿಯನ್ನು ಅನಾವರಣ ಮಾಡಲು ಸಜ್ಜಾಗಿದ್ದಾರೆ. ಇನ್ನು ದರ್ಶನ್ ಹಾಗೂ ಸುದೀಪ ಇಬ್ಬರು ಸ್ಟಾರ್‌ಗಳು ಉದ್ಘರ್ಶ ಹಿಂದೆ ನಿಂತಿರೋದು ದೇಸಾಯಿ ಅವ್ರಿಗೆ ಖುಷಿ ಕೊಟ್ಟಿದೆ. ಇಷ್ಟೇ ಅಲ್ಲ ಚಿತ್ರದ ಮೇಲೆ ದೇಸಾಯಿಗೆ ತುಂಬು ನಂಬಿಕೆ ಇದೆ.
ಕಬೀರ್ ಖಾನ್ ಮುಖ್ಯ ವಿಲನ್ ಆಗಿ ಚಿತ್ರದಲ್ಲಿ ನಟಿಸಿದ್ದಾರೆ.

ನನ್ನ ೪೬ಸಿನಿಮಾಗಳ ಲಿಸ್ಟ್‌ನಲ್ಲೇ ಉದ್ಘರ್ಷ ರೀತಿಯ ಸಿನಿಮಾ ನಾನು ಎಂದು ಮಾಡಿರಲಿಲ್ಲ ಎನ್ನುವ ಕಬೀರ್. ಈ ಚಿತ್ರ ನನ್ನ ಕೆರಿಯರ್‌ನಲ್ಲಿ ಒಂದೊಳ್ಳೆ ಮೈಲಿಗಲ್ಲಾಗುತ್ತದೆ ಎಂಬ ನಂಬಿಕೆ ಇದೆ ಅಂತಾರೆ. ಸುನೀಲ್ ಸರ್ ವಿಲನ್‌ಗಳಿಗೆ ಅವರ ಸಿನಿಮಾದಲ್ಲಿ ನೀಡಿದ ಇಮೇಜ್ ನೋಡಿ ಥ್ರಿಲ್ಲಾಯ್ತು ಎನ್ನುವ ಕಬೀರ್. ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದು ಖುಷಿ ತಂದಿದೆ ಅಂತಾರೆ.ಅನೂಪ್ ಚಿತ್ರದ ನಾಯಕ. ರೋಗ್, ಸಿಂಗಂ,ಯಜಮಾನದಲ್ಲಿ ವಿಲನ್ ಆಗಿ ನಟಿಸಿದ್ದ ಅನೂಪ್ ಈ ಚಿತ್ರದ ಮೂಲಕ ಡೆಬ್ಯೂ ಮಾಡ್ತಿದ್ದಾರೆ.

ಒಂದು ದಿನದಲ್ಲಿ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು. ಇಬ್ಬರು ಸ್ಟಾರ್‌ಗಳು ನಮ್ಮ ಚಿತ್ರಕ್ಕೆ ಸರ್ಪೋಟ್ ಮಾಡ್ತಿರೋದು ನನ್ನ ಕಾಲರ್ ಮೇಲಾಗುವಂತೆ ಮಾಡ್ತಿದೆ ಎನ್ನುವ ಅನೂಪ್ ಅದೇ ಖುಷಿಯಲ್ಲಿ ಮಾತನಾಡಿದ್ದು ಹೀಗೆ.ಸುನೀಲ್ ಕುಮಾರ್ ದೇಸಾಯಿ ಯವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಹೊಸ ಅನುಭವ ಎನ್ನುವ ತಾನಿಯಾ. ವಿಷನರಿ ಡೈರೆಕ್ಟ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ ಎಂಬ ಸಂತಸದಲ್ಲಿ ಮಾತನಾಡಿದ್ರು.ಇನ್ನು ಕಬೀರ್ ಸಿಂಗ್ ದುಹಾನ್, ಶ್ರವಣ್ ರಾಘವೇಂದ್ರ, ಬಾಹುಬಲಿ ಪ್ರಭಾಕರ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

ಇನ್ನು ವಂಶಿ ಕೃಷ್ಣ, ನಟಿ ಕಿಶೋರ್, ಹರ್ಷಿಕಾ ಪೂರ್ಣಚ್ಛ ಸೇರಿದಂತೆ ಸಾಕಷ್ಟು ಮಂದಿ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಒಟ್ಟಿನಲ್ಲಿ, ಬಹಳ ವರ್ಷಗಳ ನಂತ್ರ, ಸುನೀಲ್ ದೇಸಾಯಿಯವರು ಮತ್ತೆ ‘ಸಸ್ಪೆನ್ಸ್- ಥ್ರಿಲ್ಲರ್ ಚಿತ್ರದ ಕಡೆ ತಮ್ಮ ಚಿತ್ತ ನೆಟ್ಟಿದ್ದು, ದೇವರಾಜ್ ನಿರ್ಮಾಣದಲ್ಲಿ ಚಿತ್ರ ನಾಲ್ಕು ಭಾಷೆಯಲ್ಲಿ ಅದ್ದೂರಿಯಾಗಿ ಮೂಡಿಬಂದಿದೆ. ಹಾಗಾಗಿನೇ ಈ ಹಿಂದೆ ಮಾಡಿದ ಎಲ್ಲಾ ದಾಖಲೆಗಳನ್ನು ಸುನೀಲ್ ಈ ಚಿತ್ರದ ಮೂಲಕ ಮುರಿತ್ತಾರೆ ಎನ್ನುವ ಲೆಕ್ಕಾಚಾರಗಳು ಶುರುವಾಗಿದೆ. ಇದೇ ತಿಂಗಳ ಕೊನೆಯಲ್ಲಿ ಚಿತ್ರ ಅದ್ದೂರಿಯಾಗಿ ಚಿತ್ರ ಬಿಡುಗಡೆಯಾಗಲಿದೆ. ಅಲ್ಲಿವರೆಗೂ ಟ್ರೇಲರ್ ನೋಡಿ ಎಂಜಾಯ್ ಮಾಡಿ.

 

LEAVE A REPLY

Please enter your comment!
Please enter your name here