Home Crime “ಏನು ತಪ್ಪು ಮಾಡದ ಅಮಾಯಕರು ಬಲಿ” ಎಂದು ಸಿದ್ದರಾಮಯ್ಯ ಮರುಕ..! ತಪ್ಪಿತಸ್ಥರಿಗೆ ಘೋರ ಶಿಕ್ಷೆ ಆಗಬೇಕೆಂದು...

“ಏನು ತಪ್ಪು ಮಾಡದ ಅಮಾಯಕರು ಬಲಿ” ಎಂದು ಸಿದ್ದರಾಮಯ್ಯ ಮರುಕ..! ತಪ್ಪಿತಸ್ಥರಿಗೆ ಘೋರ ಶಿಕ್ಷೆ ಆಗಬೇಕೆಂದು ಆಗ್ರಹ…

2365
0
SHARE

ಸುಳ್ವಾಡಿಯಲ್ಲಿ ವಿಷ ಪ್ರಸಾದ ಸೇವನೆ ದುರಂತ ಪ್ರಕರಣ ಹಿನ್ನೆಲೆಯಲ್ಲಿ ಕೆ.ಆರ್.ಆಸ್ಪತ್ರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಏನೂ ತಪ್ಪು ಮಾಡದ ಅಮಾಯಕರು ಘಟನೆಯಲ್ಲಿ ಮೃತಪಟ್ಟಿದ್ದಾರೆ.

ಇದು ಫ್ಹುಡ್ ಪಾಯಿಸನ್ ನಿಂದ ಆಗಿರೋ ಘಟನೆ ಅಲ್ಲ, ಪ್ರಸಾದದಲ್ಲಿ ವಿಷ ಹಾಕಿರೋದು ಖಚಿತವಾಗಿದೆ ಅಲ್ಲದೆ ಇದು ಅತ್ಯಂತ ಅಮಾನವೀಯ ಕೃತ್ಯ ಎಂದಿದ್ದಾರೆ.ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು, ತಪ್ಪಿತ್ಥರಿಗೆ ಘೋರ ಶಿಕ್ಷೆ ಆಗಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಸ್ವಸ್ಥಗೊಂಡವರು ಇನ್ನೂ ಭಯದಿಂದ ಹೊರ ಬಂದಿಲ್ಲ ಹಾಗೂ ವಿಷದ ಅಂಶ ನರದ ಒಳಭಾಗಕ್ಕೆ ಸೇರಿರೋ ಕಾರಣ ಇನ್ನೂ 48 ಗಂಟೆ ಕಾಲ ಅವರಿಗೆ ಚಿಕಿತ್ಸೆ ಬೇಕಿದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲ ಮಾಹಿತಿಯನ್ನ ವೈದ್ಯರ ಬಳಿ ಪಡೆದುಕೊಂಡಿದ್ದೇನೆ ಮತ್ತು ಮೃತರ ಕುಟುಂಬಕ್ಕೆ ದೇವರ ದುಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದರು.

ಇನ್ನುಕುಟುಂಬದಲ್ಲಿನ ಮಕ್ಕಳ ಭವಿಷ್ಯದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಅವರ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ಸರ್ಕಾರದಿಂದ ಸಹಾಯ ಮಾಡಲಾಗುವುದು ಎಂದು ತಿಳಿಸಿದ್ರು. ಇನ್ನು ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಧೃವ ನಾರಾಯಣ್ ಸಾಥ್ ನೀಡಿದ್ದಾರೆ.

LEAVE A REPLY

Please enter your comment!
Please enter your name here