Home Cinema “ಏನ್ ಸಾರ್ ನಿಮ್ದು ಗಲಾಟೆ ಇಲ್ಲ” ಪ್ರಶ್ನೆ ಕೇಳ್ತಿದೆ ಭಕ್ತಗಣ ಉಪ್ಪಿಗೆ..! ರಾಜಕೀಯ ರಣರಂಗದಲ್ಲಿ ಸದ್ದು...

“ಏನ್ ಸಾರ್ ನಿಮ್ದು ಗಲಾಟೆ ಇಲ್ಲ” ಪ್ರಶ್ನೆ ಕೇಳ್ತಿದೆ ಭಕ್ತಗಣ ಉಪ್ಪಿಗೆ..! ರಾಜಕೀಯ ರಣರಂಗದಲ್ಲಿ ಸದ್ದು ಇಲ್ಲ..

239
0
SHARE

ಉಪೇಂದ್ರ..ರಿಯಲ್ ಸ್ಟಾರ್ ಕಂ ರಿಯಲ್ ಪ್ರಜಾಕಾರಣಿ. ಸಿನಿಮಾ.. ರಾಜಕೀಯ.. ಎರಡು ದೋಣಿಗಳ ನಾವಿಕನಾಗಿರುವ ಉಪೇಂದ್ರ ಅವ್ರದ್ದು ರಾಜಕೀಯ ರಣರಂಗದಲ್ಲಿ ಸದ್ದು ಇಲ್ಲ.. ಸುದ್ದಿಯೂ ಇಲ್ಲ. ಇದು, ನಮ್ಮ ಮಾತಲ್ಲ..

ಬದ್ಲಿಗೆ ಕನ್ನಡ ಕಲಾಭಿಮಾನಿಗಳ ಒಕ್ಕೂರಿಲಿನ ಮಾತು.ಹೌದು, ಚುನಾವಣೆಯ ಬಿಸಿ ದೇಶವನ್ನೇ ಆವರಿಸಿಕೊಂಡಿದೆ. ಆದ್ರೆ ಉಪ್ಪಿ ಮಾತ್ರ ತನಗೂ ಅದಕ್ಕೂ ಸಂಬಂಧವಿಲ್ಲ ಅನ್ನುವಂತಿದ್ದಾರೆ. ಉಪ್ಪಿಯ ಇದೇ ಮೌನ ಅನೇಕರಿಗೀಗ ಕಾಡುತ್ತಿದೆ. ಹಾಗಾಗೇ.. ಉಪ್ಪಿಗೆ ಅಭಿಮಾನಿಗಳು ಪ್ರಶ್ನೆ ಕೇಳಲು ಶುರುವಿಟ್ಟುಕೊಂಡಿದ್ದಾರೆ. ಹೀಗೆ ರಾಜಕೀಯ ಮಾಡಿದ್ರೆ ಗೆದ್ದಂಗೆ ಅನ್ನುವ ಕುಹುಕುದ ಮಾತುಗಳನ್ನಾಡ್ತಿದ್ದಾರೆ.

ಅಷ್ಟಕ್ಕೂ ಏಕಾಏಕಿ ಉಪ್ಪಿಯ ಪ್ರಜಾಕೀಯದ ಬಗ್ಗೆ ಜನ ಪ್ರಶ್ನೆ ಮಾಡ್ತಿರೋದಾದ್ರೂ ಯಾಕೆ. ಇಂಥಹದ್ದೊಂದು ಪ್ರಶ್ನೆಗುತ್ತರವೆನ್ನುವಂತೆ ಕಣ್ ಮುಂದೆ ಕಾಣ್ಸೋದು ಮಂಡ್ಯ ರಣರಂಗ.ಯಸ್, ಮಂಡ್ಯ ಧಗಧಗಿಸುತ್ತಿದೆ. ಸುಮಲತಾ ಹಾಗೂ ನಿಖಿಲ್ ನಡುವಿನ ಯುದ್ಧ ದಿನಗಳು ಉರುಳಿದಂತೆ ತಾರಕಕ್ಕೇರುತ್ತಿದೆ. ನಾನಾ.. ನೀನಾ.. ಅನ್ನುವ ವಾತಾವರಣನೂ ನಿರ್ಮಾಣವಾಗಿದೆ. ಹೀಗಿರುವಾಗ, ಉಪ್ಪಿ ಮಂಡ್ಯದ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾತುಗಳನ್ನಾಡಿದ್ದಾರೆ.

ರಾಜಕೀಯದವರು ಮಂಡ್ಯಕ್ಕಾಗಿ ಹೊಡೆದಾಡುತ್ತಿದ್ದಾರೆ. ಪ್ರಜಾಕೀಯದವರು ಇಂಡ್ಯಕ್ಕಾಗಿ ಹೊಡೆದಾಡುತ್ತಿದ್ದಾರೆ ಅಂದಿದ್ದಾರೆ. ಉಪ್ಪಿ.. ಹೀಗೆ ಗೀಚಿಕೊಂಡ ಸಾಲುಗಳೇ ಇದೀಗ ಕೆಲವರನ್ನೂ ಕೆರಳಿಸಿವೆ. ಪ್ರಜಾಕೀಯದ ನಡೆಯ ಬಗ್ಗೆಯೂ ಪ್ರಶ್ನೆ ಎದ್ದೇಳುವಂತೆ ಮಾಡಿದೆ. ಹಾಗಾಗೇ, ರಿಯಲ್ ಸ್ಟಾರ್‌ಗೆ ಪ್ರಶ್ನೆಗಳ ಸುರಿಮಳೆಯನ್ನೆಗೈಯುತ್ತಿರುವ ಭಕ್ತಗಣ.. ಟ್ವಿಟರ್ ಹಾಗೂ ಫೇಸ್‌ಬುಕ್‌ನ ಪ್ರಪಂಚ ಬಿಟ್ಟು, ವಾಸ್ತವಕ್ಕೆ ಬನ್ನಿ ಅನ್ನುತ್ತಿದೆ.

ಜನರ ನಡುವೆ ಬಂದು ಜನರ ಕಷ್ಟಗಳನ್ನ ಆಲಿಸಿ ಸ್ವಾಮಿ ಅನ್ನುತ್ತಿದೆ. ಹೀಗೆ ಪ್ರಶ್ನೆಗಳ ಬಾಣಗಳನ್ನ ಎದುರಿಸುತ್ತಿರುವ ಉಪೇಂದ್ರ, ಜನಾಭಿಪ್ರಾಯಕ್ಕೆ ಮಣಿದು, ಜನರ ಮುಂದೆ ಬರ‍್ತಾರಾ, ಜನರೊಂದಿಗೆ ಬೆರೆಯುತ್ತಾರಾ, ಪ್ರಜಾಕೀಯದ ಪ್ರಚಾರ ಮಾಡ್ತಾರಾ, ಜನರ ಪ್ರಶ್ನೆಗಳಿಗುತ್ತರ ನೀಡ್ತಾರಾ, ಇವೆಲ್ಲ ಪ್ರಶ್ನೆಗಳಿಗುತ್ತರ ಖುದ್ದು ಪ್ರಜಾಕಾರಣಿ ಉಪ್ಪಿನೇ ನೀಡಬೇಕು..

LEAVE A REPLY

Please enter your comment!
Please enter your name here