Home Cinema ಐಟಿ ಅಧಿಕಾರಿಗಳ ಮುಂದೆ ಯಶ್ ಹವಾ ಇಲ್ಲ..! ಮೂರು ಗಂಟೆಗೂ ಹೆಚ್ಚು ಕಾಲ ತಾಯಿ-ಮಗನ ಡ್ರಿಲ್..!...

ಐಟಿ ಅಧಿಕಾರಿಗಳ ಮುಂದೆ ಯಶ್ ಹವಾ ಇಲ್ಲ..! ಮೂರು ಗಂಟೆಗೂ ಹೆಚ್ಚು ಕಾಲ ತಾಯಿ-ಮಗನ ಡ್ರಿಲ್..! ಜನಾರ್ದನ ರೆಡ್ಡಿ ನೀಡಿದ್ದ 65 ಲಕ್ಷದ ಗಿಫ್ಟ್ ಬಗ್ಗೆ ವಿಚಾರಣೆ..!

885
0
SHARE

ಕಳೆದ ವಾರ ನಟ ಯಶ್ ಮನೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು… ಅದರ ಮುಂದುವರೆದ ಭಾಗವಾಗಿ ಇಂದು ಯಶ್ ರನ್ನು ಕಚೇರಿಗೆ ಕರೆಸಿಕೊಂಡು ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ… ಯಶ್ ಜೊತೆ ಅವರ ತಾಯಿ ಪುಷ್ಪಾರನ್ನು ಕೂಡ ವಿಚಾರಣೆಗೊಳಪಡಿಸಲಾಯ್ತು… ಬೆಳಗ್ಗೆ ಸುಮಾರು 11 ಗಂಟೆಗೆ ಕ್ವೀನ್ಸ್ ರೋಡ್ ನಲ್ಲಿರೋ ಐಟಿ ಕಚೇರಿಗೆ ಆಗಮಿಸಿದ ಯಶ್, ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ಎದುರಿಸಿದ್ರು.

ದಾಳಿ ಸಮಯದಲ್ಲಿ ಸಿಕ್ಕ ಚಿನ್ನಾಭರಣ, ಆಸ್ತಿ ಪತ್ರಗಳ ಬಗ್ಗೆ ಯಶ್ ಮತ್ತು ಅವರ ತಾಯಿ ಪುಷ್ಪಾರ ಬಳಿ ಐಟಿ ಅಧಿಕಾರಿಗಳು ಮಾಹಿತಿ ಪಡೆದ್ರು… ಆದಾಯದ ಮೂಲಗಳ ಬಗ್ಗೆಯೂ ವಿವರಗಳನ್ನ ಯಶ್ ರಿಂದ ಪಡೆಯಲಾಗಿದೆ… ವಿಚಾರಣೆ ವೇಳೆ ಪ್ರಮುಖವಾಗಿ ಯಶ್ ಮತ್ತು ಪತ್ನಿ ರಾಧಿಕಾ ಪಡೆದ ಗಿಫ್ಟ್ ಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.ಅದರಲ್ಲೂ ರಾಧಿಕ ಸೀಮಂತದ ವೇಳೆ ಬಳ್ಳಾರಿ ಗಣಿದಣಿ ಜನಾರ್ದನ ರೆಡ್ಡಿ ನೀಡಿದ್ದರೆನ್ನಲಾದ 65 ಲಕ್ಷ ಮೌಲ್ಯದ ಡೈಮಂಡ್ ನೆಕ್ಲೆಸ್ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ…

ಇನ್ನೂ ಮದುವೆ ವೇಳೆ ಪಡೆದ ಕಾಸ್ಟ್ಲಿಗಿಫ್ಟ್ ಗಳ ಬಗ್ಗೆ ಅವುಗಳಿಗೆ ತೆರಿಗೆ ಕಟ್ಟಿದೆಯಾ ಎಂಬುದರ ಬಗ್ಗೆ ವಿಚಾರಣೆ ಮಾಡಲಾಗಿದೆ.. ಸಾಮಾನ್ಯವಾಗಿ ಸಂಬಂಧಿಕರಲ್ಲದವರು 50ಸಾವಿರ ಮೌಲ್ಯಕ್ಕಿಂತ ಹೆಚ್ಚು ದುಬಾರಿ ಗಿಫ್ಟ್ ಪಡೆದ್ರೆ ಶೇ.30ರಷ್ಟು ಟ್ಯಾಕ್ಸ್ ಕಟ್ಟಬೇಕು…

ಸುಖಸುಮ್ಮನೆ ಮಾಧ್ಯಮಗಳ ಮೇಲೆ ಗರಂ ಆದ ನಟ:ವಿಚಾರಣೆ ಮುಗಿಸಿ ಹೊರ ಬಂದ ಯಶ್ ಟಾರ್ಗೆಟ್ ಮಾಡಿದ್ದು ಮಾಧ್ಯಮಗಳನ್ನ… ಐಟಿ ದಾಳಿ ಬಗ್ಗೆ ಸುದ್ದಿ ಮಾಡಿದ್ದೇ ತಪ್ಪು ಅನ್ನೋ ರೀತಿಯಲ್ಲಿ ಯಶ್ ಮಾತನಾಡಿದ್ರು.. ನಿಜ ಜೀವನವನ್ನೂ ಸಿನಿಮಾ ಅಂದುಕೊಂಡಂತೆ ವರ್ತಿಸಿದ ಯಶ್, ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದೀರಾ ಅಂತಾ ಪ್ರಶ್ನಿಸಿದ್ರು.40 ಕೋಟಿ ಸಾಲ ಬಗ್ಗೆ ಸ್ಪಷ್ಟನೆ ನೀಡಿದ ಯಶ್, ತಮಗೆ 16 ಕೋಟಿ ಸಾಲ ಇದೆ ಅಂತ ಹೇಳಿದ್ರು..

ಐಟಿ ರಿಟರ್ನ್ಸ್ ನೋಡಿಕೊಂಡೇ ಬ್ಯಾಂಕ್ ನವರು ಸಾಲ ಕೊಡೋದು.. ಸುಮ್ಮ ಸುಮ್ಮನೆ ಯಾರು ಸಾಲ ಕೊಡೋದಿಲ್ಲ ಅಂತಾ ಹೇಳಿದ್ರು..ಯಶ್ ಗೆ ಒಂದು ರೂಲ್ಸ್, ಸಾಮಾನ್ಯರಿಗೆ ಒಂದು ಕಾನೂನು:ಮಾಧ್ಯಮಗಳಿಗೆ ಬುದ್ದಿವಾದ ಹೇಳಿದ ಯಶ್ ಮತ್ತೆ ಕಾನೂನು ಉಲ್ಲಂಘಿಸಿದ್ದಾರೆ… ಯಶ್ ಬಳಸುವ ಐಷಾರಾಮಿ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿಸಿಕೊಂಡಿದ್ದಾರೆ.

ಟಿಂಟೆಡ್ ಗ್ಲಾಸ್ ಹಾಕಿಸದಂತೆ ಸುಪ್ರೀಂ ಕೋರ್ಟ್ ಆದೇಶವಿದೆ ಆದ್ರೆ ಕೂಡ ಯಶ್ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿಸಿಕೊಂಡಿದ್ದಾರೆ. ಪ್ರಧಾನಿ, ಸಿಎಂ, ಜನಪ್ರತಿನಧಿಗಳ ಕಾರಿಗೆ ಟೈಂಟೆಡ್ ಗ್ಲಾಸ್ ಬಳಸೋದಿಲ್ಲ. ಅಂತದರಲ್ಲಿ ಯಶ್ ಟಿಂಟೆಡ್ ಗ್ಲಾಸ್ ಬಳಸುವುದು ಸರಿನಾ.. ಇನ್ನು ಟ್ರಾಫಿಕ್ ಪೊಲೀಸರು ಯಶ್ ಕಾರನ್ನು ಕಂಡೂ ಕಾಣದಂತೆ ಇರುವುದು ನಿಜಕ್ಕೂ ದುರಂತವಾಗಿದೆ.

 

LEAVE A REPLY

Please enter your comment!
Please enter your name here