Home KARNATAKA ಐತಿಹಾಸಿಕ ಸರಣಿ ಗೆಲುವಿನತ್ತ ಟೀಂ ಇಂಡಿಯಾ ದಾಪುಗಾಲು..! ಸಿಡ್ನಿ ಟೆಸ್ಟ್ ಡ್ರಾ ಆದರೂ ದಾಖಲೆ ನಿರ್ಮಿಸಲಿದೆ...

ಐತಿಹಾಸಿಕ ಸರಣಿ ಗೆಲುವಿನತ್ತ ಟೀಂ ಇಂಡಿಯಾ ದಾಪುಗಾಲು..! ಸಿಡ್ನಿ ಟೆಸ್ಟ್ ಡ್ರಾ ಆದರೂ ದಾಖಲೆ ನಿರ್ಮಿಸಲಿದೆ ಕೊಹ್ಲಿ ಸೈನ್ಯ..!

5162
0
SHARE

ಆಸೀಸ್ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗಾಗಿ ಹಾತೊರಿಯುತ್ತಿರುವ ಭಾರತ ಸಿಡ್ನಿ ಟೆಸ್ಟ್ ನಲ್ಲಿ ಬಿಗಿ ಹಿಡಿತ ಸಾಧಿಸಿದೆ. ಸಿಡ್ನಿಅಂಗಳದಲ್ಲಿ ಸಂಘಟಿತ ಪ್ರದರ್ಶನವನ್ನ ನೀಡ್ತಿರೋ ಕೊಹ್ಲಿಸೈನ್ಯ, ಗೆಲುವಿನತ್ತ ದೃಷ್ಟಿ ನೆಟ್ಟಿದೆ. ಇದರೊಂದಿಗೆ ಪ್ರತಿಷ್ಠಿತ ಸರಣಿ ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸುವ ತವಕದಲ್ಲಿದೆ.ಆಸೀಸ್ ನೆಲದಲ್ಲಿ ಸರಣಿ ಗೆಲುವತ್ತಾ ಟೀಂ ಇಡಿಯಾ ದಾಪುಗಾಲಿಟ್ಟಿದೆ… ಸುಮಾರು 71 ವರ್ಷಗಳ ಬಳಿಕ ಕಾಂಗೂರುಗಳ ತವರಿನಲ್ಲಿ ಭಾರತ ಸರಣಿ ಗೆಲ್ಲುವ ಹೊಸ್ತಿಲಿನಲ್ಲಿದೆ…

ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ ಆಡಲು ಹೋದದ್ದು 1947-48ರಲ್ಲಿ – ಲಾಲಾ ಅಮರ್‌ನಾಥ್‌ ಅವರ ನಾಯಕತ್ವದಲ್ಲಿ. ಅಲ್ಲಿಂದೀಚೆಗೆ ಭಾರತ ಆಸ್ಟ್ರೇಲಿಯದಲ್ಲಿ 11 ಬಾರಿ ಟೆಸ್ಟ್‌ ಸರಣಿ ಗೆಲ್ಲುವ ಪ್ರಯತ್ನ ಮಾಡಿದೆ. ಆದರೆ ಸಫ‌ಲವಾಗಿಲ್ಲ. ಈ ಬಾರಿ ವಿರಾಟ್‌ ಕೊಹ್ಲಿ ನಾಯಕತ್ವದ ತಂಡಕ್ಕೆ ಹಾಲಿ ಟೆಸ್ಟ್‌ ಸರಣಿ ಐತಿಹಾಸಿಕ ದಾಖಲೆಯ ವಿಜಯವೆನಿಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗ್ಲೆ ಮುನ್ನಡೆ ಸಾಧಿಸಿದೆ. 4 ಪಂದ್ಯಗಳ ಸರಣಿಯಲ್ಲಿ 2-1ರ ಅಂತರ ಕಾಯ್ದುಕೊಂಡಿರೋ ಕೊಹ್ಲಿಪಡೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನ ತನ್ನಲ್ಲೆ ಉಳಿಸಿಕೊಂಡಿದೆ.

ಅಲ್ಲದೇ ಸಿಡ್ನಿಯಲ್ಲಿ ನಡೆಯುತ್ತಿರೋ ಪಂದ್ಯವನ್ನೂ ಗೆದ್ದು ಐತಿಹಾಸಿಕ ವಿಜಯ ದಾಖಲಿಸುವ ಗುರಿ ಹೊಂದಿದೆ.ಫೈನಲ್ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ 622 ರನ್ ಗಳಿಸಿರೋ ಭಾರತ, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ಕೊಹ್ಲಿ ಹುಡ್ಗರು, ಬೌಲಿಂಗ್ ನಲ್ಲೂ ಪಾರುಪತ್ಯ ಮೆರೆದಿದ್ದಾರೆ. ಅತ್ತ ಪ್ರಮುಖ ವಿಕೆಟ್ ಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿರುವ ಆತಿಥೇಯರು ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದಾರೆ.

ಸಿಡ್ನಿ ಅಂಗಳದಲ್ಲಿ ಕೊಹ್ಲಿಪಡೆ ಸಾಂಘಿಕ ಪ್ರದರ್ಶನವನ್ನ ನೀಡಿ ಗಮನ ಸೆಳೆಯುತ್ತಿದೆ. ಈಗಾಗ್ಲೆ ಪಂದ್ಯದ ಮೂರು ದಿನಗಳು ಮುಕ್ತಾಯವಾಗಿದ್ದು, ಆಸೀಸ್ ತಂಡದ ಎದುರು ಬೃಹತ್ ಮೊತ್ತದ ಟಾರ್ಗೆಟ್ ಇದೆ.ಭಾರತದ ಸವಾಲಿಗೆ ಪ್ರತ್ಯುತ್ತರವಾಗಿ ಇನ್ನಿಂಗ್ಸ್ ಆರಂಭಿಸಿರೋ ಆಸೀಸ್ 6 ವಿಕೆಟ್ ಗಳನ್ನ ನಷ್ಟಕ್ಕೆ 236 ರನ್ ಗಳಿಸಿದೆ. ಇದೇ ವೇಳೆ ಸಿಡ್ನಿ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಕಾರಣದಿಂದ 3ನೇ ದಿನದಾಟವನ್ನ ಸ್ಥಗಿತಗೊಳಿಸಲಾಗಿದೆ.

ಹೀಗಾಗಿ ಆಸೀಸ್ 386 ರನ್ ಹಿನ್ನಡೆಯಲ್ಲಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು 187 ರನ್ ಗಳಿಸಬೇಕಾದ ಅಗತ್ಯವಿದೆ.ಇನ್ನು ಆಸೀಸ್ ಪರ ಉಸ್ಮಾನ್ ಖವಾಜ 27, ಮಾರ್ಕಸ್ ಹ್ಯಾರಿಸ್ 79, ಮಾರ್ನಸ್ ಲ್ಯಾಬುಶಾನ್ 38 ರನ್ ಗಳಿಸಿ ಔಟಾದ್ರು.ಉಳಿದಂತೆ ಪ್ಯಾಟ್ ಕಮಿನ್ಸ್ ಅಜೇಯ 25 ಮತ್ತು ಪೀಟರ್ ಹ್ಯಾಂಡ್ಸ್ ಕಂಬ್ ಅಜೇಯ 28 ರನ್ ಗಳಿಸಿ 4ನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ರು.

LEAVE A REPLY

Please enter your comment!
Please enter your name here