
ಐಪಿಎಲ್ನಲ್ಲಿ ಎರಡು ಹೊಸ ತಂಡ; ಅಹಮದಾಬಾದ್ ತಂಡದ ಹೆಸರೇನು ಗೊತ್ತಾ?
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಸೀಸನ್ನಲ್ಲಿ ಎರಡು ಹೊಸ ತಂಡಗಳು ಎಂಟ್ರಿ ಕೊಟ್ಟಿವೆ. ಮುಂದಿನ ಸೀಸನ್ನಲ್ಲಿ ಹೊಸ ಎರಡು ತಂಡಗಳು ಕಾಣಿಸಿಕೊಳ್ಳಲಿದ್ದು, ಅದರಂತೆ ಈಗಾಗಲೇ ಲಕ್ನೋ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಲಕ್ನೋ ಸೂಪರ್ ಜೈಂಟ್ಸ್ ಎಂದು ಘೋಷಿಸಿದೆ. ಇದೀಗ ಅಹಮದಾಬಾದ್ ಫ್ರಾಂಚೈಸಿ ಕೂಡ ಹೆಸರನ್ನು ಘೋಷಿಸಿದ್ದು, ಮುಂದಿನ ಸೀಸನ್ನಲ್ಲಿ ಅಹಮದಾಬಾದ್ ಟೈಟಾನ್ಸ್ ಹೆಸರಿನಲ್ಲಿ ತಂಡವು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಸಿವಿಸಿ ಕ್ಯಾಪಿಟಲ್ಸ್ ಮಾಲೀಕತ್ವದ ಅಹಮದಾಬಾದ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇನ್ನು ತಂಡದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಆಶಿಸ್ ನೆಹ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೈಟಾನ್ಸ್ ತಂಡದ ಮೆಂಟರ್ ಆಗಿ ಟೀಮ್ ಇಂಡಿಯಾದ ಮಾಜಿ ಕೋಚ್ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಇರಲಿದ್ದಾರೆ.