Home Latest ಐಪಿಎಲ್ ಕ್ರಿಕೆಟ್ ಟೂರ್ನಿ ಏಪ್ರಿಲ್ ಮಧ್ಯಭಾಗದಲ್ಲಿ ನಿರ್ಧಾರ..!?

ಐಪಿಎಲ್ ಕ್ರಿಕೆಟ್ ಟೂರ್ನಿ ಏಪ್ರಿಲ್ ಮಧ್ಯಭಾಗದಲ್ಲಿ ನಿರ್ಧಾರ..!?

662
0
SHARE

ಕರೋನಾ ವೈರಸ್ ಮಹಾಮಾರಿ ಇಡೀ ಪ್ರಪಂಚವನ್ನೇ ಆವರಿಸಿರುವ ಈ ವೈರಸ್ ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕ್ರೀಡೆಗಳು ಈಗ ಮುಂದೂಡಲ್ಪಡುತ್ತಿದೆ.ಇದಕ್ಕೆ ಐಪಿಎಲ್ ಕ್ರಿಕೆಟ್ ಟೂರ್ನಿ ಕೂಡ ಹೊರತಾಗಿಲ್ಲ. ಏಪ್ರಿಲ್ ಮೊದಲ ವಾರದಲ್ಲೇ ಆರಂಭವಾಗಬೇಕಾಗಿದ್ದ ಹದಿಮೂರನೇ ಆವೃತ್ತಿ ಐಪಿಎಲ್ ಕ್ರಿಕೆಟ್ ಟೂರ್ನಿ,

ಈಗ ಸದ್ಯಕ್ಕೆ ಏಪ್ರಿಲ್ ಹದಿನೈದರ ನಂತರ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಹೊಸ ನಿರ್ದೇಶನಗಳನ್ನು ಪ್ರಕಟಿಸಲಾಗುವುದು ಎಂದು ಕ್ರೀಡಾ ಸಚಿವ ಕಿರಣ್ ರಿಜುಜು ತಿಳಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಕ್ರೀಡಾ ಸಚಿವರು ಏಪ್ರಿಲ್ ಹದಿನೈದರ ನಂತರ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಸರ್ಕಾರವು ಹೊಸ ಸಲಹೆ ಮತ್ತು ನಿರ್ದೇಶನಗಳನ್ನು ಹೊರಡಿಸಲಿದೆ ಎಂದರು, ಮೊದಲು ಬಿಸಿಸಿಐ ನಿಗದಿತ ವೇಳೆಯಲ್ಲೇ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ದಿನಾಂಕವನ್ನು ಪ್ರಕಟಿಸಿತ್ತು.ಕರೋನಾ ಮಹಾಮಾರಿ ಭಾರತದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತ ಹೋದಂತೆ ಮಹಾರಾಷ್ಟ್ರ ಹಾಗೂ ದೆಹಲಿ ಸರ್ಕಾರಗಳು ಐಪಿಎಲ್ ಟೂರ್ನಿ ನಡೆಸಲು ಅವಕಾಶ ನೀಡುವುದಿಲ್ಲವೆಂದು ಪ್ರಕಟಿಸಿದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಏಪ್ರಿಲ್ ಹದಿನೈದರವರೆಗೆ ಐಪಿಎಲ್ ಟೂರ್ನಿ ನಡೆಸಲು ಅವಕಾಶ ನೀಡದೆ ಮುಂದೂಡಿತ್ತು.

ಇದೇ ಮಾರ್ಚ್ ಹನ್ನೆರಡು ರಂದು ಸಭೆ ನಡೆಸಿದ ಕ್ರೀಡಾ ಇಲಾಖೆ ದೇಶದಲ್ಲಿ ಎಲ್ಲ ರೀತಿಯ ಕ್ರಿಕೆಟ್ ಟೂರ್ನಿಗಳು ಹಾಗೂ ಕ್ರೀಡೆಗಳನ್ನು ಮುಂದೂಡುವಂತೆ ಕ್ರೀಡಾ ಮಂಡಳಿಗಳಿಗೆ ಸೂಚನೆ ನೀಡಿತ್ತು. ಅದರಂತೆ ಏಪ್ರಿಲ್ ಒಂದು ರಿಂದ ಆರಂಭವಾಗಬೇಕಾಗಿದ್ದ ಐಪಿಎಲ್ ಟೂರ್ನಿ ಕೂಡ ಈಗ ಮುಂದೂಡಲ್ಪಟ್ಟಿದೆ. ಸ್ವಯಂ ಗೃಹ ಬಂಧನದಲ್ಲಿರುವ ಆಟಗಾರರು ಯಾವುದೇ ನಿತ್ಯದ ಪ್ರ್ಯಾಕ್ಟೀಸ್ ಹಾಗೂ ಟೂರ್ನಿಗಳಲ್ಲಿ ಈಗ ಭಾಗವಹಿಸುತ್ತಿಲ್ಲ .ಕರಣ ವೈರಸ್ ಭಾರತದಲ್ಲಿ ಕ್ಷಿಪ್ರ ಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳ ದಿಗ್ಬಂಧನದ ಮೂಲಕ ವೈರಸ್ ಹಿಮ್ಮೆಟ್ಟಿಸಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರ ದೇಶದ ಕ್ರೀಡಾ ಪ್ರಾಧಿಕಾರಗಳಿಗೆ ಪ್ರತ್ಯೇಕ ಸುತ್ತೋಲೆ ರವಾನಿಸಿ ತಮ್ಮ ಅಧೀನದಲ್ಲಿ ಬರುವ ಎಲ್ಲ ಕ್ರೀಡಾ ಸಂಸ್ಥೆಗಳಿಗೂ ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ತಿಳಿಸಿದೆ ಅದರಂತೆ ಕ್ರೀಡಾಳುಗಳು ದಿನನಿತ್ಯದ ಪ್ರಾಕ್ಟೀಸ್ ಗೆ ಕ್ರೀಡಾಂಗಣವನ್ನು ಬಳಸುವುದನ್ನು ಈಗ ರದ್ದುಪಡಿಸಲಾಗಿದೆ .ಈ ನಿಯಮದಿಂದಾಗಿ ಭಾರತದ ಕ್ರಿಕೆಟ್ ಆಟಗಾರರು ಸೇರಿದಂತೆ ಎಲ್ಲಾ ಕ್ರೀಡಾಳುಗಳು ಸ್ವಯಂ ಗೃಹ ಬಂಧನದಲ್ಲಿ ಇದ್ದಾರೆ.

ಕರೋನಾ ವಿರುದ್ಧ ಹೋರಾಡಲು ಸಚಿನ್ ಕರೆ : ವಿಶ್ವದ ಕ್ರಿಕೆಟ್ ದಂತಕಥೆ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕರೋನ ವಿರುದ್ಧ ಹೋರಾಟವನ್ನು ಟೆಸ್ಟ್ ಕ್ರಿಕೆಟ್ಗೆ ಹೋಲಿಸಿ ತಾಳ್ಮೆ ಹಾಗೂ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾದುದು ಎಂದು ಅಭಿಪ್ರಾಯ ಪಟ್ಟಿದ್ದಾರೆ .ಕರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲ ದೇಶಗಳು ಒಗ್ಗೂಡಬೇಕು ಎಂದಿರುವ ಸಚಿನ್ “ಪ್ರತಿ ದೇಶವೂ ಈಗ ಕರೋನಾ ವಿರುದ್ಧದ ಹೋರಾಟದಲ್ಲಿ ವಿವಿಧ ಹಂತಗಳಿವೆ. ಎಲ್ಲ ದೇಶಗಳು ಈಗ ತಮ್ಮನ್ನು ಒಂದೇ ತಂಡದ ಭಾಗ ಎಂದು ಪರಿಗಣಿಸಬೇಕು .ಟೆಸ್ಟ್ ನಂತೆ ಪ್ರತಿ ಅವಧಿಯ ಹೋರಾಟದತ್ತ ಗಮನ ಹರಿಸಬೇಕು ಅಂತಿಮವಾಗಿ ವಿಜಯ ಶಾಲೆಗಳಾಗಬೇಕು “ಎಂದು ಅಭಿಪ್ರಾಯ ಪಟ್ಟಿದ್ದಾರೆ .

LEAVE A REPLY

Please enter your comment!
Please enter your name here