Home District ಒಂದು ಚಿಕ್ಕ ದಾರ ಕುತ್ತಿಗೆ ಸೀಳಿ ರಕ್ತಬರಿತವಾದ ಬೈಕ್ ಸವಾರ..!? “ಗಾಳಿಪಟ ತಂದ ಆಪತ್ತು”..!!

ಒಂದು ಚಿಕ್ಕ ದಾರ ಕುತ್ತಿಗೆ ಸೀಳಿ ರಕ್ತಬರಿತವಾದ ಬೈಕ್ ಸವಾರ..!? “ಗಾಳಿಪಟ ತಂದ ಆಪತ್ತು”..!!

1044
0
SHARE

ಮನುಷ್ಯನ ಟೈಂ ಯಾವಾಗ ಹೇಗಿರುತ್ತೇ ಅನ್ನೋದು ಊಹಿಸಲು ಅಸಾಧ್ಯವಾದ ಮಾತು. ಟೈಂ ಚೆನ್ನಾಗಿರಲಿಲ್ಲ ಅಂದ್ರೆ ಹಗ್ಗ ಕೂಡ ಹಾವಾಗಿ ಬಿಡುತ್ತೇ ಅನ್ನೋ ಮಾತು ಇಲ್ಲಿ ನಿಜವಾಗಿ ಬಿಟ್ಟಿದೆ. ಕೆಲಸಕ್ಕೆ ಹೋಗಿ ಬರ್ತೀನಿ ಅಂತ ಮನೆಯಿಂದ ಹೊರಟವನಿಗೆ ಒಂದು ಚಿಕ್ಕ ದಾರ ಜೀವಕ್ಕೆ ಸಂಚಕಾರ ತಂದಿದ್ದು, ಕೆಲಸಕ್ಕೆ ಹೋಗಬೇಕಾದವನು ಆಸ್ಪತ್ರೆ ಸೇರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4 ರ ಸಮೀಪದಲ್ಲಿ ಕೆಲ ಹುಡುಗರು ಗಾಳಿಪಟ ಹಾರಿಸುತ್ತಿದ್ರು. ನನ್ನ ಗಾಳಿಪಟ ಎತ್ತರಕ್ಕೆ ಹೋಗಿದೆ, ನನ್ನ ಗಾಳಿಪಟ ಎತ್ತರಕ್ಕೆ ಹೋಗಿದೆ ಅಂತ ಆ ಹುಡುಗರು ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿರುವಾಗಲೇ ಓರ್ವನ ಗಾಳಿಪಟದ ದಾರ ಹರಿದು ತುಂಡಾಗಿದೆ.

ರಾಷ್ಟ್ರೀಯ ಹೆದ್ದಾರಿ 4 ರ ಬಳಿಯ ಮಾರ್ಗವಾಗಿ ಬೈಕ್ ಮೇಲೆ ಹೊರಟಿದ್ದ ಚಿದಂಬರ ಕುಲಕರ್ಣಿ ಎಂಬ ಬೈಕ್ ಸವಾರನಿಗೆ ಗಾಳಿಪಟದ ದಾರ ಉರುಳಾಗಿ ಕುತ್ತಿಗೆ ಭಾಗವನ್ನ ಕುಯ್ದು ಹಾಕಿದೆ. ಬೈಕ್ ನಲ್ಲಿ ವೇಗವಾಗಿ ಹೊರಟಿದ್ದ ಚಿದಂಬರನಿಗೆ ಏನಾಯ್ತು ಎನ್ನುವಷ್ಟರಲ್ಲಿಯೇ ಕುತ್ತಿಗೆ ಭಾಗದಿಂದ ರಕ್ತ ಸುರಿದು ಶರ್ಟ್ ಒದ್ದೆಯಾಗಿದೆ.

ಬೆಳಗಾವಿ ಜಿಲ್ಲೆ ಗಾಂಧಿನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಈ ಘಟನೆ ನಡೆದಿದ್ದು ಗಾಯಾಳು ಚಿದಂಬರನನ್ನ ಸ್ಥಳೀಯರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ವೇಗವಾಗಿ ತೆರಳುತ್ತಿದ್ದರಿಂದ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಬೈಕ್ ಸವಾರ ಚಿದಂಬರ ಕುಲಕರ್ಣಿ ಸ್ಥಿತಿ ಗಂಭೀರವಾಗಿದ್ದು ಈ ವಿಚಿತ್ರ ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಒಟ್ನಲ್ಲಿ ಈ ವಿಚಿತ್ರ ಘಟನೆಯಿಂದ ಬೈಕ್ ಸವಾರ ಚಿದಂಬರಗೆ ಗಂಭೀರ ಗಾಯಗಳಾಗಿದ್ದು, ಘಟನಾ ಸ್ಥಳ ಹಾಗೂ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿರುವ ಬೆಳಗಾವಿ ಮಾಳಮಾರುತಿ ಪೊಲೀಸರು ಘಟನೆ ಕುರಿತು ತನಿಖೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here