Home Crime ಒಂದು ವರ್ಷದ ಪ್ರೀತಿಗೆ ಏಳ್ಳು ನೀರು..! ಬೇರೆ ಯುವಕನ ಜೊತೆಯಲ್ಲಿ ಪ್ರಿಯತಮೆ ಲವ್..! ಪ್ರೇಮಿಗಳ ದಿನದಂದೇ...

ಒಂದು ವರ್ಷದ ಪ್ರೀತಿಗೆ ಏಳ್ಳು ನೀರು..! ಬೇರೆ ಯುವಕನ ಜೊತೆಯಲ್ಲಿ ಪ್ರಿಯತಮೆ ಲವ್..! ಪ್ರೇಮಿಗಳ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮ..!

895
0
SHARE

ಇವತ್ತು ಪ್ರೇಮಿಗಳ ದಿನ ಅದೆಷ್ಟೋ ಜನ ಇವತ್ತು ತಮ್ಮ ಪ್ರೇಮಿಗಳ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ ಅದ್ರಲ್ಲಿ ಕೆಲವರ ಪ್ರೀತಿ ಸಕ್ಸಸ್ ಆದ್ರೆ ಮತ್ತೆ ಕೆಲವರದ್ದು ಸಕ್ಸಸ್ ಆಗದೆ ಹೋಗುತ್ತು.

ಹೀಗೆ ಸಕ್ಸಸ್ ಅದವರು ಖುಷಿ ಖುಷಿಯಾಗಿ ತನ್ನ ಜೋಡಿಯೊಂದಿಗೆ ಇದ್ರೆ ಸಕ್ಸಸ್ ಆಗದೆ ಇರೋರು ಕೆಲವರು ಚಟಗಳಿಗೆ ದಾಸರಾಗಿ ಹೋದ್ರೆ ಮತ್ತೆ ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ ಆದ್ರೆ ಇಲ್ಲೊಬ್ಬ ಪ್ರೇಮಿ ಒಂದು ವರ್ಷದಿಂದ ಪ್ರೀತಿಸಿದ ಪ್ರಿಯತಮೆ ಕೈಕೊಟ್ಟಲೆಂದು ಪ್ರೇಮಿಗಳ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅವರದ್ದು ಒಂದು ವರ್ಷದ ಪ್ರೀತಿ ಇತ್ತೀಚೆಗೆ ಪ್ರಿಯತಮೆ ಬೇರೊಬ್ಬಳನ್ನ ಪ್ರೀತಿಸ್ತಿದ್ದೀನಿ ಅಂತ ಹೇಳಿ ತನ್ನ ಪ್ರಿಯಕರನಿಗೆ ಹೇಳಿ ಲವ್ ಮುರಿದುಕೊಂಡಿದ್ಲು . ಪ್ರೇಮ ಮುರಿದು ಬಿದ್ದ ಗುಂಗಿನಲ್ಲೇ ಇದ್ದ ಪ್ರೇಮಿ ಕೊನೆಗೆ ತನ್ನ ಪ್ರೇಯಸಿಗೆ ಕರೆ ಮಾಡಿ ಪ್ರೇಮಿಗಳ ದಿನ ಮರೆಯಲಾರದ ಗಿಫ್ಟ್ ಕೊಡ್ತೀನಿ ಅಂತ ಹೇಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಫೋಟೋದಲ್ಲಿ ಕಾಣುತ್ತಿರೋ ಜೋಡಿಯೇ ಈ ಸ್ಟೋರಿಯ ನಾಯಕ ನಾಯಕಿ. ಹೀಗೆ ಪ್ರೇಮ್ ಭಗ್ನವಾದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡವನ ಹೆಸರು ಮುತ್ತುರಾಜ್. ಮೂಲತಃ ಕೊಳ್ಳೇಗಾಲದವನು ಕೆಲಸ ಹರಸಿ ಬೆಂಗಳಿರು ಬಂದಿದ್ದ ಮುತ್ತುರಾಜ್ ಹುಳಿಮಾವಿನಲ್ಲಿ ವಾಸವಿದ್ದ ಇದೆ ಏರಿಯಾದ ರಕ್ಷಿತಾ ಎಂಬ ಯುವತಿಯನ್ನು ಕಳೆದ ಒಂದುವರ್ಷದಿಂದ ಪ್ರೀತಿಸುತ್ತಿದ್ದ ಇನ್ನು ರಕ್ಷಿತಾ ಸಹಾ ಈತನನ್ನು ಪ್ರೀತಿಸುತ್ತಿದ್ದು ಆದ್ರೆ ಇದದ್ದಕಿದ್ದಂತೆ ಕಳೆದೊಂದು ವಾರದ ಹಿಂದೆ ರಕ್ಷಿತಾ ಮುತ್ತುರಾಜನ ಬಳಿ ತಾನು ಬೇರೊಬ್ಬರನ್ನು ಪ್ರೀತಿಸುತ್ತಿದ್ದು ತನ್ನನ್ನು ಮರೆಯುವಂತೆ ತಿಳಿಸಿದಳು.

ಪ್ರಿಯತಮೆಯ ಮಾತಿನಿಂದ ನೊಂದುಹೋಗಿದ್ದ ಮುತ್ತುರಾಜ್ ಎರಡು ದಿನಗಳ ಹಿಂದೆ ರಕ್ಷಿತಾಗೆ ಫೋನ್ ಮಾಡಿ ಪ್ರೇಮಿಗಳ ದಿನದಂದು ಮರೆಯಲಾರದ ಗಿಫ್ಟ್ ನೀಡುತ್ತೇನೆ ಎಂದು ಹೇಳಿಕೊಂಡಿದ್ದ ಆದ್ರೆ ಇವತ್ತು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವ ಮೂಲಕ ಪ್ರೇಯಸಿಗೆ ಸಾವಿನ ಉಡುಗೊರೆ ನೀಡಿಡಿದ್ದಾನೆ .

ಇನ್ನು ಈ ಸಂಭಂದ ಹುಲಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಟ್ಟಿನಲ್ಲಿ ವಯಸ್ಸಿನ ಆಕರ್ಷಣೆಯೋ ವಯ್ಯಸಲ್ಲದ ವಯ್ಯಸಿನಲ್ಲಿ ಪ್ರೀತಿ ಪ್ರೇಮ ಎಂಬ ಆಟಕ್ಕೆ ಬಿದ್ದು ತಮ್ಮ ಜೀವನವನ್ನು ನಾಶ ಮಾಡಿಕೊಳ್ಳುತ್ತಿದ್ದು ಇವರನ್ನೇ ನಂಬಿಕೊಂಡಿರುವ ಕುಟುಂಬದವರಿಗೆ ನೋವಿಗೆ ದೂಡುತ್ತಿರೋದು ಮಾತ್ರ ವಿಪರ್ಯಾಸ..

LEAVE A REPLY

Please enter your comment!
Please enter your name here