Home Cinema ಒಂದು ವರ್ಷವಾಯ್ತು.. ರಶ್ಮಿಕಾ ಬನ್ನಿ ಮರಳಿ ಮನೆಗೆ..! ಆಂಧ್ರದಲ್ಲಿ ಅದ್ಯಾವ ಕೊರಗು ಕಾಡುತ್ತಿದೆ ಕನ್ನಡತಿಗೆ..!

ಒಂದು ವರ್ಷವಾಯ್ತು.. ರಶ್ಮಿಕಾ ಬನ್ನಿ ಮರಳಿ ಮನೆಗೆ..! ಆಂಧ್ರದಲ್ಲಿ ಅದ್ಯಾವ ಕೊರಗು ಕಾಡುತ್ತಿದೆ ಕನ್ನಡತಿಗೆ..!

446
0
SHARE

ರಶ್ಮಿಕಾ ಮಂದಣ್ಣ.. ಕೊಡಗಿನ ಕಿನ್ನರಿ. ಸೌಥ್ ಸಿನಿದುನಿಯಾದ ಬ್ಯೂಟಿಫುಲ್ ಸುಂದರಿ. ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರಿಗೆ ಪರಿಚಯವಾಗಿ ಇದೀಗ ದಕ್ಷಿಣ ಚಿತ್ರರಂಗದ ರಾಣಿಯಾಗುವತ್ತ ದಾಪುಗಾಲು ಹಾಕ್ತಿರುವ ರಶ್ಮಿಕಾಗೆ ಇದೀಗ ಒಂದು ಕೊರಗು ಕಾಡುತ್ತಿದೆ.ಹೌದು, ರಶ್ಮಿಕಾ ಇದೀಗ ಮೊದಲಿನ ಸಾನ್ವಿ ಅಲ್ಲ. ಬದ್ಲಿಗೆ ಟಾಫ್ ನಟಿ.

ರಶ್ಮಿಕಾ ಕಾಲ್‌ಶೀಟ್‌ಗಂಥನೇ ಲಕ್ಷ ಲಕ್ಷ ನೋಟಿನ ಕಂತೆ ಹಿಡಿದು ನಿರ್ಮಾಪಕರು ಸಿದ್ಧರಾಗಿ ನಿಂತಿದ್ದಾರೆ. ಇದು ಮಂದಣ್ಣ ಮಂದಹಾಸಕ್ಕೇನೋ ಕಾರಣವಾಗಿದೆ. ಬಟ್, ಇದೇ ವೇಳೆ ರಶ್ಮಿಕಾಗೆ ಬೇಸರನೂ ಆಗ್ತಿದೆ. ಕಾರಣ, ರಶ್ಮಿಕಾ ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಭರ್ತಿ ಒಂದು ವರ್ಷಗಳೇ ಆಗಿವೆ.ಯಸ್, ನಿಮಗೆ ಗೊತ್ತಿರಲಿ.. ರಶ್ಮಿಕಾ, ಕಳೆದ ಒಂದು ವರ್ಷದ ಹಿಂದೆ ಕನ್ನಡಿಗರ ಮುಂದೆ ಬಂದಿದ್ದರು. ಎಲ್ಲರಿಗೂ ಚಮಕ್ ಕೊಟ್ಟಿದ್ದರು.

ಆದ್ರೆ ಇಷ್ಟೊತ್ತಿಗಾಗ್ಲೇ ರಶ್ಮಿಕಾ ಚಮತ್ಕಾರಕ್ಕೆ ಪೂರ್ತಿ ದಕ್ಷಿಣ ಚಿತ್ರರಂಗವೇ ನಿಬ್ಬೇರಗಾಗಿತ್ತು. ಇದೇ ಕಾರಣದಿಂದ ರಶ್ಮಿಕಾ ಕನ್ನಡಿಗರಿಂದ ದೂರಾನೂ ಆದರು. ತೆಲುಗಿಗೆ ಚಲೋ ಎಂದು ಬ್ಯಾಗ್ ಹಿಡಿದು ಫ್ಲೈಟ್ ಹತ್ತೇ ಬಿಟ್ಟಿದ್ದರು.ಚಲೋಗೆ ಜೈ ಬೋಲೋ ಎಂದು ಎಲ್ಲರೂ ಹೇಳಿದ್ಮೇಲೆ, ರಶ್ಮಿಕಾ ತೆಲುಗು ಚಿತ್ರರಂಗದ ಪ್ರೀತಿಯ ಗೀತಾನೂ ಆದರು. ಗೋವಿಂದ ಜೊತೆ ಗೀತಾ ಪ್ರಣಯಕ್ಕೆ.. ನೂರು ಕೋಟಿನೂ ಹರಿದು ಬಂತು. ಇದು, ರಶ್ಮಿಕಾ ಹಾಗೂ ಕನ್ನಡ ಚಿತ್ರರಂಗದ ನಡುವಿನ ಅಂತರವನ್ನ ಮತ್ತಷ್ಟು ಹೆಚ್ಚಿಸಿತ್ತು.

ಗೀತಾ ಗೋವಿಂದಂನ ಅಮೋಘ ಸಕ್ಸಸ್‌ನಿಂದ, ತೆಲುಗು ನೆಲದಲ್ಲೇ ನೆಲೆ ನಿಲ್ಲುವ ಯೋಚನೆ ಮಾಡಿದ ರಶ್ಮಿಕಾ, ಇದೇ ವೇಳೆ ಒಪ್ಪಿಕೊಂಡಿದ್ದ ಕನ್ನಡ ಸಿನಿಮಾ ವೃತ್ರ ಸಿನಿಮಾದಿಂದನೂ ಹೊರಬಂದರು. ಅಲ್ಲಿಗೆ.. ನಾನು, ತೆಲುಗು ಉದ್ಯಮದಲ್ಲೇ ಹ್ಯಾಪಿಯಾಗಿದೀನಿ ಅನ್ನುವ ಸುಳಿವನ್ನ ನೀಡಿದ್ದ ರಶ್ಮಿಕಾ ದೇವದಾಸನ ದಾಸಿನೂ ಆದರು. ಗೆಲುವನ್ನೂ ಮತ್ತೊಮ್ಮೆ ಕಂಡರು.ಹೀಗೆ ತೆಲುಗು ಚಿತ್ರರಂಗದಲ್ಲಿ, ಅದ್ಯಾವಾಗ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಗೆಲುವಿನ ಬಾವುಟವನ್ನ ನೆಟ್ಟರೋ, ಆಗ.. ರಶ್ಮಿಕಾ, ಸಂಭಾವನೆನೂ ಗಗನಕ್ಕೇರಿ ಕುಂತಿತ್ತು.

ಬರೀ ಹತ್ತೇ ಹತ್ತು ನಿಮಿಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಭರ್ತಿ ಹತ್ತು ಲಕ್ಷ ಪಡೆಯಲು ಶುರುಮಾಡಿದ ರಶ್ಮಿಕಾ, ಸಿನಿಮಾದಲ್ಲಿ ಬಣ್ಣ ಹಚ್ಚಲು ೫೦ಲಕ್ಷಕ್ಕೂ ಅಧಿಕ ಹಣವನ್ನೂ ಪಡೆದರು.ಸದ್ಯ, ಟಾಫ್ ಫ್ಲೋರಿನಲ್ಲಿ ಕುಂತು ಕೇಕೆ ಹಾಕ್ತಿರುವ ರಶ್ಮಿಕಾ, ಡಿಯರ್ ಕಾಮ್ರೇಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದಷ್ಟು ಅವಕಾಶಗಳೂ ರಶ್ಮಿಕಾರನ್ನ ಅರಸಿ ಹೋಗ್ತಿವೆ. ಇದೆಲ್ಲದ್ರ ನಡುವೆ.. ಕನ್ನಡ ಸಿನಿರಸಿಕರು ರಶ್ಮಿಕಾರನ್ನ ಮಿಸ್ ಮಾಡಿಕೊಳ್ತಿದ್ದಾರೆ. ಬಹುಶ, ಇದೇ ಕಾರಣಕ್ಕೋ ಏನೋ ಮರಳಿ ಮನೆಗೆ ಬಾ ರಶ್ಮಿಕಾ ಅನ್ನಲು ಅಭಿಮಾನಿಗಳು ಶುರುವಿಟ್ಟುಕೊಂಡಿದ್ದಾರೆ.

ಕನ್ನಡ ಕಲಾಭಿಮಾನಿಗಳ ಇದೇ ಅಭಿಮಾನ ಹಾಗೂ ಪ್ರೀತಿ ಕಂಡು ಮೂಕವಿಸ್ಮಿತಗೊಂಡಂತಿರುವ ರಶ್ಮಿಕಾ, ಇದೇ ವೇಳೆ.. ಮುಂದಿನ ವರ್ಷ ಕನ್ನಡ ಚಿತ್ರರಂಗದಲ್ಲಿ ಎಂಟ್ರಟೈನ್ಮೆಂಟ್‌ನ ಫುಲ್ ಮೀಲ್ಸ್ ಬಡಿಸುವ ವಿಶ್ವಾಸದ ಮಾತುಗಳನ್ನೂ ಆಡಿದ್ದಾರೆ. ಹೌದು, ಈ ವರ್ಷ ಒಂದೇ ಒಂದು ಕನ್ನಡ ಸಿನಿಮಾದಲ್ಲಿ ಕಾಣಸಿಗದ ರಶ್ಮಿಕಾ, ಮುಂದಿನ ವರ್ಷದ ಆರಂಭದಲ್ಲಿ ಯಜಮಾನನ ಜೊತೆ ದರ್ಶನ ನೀಡಲಿದ್ದಾರೆ. ಇನ್ನೂ ಧ್ರುವಾ ಅಭಿನಯದ ಪೊಗರುದಲ್ಲೂ ರಶ್ಮಿಕಾ ಕಾಣಸಿಗಲಿದ್ದಾರೆ. ಪೊಗರು ಕೂಡಾ ಮುಂದಿನ ವರ್ಷ ತೆರೆಗೆ ಬರಲಿದೆ.

ಅಲ್ಲಿಗೆ ಮುಂದಿನ ವರ್ಷ ಸಿನಿಮಾಗಳ ಸುಗ್ಗಿ ನಡೆಯಲಿದೆ. ಅದೇನೆ ಇರ‍್ಲಿ, ಕನ್ನಡ ಚಿತ್ರರಂಗದ ಬಹುತೇಕ ಕಾಣೆಯಾಗಿ, ತೆಲುಗು ಸಿನಿರಂಗದ ಟಾಫ್ ನಟಿಯಾಗಿರುವ ರಶ್ಮಿಕಾ, ತೆಲುಗು ಜೊತೆ ಜೊತೆಯಲ್ಲಿ ಕನ್ನಡ ಚಿತ್ರಗಳಿಗೂ ಮಹತ್ವ ನೀಡಲಿ, ಕನ್ನಡ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿ ಅನ್ನೋದೇ ರಶ್ಮಿಕಾರನ್ನ ದೇವತೆಯಂತೆ ಪೂಜಿಸುವ ಅಭಿಮಾನಿಗಳ ಆಶಯ. ಅಭಿಮಾನಿಗಳ ಇದೇ ಆಶಯ ರಶ್ಮಿಕಾ ಈಡೇರಿಸುತ್ತಾರಾ, ಕಾದು ನೋಡಬೇಕು…

 

LEAVE A REPLY

Please enter your comment!
Please enter your name here