Home Crime ಒಂದು ಸಾವಿರ ರೂಪಾಯಿಗೆ ವಿಧಾನಸೌಧ ರೆಂಟ್.?! ಬ್ಯುಸಿನೆಸ್ ಮ್ಯಾನ್ಗೆ ಹಾಕಿದ್ರು ಕಲರ್ ಕಲರ್ ನಾಮ..!...

ಒಂದು ಸಾವಿರ ರೂಪಾಯಿಗೆ ವಿಧಾನಸೌಧ ರೆಂಟ್.?! ಬ್ಯುಸಿನೆಸ್ ಮ್ಯಾನ್ಗೆ ಹಾಕಿದ್ರು ಕಲರ್ ಕಲರ್ ನಾಮ..! ಶಕ್ತಿ ಸೌಧದಲ್ಲೇ ನಡೆದಿತ್ತು ಕೋಟಿ ರೂಪಾಯಿ ಡೀಲ್.!

1305
0
SHARE

ವಿಧಾನಸೌಧ ಅಂದ್ರೆ ಗೊತ್ತಲ್ವ. ಅಲ್ಲಿ ಕೂತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜನರಿಗೆ ಮಾಡಿದ ಸೇವೆಗಿಂತ ಅಲ್ಲಿ ನಡೆಯೋ ಬೇರೆ ಬೇರೆ ಚಟುವಟಿಕೆಗಳಿಂದಲೇ ಸುದ್ದಿಯಲ್ಲಿರುತ್ತೆ. ಇದು ಶಕ್ತಿ ಸೌಧ ಅನ್ನೋದಕ್ಕಿಂತ ಸುದ್ದಿ ಸೌಧ ಅಂತ ಹೇಳಬಹುದು.

ವಿಧಾನಸೌಧದಲ್ಲಿ ಮಂತ್ರಿಗಳು, ಶಾಸಕರರು ಅಂತ ಯಾರು ಏನು ಹೇಳಿದ್ರು ಜನ ಕೇಳ್ತಾರೆ. ಯಾಕಂದ್ರೆ ಇಲ್ಲಿ ಕೆಲಸ ಮಾಡೋರು ಏನೆಲ್ಲಾ ಕೆಲಸ ಮಾಡ್ತಾರೆ ಅನ್ನೋದು ಗೊತ್ತು. ವಿಧಾನಸೌಧ ಸರ್ಕಾರದ ಕೆಲಸ ಮಾಡೋ ಜಾಗ ಅನ್ನೋದು ಕೇವಲ ನಾಮಕಾವಸ್ಥೆ ಅಷ್ಟೇ. ಇಲ್ಲಿ ಸ್ವಕಾರ್ಯವೇ ಜಾಸ್ತಿಯಾಗಿ ನಡೆಯೋದು. ಶಕ್ತಿ ಸೌಧದಲ್ಲಿ ಆಗಾಗ ದುಡ್ಡಿನ ಸದ್ದು ಕೇಳಿಸ್ತಾನೆ ಇರುತ್ತೆ. ಇತ್ತೀಚೆಗಷ್ಟೇ ಸಚಿವ ಪುಟ್ಟರಂಗಶೆಟ್ಟಿಯವರ ಕಚೇರಿ ಟೈಪಿಸ್ಟ್ ಮೋಹನ್ ಕುಮಾರ್  ಬಳಿ 25 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದು ಯಾರದ್ದೋ ಕುತಂತ್ರಕ್ಕೆ ಬಲಿಯಾಗಿ ಹಗರಣ ಹೊರಗೆ ಬಂದಿತ್ತು. ಆದ್ರೆ ಇಲ್ಲಿ ಹೊರಗೆ ಬರಲಾರದ ಸಾಕಷ್ಟು ಡೀಲ್ ಗಳು ನಡೆಯುತ್ತಲೇ ಇರುತ್ತೆ.

ಹೀಗೆ ವಿಧಾನಸೌಧದಲ್ಲಿರೋ ಅಧಿಕಾರಿಗಳು, ರಾಜಕಾರಣಿಗಳು ಇಷ್ಟೆಲ್ಲಾ ಹಣ ಮಾಡ್ತಾರೆ ಅಂದ ಮೇಲೆ ಅದನ್ನ ನಾವು ಯಾಕೆ ಒಂದು ಸಾರಿ ಟ್ರೈ ಮಾಡಬಾರದು ಅಂತ ಜನರು ನೋಡ್ತಾರೆ. ಹೀಗೆ ವಿಧಾನಸೌಧದಲ್ಲಿ ಆಗೀಗ ಓಡಾಡ್ಕೊಂಡು ಒಂದಿಷ್ಟು ಜನರನ್ನ ಪರಿಚಯ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಇದೇ ಶಕ್ತಿಕೇಂದ್ರದಲ್ಲಿ ಭರ್ಜರಿ ಡೀಲ್ ಮಾಡಿ ಮುಗಿಸಿದ್ದ. ಥೇಟ್ ಶಾಸಕರ ಹಾಗೆ ಫೋಸ್ ಕೊಟ್ಟು, ಅದೇ ವಿಧಾನಸೌಧದ ಕೊಠಡಿಯಲ್ಲಿ ಕೂತು ಕೋಟಿ ರೂಪಾಯಿ ದೋಚಿದ್ದ. ಇಲ್ಲಿವರೆಗೆ ರಾಜಕಾರಣಿಗಳು ಮಾತ್ರವೇ ಇಲ್ಲಿ ಹಣ ನುಂಗ್ತಾರೆ ಅನ್ನೋದು ಗೊತ್ತಿತ್ತು. ಈಗ ನೋಡಿ ಇಲ್ಲಿ ಯಾರ್ಯಾರು ಬಂದು ತಿಂದುಂಡು ಹೋಗ್ತಿದ್ದಾರೆ ಅಂತ. ಒಂದು ಕಾಲದಲ್ಲಿ ವಿಧಾನಸೌಧವನ್ನ ನೋಡಿದ್ರೆ ಹಳ್ಳಿಯಿಂದ ಬಂದ ಜನ ದೂರದಲ್ಲೇ ನಿಂತು ಚಪ್ಪಲಿ ಬಿಚ್ಚು ಕೈ ಮುಗಿದು ಹೋಗ್ತಿದ್ರು.

ಇವತ್ತು ಅದೇ ಜಾಗದಲ್ಲಿ ನಡೆಯಬಾರದ ಅನಾಚಾರಗಳೆಲ್ಲಾ ನಡೆಯುತ್ತಾ ಇದೆ ಅಂದ್ರೆ ಇದಕ್ಕೆ ಏನು ಕಾರಣ ಇರಬಹುದು ಹೇಳಿ.ಒಂದು ವ್ಯವಸ್ಥೆ ಎಷ್ಟು ಹಾಳಾಗಿದೆ ಅನ್ನೋದು ಇದೊಂದು ಕೆಲಸದಿಂದ ಗೊತ್ತಾಗಿದೆ. ಶಕ್ತಿಕೇಂದ್ರ ಅಂದ್ರೆ ಡೀಲ್ ಪ್ಲೇಸ್ ಅನ್ನೋದು ಈಗ ಜನರಿಗೆ ಗೊತ್ತಿಲ್ಲದ ಸತ್ಯವಲ್ಲ. ಇತ್ತೀಚೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಗಿತ್ತು. ಉದ್ಯಮಿಯೊಬ್ಬರು ಠಾಣೆಗೆ ಬಂದು ಸ್ಟೇಷನ್ ಒಳಗೆ ಹೋಗಲೋ ಬೇಡ್ವೋ ಅಂತ ಯೋಚನೆ ಮಾಡ್ತಿದ್ರು. ನಂತ್ರ ಗಟ್ಟಿ ಮನಸ್ಸು ಮಾಡಿ ಇನ್ಸ್ ಪೆಕ್ಟರ್ ಅನ್ನ ಹುಡ್ಕೊಂಡು  ಹೋಗಿದ್ರು.ನಂತ್ರ ಇನ್ಸ್ ಪೆಕ್ಟರ್ ಹತ್ತಿರ ಮಾತನಾಡಿ ಒಂದು ದೂರನ್ನ ನೀಡಿದ್ರು.

ಅಲ್ಲದೆ ನನಗೆ ಒಬ್ಬ ಸಚಿವನಿಂದ ಮೋಸವಾಗಿದೆ ಸರ್. ಇದೇ ವಿಧಾನಸೌಧದಲ್ಲಿ ನನ್ನನ್ನ ಯಾಮಾರಿಸಿದ್ದಾರೆ ಅಂತ ಉದ್ಯಮಿ ಅತ್ತ ಅಳೋದಕ್ಕೂ ಆಗದೆ ಇತ್ತ ದುಃಖವನ್ನ ನುಂಗೋದಕ್ಕೂ ಆಗದೆ ಪೊಲೀಸ್ರ ಮುಂದೆ ವಿಷಯ ಹೇಳಿದ್ರು. ನಂತ್ರ ಪೊಲೀಸ್ರು ಅವನ ಕಥೆ ಬಹಳ ಸೀರಿಯಸ್ ಆಗಿದೆ ಅಂತ ಅಂದುಕೊಂಡು ಆತನಿಂದ ದೂರು ಪಡೆದು ಒಂದು ಎಫ್ ಐ ಆರ್ ಅನ್ನ ಮಾಡ್ಕೊಂಡಿದ್ರು.ಪೊಲೀಸ್ರು ಆ ಉದ್ಯಮಿ ಹೇಳಿದ ಕಥೆ ಹೇಳಿದ ನಂತ್ರ ಆತನ ಬಳಿಯಿದ್ದ ಎಲ್ಲಾ ಡಾಕ್ಯುಮೆಂಟ್ ಗಳು ಮತ್ತು ಫೋನ್ ನಂಬರ್ ಗಳನ್ನ ಪೊಲೀಸ್ರು ಪಡೆದಿದ್ರು. ಆತ ನನಗೆ ಯಾರ್ಯಾರು ಮೋಸ ಮಾಡಿದ್ರು ಹೇಗೆ ಮಾಡಿದ್ರು ಅನ್ನೋದನ್ನ ನೀಟಾಗಿ ಪೊಲೀಸ್ರ ಮುಂದೆ ಹೇಳಿದ್ದ. ಉದ್ಯಮಿ ಹೇಳಿದ ಆ ಸಚಿವ ಯಾರು ಅನ್ನೋದು ಪೊಲೀಸ್ರಿಗೆ ತಲೆ ನೋವಾಗಿ ಹೋಗಿತ್ತು.

ಯಾಕಂದ್ರೆ ಇವನು ಹೇಳಿದ ಹಾಗೆ ನಿಜವಾಗಿಯು ಸಚಿವರು ಇತನಿಗೆ ಮೋಸ ಮಾಡಿದ್ದಾರ ಅಥವಾ ಸಚಿವರ ಹೆಸರಲ್ಲಿ ಇನ್ಯಾರದರು ಮೋಸ ಮಾಡಿದ್ದಾರ ಅನ್ನೋದು ಗೊತ್ತೇ ಆಗಲಿಲ್ಲ. ಅದಕ್ಕೆ ಆ ಕೇಸ್ ಅನ್ನ ತಕ್ಷಣಕ್ಕೆ ಇನ್ವಸ್ಟಿಗೇಷನ್ ಮಾಡೋದಕ್ಕೆ ಹೋಗಲಿಲ್ಲ. ಯಾಕಂದ್ರೆ ಪೊಲೀಸ್ರಿಗೆ ಕನ್ಪರ್ಮ್ ಆಗಬೇಕಿದ್ದ ವಿಷಯ ಬೇರೆಯದ್ದೇ ಇತ್ತು.ನಂತ್ರ ಪೊಲೀಸ್ರು ವಿಧಾನಸೌಧದಲ್ಲಿ ಇರೋ ಸಚಿವರ್ಯಾರು ಈ ಕೆಲಸ ಮಾಡಿಲ್ಲ ಅನ್ನೋದನ್ನ ಕನ್ಫರ್ಮ್ ಮಾಡಿಕೊಳ್ತಿದ್ದ ಹಾಗೆ ಕೇಸ್ ಅನ್ನ ವಿಧಾನಸೌಧದಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿಸಿಕೊಂಡಿದ್ರು. ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿಯವರಿಗೆ ಆ ಕೇಸ್ ನ ಜವಾಬ್ದಾರಿಯನ್ನ ವಹಿಸಲಾಗಿತ್ತು. ಯಾಕಂದ್ರೆ ಆ ವಂಚನೆ ವಿಧಾನಸೌಧದ ಒಳಗೆ ನಡೆದಿತ್ತು.

ಹೀಗಾಗಿ ಆ ಕೇಸ್ ಇನ್ನೆಲ್ಲೋ ಹೋಗುತ್ತೆ ಅನ್ನೋದು ಗೊತ್ತಿತ್ತು. ಅಷ್ಟೇ ಅಲ್ಲ ಇದ್ರಲ್ಲಿ ಇದೇ ಶಕ್ತಿಕೇಂದ್ರದ ಶಕ್ತಿವಂತರು ಇನ್ವಾಲ್ ಆಗಿದ್ದಾರೆ ಅನ್ನೋದು ಪೊಲೀಸ್ರಿಗೆ ಮೇಲ್ನೋಟಕ್ಕೆ ಗೊತ್ತಾಗಿತ್ತು. ಹೀಗಾಗಿ ಪೊಲೀಸ್ರು ತನಿಖೆ ಶುರುಮಾಡುವ ಮೊದಲೇ ಉದ್ಯಮಿ ಜೊತೆ ಯಾರೆಲ್ಲಾ ಕಾಂಟ್ಯಾಕ್ಟ್ ನಲ್ಲಿದ್ರೋ ಅವರ ಬಗ್ಗೆ ಮಾಹಿತಿಯನ್ನ ಪಡ್ಕೊಂಡಿದ್ದಾರೆ.ಪೊಲೀಸ್ರಿಗೆ ಎಲ್ಲರ ಮಾಹಿತಿಯು ಸಿಗ್ತಿದ್ದ ಹಾಗೆ ಅದನ್ನ ಮತ್ತೆ ಉದ್ಯಮಿಯ ಬಳಿ ಕನ್ಫರ್ಮ್ ಮಾಡ್ಕೊಂಡಿದ್ದಾರೆ. ಅಲ್ಲಿಗೆ ಪೊಲೀಸ್ರಿಗೆ ಈ ಕೇಸ್ ನಲ್ಲಿ ಏನು ಮಾಡಬೇಕು ಅನ್ನೋದು ಸ್ಪಷ್ಟವಾಗಿ ಹೋಗಿತ್ತು. ಅಲ್ಲದೆ ವಿಧಾನಸೌಧವನ್ನೇ ಡೀಲ್ ಸ್ಪಾಟ್ ಅನ್ನಾಗಿ ಮಾಡಿಕೊಂಡವರ ಭೇಟೆಗೆ ಹೊರಟು ನಿಂತಿದ್ರು. ಇಲ್ಲವರೆಗೂ ವಿಧಾನಸೌಧದ ಇತಿಹಾಸದಲ್ಲಿ ಏನು ನಡೆದಿರಲಿಲ್ಲವೋ ಅದು ನಡೆದು ಹೋಗಿತ್ತು. ಆ ಪವಿತ್ರ ಸ್ಥಳಕ್ಕಂಟಿದ ಕಲೆಯನ್ನ ತೆಗೆಯೋದಕ್ಕೆ ಪೊಲೀಸ್ರು ಈ ಕೇಸ್ ನಲ್ಲಿ ಒಬ್ಬರನ್ನ ಕೂಡಾ ಬಿಡದೆ ಎಲ್ಲರನ್ನ ಮಟ್ಟಹಾಕೋದಕ್ಕೆ ಕಾಯ್ತಿದ್ರು.

ಅವತ್ತು ಪೊಲೀಸ್ ಠಾಣೆಗೆ ಬಂದಿದ್ದ ಉದ್ಯಮಿ ಪೊಲೀಸ್ರಿಗೆ ನಾನು ವಿಧಾನಸೌಧದಲ್ಲಿ ಒಂದು ಕೋಟಿ 25 ಲಕ್ಷ ರೂಪಾಯಿಯನ್ನ ಕಳ್ಕೊಂಡಿದ್ದೀನಿ. ನನಗೆ ಮಿನಿಸ್ಟರ್ ಅಂತ ಹೇಳಿ ಒಬ್ಬ ವ್ಯಕ್ತಿ ಮೋಸ ಮಾಡಿದ್ದಾನೆ ಅಂತ ದೂರು ನೀಡಿದ್ದ. ಆಗ ಪೊಲೀಸ್ರು ಆ ಉದ್ಯಮಿಗೆ ನಿನಗೆ ಹೇಗೆ ಆತ ಪರಿಚಯನಾದ ಅಂತ ಕೇಳಿದ್ರು. ಆಗ ಉದ್ಯಮಿ ತನ್ನ ಹಿಂದಿನ ಕಥೆಯನ್ನ ಹೇಳೋದಕ್ಕೆ ಶುರುಮಾಡಿದ್ದ. ನಾನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಗೋಡಂಬಿ ಫ್ಯಾಕ್ಟರಿಯನ್ನ ನಡೆಸ್ತಿದ್ದೆ. ನನ್ನ ಉದ್ದಿಮೆಯನ್ನ ಡೆವಲಪ್ ಮಾಡೋದಕ್ಕೆ ನೂರು ಕೋಟಿಯ ಅಗತ್ಯವಿತ್ತು. ಆಗ ನಾನು ಸಾಲಕ್ಕಾಗಿ ಬ್ಯಾಂಕ್ ಒಂದಕ್ಕೆ ಹೋಗಿ ಅರ್ಜಿ ಸಲ್ಲಿಸಿದ್ದೆ.

ಆದ್ರೆ ಅಲ್ಲಿನ ಉದ್ಯೋಗಿ ಇಂದಿರಾ ಅನ್ನೋರು ನಮ್ಮ ಬ್ಯಾಂಕ್ ನಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನ ಸಾಲವನ್ನಾಗಿ ಕೊಡೋದಕ್ಕೆ ಸಾಧ್ಯವಿಲ್ಲ. ಆದ್ರೆ ನಿಮಗೆ ನಾನೊಂದು ಹೆಲ್ಪ ಮಾಡಬಲ್ಲೆ ಅಂತ ಆಕೆ ಹೇಳಿದ್ಲು. ಅವಳಿಗೆ ಅದ್ಯಾಕೆ ಇವರ ಮೇಲೆ ಅಷ್ಟೊಂದು ಮಮಕಾರ ಬಂತೋ ಗೊತ್ತಿಲ್ಲ. ಅವರಿಗೆ ಸಹಾಯ ಮಾಡೋದಕ್ಕೆ ಮುಂದಾಗಿದ್ಲು.ಆಕೆ ಉದ್ಯಮಿ ರಮೇಶ್ ಗೆ ದೇವಾಲಯವೊಂದರ ಟ್ರಸ್ಟಿ ಮಣಿಕಂಠನನ್ನ ಪರಿಚಿಯಿಸಿದ್ಲು. ಮಣಿಕಂಠ ಉದ್ಯಮಿಯನ್ನ ನೋಡ್ತಿದ್ದ ಹಾಗೆ ಅವನ ಫೈಲ್ ನಲ್ಲಿ ಇದ್ದ ಸಾಲದ ಮೊತ್ತ ನೋಡ್ತಿದ್ದ ಹಾಗೆ ನನಗೆ ಕರ್ನಾಟಕದಲ್ಲಿ ಸಚಿವರೊಬ್ಬರು ಪರಿಚಯ ಇದ್ದಾರೆ ಅವ್ರು ಕಡಿಮೆ ಬಡ್ಡಿಗೆ ನಿಮಗೆ ಸಾಲ ಕೊಡಿಸ್ತಾರೆ ಅಂತ ಉದ್ಯಮಿಗೆ ಹೇಳಿದ್ದ.

ಅಲ್ಲದೆ ಅವರ ಬಳಿಗೆ ಹೋಗುವಾಗ ಏನೆಲ್ಲಾ ಡಾಕ್ಯುಮೆಂಟ್ ಗಳನ್ನ ತೆಗೆದುಕೊಂಡು ಹೋಗಬೇಕು ಅನ್ನೋದನ್ನ ಕೂಡ ಹೇಳಿದ್ದ. ನಂತ್ರ ನಾನು ಹೇಳಿದಾಗ ಬನ್ನಿ ನಾನು ಸಚಿವರ ಹತ್ತಿರ ಎಲ್ಲಾ ಮಾತನಾಡಿರ್ತೀನಿ ನಿಮ್ಮ ಕೆಲಸ ಆಯ್ತು ಅಂತ ತಿಳಿದುಕೊಳ್ಳಿ ಅಂತ ಹೇಳಿದ್ದ. ನಂತ್ರ ಮಣಿ ಉದ್ಯಮಿಯನ್ನ ವಾಪಸ್ ಕಳುಹಿಸಿ ಅವನನ್ನ ಚೀಟ್ ಮಾಡೋದಕ್ಕೆ ರೆಡಿ ಮಾಡಿಕೊಂಡ.ಹಾಗೆ ಮಣಿಕಂಠ ತನ್ನ ಊರಿನವನೇ ಆದ ಬೆಂಗಳೂರಿನಲ್ಲಿ ನೆಲಸಿರುವ ಕಾರ್ತಿಕೇಯನ್ ಗೆ ಫೋನ್ ಮಾಡಿದ್ದ. ಆತನಿಗೆ ಇರೋ ವಿಚಾರವನ್ನೆಲ್ಲಾ ಹೇಳಿದ್ದ. ಅಲ್ಲದೆ ಸುಮ್ಮನೆ ನಾವು ಇವನಿಗೆ ಸಾಲ ಕೊಡಿಸ್ತೀವಿ ಅಂತ ಹೇಳಿ ನಮ್ಮ ಕಮೀಷನ್ ತಗೊಂಡು ಎಸ್ಕೇಪ್ ಆಗೋಣ ಹೇಳಿದ್ದ. ಹ್ಯಾಗೂ ದೊಡ್ಡ ಮಿಕ ಸಿಕ್ಕಿದೆ. ಅದನ್ನ ಸರಿಯಾಗಿ ಕಡಿಯಬೇಕು.

ಅಲ್ಲದೆ ಎಲ್ಲಿಯೂ ಆತನಿಗೆ ಅನುಮಾನ ಬರದಂತೆ ನಡೆದುಕೊಳ್ಳಬೇಕು ಅಂತ ಮಣಿ ಕಾರ್ತಿಕೇಯನ್ ಗೆ ಹೇಳಿದ್ದ. ಆತ ಕೂಡಾ ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನ ನಾನು ಮಾಡ್ಕೋತೀನಿ ನೀನು ಮಾತ್ರ ಅವನನ್ನ ಬಿಡೋದಿಲ್ಲ ಅಂತ ಹೇಳಿದ್ದ. ಹೀಗೆ ಜನವರಿ ಎರಡನೇ ತಾರೀಖು ಉದ್ಯಮಿಯನ್ನ ಬೆಂಗಳೂರಿಗೆ ಕರ್ಕೊಂಡು ಬರುವ ಟೈಂ ಅನ್ನ ಫಿಕ್ಸ್ ಮಾಡಲಾಗಿತ್ತು.ವಿಧಾನಸೌಧದಲ್ಲಿ ಸಚಿವರನ್ನ ನೋಡಿ ರಮೇಶ್ ಫುಲ್ ಖುಷ್ ಆಗಿದ್ದ. ಅತ್ತ ಕೋಟಿ ಕುಳವನ್ನ ನೋಡಿ ಕಾರ್ತಿಕೇಯನ್ ಟೀಂ ಕೂಡಾ ಖುಷ್ ಆಗಿತ್ತು. ನಂತ್ರ ಮಣಿ ಆತನನ್ನ ಕರ್ಕೊಂಡು ಹೋಗಿದ್ದ.

ಅಲ್ಲೂ ಕೂಡಾ ಆತ ಅದೇ ಮಿನಿಸ್ಟರ್ ಗೆಟಪ್ ನಲ್ಲಿ ವೈಟ್ ಜುಬ್ಬಾ ಹಾಕ್ಕೊಂಡು ಕೂತ್ಕೊಂಡಿದ್ದ. ನಂತ್ರ ಅಲ್ಲಿ ಹೋಗಿ ಸಾಕಷ್ಟು ಹೊತ್ತು ಮಾತನಾಡಿದ್ದಾರೆ. ಲೋನ್ ಹೇಗೆ ಆಗುತ್ತೆ. ಅದಕ್ಕೆ ಏನೆಲ್ಲಾ ಮಾಡಬೇಕು. ಮತ್ತೆ ಏನೆಲ್ಲಾ ಡಾಕ್ಯುಮೆಂಟ್ ಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದಾರೆ. ಅಲ್ಲದೆ ಅಷ್ಟು ದೊಡ್ಡ ಲೋನ್ ಅಮೌಂಟ್ ಅನ್ನ ಹ್ಯಾಗೆ ಕಟ್ತೀರಿ ಅಂತಾನು ಮಾಹಿತಿ ತಗೊಂಡಿದ್ದಾರೆ. ಅಷ್ಟೆಲ್ಲಾ ಆದ ಮೇಲೆ ರಮೇಶ್ ಹತ್ತಿರ 5 ಬ್ಲಾಂಕ್ ಚೆಕ್,ಫೋಟೋ ಮತ್ತು ನೂರು ಕೋಟಿಗೆ ಬೇಕಾಗುವಷ್ಟು ಶ್ಯೂರಿಟಿ ಪತ್ರಗಳನ್ನ ಪಡೆದಿದ್ದಾರೆ.

ಹೇಗೂ ದುಡಿದು ತಿಂದ ಅಭ್ಯಾಸವಿಲ್ಲ ಅಲ್ವಾ ಅದಕ್ಕೆ ನೀನು ಹಾಯಾಗಿ ನಿನ್ನ ಫ್ರೆಂಡ್ಸ್ ಜೊತೆ ಜೈಲಲ್ಲಿರು ಅಂತ ಪೊಲೀಸ್ರು ಕಳುಹಿಸಿಕೊಟ್ಟಿದ್ದಾರೆ. ಅಂತು ವಿಧಾನಸೌಧ ಯಾವುದಕ್ಕೆ ಉಪಯೋಗವಾಗಬಾರದಿತ್ತೋ ಅದಕ್ಕೆ ಉಪಯೋಗಿಸಿಕೊಂಡು ಅಲ್ಲಿನ ವ್ಯವಸ್ಥೆ ಹೇಗಿದೆ ಅನ್ನೋದನ್ನ ಕಾರ್ತಿಕೇಯನ್ ಹೊರಜಗತ್ತಿಗೆ ತಿಳಿಸಿದ್ದಾನೆ. ಅಲ್ಲಿಗೆ ವಿಧಾನಸೌಧವನ್ನ ಕೆಂಗಲ್ ಹನುಮಂತರಾಯ ಅವ್ರು ಕಟ್ಟಿಸಿದಕ್ಕೆ ಸಾರ್ಥವಾಗಿ ಹೋಗಿತ್ತು. ಇಡೀ ರಾಜ್ಯದ ಜನರ ಪರವಾಗಿ ಕೆಲಸ ನಡೆಯಬೇಕಾದ ಜಾಗದಲ್ಲಿ ನಾವು ಏನು ಬೇಕಾದ್ರು ಮಾಡ್ತೀವಿ ಅನ್ನೋದನ್ನ ತೋರಿಸಿದ್ದಾನೆ.

ಇಲ್ಲಿ ಕಾರ್ತಿಕೇಯನ್ ಸಿಕ್ಕಿಬಿದ್ದಿದ್ದಾನೆ ಅದಕ್ಕೆ ಅಲ್ಲಿ ನಡೆಯೋ ಅಕ್ರಮ ಬಯಲಾಗಿದೆ. ಆದ್ರೆ ಹೀಗೆ ಬಯಲಾಗದೆ ಅಲ್ಲಿ ಇನ್ನೇನೇನು ನಡೆಯುತ್ತೆ ಅನ್ನೋದನ್ನ ಊಹಿಸೋದಕ್ಕೂ ಸಾಧ್ಯವಿಲ್ಲ. ತುರ್ತಾಗಿ ಅಲ್ಲಿರೋ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಬೋರ್ಡ್ ಅನ್ನ ತೆಗೆದು ಇಲ್ಲಿ ಅನ್ಯಾಯದ ಕೆಲಸ ದೇವರ ಕೆಲಸ ಅಂತ ಬದಲಾಯಿಸಬೇಕಿದೆ. ಈ ಪ್ರಕರಣನ್ನ ನೋಡ್ತಿದ್ರೆ ಕರ್ನಾಟಕ ಅದ್ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ ಅನ್ನೋದು ಅರ್ಥವಾಗುತ್ತೆ. ಆದ್ರೆ ಶಕ್ತಿ ಸೌಧದ ಮೇಲಿರೋ ನಂಬಿಕೆ, ಗೌರವಗಳು ಹಾಗೆ ಉಳಿಯಬೇಕಾದ್ರೆ ಒಂದಷ್ಟು ಬದಲಾವಣೆಗಳು ಅಗತ್ಯವಾಗಿ ಮಾಡಲೇ ಬೇಕಾಗಿದೆ.

LEAVE A REPLY

Please enter your comment!
Please enter your name here