Home KARNATAKA ಒಂದೂರವರೆ ವರ್ಷದ ನಂತ್ರ ರಿವೀಲ್ ಆಯ್ತು ಕೊಹ್ಲಿ-ಕುಂಬ್ಳೆ ವಿವಾದ ರಹಸ್ಯ.? ಕೊಹ್ಲಿಯ ಇ-ಮೇಲ್, ಸಂದೇಶಗಳಲ್ಲಿ ಇವೆಯಂತೆ...

ಒಂದೂರವರೆ ವರ್ಷದ ನಂತ್ರ ರಿವೀಲ್ ಆಯ್ತು ಕೊಹ್ಲಿ-ಕುಂಬ್ಳೆ ವಿವಾದ ರಹಸ್ಯ.? ಕೊಹ್ಲಿಯ ಇ-ಮೇಲ್, ಸಂದೇಶಗಳಲ್ಲಿ ಇವೆಯಂತೆ ಕಾಂಟ್ರವರ್ಸಿಯ ಅಸಲಿ ಸತ್ಯ..?

6375
0
SHARE

ಭಾರತ ಮಹಿಳಾ ತಂಡದ ಕೋಚ್ ಆಯ್ಕೆಯಾಗಿ ಬಿಸಿಸಿಐ ಕಾರ್ಯಗತವಾಗಿದೆ. ಈಗಾಗ್ಲೆ ಅರ್ಜಿ ಸಹ ಆಹ್ವಾನಿಸಿದ್ದು, ಹಲವು ಮಂದಿ ಘಟಾನುಘಟಿಗಳು ಕೋಚ್ ಆಗಲು ರೇಸ್ ನಲ್ಲಿದ್ದಾರೆ. ಆದ್ರೆ ಇದರ ಮಧ್ಯೆ ಕಳೆದ ಬಾರಿ ನಡೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆಯ ವಿವಾದದ ಅಸಲಿ ರಹಸ್ಯ ಬಹಿರಂಗಗೊಂಡಿದೆ.ಈ ಹಿಂದೆ ಭಾರತ ತಂಡದ ಕೋಚ್ ಆಗಿದ್ದ ಕನ್ನಡಿಗ ಅನಿಲ್ ಕುಂಬ್ಳೆ, ಕ್ಯಾಪ್ಟನ್ ಕೊಹ್ಲಿ ಜೊತೆಗೆ ಮನಸ್ತಾಪ ಮಾಡಿಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿ ಎಲ್ಲರಿಗೂ ಗೊತ್ತಿದೆ.ಆದ್ರೆ ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಯಾವ ವಿಚಾರಕ್ಕಾಗಿ ಕಿತ್ತಾಟ ಶುರುವಾಯ್ತು.. ಇಬ್ಬರು ಕೋಲ್ಡ್ ವಾರ್ ನಡೆಸಿದ್ದೇಕೆ ಅನ್ನೋದು ಯಾರಿಗೂ ತಿಳಿದಿರಲಿಲ್ಲ. ಆದ್ರೀಗ ಕೊಹ್ಲಿ ಹಾಗೂ ಕುಂಬ್ಳೆ ನಡುವೆ ವೈಮನಸ್ಸು ಬರಲು ಕಾರಣವೇನು ಅನ್ನೋದು ಕೂಡ ಜಗಜ್ಜಾಹೀರಾಗಿದೆ.

ಅನಿಲ್ ಕುಂಬ್ಳೆ ಕೋಚ್ ಆಗಿದ್ದಾಗ ಸ್ಕೂಲ್ ಮಾಸ್ಟರ್ ರೀತಿಯಲ್ಲಿ ಟೀಂ ಇಂಡಿಯಾ ಆಟಗಾರರನ್ನ ದಂಡಿಸುತ್ತಿದ್ದರಂತೆ. ಅಲ್ಲದೇ ಅವರ ಕೋಚಿಂಗ್ ಸ್ಟೈಲ್ ಕೂಡ ವಿರಾಟ್ ಸೇರಿದಂತೆ ಕೆಲ ಆಟಗಾರರಿಗೆ ಇಷ್ಟವಿರಲಿಲ್ಲ. ಇದ್ರಿಂದ ರೋಸಿಹೋಗಿದ್ದ ಕ್ಯಾಪ್ಟನ್ ಕೊಹ್ಲಿ ಬಿಸಿಸಿಐ ಸಿಇಓ ರಾಹುಲ್ ಜೊಹ್ರಿಗೆ ಪದೇ ಪದೇ ಇಮೇಲ್ ಹಾಗೂ ಸಂದೇಶಗಳನ್ನ ಕಳುಹಿಸುತ್ತಿದ್ದರು. ಅಲ್ಲದೇ ಕುಂಬ್ಳೆಯನ್ನ ಮುಖ್ಯ ಕೋಚ್ ಸ್ಥಾನದಿಂದ ಕಿತ್ತೆಸೆಯುವಂತೆ ಬಿಗಿಪಟ್ಟು ಹಿಡಿದಿದ್ದರು. ಈ ಮೂಲಕ ಕೋಚ್ ಆಯ್ಕೆ ಸಂಬಂಧಿಸಿದ ರೂಲ್ಸ್ ಗಳನ್ನ ಬ್ರೇಕ್ ಮಾಡಿದ್ದರು ಅಂತಾ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾತ್ಮಕ ಸಮಿತಿ ಸದಸ್ಯೆ  ಡಯಾನ ಎಡುಲ್ಜಿ ಆರೋಪಿಸಿದ್ದಾರೆ.

ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ನ ಯಶಸ್ಸಿ ಕೋಚ್ ಗಳಲ್ಲಿ ಒಬ್ಬರು. ತಮ್ಮ ಅಧಿಕಾರದ ಅವಧಿಯಲ್ಲಿ ಕನ್ನಡಿಗ ಕುಂಬ್ಳೆ ಟೀಂ ಇಂಡಿಯಾದ ಯಶಸ್ಸಿನ ಉತ್ತುಂಗಕ್ಕೇರಿಸಿದ್ದರು. ಮೊದಮೊದಲು ಜಂಬೋ ಗರಡಿಯಲ್ಲಿ ಪಳಗಿದ್ದ ಕೊಹ್ಲಿಪಡೆ, ಬಳಿಕ ಅನಿಲ್ ಕುಂಬ್ಳೆ ಕೋಚಿಂಗ್ ಶೈಲಿಯನ್ನೆ ಪ್ರಶ್ನಿಸುತಿತ್ತು. ಹೀಗಾಗಿ ಸ್ಕೂಲ್ ಮಾಸ್ಟರ್ ರೀತಿ ಆಟಗಾರರನ್ನ ದಂಡಿಸುತ್ತಿದ್ದ ಕುಂಬ್ಳೆ ವಿರುದ್ಧ ಕ್ಯಾಪ್ಟನ್ ಕೊಹ್ಲಿ ವ್ಯವಸ್ಥಿತ ಪಿತೂರಿ ಮಾಡಿ ಕೋಚ್ ಸ್ಥಾನದಿಂದ ಕೆಳಗಿಳಿಸಿದ್ರು.ಭಾರತ ತಂಡದ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಕೆಲವೊಂದು ವಿಚಾರಗಳಲ್ಲಿ ಕ್ಯಾಪ್ಟನ್ ಕೊಹ್ಲಿ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದರು. ಆಟಗಾರರ ವಿಚಾರದಲ್ಲಿ ವೈಯಕ್ತಿಕ ತೀರ್ಮಾನ, ಡ್ರೆಸ್ಸಿಂಗ್ ರೂಮ್ ಸಿಕ್ರೇಟ್ಸ್ ಲೀಕ್ ಇವೆಲ್ಲಾ ವಿರಾಟ್ ಹಾಗೂ ಕುಂಬ್ಳೆ ನಡುವೆ ಬಿರುಕು ಉಂಟಾಗಲು ಪ್ರಮುಖ ಕಾರಣವಾಗಿದ್ದವು.

ಹೀಗಾಗಿಯೇ ವಿರಾಟ್ ಕೊಹ್ಲಿ ಜಂಬೋ ವಿರುದ್ಧ ಬಿಸಿಸಿಐ ಪದೇ ಪದೇ ಇ-ಮೇಲ್ ಹಾಗೂ ಸಂದೇಶಗಳನ್ನ ಕಳುಹಿಸುತ್ತಿದ್ದರು. ಈ ಮೂಲಕ ಶ್ರೀಮಂತ ಕ್ರೀಡಾಮಂಡಳಿಯ ಮೇಲೆ ಒತ್ತಡ ತಂದು ಅನಿಲ್ ಕುಂಬ್ಳೆಯನ್ನ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರವನ್ನ ಮಾಡಿದ್ದರು ಎನ್ನಲಾಗ್ತಿದೆ.ಅನಿಲ್ ಕುಂಬ್ಳೆ 2017ರಲ್ಲಿ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕುಂಬ್ಳೆ ಅವಧಿಯಲ್ಲಿ ಆಡಿದ್ದ 17 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿತ್ತು. ಅಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ನಂಬರ್ 1 ಪಟ್ಟಕೇರಿತ್ತು. ಆದ್ರೆ ಕುಂಬ್ಳೆ ಕೋಚಿಂಗ್ ನಲ್ಲಿ ತಂಡ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕೋಚ್ ಅವಧಿ ಮುಗಿಯುತ್ತಿದಂತೆ ರಾಜೀನಾಮೆ ನೀಡಿ ಹೊರಬಂದಿದ್ದರು. ಕುಂಬ್ಳೆ ರಾಜಿನಾಮೆಗೆ ವಿರಾಟ್ ಕೊಹ್ಲಿಯ ಇ-ಮೇಲ್ ಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಭಾರತ ತಂಡದ ಸಕ್ಸಸ್ ಫುಲ್ ಕೋಚ್ ಆಗಿದ್ದ ಕುಂಬ್ಳೆ, ಮತ್ತೆ ತಂಡದ ಮಹಾಗುರುಗಳಾಗುವ ಕನಸಿನಲ್ಲಿದ್ದರು. ಆದ್ರೆ ವಿರಾಟ್ ಜೊತೆಗಿನ ತಿಕ್ಕಾಟದಿಂದ ಮಾನಸಿಕವಾಗಿ ಎದೆಗುಂದಿ ತಮ್ಮ ಆಸೆಯನ್ನ ಕೈಬಿಟ್ಟಿದ್ದರು. ಇನ್ನು ಜಂಬೋ ಕುಂಬ್ಳೆಯನ್ನ ಕೋಚ್ ಸ್ಥಾನದಿಂದ ಕೆಳಗಿಳಿಸಿದ ವಿರಾಟ್ ಕೊಹ್ಲಿ, ರವಿಶಾಸ್ತ್ರಿಯನ್ನ ಮುಖ್ಯ ಕೋಚ್ ಮಾಡುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಿದ್ರು. ಇದನ್ನ ಆರಂಭದಲ್ಲಿ ಬಿಸಿಸಿಐ ಸಲಹಾ ಸಮಿತಿ ಸದಸ್ಯರಾಗಿದ್ದ ಸೌರವ್ ಗಂಗೂಲಿ, ಸಚಿನ್ ಹಾಗೂ ಲಕ್ಷ್ಮಣ್ ಕೂಡ ತಿರಸ್ಕರಿಸಿದರೂ, ಬಳಿಕ ರವಿಶಾಸ್ತ್ರಿಯನ್ನೆ ಕೋಚ್ ಆಗಿ ಮಾಡಿದ್ರು. ಟೀಂ ಇಂಡಿಯಾದಲ್ಲಿ ಕೋಚ್ ಗಿಂತ ನಾಯಕನೇ ಕಿಂಗ್ ಆಗಿರ್ತಾರೆ. ಕ್ಯಾಪ್ಟನ್ ಹೇಳಿದಂತೆ ಉಳಿದ ಆಟಗಾರರು, ಸಹಾಯಕ ಸಿಬ್ಬಂಧಿ ಕೂಡ ನಡೆದುಕೊಳ್ಳುವ ಪರಿಸ್ಥಿತಿ ಬಂದಿದೆ.

ವಿರಾಟ್ ವರ್ತನೆಗೆ ಹಲವು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಕೂಡ ಆಕ್ರೋಶ ವ್ಯಕ್ತಪಡಿಸಿದ್ರು. ಆದ್ರೆ ಆನೆ ನಡೆದಿದ್ದೆ ದಾರಿ ಅನ್ನೋ ಮಾತಿನಂತೆ ವಿರಾಟ್ ಟೀಂ ಇಂಡಿಯಾದ ರಾಜನಂತೆ ನಿರ್ಧಾರಗಳನ್ನ ಕೈಕೊಳ್ಳುತ್ತಿದ್ದಾರೆ. ತಂಡದಲ್ಲಿ ಕೊಹ್ಲಿ ಮಾತಿಗೆ ಯಾರು ಕೂಡ ಚಕಾರೇತ್ತದ ಪರಿಸ್ಥಿತಿ ಕೂಡ ನಿರ್ಮಾಣವಾಗಿದ್ದು, ಕೋಚ್ ರವಿಶಾಸ್ತ್ರಿ ಕೂಡ ಶಿಷ್ಯನ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ.   ಕುಂಬ್ಳೆಯನ್ನ ಕೋಚ್ ಸ್ಥಾನದಿಂದ ಕಿತ್ತೆಸೆಯಲು ಕೊಹ್ಲಿ ಒಳಸಂಚು ಮಾಡಿದ್ದರು ಅನ್ನೋದು ಬಿಸಿಸಿಐ ಆಡಳಿತ ಮಂಡಳಿ ಸದಸ್ಯೆ ಡಯಾನ ಎಡುಲ್ಜಿ ಆರೋಪ. ಅಂದು ಅನಿಲ್ ಕುಂಬ್ಳೆ ವಿಚಾರದಲ್ಲಿ ವಿರಾಟ್ ಮಾಡಿದ್ದ ಆವಾಂತರ ಆದ್ರೀಗ ಮಹಿಳಾ ಕ್ರಿಕೆಟ್ ತಂಡದ ಮೇಲೂ ನೇರ ಪರಿಣಾಮ ಬೀರುತ್ತಿದೆ. ಅಲ್ಲದೇ ಕೋಚ್ ಆಯ್ಕೆ ವಿಚಾರದಲ್ಲಿ ಕೊಹ್ಲಿ ತೆಗೆದುಕೊಂಡ ನಿರ್ಧಾರವನ್ನೆ ವನಿತೆಯರ ತಂಡದ ನಾಯಕಿಯೂ ತೆಗೆದುಕೊಳ್ಳಲಿ ಅನ್ನೋದು ಮಾಜಿ ಕ್ರಿಕೆಟಿಗರ ವಾದವಾಗಿದ್ದು, ಬಿಸಿಸಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಹಿಂದೆ ಗುರು ಇರಬೇಕು.. ಮುಂದೆ ಗುರಿ ಇರಬೇಕು ಅನ್ನೋ ಮಾತಿದೆ. ಆದ್ರೆ ಭಾರತ ತಂಡದಲ್ಲಿ ಗುರು ಇರಬೇಕು ಅವರು ನಾವು ಹೇಳಿದಂತೆ ಕೇಳಬೇಕು ಅನ್ನೋ ಪರಿಸ್ಥಿತಿ ಉಂಟಾಗ್ತಿದೆ. ಯಶಸ್ಸಿಗಾಗಿ ಗುರುಗಳನ್ನ ಅವಲಂಬಿಸೋ ಆಟಗಾರರು ಬಳಿಕ ಅವರನ್ನ ನಮಗಿಷ್ಟ ಬಂದಂತೆ ನಡೆಸಿಕೊಳ್ಳುತ್ತಿದ್ದಾರೆ. ಈ ಮೂಲಕ ತಂಡಕ್ಕೆ ನಾವೇ ಬಾಸ್  ಅಂತಾ ಬೀಗುತ್ತಿದ್ದಾರೆ.ಭಾರತ ಕ್ರಿಕೆಟ್ ತಂಡ ವಿಶ್ವಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸ್ತಿದೆ.. ಪುರುಷರ ತಂಡವಾಗಿರಲೀ ಅಥವಾ ಮಹಿಳಾ ಕ್ರಿಕೆಟ್ ತಂಡವಾಗಿರಲೀ ಅದಕ್ಕೆ ಕ್ರಿಕೆಟ್ ದುನಿಯಾದಲ್ಲಿ ಒಂದು ದೊಡ್ಡ ಮಟ್ಟದ ಹೆಸರಿದೆ. ಆದ್ರೆ ಕ್ರಿಕೆಟ್ ನಲ್ಲಾಗುತ್ತಿರೋ ಬದಲಾವಣೆಗಳು ಹಾಗೂ ಆಟಗಾರರ ವೈಯಕ್ತಿಕ ಧೋರಣೆಗಳು ಕ್ರೀಡಾಮನೋಭಾವನ್ನೆ ಬೇರೆಯೆಡೆಗೆ ಕೊಂಡೋಯ್ಯುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೋಚ್ ಹಾಗೂ ಕ್ಯಾಪ್ಟನ್ ಗಳ ನಡುವಿನ  ಕಿತ್ತಾಟಗಳು.

ಭಾರತ ಮಹಿಳಾ ತಂಡದ ಕೋಚ್ ನೇಮಕಕ್ಕೆ ಬಿಸಿಸಿಐ ಸಕಲ ರೀತಿಯಲ್ಲೂ ಯತ್ನಿಸುತ್ತಿದೆ. ಕಳೆದ ಬಾರಿ ತಂಡದ ಕೋಚ್ ಆಗಿದ್ದ ರಮೇಶ್ ಪವಾರ್, ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಆಯ್ಕೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದರು. ಇದ್ರಿಂದ ಅವರ ಕೋಚಿಂಗ್ ಅವಧಿಯನ್ನ ವಿಸ್ತಾರಿಸಲು ಬಿಸಿಸಿಐ ತಿರಸ್ಕರಿಸಿತ್ತು. ಹೀಗಾಗಿ ಪವಾರ್ ಸ್ಥಾನಕ್ಕೆ ಇದೇ ಡಿಸೆಂಬರ್ 20 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸ್ವತಃ ರಮೇಶ್ ಪವಾರ್ ಸೇರಿದಂತೆ, ಕನ್ನಡಿಗ ವೆಂಕಟೇಶ್​ ಪ್ರಸಾದ್​. ಆಸ್ಟ್ರೇಲಿಯಾದ ಟಾಮೂ ಮೂಡಿ, ಡೇವ್​ ವಾಟ್ಮೋರ್​, ದಕ್ಷಿಣ ಆಫ್ರಿಕಾದ ಹರ್ಷಲ್​ ಗಿಬ್ಸ್​, ಭಾರತದ ಮಾಜಿ ವೇಗಿ ಮನೋಜ್​ ಕುಮಾರ್​ ಕೋಚ್​ ಸ್ಥಾನದ ಆರ್ಜಿ ಸಲ್ಲಿಸಿದ್ದಾರೆ. ಆದ್ರೆ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಕೋಚ್​ ಸ್ಥಾನದಲ್ಲಿ ರಮೇಶ್​ ಪವಾರ್ ​ರನ್ನೇ ಮುಂದುವರೆಸಲು ಒತ್ತಡ ಹೇರುತ್ತಿದ್ದಾರೆ.

ಇನ್ನು ಎಡುಲ್ಜಿ ಸಲಹೆಗೆ ಸಿಒಎ ಮುಖ್ಯಸ್ಥ ವಿನೋದ್ ರಾಯ್ ಅವಕಾಶ ನೀಡಿಲ್ಲ. ಕೋಚ್ ಗಳನ್ನ ಆಯ್ಕೆ ಸಮಿತಿಯವರೇ ಮಾಡುತ್ತಾರೆ ಅಂತಾ ಖಡಕ್ ಆಗಿ ಹೇಳಿದ್ದಾರೆ. ಇನ್ನು ಈ ಸೆಲೆಕ್ಟಿಂಗ್ ಕಮಿಟಿಯಲ್ಲಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಅನ್ಷುಮನ್ ಗಾಯಕ್ ವಾಡ್ , ಮಾಜಿ ಮಹಿಳಾ ಆಟಗಾರ್ತಿಶಾಂತ ರಂಗಸ್ವಾಮಿ ಇದ್ದಾರೆ.ಕೋಚ್ ಆಯ್ಕೆ ವಿಚಾರಗಳಲ್ಲಿ ನಾಯಕರ ಹಸ್ತಕ್ಷೇಪವಾಗಲೀ, ಒತ್ತಡವಾಗಲೀ ಬಿಸಿಸಿಐ ಮೇಲೆ ಒತ್ತಡ ಹೇರೋದು ಸರಿಯಲ್ಲ ಅನ್ನೋದು ಕೆಲವರ ಅಭಿಪ್ರಾಯ. ಅಲ್ಲದೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಮಾತನ್ನ ಬಿಸಿಸಿಐ ಬಿಗ್ ಬಾಸ್ ಗಳು ಮಹಾರಾಜರ ಆಜ್ಞೆಯಂತೆ ಪಾಲಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ಯಂಗ್ ಟೈಗರ್ ಕೊಹ್ಲಿ  ಅಧಿಪತ್ಯ ಸಾಧಿಸಿದ್ದಾರೆ.ಇದೀಗ ಇಂತದ್ದೆ ಪರಿಸ್ಥಿತಿ ಮಹಿಳಾ ಕ್ರಿಕೆಟ್ ತಂಡದಲ್ಲೂ ಉಲ್ಭಣಿಸುವ ಸಾಧ್ಯತೆ ದಟ್ಟವಾಗಿ ಕಂಡು ಬರ್ತಿದೆ.

LEAVE A REPLY

Please enter your comment!
Please enter your name here