Home Crime ಒಂದೆಡೆ ಮಂಗಗಳು ಖಾಯಿಲೆಯಿಂದ ಸಾವು..! ಇನ್ನೊಂಡೆಡೆ ಮಂಗನ ಖಾಯಿಲೆಯಿಂದ ಜನರು ಸಾವು..? ಮಂಗನ ಖಾಯಿಲೆ ಭಯದಲ್ಲಿ...

ಒಂದೆಡೆ ಮಂಗಗಳು ಖಾಯಿಲೆಯಿಂದ ಸಾವು..! ಇನ್ನೊಂಡೆಡೆ ಮಂಗನ ಖಾಯಿಲೆಯಿಂದ ಜನರು ಸಾವು..? ಮಂಗನ ಖಾಯಿಲೆ ಭಯದಲ್ಲಿ ಅರಣ್ಯ ಸಿಬ್ಬಂದಿ, ಗ್ರಾ.ಪಂ. ಸಿಬ್ಬಂದಿ…

2624
0
SHARE

ಸಾಗರ ತಾಲೂಕಿನ ಶರಾವತಿ ಅಭಯಾರಣ್ಯ ಪ್ರದೇಶದ ಶರಾವತಿ ಹಿನ್ನೀರು ಪ್ರದೇಶದ ಗ್ರಾಮಗಳಲ್ಲಿ ಅಲ್ಲಲ್ಲಿ ಮಂಗಗಳು ಸಾಯುತ್ತಿವೆ.ಮಂಗನ ಕಾಯಿಲೆ ಸೃಷ್ಟಿಸಿರುವ ಭೀತಿಯಿಂದ ಜೀವಭಯದಿಂದ ಮಂಗ ಸತ್ತ ಜಾಗಕ್ಕೆ ಅಧಿಕಾರಿಗಳು ಅತ್ತ ಸುಳಿಯುತ್ತಿಲ್ಲ.ಕೇವಲ ಆರೋಗ್ಯ ಇಲಾಖೆ ಸಿಬ್ಬಂದಿ,ಅರಣ್ಯ ಸಿಬ್ಬಂದಿಗಳು..ಗ್ರಾಮ ಪಂಚಾಯಿತಿ ಸಿಬ್ಬಂದಿಗಳೇ ಮಂಗಗಳು ಸತ್ತ ಜಾಗಕ್ಕೆ ತೆರಳಿ ಅವುಗಳ ಅಂತ್ಯಸಂಸ್ಕಾರ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.ವಿಪರ್ಯಾಸ ಎಂದರೆ ಈ ಎಲ್ಲಾ ಸಿಬ್ಬಂದಿಗಳಿಗೆ ಮುನ್ನಚ್ಚರಿಕೆ ಕ್ರಮವಾಗಿ ವ್ಯಾಕ್ಸಿನೇಷನ್ ಮಾಡದಿರುವುದು ಆತಂಕ ಸೃಷ್ಟಿಸಿದೆ.

ಮಂಗನ ಕಾಯಿಲೆಯಿಂದ ಸಾವನ್ನಪ್ಪುತ್ತಿರುವ ಮಂಗಗಳ ಹುಡುಕಾಟಕ್ಕೆ ಕಾಡುತ್ತಿದೆ ಜೀವಭಯ.
ಅಧಿಕಾರಿಗಳು ಕಾಲಿಡಲು ಹಿಂದೇಟು..ಸಿಬ್ಬಂದಿಗಳು ವ್ಯಾಕ್ಸಿನೇಷನ್ ಇಲ್ಲದೆ ಪರದಾಟ.
ಇದು ನಿಜಕ್ಕೂ ಜೀವಪಣಕ್ಕಿಟ್ಟು ಜನರ ಪ್ರಾಣ ಉಳಿಸಲು ಸರ್ಕಾರಿ ಸಿಬ್ಬಂದಿಗಳು ನಡೆಸುತ್ತಿರುವ ಹೋರಾಟ ಎಂದರೂ ತಪ್ಪಾಗುವುದಿಲ್ಲ.ಶಿವಮೊಗ್ಗ ಜಿಲ್ಲೆಯಲ್ಲಿ ಅದರಲ್ಲೂ ಸಾಗರ ತಾಲೂಕಿನ ಅರಳುಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಆರು ಮಂದಿ ಅಮಾಯಕರು ಸಾವನ್ನಪ್ಪಿದ ನಂತರ ಗ್ರಾಮಸ್ಥರು ತಮ್ಮ ತೋಟ..

ಹೊಲಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಕಾಡಿನತ್ತ ಮುಖಮಾಡದೆ…ದೂರ ಉಳಿದಿದ್ದಾರೆ.ಒಂದೆಡೆ ಕಾಡಿನ ಪರಿಸರದಲ್ಲಿ ಮಂಗಗಳು ಸಾವನ್ನಪ್ಪಿದ ಸುದ್ದಿ ನೀಡಿದವರಿಗೆ 500 ರೂಪಾಯಿ ಬಹುಮಾನ ಘೋಷಿಸಲಾಗಿದೆ.ಮತ್ತೊಂದೆಡೆ ಕಾಡಿಗೆ ಹೋಗುವ ಸಿಬ್ಬಂದಿಗಳಿಗೆ ನಿಗದಿತ ಸಮಯದಲ್ಲಿ ವ್ಯಾಕ್ಸಿನ್ ಮಾಡದಿರುವುದು ಜಿಲ್ಲಾಡಳಿತದ ದೊಡ್ಡ ಲೋಪವಾಗಿದೆ. ರಾಜಕಾರಣಿ ಗಳಾಗಲಿ.. ಅಧಿಕಾರಿಗಳಾಗಲಿ ಕಾಡಿನ ಪರಿಸರದಲ್ಲಿ ಮಂಗಗಳು ಸತ್ತ ಜಾಗದತ್ತ ಸುಳಿಯುತ್ತಿಲ್ಲ..ಅವರು ಸುಳಿಯುವುದು ಬೇಡ…

ಆದರೆ ಕಾಡಿನಲ್ಲಿ ಮಂಗ ಸತ್ತ ಸುದ್ದಿ ತಿಳಿದಾಗ ಅಲ್ಲಿಗೆ ಹೋಗುವ ಅರಣ್ಯ,ಆರೋಗ್ಯ ಇಲಾಖೆ ಹಾಗು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರಿಗೆ ಸರಿಯಾಗಿ ವ್ಯಾಕ್ಸಿನೇಷನ್ ಮಾಡದಿರುವ ಅಂಶ ಬೆಳಕಿಗೆ ಬಂದಿದೆ.ಕೇವಲ ಡಿ.ಎಂ.ಪಿ ಆಯಿಲ್ ಹಚ್ಚಿಕೊಂಡು ಮಂಗ ಸತ್ತ ಜಾಗಕ್ಕೆ ತೆರಳಿದರೆ..ಉಣ್ಣೆಗಳು ಕಚ್ಚುವುದಿಲ್ಲ ಅನ್ನುವುದು ಏನು ಗ್ಯಾರಂಟಿ ಎನ್ನುವ ಪ್ರಶ್ನೆ ಸಿಬ್ಬಂದಿಗಳನ್ನು ಕಾಡುತ್ತಿದೆ.

ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಸವಳ್ಳಿ ಗ್ರಾಮದ ಗುಮಗೋಡು ಲಕ್ಷ್ಮಿ ನಾರಾಯಣಭಟ್ಟರ ತೋಟದಲ್ಲಿ ನೆನ್ನೆ ಮಂಗ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣರವರು,ತಮ್ಮ ಸಿಬ್ಬಂದಿ ಶೇಖರ್ ಕೆಂಪಯ್ಯ,ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ್ ಬೀರಪ್ಪ,ವೆಟರ್ಲರಿ ಇನ್ಸ್ ಪೆಕ್ಟರ್ ಅಣ್ಣಪ್ಪ,ಆಶಾಕಾರ್ಯಕರ್ತೆಯಾದ ರೇಣುಕಾ,ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಾಜಶೇಖರಪ್ಪ,ಚಂದ್ರಪ್ಪ,ರಘುಪತಿ ಜೊತೆ ಸ್ಥಳಕ್ಕೆ ತೆರಳಿದ್ದಾರೆ..ಆದರೆ ಮಂಗ ಸತ್ತ ಜಾಗಕ್ಕೆ ತೆರಳುವಾಗ ಬಹುತೇಕ ಸಿಬ್ಬಂದಿಗಳು ಆತಂಕಗೊಂಡಿದ್ದರು.

ಈ ತಂಡದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೊರತಾಗಿ ಯಾರು ಕೂಡ ವ್ಯಾಕ್ಸಿನೇಷನ್ ಹಾಕಿಸಿಕೊಂಡಿಲ್ಲ.ಡಿ.ಎಂ.ಪಿ ಆಯಿಲ್ ಹಚ್ಚಿಕೊಂಡು ಮಂಗ ಸತ್ತ ಜಾಗಕ್ಕೆ ತೆರಳಿದ್ದಾರೆ.ಮಂಗ ಸತ್ತ ಜಾಗಕ್ಕೆ ಮೆಲಾಥಿನ್ ಪೌಡರ್ ಹಾಕಿ..ಇವರೆಲ್ಲಾ ಸತ್ತಮಂಗವನ್ನು ಸುಟ್ಟುಹಾಕಿದ್ದಾರೆ.ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ:ಮಂಗನ ಕಾಯಿಲೆ ಕಾಣಿಸಿಕೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳು..ಮೆಲಾಥಿನ್ ಪೌಡರ್ ಹಾಗು ಡಿಎಂಪಿ ಆಯಿಲ್ ನ್ನು ಸರಬರಾಜು ಮಾಡಬೇಕಿತ್ತು.ಅಲ್ಲದೆ ಆಶಾಕಾರ್ಯಕರ್ತೆಯರಿಗೆ ಇಷ್ಟರಲ್ಲಾಗಲೇ ಚುಚ್ಚುಮದ್ದು ನೀಡಬೇಕಿತ್ತು.

ಅದ್ಯಾವುದೇ ಜೀವರಕ್ಷಕ ಔಷಧಿಗಳನ್ನು ನೀಡದೆ ಕೇವಲ ಮಂಗನಕಾಯಿಲೆ ವೈರಸ್ ಇರುವ ಜಾಗದಲ್ಲಿ ಕೆಲಸ ಮಾಡಿ ಎಂದರೆ..ಅದು ಆಶಾಕಾರ್ಯಕರ್ತೆಯರ ಬಡತನಕ್ಕೆ ಸರ್ಕಾರ ಎಸಗಿದ ಸವಾಲ್ ಎಂದೇ ಅರ್ಥೈಸಿಕೊಳ್ಳಬೇಕಾಗುತ್ತದೆ.ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಬಡಹೆಣ್ಣುಮಕ್ಕಳೇ ಆಶಾ ಕಾರ್ಯಕರ್ತೆಯರಾಗಿ ಕಡಿಮೆ ಗೌರವದನ ಪಡೆಯುತ್ತಿದ್ದಾರೆ.ಈ ನಡುವೆ ಮಂಗನಕಾಯಿಲೆ ಎಂಬ ಮಾರಣಾಂತಿಕ ರೋಗದ ನಿಯಂತ್ರಣಕ್ಕೆ ಪ್ರೆಂಟ್ ಲೈನ್ ನಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇವರಿಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸು ತ್ತಿದ್ದರೂ.. ಜಿಲ್ಲಾಡಳಿತ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ಯತ್ನ ಮಾಡುತ್ತಿದೆ.ಕೆಳಹಂತದ ಸಿಬ್ಬಂದಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಮೇಲಧಿಕಾರಿಗಳಾಗಲಿ..ರಾಜಕೀಯ ನಾಯಕರಾಗಲಿ..ಈವರೆಗೂ ಮಂಗ ಸತ್ತ ಸ್ಥಳಕ್ಕೆ ಭೇಟಿ ನೀಡಿಲ್ಲ.ರೋಗ ಹರಡುವ ಉಣ್ಣೆಗಳು ಹೆಚ್ಚಿರುವ ಇಂತಹ ಸ್ಥಳಗಳಿಗೆ ಆಶಾಕಾರ್ಯಕರ್ತೆಯರೇ ಹೋಗುತ್ತಿದ್ದು,,,ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸಿಬ್ಬಂದಿಗಳ ಜೀವರಕ್ಷಣೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕಿದೆ.

LEAVE A REPLY

Please enter your comment!
Please enter your name here