Home Crime ಒಂದೇ ಕಚೇರಿಯಲ್ಲಿ ನಡೆಸಿದ್ರು ಲವ್ವಿ ಡವ್ವಿ..! ಅವಾಯ್ಡ್ ಮಾಡಿದ್ದ ಆಕೆಗೆ ಬಿತ್ತು ಮಚ್ಚಿನೇಟು..!

ಒಂದೇ ಕಚೇರಿಯಲ್ಲಿ ನಡೆಸಿದ್ರು ಲವ್ವಿ ಡವ್ವಿ..! ಅವಾಯ್ಡ್ ಮಾಡಿದ್ದ ಆಕೆಗೆ ಬಿತ್ತು ಮಚ್ಚಿನೇಟು..!

387
0
SHARE

ಅವರಿಬ್ಬರು ಹಲವು ವರ್ಷಗಳಿಂದ ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಾ ಇದ್ರು. ಕ್ರಮೇಣ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ ಇಬ್ಬರು ಕೈಕೈ ಹಿಡಿದು ಓಡಾಡಿದ್ರು. ಆದ್ರೆ ಈ ಮೊದಲೆ ಮದುವೆಯಾಗಿದ್ದ ಆಕೆ ಇತ್ತೀಚಿಗೆ ಆತನನ್ನ ಅವಾಯ್ಡ್ ಮಾಡೋಕೆ ಶುರು ಮಾಡಿದ್ಲು, ಅಲ್ಲೇ ನೋಡಿ ಯಡವಟ್ಟಾಗಿದ್ದು.. ಆಕೆ ಮೇಲೆ ಸಿಟ್ಟಿಗೆದ್ದು ಹಲ್ಲೆ ಮಾಡಿಬಿಟ್ಟಿದ್ದಾನೆ.

ಹೀಗೆ ಸ್ಟ್ರೆಚರ್ ಮೇಲೆ ನೋವಿನಿಂದ ನರಳುತ್ತಿರೋ ಈಕೆ ಹೆಸರು ಜಯಲಕ್ಷ್ಮಿ. ಹಲವು ವರ್ಷಗಳಿಂದ ಕೆ.ಪಿ.ಎಸ್.ಸಿ ಕಚೇರಿಯಲ್ಲಿ ಸೀನಿಯರ್ ಅಸಿಸ್ಟೆಂಟಾಗಿ ಕೆಲಸ ಮಾಡುತ್ತಿದ್ಳು. ಸುಮಾರು 8 ವರ್ಷಗಳ ಹಿಂದೆ ಈಕೆಗೆ ಕೆ.ಪಿ.ಎಸ್.ಸಿ ಕಚೇರಿಯಲ್ಲಿದ್ದ ಮತ್ತೊರ್ವ ಸೀನಿಯರ್ ಅಸಿಸ್ಟೆಂಟ್ ನಟರಾಜ್ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ.

ಅಷ್ಟಕ್ಕೂ ಇವರಿಬ್ಬರಿಗೂ ಈ ಹಿಂದೆಯೇ ಮದುವೆಯಾಗಿತ್ತು. ಒಂದೆಡೆ ಜಯಲಕ್ಷ್ಮಿಗೆ ಮದುವೆಯಾಗಿ ಒಂದು ಮಗುವಿದ್ರೆ, ಮತ್ತೊಂದೆಡೆ ನಟರಾಜ್ ಗೆ ಮದುವೆಯಾಗಿ ಹೆಂಡತಿಗೆ ಡಿವೋರ್ಸ್ ನೀಡಿದ್ದ.ಇಬ್ಬರ ನಡುವೆ ಲವ್ವಿಡವ್ವಿ ಶುರುವಾಗಿದೆ. ಅಲ್ಲದೆ ಸುಮಾರು ವರ್ಷಗಳ ಕಾಲ ಕೈ ಕೈ ಹಿಡಿದು ಓಡಾಡಿದ್ದರು. ಇತ್ತೀಚಿಗೆ ಹಣಕಾಸಿನ ವಿಚಾರಕ್ಕೆ ಆಗಾಗ ಜಗಳವಾಗಿತ್ತು. ಜೊತಗೆ ನಟರಾಜ್ ಪದೇ ಪದೇ ಆಕೆಯನ್ನು ಮದುವೆಯಾಗುವಂತೆ ಒತ್ತಾಯುಸಿದ್ದ.

ಆದ್ರೆ ಮೊದಲೇ ಮದುವೆಯಾಗಿ ಮಗುವಿದ್ದ ಜಯಲಕ್ಷ್ಮಿ, ಇದಕ್ಕೆ ನಿರಾಕರಿಸಿ,ಆತನನ್ನು ಅವಾಯ್ಡ್ ಮಾಡೋಕೆ ಶುರು ಮಾಡಿದ್ದಾಳೆ. ಇದಕ್ಕೆ ಸಿಟ್ಟಾಗಿದ್ದ ಈ ಭಗ್ನ ಪ್ರೇಮಿ ನಟರಾಜ್ ಇಂದು ಕೆ.ಪಿ.ಎಸ್.ಸಿ ಕಚೇರಿಯಲ್ಲೇ ಆಕೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.ಪ್ರೇಯಸಿ ಮೇಲಿನ ಸಿಟ್ಟಿಗೆ ನಟರಾಜ್ ಬೆಳಗ್ಗೆ ಕಚೇರಿಗೆ ಪೇಪರ್ ನಲ್ಲಿ ಮಚ್ಚೊಂದನ್ನ ಮುಚ್ಚಿಟ್ಟುಕೊಂಡು ತಂದಿದ್ದ.

12 ಗಂಟೆ ಸುಮಾರಿಗೆ ಈತನ ಚೇಂಬರ್ ಒಳಗೆ ಬಂದ ಸಿಬ್ಬಂದಿ ರಾಮು, ಮಚ್ಚಿನ ಸಮೇತವಾಗಿ ಫೈಲ್ ತೆಗೆದುಕೊಂಡಿದ್ದಾನೆ. ಮಚ್ಚು ನೋಡಿ ಹೌಹಾರಿದ ರಾಮು, ಏನ್ ಸರ್ ಇದು ಅಂತ ಕೇಳಿದ್ದಾನೆ. ಈ ವೇಳೆ ಗಾಬರಿಗೊಂಡ ನಟರಾಜ್ ಮೊದಲು ಮಚ್ಚಿನಿಂದ ರಾಮು ಮೇಲೆ ಹಲ್ಲೆ ಮಾಡಿ ಬಳಿಕ ಚೆಂಬರ್ ಒಳಗೆ ಬಂದ ಜಯಲಕ್ಷ್ಮಿ ತಲೆಯ ಭಾಗಕ್ಕೆ ಹಲ್ಲೆ ಮಾಡಿದ್ದಾನೆ.

ಸದ್ಯ ತೀವ್ರ ಹಲ್ಲೆಗೊಳಗಾಗಿರುವ ಸಿಬ್ಬಂದಿ ರಾಮು ಹಗೂ ಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಧಾನಸೌಧ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿ ನಟರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here