Home District “ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ” ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಲ್ಲಿ HDK ಮನವಿ…

“ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ” ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರಲ್ಲಿ HDK ಮನವಿ…

833
0
SHARE

ರಾಜ್ಯದಲ್ಲಿ 3 ಲೋಕಸಭೆ 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಇದು ಸೆಮಿಫೈನಲ್. ಮೈತ್ರಿ ಸರ್ಕಾರ ರಚನೆ ಆದ ನಂತರ ನಡೆಯುತ್ತಿರುವ ಮೊದಲ ಉಪಚುನಾವಣೆ ಇದು.

ನಮ್ಮದು ಅಪವಿತ್ರ ಮೈತ್ರಿಯೋ,ಪವಿತ್ರ ಮೈತ್ರಿಯೋ ಎಂಬುದನ್ನು ಉಪಚುನಾವಣೆ ಯಲ್ಲಿ ಜನ ನಿರ್ಧರಿಸುತ್ತಾರೆ, ಈ ಲೋಕಸಭಾ ಉಪಚಾವಣೆ ಯಾರಿಗೂ ಬೇಕಿರಲಿಲ್ಲ.ಬಿಜೆಪಿಯವರೂ ತಮ್ಮ ವಿರೋಧ ವ್ಯಕ್ತಪಡಿಸಿದ್ದೂ ಇದೆ.

ಆದರೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಸ್ಪರ್ಧೆ ಅನಿವಾರ್ಯ ವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಧು ಬಂಗಾರಪ್ಪ ಸ್ಪರ್ಧೆ ದೇವರ ನಿರ್ಣಯ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬದಲ್ಲಿ‌ಮಧು ಸೋಲುತ್ತಾರೆ ಎಂದು ನಾವು ಯಾರೂ ನಿರೀಕ್ಷಿಸಿರಲಿಲ್ಲ.

ಶಿವಮೊಗ್ಗ ದಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿ ಗಳು ಬಹಳ ಜನ ಇದ್ದಾರೆ.ಆದರೆ ಎರಡೂ ಪಕ್ಷಗಳ ಪ್ರಮುಖರು ಮಧು ಬಂಗಾರಪ್ಪ ಅವರೇ ಸೂಕ್ತ ಎಂದು ನಿರ್ಧರಿಸಿದ್ದಾರೆ. ಅನಿತಾಕುಮಾರಸ್ವಾಮಿ ಅವರ ಸ್ಪರ್ಧೆ ನನ್ನ ನಿರ್ಧಾರವಲ್ಲ‌.

ಕಾರ್ಯಕರ್ತರ ಒತ್ತಡಕ್ಕೆ ಮಣಿದು ಎರಡು ಕ್ಷೇತ್ರಗಳಲ್ಲಿ ನಿಂತು ಗೆದ್ದಾಗ,ರಾಮನಗರವನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ರಾಮನಗರದಿಂದ ನಿಮ್ಮ ಕುಟುಂಬದಲ್ಕೇ ಒಬ್ಬರನ್ನು ನಿಲ್ಲಿಸಬೇಕು ಎಂದು ಮಾತು ತೆಗೆದುಕೊಂಡಿದ್ದರು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here