Home District ಒಂದೇ ವೇದಿಕೆಯಲ್ಲಿ ಕೈ ಕುಲುಕಿದ BSY-HDK..!! “ವೇದಿಕೆಯಲ್ಲಿ BSY ಹತ್ತಿರ ಕ್ಷಮೆ ಕೋರಿದ ಕುಮಾರಸ್ವಾಮಿ”..?!

ಒಂದೇ ವೇದಿಕೆಯಲ್ಲಿ ಕೈ ಕುಲುಕಿದ BSY-HDK..!! “ವೇದಿಕೆಯಲ್ಲಿ BSY ಹತ್ತಿರ ಕ್ಷಮೆ ಕೋರಿದ ಕುಮಾರಸ್ವಾಮಿ”..?!

2032
0
SHARE

ಇಂದು ಮೈಸೂರು ಜಿಲ್ಲೆ‌ ನಂಜನಗೂಡು ತಾಲೂಕಿನ‌ ಸುತ್ತೂರಿನಲ್ಲಿ‌ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ 103ನೇ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.‌ ಧಾರ್ಮಿಕ ಕಾರ್ಯಕ್ರಮದ ನೆಪದಲ್ಲಿ ಹಾಲಿ-ಮಾಜಿ ಸಿಎಂಗಳು ರಾಜಕೀಯ ದ್ವೇಷ ಮರೆತು ಜಯಂತೋತ್ಸದಲ್ಲಿ ಭಾಗಿಯಾಗಿದ್ರು.

ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿಯವರನ್ನ ಮಾಜಿ ಸಿಎಂ ಬಿಎಸ್ ವೈ ಹಸ್ತ ಲಾಘಿಸಿ ಬರಮಾಡಿಕೊಂಡ್ರು. ಅಷ್ಟೆ ಅಲ್ಲದೆ ಪಕ್ಕದಲ್ಲೆ‌ ಕುಳಿತು ಕುಶಲೋಪರಿ ನಡೆಸಿದ್ರು. ಇನ್ನು ಇಷ್ಟೆಲ್ಲ‌ ಆದ ಮೇಲೆ ಭಾಷಣ ಮಾಡಲು ತೆರಳಿದ ಸಿಎಂ ಹೆಚ್.ಡಿ.ಕೆ ಭಾಷಣದ ಸ್ವಾಗತದಲ್ಲಿ ಎಲ್ಲರ ಹೆಸರನ್ನು ಹೇಳಿ ಬಿಎಸ್ವೈ ಹೆಸರೇಳಲು ಮರೆತಿದ್ರು.

ಈ ವೇಳೆ ಭಾಷಣದ ಮಧ್ಯದಲ್ಲೆ ಎಚ್ಚೆತ್ತಕೊಂಡ ಹೆಚ್.ಡಿ.ಕೆ. ಯಡಿಯೂರಪ್ಪನವರ ಹೆಸರೇಳಲು ಮರೆತಿದ್ದೆ ಯಾರು ಇದಕ್ಕೆ ಅನ್ಯತ ಭಾವಿಸಿಬಾರದು ಇದಕ್ಕೆ ಕ್ಷಮೆ ಕೇಳುತ್ತೇನೆ ಅಂತಾ ವೇದಿಕೆಯಲ್ಲೆ ಸಿಎಂ ಕ್ಷಮೆ ಕೇಳಿದ್ರು. ಕೇರಳ ಹಾಗೂ ಕೊಡಗಿನಲ್ಲಿ ಸುರಿದ ಬಾರಿ ಮಳೆಯಿಂದ ಅಕ್ಷರಶಃ ಕೊಡಗು ನಲುಗಿಹೋಗಿತ್ತು.

ಇದರಿಂದ ಹಲವರ ಬದುಕು ಬೀದಿ ಪಾಲಾಗಿತ್ತು. ಇದರಿಂದ ಈ ಬಾರಿ ಜಯಂತಿ ಕಾರ್ಯಕ್ರಮವನ್ನ ಸರಳವಾಗಿ ಆಚರಣೆ ಮಾಡಿ ಜಯಂತಿಗೆ ಖರ್ಚಾಗುತ್ತಿದ್ದ 60 ಲಕ್ಷ ಹಣವನ್ನ ನೆರೆ ಸಂತ್ರಸ್ತರಿಗೆ ನೀಡಲಾಯಿತು‌. ಕೊಡಗಿನ ಸಂತ್ರಸ್ತರಿಗೆ 50ಲಕ್ಷ ಚೆಕ್ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸುತ್ತೂರು ದೇಶಿಕೇಂದ್ರ ಮಹಾಸ್ವಾಮಿಗಳು ಹಸ್ತಾಂತರ ಮಾಡುವ ಮೂಲಕ ಕೊಡಗಿನ ಸಂತ್ರಸ್ತರಿಗೆ ನೆರವಿನ ಸಹಾಯ ಹಸ್ತ ಚಾಚಿದ್ರು.

LEAVE A REPLY

Please enter your comment!
Please enter your name here