ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಂತೆ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ನಿವೃತ್ತ ಡಿವೈಎಸ್ಪಿ ಪುತ್ರ ಗ್ಯಾಂಗ್ ಕ್ಷುಲ್ಲಕ ಕಾರಣಕ್ಕೆ ಹೊಟೇಲ್ನಲ್ಲಿ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಮ್ಮನಗೊಂಡನಹಳ್ಳಿ ನಿವಾಸಿ ಎನ್.ಯುವರಾಜ್ ಎಂಬುವವರಿಗೆ ಗಂಭೀರ ಗಾಯವಾಗಿದೆ, ರೇಸ್ ಕೋರ್ಸ್ ರಸ್ತೆಯಲ್ಲಿರುವ ರಿನೈಸಾನ್ಸ್ ಹೋಟೆಲ್ನಲ್ಲಿ ಅಂದು ರಾತ್ರಿ ಡಿವೈಎಸ್ಪಿ ಪುತ್ರ ಸುಮನ್ ಹಾಗೂ ಸಹಚರರು ಊಟಕ್ಕೆಂದು ಬಂದಾಗ ಯುವರಾಜ್ ಕೈ ಸುಮ್ಮನೆ ಸುಮನ್ಗೆ ತಾಕಿದೆ,
ಅದಕ್ಕೆ ಸುಮನ್ ಯುವರಾಜ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಏಕಾಏಕಿ ಕೈಯಿಂದ ಹಲ್ಲೆ ನಡೆಸಿದ್ದಾರೆ, ಇದನ್ನು ನೋಡಿದ ಸುಮನ್ ಸ್ನೇಹಿತರು ಬಂದು ಒಂದೇ ಸಮನೆ ಬಿಯರ್ ಬಾಟಲ್ನಿಂದ ಹಲ್ಲೆ ನಡೆಸಿದ್ದಾರೆ.
ಇನ್ನೂ ಯುವರಾಜ್ಗೆ ಗಂಭೀರ ಗಾಯವಾಗುತ್ತಿದ್ದಂತೆ ಅವರು ಹೋಟೆಲ್ನಿಂದ ಎಸ್ಕೇಪ್ ಆಗಿದ್ದಾರೆ, ಇನ್ನೂ 5 ದಿನ ಗಳ ಕಾಲ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವರಾಡ್ ಪ್ರಾಣಾಪಾಯದಿಂದ ಪಾರಾಗಿದ್ದು, ತಪ್ಪಿಸಿಕೊಂಡಿರುವ ಡಿವೈಎಸ್ಪಿ ಪುತ್ರ ಹಾಗೂ ಸಹಚರರಿಗಾಗಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.