Home Cinema “ಒಂದೇ ಸಿನಿಮಾದಲ್ಲಿ ಸುದೀಪ-ದರ್ಶನ್” ಏನಿದು ಹೊಸ ಸಂಗತಿ..?! ಅರೆ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ..??

“ಒಂದೇ ಸಿನಿಮಾದಲ್ಲಿ ಸುದೀಪ-ದರ್ಶನ್” ಏನಿದು ಹೊಸ ಸಂಗತಿ..?! ಅರೆ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ..??

1298
0
SHARE

ಯಸ್. ಕನ್ನಡ ಚಿತ್ರರಂಗದ ಹಿರಿಯ ನಿರ್ದೆಶಕನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದಾರೆ. ಅರೆ ಇಬ್ಬರು ಒಂದೇ ಸಿನಿಮಾದಲ್ಲಿ ಆಕ್ಟ್ ಮಾಡ್ತಾರಾ ಎನ್ನುವ ಪ್ರಶ್ನೆ ನಿಮ್ಮನ್ನ ಕಾಡಬಹುದು.

ಆದರೆ ’ಕಹಾನಿ ಮೇ ಟ್ವೀಸ್ಟ್ ಹೇ’. ಈ ಇಬ್ಬರು ದಿಗ್ಗಜ ನಟರು ಒಂದಾಗಿರೋದು ಒಂದು ಸದಭಿರುಚಿಯ ಸಿನಿಮಾವನ್ನ ಪ್ರಮೊಟ್ ಮಾಡೋಕೆ. ಯಾವಾಗಲೂ ಒಳ್ಳೆಯ ಚಿತ್ರಗಳಿಗೆ ತಮ್ಮ ಕೈಲಾದ ಸಹಾಯ ಮಾಡೋ ಇಬ್ಬರು ಸ್ಟಾರ್‌ಗಳು ಈಗ ಕನ್ನಡದ ಒಂದುಕಾಲದ ಸೂಪರ್‌ಡೂಪರ್ ಡೈರೆಕ್ಟರ್ ಸುನಿಲ್ ಕುಮಾರ್‌ದೇಸಾಯಿಯ ಕೈ ಹಿಡಿದಿದ್ದಾರೆ. ಅದೂ ತಮ್ಮತಮ್ಮ ಸ್ಟೈಲ್‌ನಲ್ಲಿ. ’ಉದ್ಘರ್ಷ’. ಟೈಟಲ್ ಕೇಳಿದ್ರೆ ಸಾಮಾನ್ಯವಾಗಿ ಯಾರಿಗೂ ಸಡನ್ನಾಗಿ ಅರ್ಥವಾಗೋಲ್ಲ. ಆದರೆ ಈ ಶೀರ್ಷಿಕೆಯಲ್ಲಿ ಏನೋ ಸಿಕ್ರೇಟ್ ಅಡಗಿದೆ ಅನ್ನೋದು ಮಾತ್ರ ಪಕ್ಕಾ ಆಗುತ್ತೆ.

ಸಸ್ಪೆನ್ಸ್ ಚಿತ್ರಗಳ ಮಾಂತ್ರಿಕ ಎನಿಸಿಕೊಂಡ ಸುನಿಲ್‌ಕುಮಾರ್‌ದೇಸಾಯಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದಾರೆ. ತಮ್ಮ ಚಿತ್ರದ ಒಂದೊಂದೆ ವಿಭಿನ್ನ ಪೋಸ್ಟರ್‌ಗಳನ್ನ ರಿಲೀಸ್ ಮಾಡಿದ ಸುನಿಲ್‌ಕುಮಾರ್ ದೇಸಾಯಿ ಚಿತ್ರದ ಬಗೆಗಿನ ಕ್ಯೂರ‍್ಯಸಿಟಿ ಹೆಚ್ಚಿಸಿಬಿಟ್ರು. ಉದ್ಘರ್ಷ ಸಿನಿಮಾದ ಪೋಸ್ಟರ್‌ಗಳನ್ನ ಡೀಪಾಗಿ ನೋಡ್ತಿದ್ರೆ ಇದು ಯಾವ ಇಂಗ್ಲೀಷ್ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಫೀಲ್ ತರಿಸುತ್ತೆ. ಪೋಸ್ಟರ್‌ನಲ್ಲೇ ಪ್ರೇಕ್ಷಕರನ್ನ ಅಟ್ರಾಕ್ಟ್ ಮಾಡಿದ ಉದ್ಘರ್ಷ ಸಿನಿಮಾಗೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರಿಪೂರ್ಣವಾದ ಸಾಥ್ ಕೊಟ್ಟಿದಾರೆ.

ವಿಶೇಷವೆಂದ್ರೇ ಸುದೀಪ್ ಹಾಗೂ ಸುನಿಲ್‌ಕುಮಾರ್‌ದೇಸಾಯಿ ಬರೊಬ್ಬರಿ ಹದಿನೆಂಟು ವರ್ಷಗಳ ಮತ್ತೆ ಒಂದಾಗಿದ್ದಾರೆ. ಸುದೀಪ್ ಸಿನಿಕೆರಿಯರ್‌ನ ಮೊದಲ ಚಿತ್ರವನ್ನ ಡೈರೆಕ್ಟ್ ಮಾಡಿದ ಸುನಿಲ್‌ಕುಮಾರ್‌ದೇಸಾಯಿ ನಂತರ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಛಾಪನ್ನ ಭದ್ರವಾಗಿ ಒತ್ತೊಕೆ ಫೇಲ್ ಆಗಿದ್ರು. ಆದರೆ ಈಗ ಸಾಕಷ್ಟು ಸಕ್ಸಸ್ ಫಾರ್ಮುಲಾಗಳ ಜೊತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟಿರುವ ಸುನಿಲ್‌ಕುಮಾರ್‌ದೇಸಾಯಿ ಮತ್ತೆ ವಿನ್ ಆಗ್ತೀನಿ ಎನ್ನುವ ಉತ್ಸಾಹದಲ್ಲಿದ್ದಾರೆ. ಇದಕ್ಕೆ ತಮ್ಮ ಹಳೇ ಶಿಷ್ಯನ ಸರ್ಪೊಟ್ ಸಿಕ್ಕಿರುವುದು ಸುನಿಲ್‌ಕುಮಾರ್‌ದೇಸಾಯಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.

ಉದ್ಘರ್ಷ ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ರೆಡಿಯಾಗಿದ್ದು, ಟ್ರೈಲರ್‌ನಲ್ಲಿ ಕಿಚ್ಚನ ಕಂಚಿನ ಕಂಠದ ವಾಯ್ಸ್ ಕೇಳಲಿದೆ. ತಮ್ಮ ಚಿತ್ರದ ಟ್ರೈಲರ್ ವಿಚಾರವಾಗಿಯೂ ತಲೆಕೆಡಿಸಿಕೊಂಡಿದ್ದ ಸುನಿಲ್‌ಕುಮಾರ್‌ದೇಸಾಯಿಗೆ ಕಿಚ್ಚನ ವಾಯ್ಸ್ ಆನೆ ಬಲ ತಂದುಕೊಟ್ಟಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್‌ನಿಂದ ಕೂಡಿದ ಉದ್ಘರ್ಷ ಟ್ರೈಲರ್‌ಗೆ ಕಿಚ್ಚನ ವಾಯ್ಸ್ ಹೊಸ ಟಚ್ ಕೊಟ್ಟಿದೆ.ಸುದೀಪ್ ಈ ಟ್ರೈಲರ್‌ಗೆ ದನಿ ಕೊಟ್ಟು ತಮ್ಮ ಗುರುವಿಗೆ ಸಹಾಯ ಮಾಡಿರುವ ಬೆನ್ನಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ನಾನು ಯಾರಿಗೂ ಕಮ್ಮೀಯಿಲ್ಲ ಅನ್ನೋ ರೀತಿ ಟ್ರೈಲರ್ ಬಿಡುಗಡೆ ಮಾಡೋಕೆ ತಯಾರಾಗಿದ್ದಾರೆ.

ನಾಳೆ ನಡೆಯಲಿರೋ ಟ್ರೈಲರ್ ಲಾಂಚ್‌ನಲ್ಲಿ ದಾಸನದ್ದೇ ಕಾರುಬಾರು. ಟ್ರೈಲರ್ ಬಿಡುಗಡೆ ಮಾಡುವ ಮೂಲಕ ದರ್ಶನ್ ಕೂ ಈಗ ಉದ್ಘರ್ಷ ಸಿನಿಮಾಗೆ ಪರೋಕ್ಷವಾಗಿ ಹೆಲ್ಪ್ ಮಾಡಿದಾರೆ. ಸುದೀಪ್ ಹಾಗೂ ದರ್ಶನ್‌ರ ಈ ಬಲವಾದ ಸಾಥ್‌ಗೆ ಚಿತ್ರತಂಡ ಸಕತ್ ಎಕ್ಸಾಯಟ್ ಆಗಿದೆ. ಇಬ್ಬರು ದೊಡ್ಡ ನಟರ ಭಾಗವಹಿಸುವಿಕೆ ಸಿನಿಮಾದ ರೀಚ್‌ಗೆ ತುಂಬಾ ಸಹಕಾರಿಯಾಗಲಿದೆ ಎನ್ನುವುದು ಚಿತ್ರತಂಡದ ನಂಬಿಕೆ.

ಸ್ಯಾಂಡಲ್‌ವುಡ್‌ನ ಘಟನುಘಟಿಗಳಾದ ಇಬ್ಬರು ಒಂದೇ ಸಿನಿಮಾದ ಪ್ರಚಾರ ಕಾರ್ಯಕ್ಕೆ ಒಟ್ಟಾಗಿ ಕೈ ಜೋಡಿಸಿರುವುದು ಒಂದು ಆರೋಗ್ಯಕರ ನಡೆ ಅಂತಾನೇ ಹೇಳಬಹುದು. ಅದೂಅಲ್ಲದೇ ಒಂದು ಸಿನಿಮಾಗಾಗಿ ಒಂದಾಗಿರುವ ಕಿಚ್ಚ-ದಚ್ಚು ತಮ್ಮ ಭಿನ್ನಭಿಪ್ರಾಯಗಳನ್ನ ಮರೆತು ಅದಷ್ಟು ಬೇಗ ಒಟ್ಟಿಗೆ ಆಕ್ಟ್ ಮಾಡ್ತಾರಾ ಅನ್ನೋದೆ ಬಿಗ್ ಕ್ವಾಷೆನ್.

LEAVE A REPLY

Please enter your comment!
Please enter your name here