Home Cinema ಒಂದ್ಕಾಲದ ಕುಚಿಕೂ ಗೆಳೆಯರು ಮಾಡಲು ಸಿದ್ಧ ಸಂ”ಕ್ರಾಂತಿ”..! ನೀವ್ ಸಿದ್ಧರಾಗಿ ಎತ್ತಲು ಯಜಮಾನ, ಪೈಲ್ವಾನ್ಗೆ ಆರತಿ..!

ಒಂದ್ಕಾಲದ ಕುಚಿಕೂ ಗೆಳೆಯರು ಮಾಡಲು ಸಿದ್ಧ ಸಂ”ಕ್ರಾಂತಿ”..! ನೀವ್ ಸಿದ್ಧರಾಗಿ ಎತ್ತಲು ಯಜಮಾನ, ಪೈಲ್ವಾನ್ಗೆ ಆರತಿ..!

466
0
SHARE

ಸಂಕ್ರಾಂತಿಯ ದಿನ, ಒಂದ್ಕಾಲದಲ್ಲಿ ಗೆಳೆಯರಾಗಿದ್ದ ದರ್ಶನ್ ಹಾಗೂ ಸುದೀಪ ಅಭಿಮಾನಿಗಳಿಗೆ ಸಿಹಿಯನ್ನ ಬಡಿಸಲಿದ್ದಾರೆ. ಯಸ್, ಸಂಕ್ರಾಂತಿಯ ದಿನವೇ ಯಜಮಾನನ ಮೊದಲ ಹಾಡು ಬಯಲಾಗ್ತಿದೆ. ಇಷ್ಟೇ ಅಲ್ಲ ಪೈಲ್ವಾನ್‌ನ ದರ್ಶನನೂ ಅವತ್ತೇ ಆಗಲಿದೆ. ಇದುವೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಪವರ್ & ಅಫ್ ಕೋರ್ಸ್ ಫ್ಯಾನ್ಸ್ ವಾರ್‌ಗೂ ಕಾರಣವಾದ್ರೆ ಅಚ್ಚರಿ ಇಲ್ಲ. ಯಜಮಾನ.. ದರ್ಶನ್ ಅಭಿನಯದ ಮಹತ್ವದ ಸಿನಿಮಾ. ಕಳೆದ ವರ್ಷ ದರ್ಶನ್ ದರ್ಶನವಾಗಿಲ್ಲ. ಹಾಗಾಗಿ, ಯಜಮಾನನ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಇದಕ್ಕೆ ತಕ್ಕಂತೆ ಯಜಮಾನ ಹಂತ ಹಂತವಾಗಿ ಸದ್ದು ಮಾಡ್ತಾನೇ ಬಂದಿದ್ದಾನೆ.ಸದ್ದು.. ಗದ್ದಲ.. ಮಾಡ್ತಾನೇ ಬರ‍್ತಿರುವ ಇದೇ ಯಜಮಾನ, ಸಂಕ್ರಾಂತಿಯಂದು ಹಾಡೊಂದನ್ನ ಉಡುಗೊರೆಯನ್ನಾಗಿ ನೀಡಲಿದ್ದಾನೆ. ಆಲ್ ರೆಡಿ ಡಿ ವಲಯದಲ್ಲಿ ಬಿಡುಗಡೆಯಾಗಲಿರುವ ಶಿವನಂದಿ ಹಾಡಿನ ಭಜನೆ ಒಂದು ಹಂತಕ್ಕೆ ಶುರುವಾಗಿದೆ. ಇದೇ ಭಜನೆ ಹಾಡು ಬಿಡುಗಡೆಯಾದ್ಮೇಲೆ ಇನ್ನಷ್ಟು ಹೆಚ್ಚಾಗೋದು ಖಾತ್ರಿ.
ಶಿವನಂದಿ, ಕಂಪ್ಲೀಟ್ಲೀ ಮಾಸ್ ಫ್ಲೇವರ್ ಇರುವ ಹಾಡು. ಸಿಂಪಲ್ಲಾಗ್ ಹೇಳಬೇಕಂದ್ರೆ ದರ್ಶನ್ ಅಭಿಮಾನಿಗಳಿಗಂಥನೇ ಮಾಡಲಾದ ಹಾಡಿದು.

ಹಾಗಾಗಿ, ಅಭಿಮಾನಿಗಳು ಹಾಡಿಗಾಗಿ ಜಾತಕ ಪಕ್ಷಿಯಂತೆ ಕಾದು ಕುಂತಿರೋದು ಸುಳ್ಳಲ್ಲ. ಹಾಡು, ಹೇಗಿರಲಿದೆ.. ದರ್ಶನ್ ಡ್ಯಾನ್ಸ್ ಧಮಾಕಾ ಹೇಗಿರಲಿದೆ ಅನ್ನುವ ಕೂತುಹಲದಲ್ಲೇ, ಸಂಕ್ರಾಂತಿ ಹಬ್ಬವನ್ನ ಎದುರು ನೋಡ್ತಿದ್ದಾರೆ ಅಭಿಮಾನಿಗಳು.ಶಿವನಂದಿಗೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನವಿದೆ. ಇನ್ನೂ ಬಹದ್ದೂರ್ ಚೇತನ್ ಸಾಲುಗಳೂ ಯಜಮಾನನ ಅಂಗಳದಲ್ಲಿನ ಶಿವನಂದಿಯ ಕಳೆ ಹೆಚ್ಚಾಗುವಂತೆ ಮಾಡುವದ್ರಲ್ಲಿ ಅನುಮಾನ ಇಲ್ಲ. ಅಂದ ಹಾಗೇ ಯಜಮಾನನ ಯಜಮಾನ್ತಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಇದು, ಕೂಡಾ.. ಸಿನಿಮಾದ ನಿರೀಕ್ಷೆಗಳೂ ಹೆಚ್ಚಾಗಲು ಇರುವ ಇನ್ನೊಂದು ಕಾರಣ. ಶಿವನಂದಿ ಹಾಡನ್ನ ಇತ್ತ ದರ್ಶನ್ ಸಂಕ್ರಾಂತಿ ಹಬ್ಬದ ದಿನ, ಬೆಳ್ಳಿಗೆ ಅಭಿಮಾನಿಗಳ ಮಡಿಲಿಗೆ ಹಾಕಿದ್ರೆ, ಅತ್ತ, ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿಯ ಪೈಲ್ವಾನ್ ರೂಪದ ದರ್ಶನ ಮಧ್ಯಾಹ್ನ ೪ ಘಂಟೆ ಹೊತ್ತಿಗೆಲ್ಲಾ ಆಗಲಿದೆ.ಯಸ್, ಪೈಲ್ವಾನ್.. ಹಿಂದೆಂದೂ ಕಾಣದ ಅವತಾರದಲ್ಲಿ ಸುದೀಪ ಕಾಣಸಿಗಲಿರುವ ಸಿನಿಮಾ. ಸಿನಿಮಾಗಾಗಿಯೇ ಹಗಲಿರುಳೂ ಕಷ್ಟಪಟ್ಟು, ಬೆವರು ಸುರಿಸಿ, ದೇಹವನ್ನ ಹುರಿಗೊಳಿಸಿರುವ ಸುದೀಪ..

ಸಿನಿಮಾದಲ್ಲಿ ಹೇಗೆ ಕಾಣಸಿಗಲಿದ್ದಾರೆ ಅನ್ನುವ ಕೂತುಹಲ ಎಲ್ಲರಲ್ಲೂ ಇದೆ. ಹೀಗೆ ಇರುವ ಇದೇ ಕೂತುಹಲಕ್ಕೆ ಮೊದಲ ಹಂತವೆನ್ನುವಂತೆ ಸಂಕ್ರಾಂತಿಯ ದಿನ ಉತ್ತರ ಸಿಗಲಿದೆ.ಪೈಲ್ವಾನ್ ಬಹು ದೊಡ್ಡ ತಾರಾಬಳಗದ, ಬಹುಕೋಟಿ ವೆಚ್ಚದ ಸಿನಿಮಾ. ಬರೀ ಕನ್ನಡದಲ್ಲಷ್ಟೇ ಅಲ್ಲ ಭರ್ತಿ ೯ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗ್ತಿರುವ ಸಿನಿಮಾ. ಹಾಗಾಗಿ, ಪೈಲ್ವಾನ್‌ನ ಪೊಗರು ತುಸು ಹೆಚ್ಚೇ ಇರುತ್ತೆ ಅನ್ನುವ ವಿಪರೀತ ವಿಶ್ವಾಸ ಸುದೀಪಿಯನ್ಸ್‌ರಲ್ಲಿದೆ.

ಇನ್ನೂ ೯ ಭಾಷೆಯಲ್ಲಿ ಬರಲು ಸಿದ್ಧವಾಗ್ತಿರುವ ಪೈಲ್ವಾನ್, ಸಂಕ್ರಾಂತಿಗೆ ೯ ಟೀಸರ್‌ಗಳೊಂದಿಗೆ ಆಯಾ ಭಾಷೆಗಳಲ್ಲಿ ಪ್ರತ್ಯಕ್ಷವಾಗ್ತಾನಾ.. ಹೀಗೊಂದು ಪ್ರಶ್ನೆ ಎದ್ದೇಳೋದು ಸಹಜ. ಇದೇ ಪ್ರಶ್ನೆಗೆ ಉತ್ತರವೆನ್ನುವಂತೆ ಸಂಕ್ರಾಂತಿ ದಿನ ಬರೀ ಕನ್ನಡದ ಪೈಲ್ವಾನ್‌ನ ದರ್ಶನವಷ್ಟೇ ಆಗಲಿದೆ. ಇದು, ಅಭಿಮಾನಿಗಳಲ್ಲಿ ಸ್ವಲ್ಪ ನಿರಾಸೆ ಮೂಡಿಸಿದ್ರೂ, ಪೈಲ್ವಾನ್ ಕೊನೆಗೂ ಬರ‍್ತಾ ಇದಾನಲ್ಲ ಅನ್ನುವ ವಿಷಯ, ಮನೆ ಮಾಡುವ ಅದೇ ನಿರಾಸೆಯನ್ನ ಆಶಾಕಿರಣವನ್ನಾಗಿ ಬದಲಿಸುತ್ತಿದೆ.ಪೈಲ್ವಾನ್‌ಗೆ ಕೃಷ್ಣ ನಿರ್ದೇಶಕ.

ಹಿಂದೆ.. ಅಭಿನಯ ಚಕ್ರವರ್ತಿಯನ್ನ ಹೆಬ್ಬುಲಿಯನ್ನಾಗಿಸಿದ್ದ ಕೃಷ್ಣ, ಇದೀಗ.. ಕೆಚ್ಚದೆಯ ಕಿಚ್ಚನಿಗೆ ಬಾದ್ ಷಾ ಬಿರುದು ನೀಡಿ ಪೈಲ್ವಾನ್ ಮಾಡಿದ್ದಾರೆ. ಇನ್ನೂ ಚಿತ್ರದ ನಿರ್ಮಾಣನೂ ಖುದ್ದು ಕಿಟ್ಟಪ್ಪನದ್ದೇ. ಇನ್ನೂ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣವಿದೆ.ಒಟ್ನಲ್ಲಿ ಸಂಕ್ರಾಂತಿಯ ದಿನ ಕ್ರಾಂತಿ ಮಾಡುವ ಉಮೇದಿಯೊಂದಿಗೆ, ಸುದೀಪ ಹಾಗೂ ದರ್ಶನ್ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಮಾಸ್ ಹಾಗೂ ಕ್ಲಾಸ್ ಎರಡು ವರ್ಗಕ್ಕೂ ಇಷ್ಟವಾಗುವಂಥ ಉಡುಗೊರೆ ಇದಾಗುತ್ತೆ ಅನ್ನುವ ವಿಶ್ವಾಸ ಇಬ್ಬರಲ್ಲೂ ಇದೆ. ಹಾಗಿದ್ದರೆ ಹೇಗಿರಲಿದ್ದಾನೆ ಪೈಲ್ವಾನ್, ಹೇಗಿರಲಿದೆ ಯಜಮಾನನ ಶಿವನಂದಿ ಅನ್ನುವ ಕೂತುಹಲ ನಿಮ್ಮಲ್ಲಿದ್ದರೆ, ಸಂಕ್ರಾಂತಿ ಹಬ್ಬದವರೆಗೂ ಕಾಯಲೇಬೇಕು…

LEAVE A REPLY

Please enter your comment!
Please enter your name here