Home KARNATAKA ಒಂದ್ ಕಡೆ ಇಂಡಿಯಾ ಹೀನಾಯ ಸೋಲು..! ಇನ್ನೊಂದು ಕಡೆ ಜಡೇಜಾ-ಇಶಾಂತ್ ಬಹಿರಂಗವಾಗಿ ಕಿತ್ತಾಟ..! ತಾರಕಕ್ಕೇರಿತ್ತು ಆ...

ಒಂದ್ ಕಡೆ ಇಂಡಿಯಾ ಹೀನಾಯ ಸೋಲು..! ಇನ್ನೊಂದು ಕಡೆ ಜಡೇಜಾ-ಇಶಾಂತ್ ಬಹಿರಂಗವಾಗಿ ಕಿತ್ತಾಟ..! ತಾರಕಕ್ಕೇರಿತ್ತು ಆ ಗಲಾಟೆ..!!

5936
0
SHARE

ಒಂದು ಕಡೆ ಟೀಮ್ ಇಂಡಿಯಾ ಎರಡನೇ ಟೆಸ್ಟ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ತಂಡದಲ್ಲಿ ಎಲ್ಲವು ಸರಿಯಿಲ್ಲ ಅನ್ನೋದು ಬಹಿರಂಗವಾಗಿದೆ. ಪರ್ತ್​ನಲ್ಲಿ ವಿರಾಟ್ ಪಡೆಯ ಆಟಗಾರರ ಕಿತ್ತಾಟ ಬಯಲಾಗಿದೆ.

ತಂಡದ ಆಟಗಾರರಾದ ಇಶಾಂತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಮೈದಾನದ್ಲಲೇ ಕಿತ್ತಾಡಿಕೊಂಡಿದ್ದಾರೆ. ಇವರಿಬ್ಬರು ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರೋ ಘಟನೆ ಇದೀಗ ವೈರಲ್ ಆಗಿದೆ.ನಾಲ್ಕನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ನಾಥನ್ ಲೈಯನ್​ ಬ್ಯಾಟಿಂಗ್ ಮಾಡುವಾಗ ಹೆಲ್ಮೆಟ್​ಗೆ ಚೆಂಡು ಬಡಿದು, ಕೆಲಕಾಲ ಪಂದ್ಯಕ್ಕೆ ಬ್ರೇಕ್​ ಬಿದ್ದಿತ್ತು.

ಈ ಸಂದರ್ಭದಲ್ಲಿ ಇಶಾಂತ್ ಹಾಗು ಜಡೇಜಾ ಪಿಚ್​ನಲ್ಲೇ ಪರಸ್ಪರ ಹಿಂದಿಯಲ್ಲಿ ಬೈದಾಡಿಕೊಂಡಿದ್ದಾರೆ. ಕೊನೆಗೆ ಮಹಮ್ಮದ್ ಶಮಿ ಇಬ್ಬರನ್ನ ಸಮಾಧಾನಪಡಿಸಿ ಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಇದು ಫೀಲ್ಡಿಂಗ್ ವಿಷಯವಾಗಿ ನಡೆದ ಮಾತಿನ ಚಕಮಕಿ ಅನ್ನಿಸ್ತಿದರೂ ಜಗಳಕ್ಕೆ ಏನು ಕಾರಣ ಅನ್ನೋದು ಸ್ಪಷ್ಟವಾಗಿಲ್ಲ.

ಇನ್ನು ಇವರಿಬ್ಬರ ಜಗಳವನ್ನ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್​ ಕಿಚಾಯಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಸ್ಲೆಡ್ಜಿಂಗ್ ಅಸ್ತ್ರ ಬಳಸಬೇಕಾದ ಭಾರತದ ಆಟಗಾರರು, ತಾವೇ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here