Home Crime ಒಬ್ಬನ ಪ್ರೀತಿಸುತ್ತಲೇ ಇನ್ನೊಬ್ಬನ ಜೊತೆ ಓಡಾಟ..?! ಬರ್ತ್‌ಡೇ ಸೆಲಬ್ರೇಷನ್‌ಗೆ ಬಂದ ಪ್ರಿಯಕರನ ಬರ್ಬರ ಹತ್ಯೆ..!? ಕೇಕ್...

ಒಬ್ಬನ ಪ್ರೀತಿಸುತ್ತಲೇ ಇನ್ನೊಬ್ಬನ ಜೊತೆ ಓಡಾಟ..?! ಬರ್ತ್‌ಡೇ ಸೆಲಬ್ರೇಷನ್‌ಗೆ ಬಂದ ಪ್ರಿಯಕರನ ಬರ್ಬರ ಹತ್ಯೆ..!? ಕೇಕ್ ಕಟ್ ಮಾಡಿದವನಿಗೆ ಪ್ರಿಯತಮೆಯಿಂದ ಸಾವಿನ ಗಿಫ್ಟ್..!?

2451
0
SHARE

ಆತ ಆಕೆಯನ್ನ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ.. ಆದ್ರೆ ಆಕೆ ಅವನಿಗಿಂತ ಹೆಚ್ಚಾಗಿ ಅವನು ಖರ್ಚು ಮಾಡೋ ಹಣವನ್ನ ಪ್ರೀತಿಸ್ತಾ ಇದ್ಲು.. ಹೀಗೊಂದು ದಿನ ಬರ್ತ್‌ಡೇ ನೆಪದಲ್ಲಿ ಪ್ರಸಾದ್ ನನ್ನ ತಾನಿರೋ ಊರಿಗೆ ಕರೆಸಿಕೊಂಡಿದ್ಲು.. ಪ್ರೀತಿಸಿದಾಕೆ ಕರೆದ್ಲು ಅಂತಾ ಬರ್ತಡೇ ಗಿಫ್ಟ್ ಕೊಡಲು ಬಂದ ಪ್ರಿಯಕರನಿಗೆ ಪ್ರೇಯಸಿ ಕೊಟ್ಟಿದ್ದು ಸಾವಿನ ಗಿಫ್ಟ್..

ಈತನ ಹೆಸರು ಪ್ರಸಾದ್ ಮಠಪತ್ತಿ.. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿವಾಸಿ. ಎಂಎಸ್ಸಿ ವಿದ್ಯಾಭ್ಯಾಸ ಕಂಪ್ಲಿಟ್ ಆದ ನಂತರ ಹೈದ್ರಾಬಾದ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ.. ನಿನ್ನೆ ಪ್ರಸಾದನನ್ನ ಆಕೆಯ ಪ್ರೇಯಸಿ ಪ್ರಿಯಾಂಕ್ ಸರ್ಪ್ರೈಸ್ ಇದೆ ಬಾ ಅಂತಾ ಕಲಬುರಗಿಗೆ ಕರೆಸಿಕೊಂಡಿದ್ಲು.. ಪ್ರೇಯಸಿ ಕರೆದ್ಲು ಅಂತಾ ಕಲಬುರಗಿಗೆ ಪ್ರಸಾದ್ ಬಂದಿದ್ದ.

ಬಳಿಕ ಬೆಳಗ್ಗೆಯಿಂದ ಸಂಜೆಯವರೆಗೂ ಇಬ್ಬರು ಕಲಬುರಗಿ ನಗರಾದ್ಯಂತ ಕೈ-ಕೈ ಹಿಡಿದುಕೊಂಡು ಸುತ್ತಾಡಿದ್ರು..ಶಾಪಿಂಗ್ ಕೂಡ ಮಾಡಿ ಬಳಿಕ ಇಲ್ಲಿನ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಪ್ರೇಯಕರನ ಬರ್ತಡೇಯನ್ನ ಅದ್ದೂರಿಯಾಗಿ ಸೇಲೆಬ್ರೆಟ್ ಮಾಡಿದ್ಳು.. ಆದ್ರೆ ಆತನಿಗೇನು ಗೊತ್ತು ಇದು ತನ್ನ ಕೊನೆಯ ಬರ್ತಡೇ ಅಂತಾ.. ಪ್ರೇಯಸ್ಸಿ ಕರೇದಿದ್ದಾಳೆ ಅಂತ ಖುಷಿ ಖುಷಿಯಾಗಿ ಹೈಬ್ರಾಬಾದ್ ನಿಂದ ಬಂದಿದ್ದ..

ಆದ್ರೆ, ಅಷ್ಟೋತ್ತಿಗೆ ಅಲ್ಲಿಗೆ ಬಂದ ಹಂತಕರು ಬರ್ತಡೆ ಕೇಕ್ ಕಟ್ ಮಾಡಿದ ಪ್ರಸಾದ್ ನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ರು..ಚಾಕು ಇರಿತಿದ್ದಂತೆ ರಕ್ತದ ಮಡುವಿನಲ್ಲಿ ಬಿದ್ದ ಪ್ರಸಾದ್ ನರಳಾಡಿ ಪ್ರೇಯಸಿಯ ಎದುರೇ ಪ್ರಾಣ ಬಿಟ್ಟ.. ಬಳಿಕ ಪ್ರಸಾದ್‌ನ ಪ್ರೇಯಸಿ ಪ್ರಿಯಾಂಕ್ ಪ್ರಸಾದ್ ತಮ್ಮ ಆತ್ಮಾನಂದನಿಗೆ ಕರೆ ಮಾಡಿ ನಿಮ್ಮಣ್ಣನ್ನ ಕೊಲೆ ಮಾಡಿದ್ದಾರೆ ಆಸ್ಪತ್ರೆಗೆ ಬಾ ಅಂತಾ ಹೇಳಿದ್ದಾಳೆ..

ಆಸ್ಪತ್ರೆಗೆ ಬಂದು ನೋಡುವಷ್ಟರಲ್ಲಿ ಪ್ರಸಾದ್ ಕೊನೆಯುಸಿರೆಳೆದಿದ್ದ..ಹತ್ಯೆಗೀಡಾದ ಪ್ರಸಾದ್, ಪ್ರಿಯಾಂಕಾಳನ್ನ ಮೂರು ವರುಷಗಳಿಂದ ಪ್ರಿತಿಸಿದ್ದ.. ಆಕೆಯನ್ನೇ ಮದುವೆ ಆಗುವುದಾಗಿ ಮನೆಯಲ್ಲಿ ಹೇಳಿದ್ದ.. ಆದ್ರೆ, ಅತ್ತ ಪ್ರಸಾದ್ ದುಡಿಯೋಕೆ ಹೋದ ತಕ್ಷಣ ಇತ್ತ ಕಾಲೇಜ್ ಕ್ಯಾಂಪಸ್‌ನಲ್ಲಿ ಹೊಸ ಬಾಯ್‌ ಫ್ರೆಂಡ್ ಜೊತೆ ಸುತ್ತಾಡೋಕೆ ಶುರುಮಾಡಿದ್ಲು ಪ್ರಿಯಾಂಕಾ..

ಹೀಗಾಗಿ ಇತ್ತೀಚೆಗೆ ಪ್ರಸಾದ್‌ನನ್ನ ಅವೈಡ್ ಮಾಡೋಕೆ ಮುಂದಾಗಿದ್ದಳಂತೆ..ಆದ್ರೆ ಪೊಲೀಸರ ಮುಂದೆ ಯುವತಿ ಪ್ರಿಯಾಂಕಾ ಕ್ಷಣ ಕ್ಷಣಕ್ಕೂ ಒಂದೊಂದು ಹೇಳಿಕೆ ನೀಡ್ತಿದ್ದಾಳೆ.. ಪ್ರಕರಣದ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ಚುರುಕುಗೊಳಿಸಿರೋ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ..

ಮಗನನ್ನ ಕಳೆದುಕೊಂಡ ಹೆತ್ತವರ ಗೋಳಾಟ ಮುಗಿಲು ಮುಟ್ಟಿದೆ.. ಪ್ರೇಮದ ನಾಟಕ ಮಾಡಿ ನನ್ನ ಮಗನನ್ನ ಹತ್ಯೆ ಮಾಡಿಸಿದ್ದಾಳೆ ಅಂತಾ ಪೋಷಕರು ಆರೋಪಿಸಿದ್ದಾರೆ.. ಒಟ್ನಲ್ಲಿ ಅದೇನೆ ಸತ್ಯಾಸತ್ಯತೆ ಇದ್ರೂ ತನಿಖೆಯ ನಂತರವಷ್ಟೆ ಹೋರಬರಬೇಕಿದೆ..

LEAVE A REPLY

Please enter your comment!
Please enter your name here